ಇತಿಮಿತಿಯ ಒಳಗೊಂದು ಕನಸು ಕಟ್ಟಿದ್ದಾರೆ ಅದಿತಿ ಪ್ರಭುದೇವ!

ನಟನೆಯ ವಿಚಾರದಲ್ಲಿ ರಂಗನಾಯಕಿ'; ಮೈಮಾಟದಲ್ಲಿ ಸಿಂಗ' ನಾಯಕಿ! ಹೌದು, ಈಕೆ 'ಶಾನೇ ಟಾಪಾಗಿರೋ' ಹುಡುಗಿ ಅದಿತಿ ಪ್ರಭುದೇವ. ಯಶಸ್ಸಿನ ವಿಚಾರದಲ್ಲಿ ದೊಡ್ಡದೊಂದು ಬ್ರೇಕ್ ಇನ್ನಷ್ಟೇ ಸಿಗಬೇಕಿದೆ.

Recommended Video

ಸುಶಾಂತ್ ಸಿಂಗ್ ಲವ್ವರ್ ವಿರುದ್ಧ ದಾಖಲಾಯಿತು ಕೇಸ್ | Complaint against Sushant singh Ex girlfriend Rhea

ಆದರೆ ಕನ್ನಡದ ಪ್ರೇಕ್ಷಕರಿಂದ ಇಷ್ಟನಟಿಯ ಸ್ಥಾನ, ವಿಮರ್ಶಕರಿಂದ ಶ್ರೇಷ್ಠನಟಿಯೆಂದು ಸನ್ಮಾನ ಎಲ್ಲವೂ ಲಭಿಸಿದೆ. ಕೈತುಂಬ ಚಿತ್ರಗಳೊಂದಿಗೆ ಇನ್ನೇನು ಈ ವರ್ಷದ ಅತ್ಯಂತ ಬ್ಯುಸಿಯಾದ ನಟಿಯಾಗಬೇಕು ಎನ್ನುವಷ್ಟರಲ್ಲಿ ದೇಶಕ್ಕೆ ಕೊರೊನಾ ಕಾಟ ಶುರುವಾಗಿದೆ.

ಸದಾ ವೃತ್ತಿ ಜೀವನದಲ್ಲಿ ಕಾರ್ಯನಿರತರಾಗಿದ್ದ ಎಲ್ಲರೂ 'ಈ ಅನಿರೀಕ್ಷಿತ ಬಿಡುವು ಹೊಸದೊಂದು ಜ್ಞಾನೋದಯಕ್ಕೆ ಅವಕಾಶ ಮಾಡಿಕೊಟ್ಟಿದೆ' ಎನ್ನುತ್ತಿದ್ದಾರೆ. ಅದಿತಿಗೆ ಅಂಥ ವಿಶೇಷ ಅನುಭವಗಳೇನೂ ಆಗಿಲ್ಲವಂತೆ. ಆದರೆ ಕುದುರೆಯಂತೆ ವೇಗದಿಂದ ಓಡುತ್ತಿದ್ದ ತಮಗೆ ಒಂದು ಒಳ್ಳೆಯ ಆತ್ಮಾವಲೋಕನಕ್ಕೆ ಅವಕಾಶ ದೊರಕಿದೆ ಎನ್ನುತ್ತಾರೆ ಅದಿತಿ. ಹಾಗಾದರೆ ಅಂಥದೊಂದು ಅವಲೋಕನದ ಬಳಿಕ ಅವರು ಹಂಚಿಕೊಳ್ಳಲು ಬಯಸುವ ವಿಚಾರಗಳೇನು ಎನ್ನುವುದನ್ನು ಅದಿತಿ 'ಫಿಲ್ಮಿಬೀಟ್' ಜತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ..

 ಬೆಂಗಳೂರಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ಕಂಡಾಗ ಏನು ಅನಿಸುತ್ತಿದೆ?

ಬೆಂಗಳೂರಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ಕಂಡಾಗ ಏನು ಅನಿಸುತ್ತಿದೆ?

