twitter
    For Quick Alerts
    ALLOW NOTIFICATIONS  
    For Daily Alerts

    ಮಿಕಗಳ ಸೇವೆಯಲ್ಲಿ ಸುಖ ಕಾಣುವ ಭೂಮಿಕಾ

    |

    ''ನನಗೆ ಪ್ರಾಣಿಗಳೆಂದರೆ ದರ್ಶನ್ ಅವರಂತೆ ಪ್ರೀತಿಯೇನೂ ಇಲ್ಲ! ಎಲ್ಲರ ಹಾಗೆ ಸಾಮಾನ್ಯವಾದ ಇಷ್ಟ ಅಷ್ಟೇ. ಪ್ರತ್ಯೇಕವಾಗಿ ಯಾವುದೇ ಪ್ರಾಣಿಗಳನ್ನು ಸಾಕುವ ಆಸಕ್ತಿ ಇಲ್ಲ" ಎಂದಿದ್ದರು ಭೂಮಿಕಾ. ಇದು ಕೆಲವು ದಿನಗಳ ಹಿಂದೆ ಅವರ ಮನೆಯಲ್ಲಿ ನಡೆದ ಮಾತುಕತೆ.

    ಅಂದಹಾಗೆ ಅವರು ಆ ಸಮಜಾಯಿಷಿ ನೀಡಲು ಕಾರಣವಾಗಿದ್ದು ಅವರು ತಮ್ಮ ಮೊಬೈಲ್ ನಲ್ಲಿದ್ದ ಬೆಕ್ಕಿನ ಫೊಟೋ ಮೇಲೆ ತೋರಿಸುತ್ತಿದ್ದ ಪ್ರೀತಿ ಕಂಡಾಗ ಕೇಳಲಾದ ಪ್ರಶ್ನೆಯೇ ಆಗಿತ್ತು. ಬೆಕ್ಕು ಸಾಕು ಪ್ರಾಣಿ. ನಮ್ಮ ಊರ ಕಡೆ ಎಲ್ಲರ ಮನೆಗಳಲ್ಲಿಯೂ ನಾಯಿ, ಬೆಕ್ಕುಗಳು ಸಾಮಾನ್ಯ. ಅದೇ ರೀತಿ ನಮ್ಮನೆಯಲ್ಲಿ ಬೆಕ್ಕು ಇದೆ. ಅಷ್ಟೇ ಹೊರತು ಅದೇನೂ ನಾನು ವಿದೇಶದಿಂದ ತರಿಸಿರುವ ವಿಶೇಷ ತಳಿಯೇನೂ ಅಲ್ಲ ಎಂದು ನಕ್ಕಿದ್ದರು ಭೂಮಿಕಾ.

    ಹೆಸರಿನಲ್ಲೆ ಸೆಳೆವಂಥ ಇವರು ಸುಂದರ್ ವೀಣಾ..!ಹೆಸರಿನಲ್ಲೆ ಸೆಳೆವಂಥ ಇವರು ಸುಂದರ್ ವೀಣಾ..!

    ಆದರೆ ಅದೆಲ್ಲ ಸುಳ್ಳು ಅವರಿಗೆ ಪ್ರಾಣಿಗಳ ಮೇಲೆ ಒಂದು ವಿಶೇಷ ಕಾಳಜಿ ಇದೆ ಎಂದು ಸಾಬೀತಾಗಿದ್ದು ಇತ್ತೀಚೆಗೆ ಮಲ್ಲೇಶ್ವರದ ರಸ್ತೆಯಲ್ಲಿ ಕಾರು ನಿಲ್ಲಿಸಿ ಬೆಕ್ಕೊಂದನ್ನು ಉಪಚರಿಸುತ್ತಿದ್ದ ಅವರನ್ನು ಕಂಡಾಗ. ಅಲ್ಲಿ ಫಿಲ್ಮೀಬೀಟ್ ಪ್ರತಿನಿಧಿಯೊಂದಿಗ ನಡೆದ ಮಾತುಕತೆಯನ್ನು ಅದೇ ರೀತಿಯಲ್ಲಿ ಇಲ್ಲಿ ನೀಡಲಾಗಿದೆ. ಮುಂದೆ ಓದಿ..

