ಓದಬೇಕಿದ್ದ ಕಾಲೇಜ್ ಗೆ ಅತಿಥಿಯಾಗಿ ಹೋಗಿದ್ದ 'ಬಿಗ್ ಬಾಸ್' ಜಯಶ್ರೀ

By Harshitha

ಕನ್ನಡದ 'ಬಿಗ್ ಬಾಸ್' ಕಾರ್ಯಕ್ರಮದಿಂದ ಏಕ್ದಂ ಜನಪ್ರಿಯತೆ ಪಡೆದವರಲ್ಲಿ ಜಯಶ್ರೀ ರಾಮಯ್ಯ ಕೂಡ ಒಬ್ಬರು. ಮೂಲತಃ ಡ್ಯಾನ್ಸರ್ ಆಗಿರುವ ಜಯಶ್ರೀ ರಾಮಯ್ಯ 'ಬಿಗ್ ಬಾಸ್' ಕಾರ್ಯಕ್ರಮದ ಬಳಿಕ ಸ್ಯಾಂಡಲ್ ವುಡ್ಡಿಗೂ ಕಾಲಿಟ್ಟರು.

ಇಮ್ರಾನ್ ಸರ್ದಾರಿಯಾ ರವರ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಜಯಶ್ರೀ ರಾಮಯ್ಯ ಸದ್ಯ ಕೆಲವು ಚಿತ್ರಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಈ ನಡುವೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ ಸ್ಪೆಷಲ್ ಪ್ರೋಗ್ರಾಂ 'ಸಖತ್ ಶುಕ್ರವಾರ' ಕಾರ್ಯಕ್ರಮದಲ್ಲಿ ಜಯಶ್ರೀ ರಾಮಯ್ಯ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಕಾಲೇಜ್ ಲೈಫ್ ಬಗ್ಗೆಯೂ ಜಯಶ್ರೀ ಮಾತನಾಡಿದ್ದಾರೆ.

Kannada Actress Jayashree Ramaiah reveals about her college life

ಡಿಗ್ರಿ ಓದುವಾಗ ಕೊನೆಯ ಸೆಮಿಸ್ಟರ್ ನಲ್ಲಿ ಪಾಸ್ ಆಗುವೆ ಎಂಬ ನಂಬಿಕೆ ಮೇಲೆ ಬಿ.ಎಂ.ಎಸ್ ಕಾಲೇಜ್ ನಲ್ಲಿ ಎಂ.ಎ ಮಾಡಲು ಜಯಶ್ರೀ ರಾಮಯ್ಯ ಸೀಟ್ ಬ್ಲಾಕ್ ಮಾಡಿಸಿದ್ದರಂತೆ.

ಆದ್ರೆ, ದುರಾದೃಷ್ಟವಶಾತ್ ಕೊನೆಯ ಸೆಮಿಸ್ಟರ್ ನಲ್ಲಿ ಜಯಶ್ರೀ ರಾಮಯ್ಯ ಪಾಸ್ ಆಗಲಿಲ್ಲ. ಹೀಗಾಗಿ ಅವರು ಬಿ.ಎಂ.ಎಸ್ ಕಾಲೇಜ್ ಸೇರಲು ಆಗಲಿಲ್ಲ. ಇಂಟ್ರೆಸ್ಟಿಂಗ್ ಅಂದ್ರೆ, 'ಬಿಗ್ ಬಾಸ್' ಮೂಲಕ ಖ್ಯಾತಿ ಪಡೆದ ಬಳಿಕ ಅದೇ ಜಯಶ್ರೀ ಬಿ.ಎಂ.ಎಸ್ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಹೋದರಂತೆ.

'ಸಖತ್ ಶುಕ್ರವಾರ' ಕಾರ್ಯಕ್ರಮದ ಮೂರನೇ ಭಾಗ ಇಲ್ಲಿದೆ, ನೋಡಿ...

More from Filmibeat

English summary
Kannada Actress Jayashree Ramaiah reveals about her college life in 'Sakkath Shukravara' talk show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X