twitter
    For Quick Alerts
    ALLOW NOTIFICATIONS  
    For Daily Alerts

    'ಉಪ್ಪಿ 30' ಸಂದರ್ಶನ : ಮಲಗಿದ್ದರೆ ಸಾವು.. ಕುಳಿತ್ತಿದ್ದರೆ ರೋಗ.. ನಡೆಯುತ್ತಿದ್ದರೆ ಜೀವನ..

    |

    Recommended Video

    ಉಪೇಂದ್ರ ಎಕ್ಸ್ಕ್ಲೂಸಿವ್ ಸಂದರ್ಶನ | ಡೈರೆಕ್ಟನ್ ಗೆ ವಾಪಾಸ್ ಬರ್ತಾರೆ ಉಪೇಂದ್ರ

    ''ಲೈಟ್ಸ್.....ಕ್ಯಾಮರಾ..... ಆಕ್ಷನ್....''

    ರಿಯಲ್ ಸ್ಟಾರ್ ಉಪೇಂದ್ರ ಈ ಮೂರು ಪದಗಳನ್ನು ಯಾವಾಗ ಹೇಳುತ್ತಾರೆ ಯಾರಿಗೂ ತಿಳಿದಿರುವುದಿಲ್ಲ. ಆದರೆ, ಉಪೇಂದ್ರ ಯಾವಾಗ ಡೈರೆಕ್ಷನ್ ಮಾಡಿದ್ರೂ ಅವರ ಅಭಿಮಾನಿಗಳು ಆ ಸಿನಿಮಾವನ್ನು ಅಪ್ಪಿಕೊಳ್ಳಲು ಸಿದ್ಧರಾಗಿರುತ್ತಾರೆ.

    ಇಡೀ ಭಾರತ ಚಿತ್ರರಂಗದಲ್ಲಿಯೇ ಡಿಫರೆಂಟ್ ಡೈರೆಕ್ಟರ್ ಎಂದು ಕರೆಸಿಕೊಳ್ಳುವ ಉಪ್ಪಿ ಈಗ ಚಿತ್ರರಂಗದಲ್ಲಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. 'ಕಮಾನ್ ಕಮಾನ್ ಕಾಮಣ್ಣ..' ಅಂತ ಉಪ್ಪಿ ಹಾಡು ಹಾಡಿ ಮೂರು ದಶಕಗಳು ದಾಟಿದೆ.

    50ನೇ ಸಿನಿಮಾದ ಎಕ್ಸ್ ಕ್ಲೂಸಿವ್ ವಿಚಾರ ಬಿಚಿಟ್ಟ ಉಪ್ಪಿ 50ನೇ ಸಿನಿಮಾದ ಎಕ್ಸ್ ಕ್ಲೂಸಿವ್ ವಿಚಾರ ಬಿಚಿಟ್ಟ ಉಪ್ಪಿ

    ನಟನೆ, ನಿರ್ದೇಶನ, ನಿರ್ಮಾಣ, ಸಂಭಾಷಣೆ, ಗಾಯಕ, ಗೀತರಚನೆ ಹೀಗೆ ಉಪೇಂದ್ರ ಎಲ್ಲ ವೇಷವನ್ನು ತೊಟ್ಟು, ಎಲ್ಲದರಲ್ಲೂ ಗೆದ್ದಿದ್ದಾರೆ. ತಮ್ಮ ಮೂರು ದಶಕದ ಚಿತ್ರ ಜೀವದ ಬಗ್ಗೆ ಉಪ್ಪಿ 'ಫಿಲ್ಮಿಬೀಟ್ ಕನ್ನಡ'ಕ್ಕೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ.

    ''ಮಲಗಿದ್ದರೆ ಸಾವು.. ಕುಳಿತ್ತಿದ್ದರೆ ರೋಗ.. ನಡೆಯುತ್ತಿದ್ದ ಜೀವನ..'' ಎಂಬ ಅದ್ಭುತ ಮಾತುಗಳ ಜೊತೆಗೆ ಇನ್ನೂ ಮುಂದೆಯೂ ಒಳ್ಳೆ ಒಳ್ಳೆಯ ಸಿನಿಮಾವನ್ನು ನಿರ್ದೇಶಕ ಮಾಡುತ್ತೇನೆ ಎಂದರು ಉಪೇಂದ್ರ.