    ಅರೆ, ಭೂಮಿಕಾ ಕಾರಿನ ಕೆಳಗೆ ಬೆಕ್ಕು ಸಿಕ್ಕಿಕೊಂಡಂತಿದೆ?!

    ಅರೆ, ಭೂಮಿಕಾ ಕಾರಿನ ಕೆಳಗೆ ಬೆಕ್ಕು ಸಿಕ್ಕಿಕೊಂಡಂತಿದೆ?!

    ಛೇ.. ಬಿಡ್ತೂ ಅನ್ನಿ! ಎಲ್ಲಾದರೂ ಉಂಟೇ? ನಾನು ಈ ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಇಲ್ಲೇ ರಸ್ತೆಯಲ್ಲಿ ಬೆಕ್ಕೊಂದು ಗಾಯಗೊಂಡು ಬಿದ್ದಿರುವುದನ್ನು ನೋಡಿದೆ. ಬಹುಶಃ ಯಾವುದೋ ವಾಹನ ಡಿಕ್ಕಿ ಹೊಡೆದು ಹೋಗಿರಬೇಕು. ಅವರು ಹೋಗಿದ್ದಾರೆ ಅಂತ ನಾವು ಕೂಡ ಇದರ ದುರವಸ್ಥೆ ಕಂಡರೂ ಕಾಣದಂತೆ ಹೋಗೋಕಾಗುತ್ತಾ? ಹಾಗಾಗಿ ನಿಲ್ಲಿಸಿ ಸ್ವಲ್ಪ ನೀರು ಕುಡಿಸ್ತಾ ಇದ್ದೆ. ( ಭೂಮಿಕಾ ಹೇಳಿದ್ದು ನಿಜ ಎಂದು ಆಕೆಗೆ ಸಹಾಯಕ್ಕೆ ಮುಂದಾಗಿದ್ದ ದಾರಿ ಹೋಕರೋರ್ವರು ಸಾಕ್ಷಿ ಹೇಳಿದರು!)

    ಹಾಗಾದರೆ ನೀವು ಬೆಕ್ಕು ಪ್ರಿಯೆ ಎಂದು ಸಾಬೀತಾದ ಹಾಗಾಯಿತಲ್ಲ?

    ಹಾಗಾದರೆ ನೀವು ಬೆಕ್ಕು ಪ್ರಿಯೆ ಎಂದು ಸಾಬೀತಾದ ಹಾಗಾಯಿತಲ್ಲ?

    ಇದನ್ನು ಪ್ರೀತಿ ಎನ್ನುವುದಕ್ಕಿಂತ ಮಾನವೀಯತೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಕಷ್ಟದಲ್ಲಿರುವ ಜೀವಿಗಳನ್ನು ಕಂಡಾಗ ನಮ್ಮ ಕೈಲಾದ ಸಹಾಯ ಮಾಡುವುದು ಮನುಷ್ಯತ್ವದ ಲಕ್ಷಣವಾಗಿತ್ತು. ಆದರೆ ನಾವಾಗಿಯೇ ಇನ್ನೊಬ್ಬರಿಗೆ ಕಷ್ಟ ಕೊಡುವುದೇ ಜೀವನ ಎನ್ನುವ ಈ ಕಾಲಘಟ್ಟದಲ್ಲಿ ನಾನು ತೋರಿಸುತ್ತಿರುವ ಈ ಸಾಮಾನ್ಯ ಕಾಳಜಿ ತೀರ ಅತಿರೇಕದ ಹಾಗೆ ಅನಿಸಿದರೆ ತಪ್ಪೇನಿಲ್ಲ. ಆದರೆ ಈ ಬೆಕ್ಕನ್ನು ನೋಡಿ, ಆಲ್ರೆಡಿ ಅದಕ್ಕೆ ಗಾಯವಾಗಿರುತ್ತದೆ. ಇನ್ನೇನು ಸ್ವಲ್ಪ ಹೊತ್ತಲ್ಲಿ ಮಳೆಬೇರೆ ಸುರಿಯುವ ಹಾಗಿದೆ. ಅಷ್ಟರೊಳಗೆ ನಮ್ಮಿಂದಾಗುವಷ್ಟು ಶುಶ್ರೂಷೆ ಮಾಡೋಣ ಅಂತ ಪ್ರಯತ್ನಿಸಿದೆ.

