"ಅದು ಪ್ರಾಸ್ಥೆಟಿಕ್ ಮೇಕಪ್, ಒಳ್ಳೆ ಪಾತ್ರ ಸಿಕ್ಕಿದೆ"; ತಾರಕ್ ಪೊನ್ನಪ್ಪ ಮಾತು

ತೆಲುಗಿನ 'ಪುಷ್ಪ'-2 ಚಿತ್ರದಲ್ಲಿ ಕನ್ನಡಿಗರ ಕಾರುಬಾರು ಜೋರಾಗಿದೆ. ನಾಯಕಿ ಶ್ರೀವಲ್ಲಿ ಆಗಿ ರಶ್ಮಿಕಾ ಮಂದಣ್ಣ, ಜಾಲಿ ರೆಡ್ಡಿ ಆಗಿ ಧನಂಜಯ್, ಇನ್ನು ಸ್ಪೆಷಲ್ ಸಾಂಗ್‌ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಇದೆಲ್ಲದರ ನಡುವೆ ತಾರಕ್ ಪೊನ್ನಪ್ಪ ಆರ್ಭಟ ಈಗ ಟಾಕ್ ಆಫ್‌ ದಿ ಟೌನ್ ಆಗಿದೆ.

ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಲಕ್ಷ ಲಕ್ಷ ವೀವ್ಸ್ ಸಾಧಿಸಿ ಮುನ್ನುಗುತ್ತಿದೆ. ಚಿತ್ರದ ಹೈಲೆಟ್ ಸನ್ನಿವೇಶಗಳ ಸಣ್ಣ ಸಣ್ಣ ಝಲಕ್ ಸೇರಿಸಿ ಟ್ರೈಲರ್ ಕಟ್ ಮಾಡಲಾಗಿದೆ. ಜಬರ್ದಸ್ತ್ ಮ್ಯೂಸಿಕ್ ಸೇರಿಸಿ ಕಿಕ್ ಕೊಡಲಾಗಿದೆ. ಇನ್ನು ಟ್ರೈಲರ್‌ನಲ್ಲಿ ಜಾತ್ರೆ ಸನ್ನಿವೇಶದ ಝಲಕ್ ಹೈಲೆಟ್ ಆಗಿದೆ. ಅದರಲ್ಲೂ ಅರ್ಧ ತಲೆ ಬೋಳಿಸಿಕೊಂಡ ವ್ಯಕ್ತಿಯ ಆರ್ಭಟ ಹುಬ್ಬೇರಿಸುವಂತಿದೆ. ಈತಾ ಯಾರಪ್ಪಾ ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

kannada actor Tarak Ponnappa opens up on his role in Pushpa-2 and make up

ಅಂದಹಾಗೆ ಹೀಗೆ ' ಪುಷ್ಪ'ರಾಜ್ ಎದುರು ಅಬ್ಬರಿಸುವ ವ್ಯಕ್ತಿ ಕನ್ನಡ ನಟ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಹೌದು ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಇದೀಗ 'ಪುಷ್ಪ' ಅಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರದಲ್ಲಿ ಕೂಡ ತಾರಕ್ ಬಣ್ಣ ಹಚ್ಚಿದ್ದರು. ಕುತ್ತಿಗೆಯಲ್ಲಿ ಚಪ್ಪಲಿ ಹಾರ, ಅರ್ಧಕ್ಕೆ ಬೋಳಿಸಿದ ತಲೆ, ಮುಖಕ್ಕೆ ಚಿತ್ರವಿಚಿತ್ರ ಬಣ್ಣ, ಚಿತ್ತಾರ, ರಾಕ್ಷಸ ನಗುವನ್ನು ಟ್ರೈಲರ್‌ನಲ್ಲಿ ನೋಡಬಹುದು.

'ಪುಷ್ಪ' ಚಿತ್ರದಲ್ಲಿ ಗಂಗಮ್ಮ ಜಾತ್ರೆ ಎಪಿಸೋಡ್ ಬಹಳ ಹೈಲೆಟ್ ಎನ್ನಲಾಗ್ತಿದೆ. ಈ ಹಿಂದೆ ಹೆಣ್ಣಿನ ವೇಷದಲ್ಲಿ ಅಲ್ಲು ಅರ್ಜುನ್ ಪೋಸ್ಟರ್, ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಅದೇ ಸನ್ನಿವೇಶದಲ್ಲಿ ತಾರಕ್ ಆರ್ಭಟವೂ ಇದೆ ಎನ್ನಲಾಗ್ತಿದೆ. ಅಂದಹಾಗೆ ಇದಕ್ಕೂ ಮುನ್ನ ತಾರಕ್ 'KGF', ಗಿಲ್ಕಿ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

kannada actor Tarak Ponnappa opens up on his role in Pushpa-2 and make up

ತಾರಕ್ ಪೊನ್ನಪ್ಪ 'ಪುಷ್ಪ'-2 ಚಿತ್ರದ ತಮ್ಮ ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಪಾತ್ರ ಸಿಕ್ಕಿದ್ದೇಗೆ? ಚಿತ್ರೀಕರಣ ಹೇಗಿತ್ತು? ಸೈಕೋ ರೀತಿ ಕಾಣುವ ಆ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

1. 'ಪುಷ್ಪ'-2 ಚಿತ್ರದ ಅವಕಾಶ ಸಿಕ್ಕಿದ್ದು ಹೇಗೆ?

