twitter
    For Quick Alerts
    ALLOW NOTIFICATIONS  
    For Daily Alerts

    ರಂಗಭೂಮಿ ಮತ್ತು ಸಿನಿಮಾ : ಒಂದೇ ನಾಣ್ಯದ ಎರಡು ಮುಖಗಳು

    |

    ''ನಾಟಕ ಮತ್ತು ಸಿನಿಮಾ ಎರಡು ಒಂದೇ ನಾಟ್ಯದ ಎರಡು ಮುಖಗಳು, ಅದನ್ನು ನೋಡುತ್ತಿರುವವರಿಗೆ ಇದು ಕಾಣುವುದಿಲ್ಲ.. ಇದನ್ನು ನೋಡುತ್ತಿರುವವರಿಗೆ ಅದು ಕಾಣುವುದಿಲ್ಲ.'' ಎಂದು ರಂಗಭೂಮಿ ಮತ್ತು ಸಿನಿಮಾದ ಬಗ್ಗೆ ವಿವರವಾಗಿ ಮಾತನಾಡಿದರು 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್.

    ಇಂದು ವಿಶ್ವ ರಂಗಭೂಮಿ ದಿನ. ರಂಗಭೂಮಿ ಹಾಗೂ ಸಿನಿಮಾ ಒಂದಕ್ಕೊಂದು ಸಂಬಂಧ ಹೊಂದಿದೆ. ಅದೇ ಕಾರಣ ರಂಗಭೂಮಿ ಹಾಗೂ ಸಿನಿಮಾ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡ ನಟರಾಜ್ ಅವರನ್ನು ಮಾತನಾಡಿಸಿದೆವು.

    ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸಿ ವೇದಿಕೆ ಏರಿ ನಾಟಕ ಮಾಡಿದ್ರು ಮಂಡ್ಯ ರಮೇಶ್ ಪತ್ನಿ!ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸಿ ವೇದಿಕೆ ಏರಿ ನಾಟಕ ಮಾಡಿದ್ರು ಮಂಡ್ಯ ರಮೇಶ್ ಪತ್ನಿ!

    ಕೆಲವರು ನಾಟಕ ಗ್ರೇಟ್ ಅಂದರೆ, ಕೆಲವರು ಸಿನಿಮಾನೇ ಗ್ರೇಟ್ ಎನ್ನುತ್ತಾರೆ. ಆದರೆ, ನಟರಾಜ್ ಎರಡೂ ಕ್ಷೇತ್ರದ ಬಗ್ಗೆ ಪ್ಲಾಸ್ ಹಾಗೂ ಮೈಸನ್ ಬಗ್ಗೆ ವಿವರಿಸಿದರು. ತಮ್ಮ ಅನುಭವ ಹಾಗೂ ಅವರು ಕಂಡ ರಂಗಭೂಮಿ ಹಾಗೂ ಸಿನಿಮಾ ಬದುಕನ್ನು ಮಾತುಗಳಲ್ಲಿ ಹಂಚಿಕೊಂಡರು. ಮುಂದೆ ಓದಿ....

    ಸಂದರ್ಶನ : ನವಿ ಕನಸು (ನವೀನ್ ಎಮ್ ಎಸ್)