    ಆಟದ ಜತೆ ಲೆಕ್ಕಕ್ಕೂ ಸಿದ್ಧವಾಗಿದ್ದಾರೆ ಸಂಚಾರಿ ವಿಜಯ್ಆಟದ ಜತೆ ಲೆಕ್ಕಕ್ಕೂ ಸಿದ್ಧವಾಗಿದ್ದಾರೆ ಸಂಚಾರಿ ವಿಜಯ್

    ಒಳ್ಳೆಯ ಕೆಲಸವೇ ಸರಿ. ಅಂದಹಾಗೆ ನಿಮ್ಮ ಊರು ಯಾವುದು?

    ಒಳ್ಳೆಯ ಕೆಲಸವೇ ಸರಿ. ಅಂದಹಾಗೆ ನಿಮ್ಮ ಊರು ಯಾವುದು?

    ನನ್ನದು ಮೂಲತಃ ಮಂಗಳೂರು. ಆದರೆ ಹೈಸ್ಕೂಲ್ ಮುಗಿದಾಕ್ಷಣ ನಾವು ಕುಟುಂಬ ಸಮೇತ ಬೆಂಗಳೂರು ಸೇರಿದ್ದೆವು. ಊರಿನ ನಮ್ಮ ಮನೆಯಲ್ಲಿ ಕೂಡ ಇಷ್ಟಪಟ್ಟು ಬೆಕ್ಕು ಸಾಕಿದ್ದೇವೆ. ಅದನ್ನು ಮುದ್ದಿನಿಂದ ಪಗ್ಗು ಎಂದು ಕರೆಯುತ್ತೇನೆ. ಅದಕ್ಕೆ ಒಂದಷ್ಟು ಮರಿಗಳಿವೆ. ಅವುಗಳಿಗೆ ಪ್ರತ್ಯೇಕ ಹೆಸರಿಟ್ಟಿಲ್ಲ. ಪಗ್ಗು ಫ್ಯಾಮಿಲಿಯನ್ನು ಮುದ್ದಾಗಿ ಕರೆದರೆ ಕಣ್ಣೆದುರು ಬರುತ್ತವೆ. ಅವುಗಳನ್ನು ವಿಶೇಷವಾಗಿ ನೋಡಿಕೊಳ್ಳುವ ವ್ಯಕ್ತಿಯೇನಲ್ಲ. ಆದರೆ ಅವುಗಳು ಕೂಡ ಚೆನ್ನಾಗಿ ಬಾಳಬೇಕಾದವು ಎನ್ನುವ ಸಾಫ್ಟ್ ಕಾರ್ನರ್ ಖಂಡಿತವಾಗಿ ಇದೆ.

    ಬೆಂಗಳೂರಿಗೆ ಬಂದ ಬಳಿಕದ ನಿಮ್ಮ ಪ್ರಮುಖ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ?

    ಬೆಂಗಳೂರಿಗೆ ಬಂದ ಬಳಿಕದ ನಿಮ್ಮ ಪ್ರಮುಖ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ?

