'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು
ಅವಕಾಶ ಯಾವಾಗ ಒಲಿದು ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ಅವಕಾಶ ನಮ್ಮ ಬಳಿ ಬರುವ ವೇಳೆಗೆ ನಾನು ಪ್ರತಿಭೆ ಜೊತೆಗೆ ಸಿದ್ಧರಾಗಿ ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ.
ಇದೇ ರೀತಿ ಕನ್ನಡದ ನಟಿ ನಿಖಿಲಾ ಸುಮನ್ ಅವರಿಗೆ ಕೂಡ ಇದ್ದಕ್ಕಿದ್ದ ಹಾಗೆ ಒಂದು ಅವಕಾಶ ಸಿಕ್ಕಿತು. ನಾಟಕಗಳ ಮೂಲಕ ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಇವರು ಮೊದಲ ಪ್ರಯತ್ನದಲ್ಲಿಯೇ ಅವಕಾಶ ಪಡೆದರು.
ಅಂದಹಾಗೆ, 'ಶ್ರೀನಿವಾಸ ಕಲ್ಯಾಣ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ನಿಖಿಲಾ ಸುಮನ್ ಸದ್ಯ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. 'ಶನಿ' ಧಾರಾವಾಹಿ ಮೂಲಕ ನಿಖಿಲಾ ಮನೆ ಮಾತಾಗಿದ್ದಾರೆ.

ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿರುವ ಅವರು ''ಒಮ್ಮೆ ನಾನು ರಂಗಶಂಕರದಲ್ಲಿ ಕಾಫಿ ಕುಡಿಯುತ್ತ ಇದ್ದೆ. ಶಂಕರ್ ಗಣೇಶ್ ಅಂತ ನನ್ನ ಫ್ರೆಂಡ್ ಬಂದು ಇದ್ದಕ್ಕಿದ್ದ ಹಾಗೆ ಒಂದು ಸ್ಟೂಡಿಯೊಗೆ ಕರೆದುಕೊಂಡು ಹೋದರು. ಅಲ್ಲಿಯೇ 'ಶ್ರೀನಿವಾಸ ಕಲ್ಯಾಣ' ಚಿತ್ರದ ಆಡಿಷನ್ ಕೊಟ್ಟೆ. ನನಗೆ ಆಡಿಷನ್ ಗಳನ್ನು ಕೊಡುವುದು ಇಷ್ಟ ಇಲ್ಲ. ಆದರೆ, ಅಂದು ನನ್ನ ಫ್ರೆಂಡ್ ಒತ್ತಾಯ ಮಾಡಿದರು. ಹೀಗೆ ಚಿತ್ರರಂಗಕ್ಕೆ ಬಂದೆ'' ಎಂದು ತಾವು ಆಯ್ಕೆ ಆದ ಕಥೆಯನ್ನು ಹೇಳಿದ್ದಾರೆ.
ಅಂದಹಾಗೆ, ನಟಿ ನಿಖಿಲಾ ಸುಮನ್ ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ ವೀಕ್ಷಿಸಿ.


Click it and Unblock the Notifications