    'ಸೂಪರ್' ಸಿನಿಮಾಗೆ 8 ವರ್ಷ : ರಿಯಲ್ ಸ್ಟಾರ್ ಚಿತ್ರದ 'ರಿಯಲ್' ಸಂಗತಿಗಳು 'ಸೂಪರ್' ಸಿನಿಮಾಗೆ 8 ವರ್ಷ : ರಿಯಲ್ ಸ್ಟಾರ್ ಚಿತ್ರದ 'ರಿಯಲ್' ಸಂಗತಿಗಳು

    ತಮ್ಮ ಉದ್ದನೆಯ ತಲೆ ಕೂದಲನ್ನು ಹಿಂದೆ ಸರಿಸುತ್ತಾ... ಕಾಫಿ ಹೀರುತ್ತಾ.... ನಗು ಮೊಗದಲ್ಲಿ ನಮ್ಮ ಜೊತೆಗೆ ಮಾತು ಶುರು ಮಾಡಿದರು ರಿಯಲ್ ಸ್ಟಾರ್....

    ಸಂದರ್ಶನ : ನವಿ ಕನಸು (ನವೀನ ಎಮ್ ಎಸ್)

    ಹೇಗಿದೆ ನಿಮ್ಮ 30 ವರ್ಷದ ಸಿನಿಮಾ ಜರ್ನಿ?

    ಹೇಗಿದೆ ನಿಮ್ಮ 30 ವರ್ಷದ ಸಿನಿಮಾ ಜರ್ನಿ?

    ''ಎಲ್ಲವೂ ಒಂದು ಮಿಂಚಿನ ಹಾಗೆ ಇದೆ. 'ಅನಂತನ ಅವಾಂತರ' ಸಿನಿಮಾದ ಶೂಟಿಂಗ್ ಮೊನ್ನೆ ಮೊನ್ನೆ ನಡೆದ ಆಗಿದೆ. ಮೂವತ್ತು ವರ್ಷ ಎಂದ ತಕ್ಷಣ ನನಗೆ ನಿಜಕ್ಕೂ ಆಶ್ಚರ್ಯ ಆಗುತ್ತದೆ.'' - ಉಪೇಂದ್ರ, ನಟ

    ರಿಯಲ್ ಸ್ಟಾರ್ ಪುತ್ರಿಯ ಈ ಆಸೆ ಯಾವಾಗ ಈಡೆರುತ್ತೆ? ರಿಯಲ್ ಸ್ಟಾರ್ ಪುತ್ರಿಯ ಈ ಆಸೆ ಯಾವಾಗ ಈಡೆರುತ್ತೆ?

    ನಿಮಗೆ 30 ವರ್ಷ ಕಳಿದಿದೆ, ಮಗಳು ಸಹ ಮೊದಲ ಹೆಜ್ಜೆ ಇಟ್ಟಿದ್ದಾಳೆ ಹೇಗನಿಸುತ್ತದೆ?

    ನಿಮಗೆ 30 ವರ್ಷ ಕಳಿದಿದೆ, ಮಗಳು ಸಹ ಮೊದಲ ಹೆಜ್ಜೆ ಇಟ್ಟಿದ್ದಾಳೆ ಹೇಗನಿಸುತ್ತದೆ?

    ''ಅವಳನ್ನು ನಾವು ಸಿನಿಮಾಗೆ ತರಬೇಕು ಅಂತ್ತೇನು ಪ್ಲಾನ್ ಮಾಡಿರಲಿಲ್ಲ. ಡೈರೆಕ್ಟರ್ ಲೋಹಿತ್ ಪ್ರಿಯಾಂಕಗೆ ಕಥೆ ಹೇಳಿದಾಗ ಅವಳ ಕೈನಲ್ಲಿ ಆಕ್ಟಿಂಗ್ ಮಾಡಿಸುತ್ತೇನೆ ಎಂದರು. ಮಗಳಿಗೆ ಕೇಳಿದಾಗ ಅವಳು ಇಷ್ಟ ಪಟ್ಟಳು. ಓದು, ವಿದ್ಯೆ, ಸ್ಕೂಲ್ ಇದರ ನಡುವೆ ಒಂದು ಬದಲಾವಣೆ ಇರುತ್ತದೆ ಅಂತ ಸಿನಿಮಾ ಮಾಡಿಸಿದ್ವಿ.'' - ಉಪೇಂದ್ರ, ನಟ

    'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ 'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ

    ಇಂಡಸ್ಟ್ರಿಯಲ್ಲಿ ಸತತ 30 ವರ್ಷ ನೀವು ಇರಬೇಕು ಅಂದರೆ ಅದರ ಹಿಂದಿನ ಶಕ್ತಿ?