    ರಂಗಭೂಮಿಯಲ್ಲಿ ನೇರವಾದ ಸಂಪರ್ಕ ಇರುತ್ತದೆ

    ರಂಗಭೂಮಿಯಲ್ಲಿ ನೇರವಾದ ಸಂಪರ್ಕ ಇರುತ್ತದೆ

    ''ರಂಗಭೂಮಿ ಮತ್ತು ಸಿನಿಮಾಗೆ ಬಹಳ ವ್ಯತ್ತಾಸ ಇದೆ. ನಾಟಕದಲ್ಲಿ ಕಲಾವಿದ ಮತ್ತು ಪ್ರೇಕ್ಷಕನಿಗೆ ನೇರವಾದ ಸಂಪರ್ಕ ಇರುತ್ತದೆ. ನಾನು ಬೀದಿ ನಾಟಕ ಮಾಡಿಕೊಂಡು, ನಾಟಕ ಶುರು ಮಾಡಿದೆ. ಅಲ್ಲಿ ನಾವು ಜನರ ಜೊತೆಗೆ ಇರುತ್ತೇವೆ. ಆ ಕಾರಣ ಇದೊಂದು ಪವರ್ ಫುಲ್ ಮೀಡಿಯಾ. ರಂಗಭೂಮಿಯಲ್ಲಿ ಪ್ರತಿ ಪ್ರದರ್ಶನ ಕೂಡ ಹೊಸದಾಗಿ ಇರುತ್ತದೆ. ಒಬ್ಬ ನಟ ಪ್ರತಿ ಪ್ರದರ್ಶನಕ್ಕೆ ಬದಲಾಗುತ್ತಾ ಹೋಗುತ್ತಾನೆ.''

    ಲಂಕೇಶರ 'ತೆರೆಗಳು' ಎಂಬ ನಾಟಕ

    ಲಂಕೇಶರ 'ತೆರೆಗಳು' ಎಂಬ ನಾಟಕ

    ''ಒಬ್ಬ ವ್ಯಕ್ತಿ ಒಂದು ನಾಟಕವನ್ನು 10 ಕ್ಲಾಸ್ ನಲ್ಲಿ ಮಾಡವುದಕ್ಕೂ, ಡಿಗ್ರಿಯಲ್ಲಿ ಮಾಡುವುದಕ್ಕೂ ಅಥವಾ ಪ್ರಬುದ್ಧ ಕಲಾವಿದನಾಗಿ ಮಾಡುವುದಕ್ಕೂ ಬಹಳ ವ್ಯತ್ಯಾಸ ಆಗುತ್ತಾ ಹೋಗುತ್ತದೆ. ನಾವು ಡಿಗ್ರಿಯಲ್ಲಿ ಇರುವಾಗ ಲಂಕೇಶರ 'ತೆರೆಗಳು' ಎಂಬ ನಾಟಕ ಮಾಡಿದ್ವಿ. ಆಗ ಲಂಕೇಶರ ಬಗ್ಗೆ ಓದಿದ್ದರೂ, ನಾಟಕ ಹಾಗೂ ಪಾತ್ರದ ಆಳ ತಿಳಿದಿರಲಿಲ್ಲ. ಇದನ್ನೇ ನಾನು ಫೈನಲ್ ಹಿಯರ್ ಎಲ್ ಎಲ್ ಬಿ ಮಾಡುವಾಗ ಪ್ರತಿ ಮಾತುಗಳು ಭೌತಿಕವಾಗಿ ಬದಲಾಗಿತ್ತು.''