ಮನೆಯಿಂದ ಹೊರಗೆ ಕಾಲಿಡುವ ಪ್ರತಿಯೊಬ್ಬರಿಗೂ ಕೊರೊನಾ ಬಂದೇ ಬರಬಹುದು ಎನ್ನುವಂತಿದೆ ಪರಿಸ್ಥಿತಿ. ಹಾಗಂತ ಹೊರಗೆ ಕಾಲಿಡಲೇಬೇಕಾದವರು, ಕೆಲಸ ಮಾಡಬೇಕಾದವರು ತೆರಳಲೇಬೇಕು. ನಾವು ಸಂಘ ಜೀವಿಗಳು ಬೇರೆ. ಪರಸ್ಪರ ಸಂಪರ್ಕ ಇರಲೇಬೇಕು. ಆದರೆ ಅದೇ ವೇಳೆ ಕೊರೊನಾದ ಬಗ್ಗೆ ಪರಿಜ್ಞಾನ, ಸಾಮಾಜಿಕ ವರ್ತನೆಯಲ್ಲಿ ವಿವೇಚನೆ ಇರುವುದು ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಿಂದ ಮತ್ತೊಬ್ಬರಿಗೆ ಕೆಡುಕಾಗದಿರಲಿ ಎನ್ನುವ ಒಳ್ಳೆಯ ಮನಸು ಇರಲೇಬೇಕು. ಮನೆಯಲ್ಲಿರುವಾಗ ಸಾಧ್ಯವಾದಷ್ಟು ಒಳ್ಳೆಯ ಊಟ ಮಾಡುವುದು. ಬೆಳ್ಳುಳ್ಳಿ, ಅರಿಶಿಣ ಇರುವ ಆಹಾರ ಪದಾರ್ಥ ಸೇವಿಸುವುದು. ಮಾತ್ರವಲ್ಲ, ಇಷ್ಟೆಲ್ಲ ಮುಂಜಾಗರೂಕತೆ ಇದ್ದರೂ ನಮಗೆ ಪಾಸಿಟಿವ್ ಆಗಬಹುದಾದ ಸಾಧ್ಯತೆ ಇದೆ ಎನ್ನುವುದಕ್ಕೆ ಮಾನಸಿಕವಾಗಿ ಸಿದ್ಧವಾಗಿರುವುದು ಪ್ರಮುಖವೆನಿಸುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ಕೊರೊನಾ ಲಕ್ಷಣ ಕಾಣಿಸುವುದು ವಿಶೇಷವಲ್ಲ; ಅದರಿಂದ ಪಾರಾಗಿ ಬರುತ್ತೇವೆ ಎನ್ನುವ ಆತ್ಮಸ್ಥೈರ್ಯ ನಮ್ಮಲ್ಲಿರಬೇಕಾಗಿರುವುದು ಮುಖ್ಯ.

 ನೀವು ಈ ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತಿದ್ದೀರಿ?

ನೀವು ಈ ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತಿದ್ದೀರಿ?

ನನಗೆ ನಿಜಕ್ಕೂ ಇಂಥದೊಂದು ಬಿಡುವು ಬೇಕಾಗಿತ್ತು. ಗುರಿ ಸೇರಲು ಬಯಸುವ ಕುದುರೆ ಹೇಗೆ ಅಕ್ಕಪಕ್ಕ ನೋಡದೇನೇ ಓಡುತ್ತೋ, ಅದೇ ರೀತಿ ಲಕ್ಷ್ಯ ನೋಡಿ ಸಾಗುತ್ತಿದ್ದ ನನಗೆ ನನ್ನ ಮನೆಮಂದಿಯೊಂದಿಗೆ ಸರಿಯಾಗಿ ಬೆರೆಯಲು ಅವಕಾಶ ಆಗುತ್ತಿರಲಿಲ್ಲ. ಆದರೆ ಈ ಲಾಕ್ಡೌನ್ ಸಂದರ್ಭದಲ್ಲಿ ದಾವಣಗೆರೆಯಲ್ಲಿದ್ದ ನನ್ನ ತಮ್ಮನೂ ಮನೆಗೆ ಬಂದಿದ್ದ. ನಾವೆಲ್ಲರೂ ಬಿಡುವಿನಿಂದ ಜತೆ ಸೇರಿ ವರ್ಷಗಳೇ ಆಗಿದ್ದವು. ಹಾಗಾಗಿ ಆ ದಿನಗಳನ್ನು ನೆಮ್ಮದಿಯಾಗಿ ಕಳೆಯೋಣ ಎಂದು ನಾವೆಲ್ಲ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದೆವು. ಮೊದಲೇ ಫೋನು ನೀರೊಳಗೆ ಬಿದ್ದು ಬಹಳಷ್ಟು ನಂಬರ್‌ಗಳು ಮಿಸ್ ಆಗಿದ್ದವು.

ನನಗಂತೂ ನಟಿಯಾಗಿ ನನ್ನ ಸ್ಟ್ರೆಂತ್ ಏನು, ವೀಕ್ನೆಸ್ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಒಂದು ಒಳ್ಳೆಯ ಅವಕಾಶ ಸಿಕ್ಕಿತು. ಮೊದಲೇ ಅಭ್ಯಾಸವಿದ್ದ ಯೋಗ, ಧ್ಯಾನಗಳನ್ನು ಸರಿಯಾಗಿ ಸಮಯ ಕೊಟ್ಟು ಮಾಡತೊಡಗಿದ್ದೇನೆ. ಒಂದಷ್ಟು ಸಿನಿಮಾ, ವೆಬ್ ಸೀರೀಸ್ ಗಳನ್ನು ನೋಡಿದೆ, ಪುಸ್ತಕಗಳನ್ನು ಓದಿದೆ. ಪೆಯಿಂಟಿಂಗ್ ಬಿಡಿಸುವ ನನ್ನ ಹವ್ಯಾಸಕ್ಕೆ ಮತ್ತೆ ಚಾಲನೆ ನೀಡಿದ್ದೇನೆ. ಲಾಕ್ಡೌನ್ ತೆಗೆದ ಬಳಿಕ ಒಮ್ಮೆ ದಾವಣಗೆರೆಗೂ ಹೋಗಿ ಬಂದೆವು.