    ಇಂಡಸ್ಟ್ರಿಯಲ್ಲಿ ಸತತ 30 ವರ್ಷ ನೀವು ಇರಬೇಕು ಅಂದರೆ ಅದರ ಹಿಂದಿನ ಶಕ್ತಿ?

    ''ನಮ್ಮದ್ದೇನ್ನೂ ಇಲ್ಲ. ಜನರ ಪ್ರೀತಿ, ತಂದೆ, ತಾಯಿ, ದೇವರ ಆಶೀರ್ವಾದ. ಇಲ್ಲಿ ನಮ್ಮದೇನ್ನು ಇಲ್ಲ ಎಂದು ತಿಳಿಯಲು ಈ ಮೂವತ್ತು ವರ್ಷ ಬೇಕಾಯ್ತು. ಇಷ್ಟು ವರ್ಷ ಬರಲು ಪರಿಶ್ರಮ ಕೂಡ ಬೇಕು. ನಾನು ಸಾಧನೆ ಮಾಡಿದೆ.. ನಂದು ಮುಗಿಯಿತು ಅಂತ ಯಾರೂ ಸುಮ್ಮನಿರಬಾದರು. ದೊಡ್ಡ ಸಾಧನೆ ಮಾಡಿದರೂ ಅಣ್ಣಾವ್ರು ನಾನೇನು ಮಾಡಿಲ್ಲ ಎನ್ನುತ್ತಿದ್ದರು. ಮಲಗಿದ್ದರೆ ಸಾವು, ಕುಳಿತ್ತಿದ್ದರೆ ರೋಗ, ನಡೆಯುತ್ತಿದ್ದರೆ ಜೀವನ you should keep moving.'' - ಉಪೇಂದ್ರ, ನಟ

    ಮೊದಲು 'ನಾನು' ಅಂತ ಶುರು ಮಾಡಿದ್ರಿ, ಆಮೇಲೆ 'ನೀನು' ಅಂತ ಹೇಳಿದ್ರಿ, ಈಗ 'ನಾವು' ಅಂತ್ತಿದ್ದೀರಾ?

    ಮೊದಲು 'ನಾನು' ಅಂತ ಶುರು ಮಾಡಿದ್ರಿ, ಆಮೇಲೆ 'ನೀನು' ಅಂತ ಹೇಳಿದ್ರಿ, ಈಗ 'ನಾವು' ಅಂತ್ತಿದ್ದೀರಾ?

    ''ಮೊದ ಮೊದಲ ಎಲ್ಲವೂ 'ನಾನು' ಅನಿಸುತ್ತದೆ. ಆಮೇಲೆ ಇಲ್ಲ ಇದು 'ನೀನು', ಇಲ್ಲಿ ನಂದೇನು ಇಲ್ಲ, ನೀವು ಚಪ್ಪಾಳೆ ಹೊಡೆಯುತ್ತಿರುವುದು ಅನಿಸುತ್ತದೆ. ಕೊನೆಗೆ ನಾನು ನೀವು ಎಲ್ಲರೂ ಸರಿ ಎನಿಸುತ್ತದೆ. ಅದೇ 'ನಾವು'.. ಅದೇ ಪ್ರಜಾಕೀಯ..'' - ಉಪೇಂದ್ರ, ನಟ

    ನಿಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವಾಗ?

    ನಿಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವಾಗ?