    30 ವರ್ಷದ ಹಿಂದೆ ಡಿ ಬಾಸ್ ಮಾಡಿದ ಡ್ರಾಮಾ ಇದು 30 ವರ್ಷದ ಹಿಂದೆ ಡಿ ಬಾಸ್ ಮಾಡಿದ ಡ್ರಾಮಾ ಇದು

    ಸಿನಿಮಾದಲ್ಲಿ ಒಂದು ಪಾತ್ರವನ್ನು ಜೀವಿಸಿದರೆ ಅದು ಹಿಸ್ಟರಿ

    ಸಿನಿಮಾದಲ್ಲಿ ಒಂದು ಪಾತ್ರವನ್ನು ಜೀವಿಸಿದರೆ ಅದು ಹಿಸ್ಟರಿ

    ''ಸಿನಿಮಾದಲ್ಲಿ ನಟ ಮತ್ತು ಪ್ರೇಕ್ಷಕರ ನಡುವೆ ಅಂತರ ಇದೆ. ಕ್ಯಾಮರಾ ಎಡಿಟಿಂಗ್, ರಿ ರೆಕಾರ್ಡಿಂಗ್ ಹೀಗೆ ಎಲ್ಲ ಹಂತ ದಾಟಿದ ಬಳಿಕ ಪ್ರೇಕ್ಷಕರ ಮುಂದೆ ಹೋಗುತ್ತದೆ. ಒಂದು ಬಾರಿ ಸಿನಿಮಾದಲ್ಲಿ ಒಂದು ಪಾತ್ರವನ್ನು ಜೀವಿಸಿದರೆ ಮುಗಿಯಿತು. ಅದು ಹಿಸ್ಟರಿ. ಆದರೆ, ನಾಟಕದಲ್ಲಿ ಪ್ರತಿ ಪ್ರದರ್ಶನ ಕೂಡ ನಟರು, ಪ್ರೇಕ್ಷಕರು ಹಾಗೂ ಆ ಆಯಾಮ ಬದಲಾಗುತ್ತಾ ಹೋಗುತ್ತದೆ.

    ಎರಡರಲ್ಲಿಯೂ ಪ್ಲಾಸ್, ಮೈನಸ್ ಇದೆ

    ಎರಡರಲ್ಲಿಯೂ ಪ್ಲಾಸ್, ಮೈನಸ್ ಇದೆ

    ''ಈ ಎರಡಕ್ಕೂ ಬೇರೆ ಬೇರೆ ಸ್ಕೋಪ್ ಇದೆ. ರಂಗಭೂಮಿ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಗಟ್ಟಿಗೊಳ್ಳಿಸುತ್ತದೆ. ಸಿನಿಮಾ ಒಬ್ಬ ಕಲಾವಿದನನ್ನು ಗಟ್ಟಿ ಗೊಳಿಸುತ್ತದೆ. ರಂಗಭೂಮಿಯಲ್ಲಿ ಬಣ್ಣ, ಬದುಕು ಎರಡೂ ಇದೆ. ಒಬ್ಬ ರಂಗಭೂಮಿ ಕಲಾವಿದನನ್ನು ಎಲ್ಲೇ ಬಿಟ್ಟರೂ ಬದುಕುತ್ತಾನೆ. ಆದರೆ, ಸಿನಿಮಾದಲ್ಲಿ ಒಮ್ಮೆ ಕಲಾವಿದ ಆಗಿ ಫೇಮ್ ಪಡೆದರೆ ಹಾಗೆಯೇ ಮುಂದುವರೆಯಬೇಕು. ಬದುಕಿನ ಶೈಲಿ, ನೋಡುಗರ ಮನಸ್ಥಿತಿ ಬದಲಾಗುತ್ತದೆ. ಎರಡರಲ್ಲಿಯೂ ಪ್ಲಾಸ್, ಮೈನಸ್ ಇದೆ.

    ಬೆಂಗಳೂರಿನಲ್ಲಿ ನಡೆಯಲಿದೆ ನಾಸಿರುದ್ದೀನ್ ಶಾ ನಾಟಕ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ ನಾಸಿರುದ್ದೀನ್ ಶಾ ನಾಟಕ ಪ್ರದರ್ಶನ