ತಾರಕ್: ಪ್ರೊಡಕ್ಷನ್ ಮ್ಯಾನೇಜರ್‌ಗಳ ಮೂಲಕ ನನ್ನ ಚಿತ್ರಗಳ ವೀಡಿಯೋಗಳನ್ನು ಶೋ ರೀಲ್ ರೀತಿ ತೆಲುಗಿನ ಸಹ ನಿರ್ದೇಶಕರಿಗೆ ಕಳುಹಿಸಿದ್ದೆ. ಅಚಾನಕ್ ಆಗಿ ಯಾರಿಗೋ ಹೀಗೆ ವೀಡಿಯೋ ಕಳುಹಿಸಿದ್ದೆ. ಅದನ್ನು ನೋಡಿ ಮರುದಿನವೇ ನಿರ್ದೇಶಕ ಸುಕುಮಾರ್ ಆಫೀಸ್‌ಗೆ ಕರೆಸಿಕೊಂಡರು. ಲುಕ್ ಟೆಸ್ಟ್ ಮಾಡಿಸಿ ಕೂಡಲೇ ಆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು.

2. ಚಿತ್ರಕ್ಕಾಗಿ ಎಷ್ಟು ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ರಿ?

ತಾರಕ್: ಹೆಚ್ಚು ಕಮ್ಮಿ 60 ದಿನಗಳಾಗಿದೆ. ಇನ್ನು ಸಣ್ಣಪುಟ್ಟ ಪ್ಯಾಚ್‌ ವರ್ಕ್ ಚಿತ್ರೀಕರಣ ನಡೀತಿದೆ. ಇನ್ನು ಕೂಡ ಶೂಟ್ ಮಾಡಲಾಗ್ತಿದೆ. ದೊಡ್ಡ ಸಿನಿಮಾ ಆಗಿರುವುದರಿಂದ ಹೆಚ್ಚು ಸಮಯ ಬಯಸುತ್ತಿದೆ. ಚಿತ್ರದ ಮೂರು ಭಾಗಗಳಲ್ಲಿ ತಮ್ಮ ಪಾತ್ರ ಬರುತ್ತದೆ.

3. ಪಾತ್ರಕ್ಕಾಗಿ ಮೇಕಪ್ ಮಾಡಲು ಎಷ್ಟು ಸಮಯ ಹಿಡಿಸುತ್ತಿತ್ತು?

ತಾರಕ್: ಪ್ರಾಸ್ಥೆಟಿಕ್ ಮೇಕಪ್ ಮಾಡಿದ್ದು. ತಲೆಯ ಕೂದಲು ತೆಗೆಯಲಿಲ್ಲ. ಅಷ್ಟು ದಿನಗಳ ಕಾಲ ಆ ರೀತಿ ಕೂದಲು ತೆಗೆದು ಇರುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರಾಸ್ಥೆಟಿಕ್ ಮೇಕಪ್‌ನಿಂದ ಅಷ್ಟು ನ್ಯಾಚುರಲ್ ಆಗಿ ಕಾಣುತ್ತಿದೆ. 3 ಗಂಟೆಗಳ ಕಾಲ ಮೇಕಪ್ ಮಾಡಬೇಕು. ಅಷ್ಟು ಸಮಯ ಹಿಡಿಸುತ್ತದೆ. ಒಳ್ಳೆ ಮೇಕಪ್ ಆರ್ಟಿಸ್ಟ್‌ಗಳು ಇದ್ದಾರೆ.

4. ಎಷ್ಟು ನಿಮಿಷ ನಿಮ್ಮ ಪಾತ್ರ ಇರುತ್ತದೆ?

ತಾರಕ್: ಗೊತ್ತಿಲ್ಲ. ಈಗಲೇ ಅದನ್ನು ಹೇಳುವುದು ಕಷ್ಟ. ಆದರೆ ನನ್ನ ಪಾತ್ರಕ್ಕೆ ಬಹಳ ಮಹತ್ವ ಇದೆ. ಕೆಲವೊಮ್ಮೆ ಎಡಿಟಿಂಗ್‌ ವೇಳೆ ಕಟ್ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ನನ್ನ ಪಾತ್ರ ಹೈಲೆಟ್ ಆಗಿ ಇರುತ್ತದೆ ಎಂದು ಮಾತ್ರ ಹೇಳಬಲ್ಲೆ.

5. ನಿಮ್ಮ ಪಾತ್ರಕ್ಕೆ ನೀವೆ ಡಬ್ ಮಾಡಿದ್ದೀರಾ?

ತಾರಕ್: ಹೌದು. ಕನ್ನಡ ಮಾತ್ರವಲ್ಲ ತೆಲುಗಿನಲ್ಲಿ ಕೂಡ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೀನಿ. ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಮಾಡುವ ಆಸೆ ಇತ್ತು. ಆದರೆ ಸಮಯದ ಅಭಾವದಿಂದ ಸಾಧ್ಯವಾಗುತ್ತಿಲ್ಲ.

More from Filmibeat

English summary
Tarak Ponnappa specila chitchat with Filmibeat kannada on his pushpa-2 movie role;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X