    ನನ್ನ ವೃತ್ತಿ ಬದುಕು ಶುರುವಾಗಿದ್ದು ಕಿರುತೆರೆಯ ಮೂಲಕ. ಉದಯ ಟಿವಿಯಲ್ಲಿ ಪ್ರಸಾರವಾದ ಬಾಲಾಜಿ ಟೆಲಿಫಿಲ್ಮ್ಸ್ ನ ಕಲ್ಯಾಣಿ ಧಾರಾವಾಹಿಯಲ್ಲಿ ನಾಯಕಿಯಾಗಿದ್ದೆ. ಸಿನಿಮಾಗಳ ವಿಷಯಕ್ಕೆ ಬಂದರೆ `ಅಹಂ', `ಬಿಡಲಾರೆ ಎಂದು ನಿನ್ನ', ಮತ್ತು ಇತ್ತೀಚೆಗಷ್ಟೇ ಮೋಹನ್ ಅವರಿಗೆ ಜೋಡಿಯಾಗಿ `ಹಲೋ ಮಾಮ' ಚಿತ್ರಗಳಲ್ಲಿ ನಟಿಸಿದ್ದೇನೆ. ತಮಿಳು ಚಿತ್ರ `ಪಾಸಂ' ಸಂಪೂರ್ಣವಾಗಿದೆ. ಬಿಡುಗಡೆ ಆಗಬೇಕಿದೆ. ಅದು ಹೊಸಬರ ತಂಡ. ನಿರ್ದೇಶಕರು ಮುರುಗನ್. ಕನ್ನಡದಲ್ಲಿ ಗುಣವಂತ ಮಂಜು ನಿರ್ದೇಶನದ ಮಕ್ಕಳ ಚಿತ್ರ `ಬೆಟ್ಟದ ಹಕ್ಕಿ' ಚಿತ್ರೀಕರಣ ಕೊನೆಯ ಹಂತದಲ್ಲಿದೆ.

    Exclusive : ಏಳು ಬೀಳಿನ ನಂತರ ಹೀರೋ ಆಗಿ ಬಂದ್ರು 'ಫ್ರೆಂಡ್ಸ್' ಚಿತ್ರದ ನಟExclusive : ಏಳು ಬೀಳಿನ ನಂತರ ಹೀರೋ ಆಗಿ ಬಂದ್ರು 'ಫ್ರೆಂಡ್ಸ್' ಚಿತ್ರದ ನಟ

    ಸಿನಿಮಾರಂಗಕ್ಕೆ ಬೇಕಾದ ತಯಾರಿ ಹೇಗಿತ್ತು?

    ಸಿನಿಮಾರಂಗಕ್ಕೆ ಬೇಕಾದ ತಯಾರಿ ಹೇಗಿತ್ತು?

    ನನಗೆ ನೃತ್ಯದಲ್ಲಿ ಬಾಲ್ಯದಿಂದಲೇ ಆಸಕ್ತಿ ಇತ್ತು. ಎರಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೆ. ಈ ಹಿಂದೆ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಹಾಕು ಹೆಜ್ಜೆ ಹಾಕು' ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದೆ. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರೀಮ್ ಗರ್ಲ್ಸ್, ಚಿನ್ನದ ಬೇಟೆ ಶೋಗಳಲ್ಲಿ ಕೂಡ ಪಾಲ್ಗೊಂಡಿದ್ದೆ. ವೆಸ್ಟರ್ನ್ ಡ್ಯಾನ್ಸ್ ಅಭ್ಯಾಸ ಮಾಡಿದ್ದೇನೆ. ಚಂದ್ರಮೋಹನ್ ಮಾಸ್ಟರ್ ಬಳಿಯಲ್ಲಿ ಅಭ್ಯಾಸ ಮಾಡಿದ್ದೇನೆ. ಒಂದು ಒಳ್ಳೆಯ ಚಿತ್ರದ ಮೂಲಕ ಗುರುತಿಸಬೇಕು ಎನ್ನುವ ಆಸೆ ಇದೆ.

    Read more about: interview ಸಂದರ್ಶನ
    English summary
    Kannada Actress Bhoomika With her Adorable Cat.
    Thursday, October 3, 2019, 19:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X