    ಸಿನಿಮಾ ಏಕಕಾಲಕ್ಕೆ ಪ್ರಪಂಚವನ್ನು ತಲುಪುತ್ತದೆ

    ಸಿನಿಮಾ ಏಕಕಾಲಕ್ಕೆ ಪ್ರಪಂಚವನ್ನು ತಲುಪುತ್ತದೆ

    ''ನಾಟಕ ಸಿನಿಮಾ ಎರಡೂ ಸೂಪರು. ಒಂದು ನಾಟಕವನ್ನು ಏಕಕಾಲಕ್ಕೆ ಸಾವಿರ, ಎರಡು ಸಾವಿರ ಜನಕ್ಕೆ ತಲುಪಿಸಬಹದು ಆದರೆ, ಸಿನಿಮಾ ಏಕಕಾಲಕ್ಕೆ ಇಡೀ ಪ್ರಪಂಚವನ್ನು ತಲುಪುತ್ತದೆ. ಎರಡೂ ಬೇರೆ ಬೇರೆ ಹಂತಗಳು, ಎರಡೂ ಶ್ರೇಷ್ಟವಾದದ್ದು. ಎರಡಕ್ಕೂ ಅದರದ್ದೇ ಆದರದ್ದೆ ಆದ ಮಿತಿಗಳು ಇವೆ. ಅದು ದೊಡ್ಡದು, ಇದು ದೊಡ್ಡದು ಎಂದು ಹೇಳಲು ಆಗಲ್ಲ.''

    ಫಿಲಾಸಫಿ ಹೇಳುವ ಅವಕಾಶ

    ಫಿಲಾಸಫಿ ಹೇಳುವ ಅವಕಾಶ

    ''ಫಿಲಾಸಫಿಯನ್ನು ಸಿನಿಮಾ ಮತ್ತು ನಾಟಕದಲ್ಲಿ ಹೇಳಲು ಇರುವ ಅವಕಾಶ ಬೇರೆ ಯಾರಿಗೂ ಸಿಗಲ್ಲ ಅನಿಸುತ್ತದೆ. ಯಾರಾದರೂ ಸ್ವಾಮಿಗಳು ಒಂದಷ್ಟು ಜನರಿಗೆ ವಿಷಯ ಹೇಳಬಹುದು. ಆದರೆ, ನಾಟಕ ಮತ್ತು ಸಿನಿಮಾ ಸಾವಿರಾರೂ ಜನರಿಗೆ ಏಕಕಾಲದಲ್ಲಿ ವಿಷಯ ಹೇಳುತ್ತದೆ. ನಾಟಕ, ಸಿನಿಮಾ ಎರಡೂ ಒಂದೇ ನಾಣ್ಯದ ಎರಡು ಮುಖಗಳು.

    ನಾಟಕ ಎಂಬ ಮೂಲ ಬಿಟ್ಟುಕೊಡುವುದಿಲ್ಲ

    ನಾಟಕ ಎಂಬ ಮೂಲ ಬಿಟ್ಟುಕೊಡುವುದಿಲ್ಲ

    ''ಸಿನಿಮಾದಲ್ಲಿ ಗಟ್ಟಿಯಾಗಿ ನಿಂತ ಹೆಚ್ಚು ಕಲಾವಿದರು ಪ್ರಮುಖವಾಗಿ ನಾಟಕದಿಂದ ಬಂದಿರುವವರು. ರಾಜ್ ಕುಮಾರ್ ಸರ್, ಶಂಕರ್ ನಾಗ್ ಸರ್, ಚಾರ್ಲಿ ಚಾಪ್ಲಿನ್ ಹೀಗೆ ಗಟ್ಟಿಯಾಗಿ ನಿಂತ ಕಲಾವಿದರು ರಂಗಭೂಮಿಯವರು. ಕೆಲವರು ಸಿನಿಮಾಗೆ ಬಂದರೂ ರಂಗಭೂಮಿ ಬಿಡುವುದಿಲ್ಲ. ಅಚ್ಚುತ್ ಅಣ್ಣ (ಅಚ್ಚುತ್ ಕುಮಾರ್), ಭರಣ ಸರ್ (ನಾಗಾಭರಣ) ಈಗಲೂ ತಮ್ಮ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಯಾರೂ ಕೂಡ ನಾಟಕ ಎಂಬ ಮೂಲವನ್ನು ಬಿಟ್ಟುಕೊಡಲು ಇಷ್ಟ ಪಡುವುದಿಲ್ಲ.''

    English summary
    World Theatre Day special : Kannada actor Nataraj spoke about difference between theater and cinema.
    Wednesday, March 27, 2019, 15:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X