 ಹೊಸದಾದ ಕನಸೇನಾದರೂ ಕಟ್ಟಿದ್ದೀರ?

ಹೊಸದಾದ ಕನಸೇನಾದರೂ ಕಟ್ಟಿದ್ದೀರ?

ನನಗೆ ಬಾಲ್ಯದಿಂದಲೇ ಒಂದು ಕನಸಿದೆ. ಅದು ಕಷ್ಟದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡುವುದು. ಬಾಲ್ಯದಲ್ಲಿ ನಾನಿದ್ದ ಹಳ್ಳಿ ಕಡೆ ಕರೆಂಟ್ ಹೊಡೆದು ಬಿದ್ದ ಗಿಳಿ, ಗಾಯಗೊಂಡ ಪ್ರಾಣಿಗಳನ್ನು ರಕ್ಷಿಸಿದ್ದೆ. ನಾಯಿ ಎಂದರಂತೂ ನಮ್ಮ ಮನೆಯಲ್ಲಿ ಎಲ್ಲರಿಗೂ ಬಹಳ ಇಷ್ಟ. ಚಂದು ಎನ್ನುವ ನಮ್ಮ ನಾಯಿ ತೀರಿಹೋದ ಬಳಿಕ ಮೂರು ತಿಂಗಳ ಕಾಲ ಆ ನೋವಲ್ಲೇ ಅಮ್ಮನ ಆರೋಗ್ಯ ಕೆಟ್ಟಿತ್ತು.

ನಾಯಿಗಳೆಂದರೆ ಅಪ್ಪನಿಗೂ, ತಮ್ಮನಿಗೂ ಇಷ್ಟ. ಈಗ ನಮ್ಮನೆಯಲ್ಲಿ ಎರಡು ನಾಯಿಗಳಿವೆ. ಇದು ಎರಡನೇ ಚಂದು! ಮತ್ತೊಂದು ಅರ್ಜುನ್! ಇರುವುದು ಎರಡು ನಾಯಿಗಳಾದರೂ ರಾತ್ರಿ ತಿಂಡಿ ಹಾಕುವ ಹೊತ್ತಿಗೆ ನಾಲ್ಕೈದು ಬೇರೆ ನಾಯಿಗಳು ನಮ್ಮ ಮನೆ ಮುಂದೆ ಬಂದು ಸೇರುತ್ತವೆ. ಎಲ್ಲದಕ್ಕೂ ತಿಂಡಿ ಹಾಕುತ್ತೇವೆ. ಅದನ್ನೇ ವ್ಯವಸ್ಥಿತವಾಗಿ ಮಾಡಲಿಕ್ಕಾಗಿ ಒಂದು ಪುಟ್ಟದಾದ ಒಂದು 'ಅನಿಮಲ್ ರೆಸ್ಕ್ಯೂ ಸೆಂಟರ್' ಕಟ್ಟಬೇಕು ಎನ್ನುವ ಕನಸಿದೆ.

ಪ್ರಾಣಿಗಳ ವ್ಯಾಮೋಹ

ಪ್ರಾಣಿಗಳ ವ್ಯಾಮೋಹ

ಪ್ರಾಣಿ ಸಂರಕ್ಷಣಾ ಕೇಂದ್ರ ಸ್ಥಾಪಿಸುವುದು ಬಾಡಿಗೆ ಮನೆಗಳ ಪಕ್ಕದಲ್ಲಂತೂ ಸಾಧ್ಯವಿಲ್ಲ. ಆದರೆ ಸ್ವಂತ ಮನೆ ಕಟ್ಟುವಾಗ ಅನಿಮಲ್ ರೆಸ್ಕ್ಯೂ ಸೆಂಟರ್ ಬಗ್ಗೆ ಮೊದಲು ಯೋಜನೆ ಹಾಕಲಿದ್ದೇನೆ. ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ನಾನು ವೆಟರ್ನರಿ ಡಾಕ್ಟರಾಗಲು ಬಯಸಿದ್ದೆ. ಆದರೆ ಮನೆಯಲ್ಲಿ ಇಂಜಿನಿಯರಿಂಗ್ ಓದಿಸಿದರು. ಈಗ ನಟಿಯಾಗಿದ್ದೇನೆ. ಆದರೆ ಪ್ರಾಣಿಗಳ ಮೇಲಿನ ಮೋಹ ಮಾತ್ರ ನಿರಂತರ.

More from Filmibeat

English summary
Actress Aditi Prabhudeva talks about the locdown period and her new dream.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X