    ''ನನ್ನ ಮುಂದಿನ ನಿರ್ದೇಶನದ ಚಿತ್ರ ನನ್ನ 50ನೇ ಸಿನಿಮಾ. ಅದರ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಎಲೆಕ್ಷನ್ ಮುಗಿದ ನಂತರ ಅವರ ಕೆಲಸ ಶುರು ಮಾಡಿ, ಆ ಸಿನಿಮಾವನ್ನು ಸದ್ಯದಲ್ಲಿಯೇ ಅನೌನ್ಸ್ ಮಾಡುತ್ತೇನೆ. ಆ ಸಿನಿಮಾದಲ್ಲಿಯೂ ನನ್ನ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶಕ ಇರುತ್ತದೆ.'' - ಉಪೇಂದ್ರ, ನಟ

    'ಅರ್ಜುನ್ ರೆಡ್ಡಿ' ಅಪ್ಪನಂತಹ ಸಿನಿಮಾ ಉಪ್ಪಿ ಅವತ್ತೇ ಮಾಡಿದ್ರು ಅಂತ ತೆಲುಗಿನ ನಿರ್ದೇಶಕರೇ ಹೇಳಿದ್ರು. ಆ ಮಾತು ನಿಮಗೆ ಎಷ್ಟು ಖುಷಿ ನೀಡಿದೆ.?

    'ಅರ್ಜುನ್ ರೆಡ್ಡಿ' ಅಪ್ಪನಂತಹ ಸಿನಿಮಾ ಉಪ್ಪಿ ಅವತ್ತೇ ಮಾಡಿದ್ರು ಅಂತ ತೆಲುಗಿನ ನಿರ್ದೇಶಕರೇ ಹೇಳಿದ್ರು. ಆ ಮಾತು ನಿಮಗೆ ಎಷ್ಟು ಖುಷಿ ನೀಡಿದೆ.?

    ''ಆ ಮಾತನ್ನು ಕೇಳಿ ಖುಷಿಗಿಂತ ನಾನು ಮಾಡುವ ಕೆಲಸ ಇನ್ನು ತುಂಬ ಇದೆ ಅಂತ ಅನಿಸಿತು. ಆಂಧ್ರದಲ್ಲಿ 'ಎ', 'ಉಪೇಂದ್ರ' ಸಿನಿಮಾಗಳನ್ನು ಬಹಳ ಇಷ್ಟ ಪಡುತ್ತಾರೆ. ಅಲ್ಲಿ ಅದಕ್ಕೆ ಅಂತನೇ ಒಂದು ಪ್ರೇಕ್ಷಕ ವರ್ಗ ಇದೆ. ಈ ರೀತಿಯ ಸಿನಿಮಾವನ್ನು 'ಕಲ್ಟ್' ಮೂವಿ ಎಂದು ಕರೆಯುತ್ತಾರೆ. ಇವತ್ತಿಗೂ ಆ ರೀತಿಯ ಸಿನಿಮಾ ಮಾಡಿ ಅಂತ ಎಲ್ಲರೂ ಕೇಳುತ್ತಾರೆ. ಆ ಚಿತ್ರಗಳಿಗಿಂತ ಒಳ್ಳೆಯ ಸಿನಿಮಾ ಮಾಡಲು ಮುಂದೆ ಪ್ರಯತ್ನ ಮಾಡುತ್ತೇನೆ.'' - ಉಪೇಂದ್ರ, ನಟ

    ಮುಂದೆ ಯಾರ ಡೈರೆಕ್ಷನ್ ನಲ್ಲಿ ಆಕ್ಟ್ ಮಾಡಬೇಕು ಎಂಬ ಆಸೆ ನಿಮಗಿದೆ?

    ಮುಂದೆ ಯಾರ ಡೈರೆಕ್ಷನ್ ನಲ್ಲಿ ಆಕ್ಟ್ ಮಾಡಬೇಕು ಎಂಬ ಆಸೆ ನಿಮಗಿದೆ?

    ''ಹಾಗೆನೂ ಇಲ್ಲ. ನನಗೆ ಒಳ್ಳೆಯ ಕಥೆ ತೆಗೆದುಕೊಂಡು ಯಾರೇ ಸಿನಿಮಾ ಮಾಡುತ್ತೇನೆ ಅಂತ ಬಂದರೂ ನಾನು ಓಕೆ ಎನ್ನುತ್ತೇನೆ. ಅವರೇ ನನಗೆ ದೊಡ್ಡ ಡೈರೆಕ್ಟರ್. ಅದನ್ನೇ ನಾನು ಖುಷಿಯಿಂದ ಮಾಡುತ್ತೇನೆ.''

    English summary
    Kannada actor Upendra exclusive interview in Filmibeat kannada. The actor completed 30 years in movie industry.
    Saturday, March 16, 2019, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X