For Quick Alerts
  ALLOW NOTIFICATIONS  
  For Daily Alerts

  ಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆ

  |

  ಬಾಲಿವುಡ್ ಚಿತ್ರಗಳಲ್ಲಿ ನಾಯಕಿಯಾದ ಪೂಜಾ ಹೆಗ್ಡೆಯ ಬಳಿಕ ಕರಾವಳಿಯಿಂದ ಮತ್ತೋರ್ವ ಹೆಗ್ಡೆಯ ಪ್ರವೇಶವಾಗಿದೆ. ಪ್ರಿಯಾ ಹೆಗ್ಡೆ ಎನ್ನುವ ಈ ಎತ್ತರದ ಹುಡುಗಿ ಕೂಡ, ಮಾಡೆಲಿಂಗ್ ಕ್ಷೇತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿದ್ದಾರೆ. ಮಾತ್ರವಲ್ಲ ನಾಯಕಿಯಾಗಿ ನಟಿಸುತ್ತಿರುವ ಪ್ರಥಮ ಚಿತ್ರದಲ್ಲೇ ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ. ಹೌದು, ಪ್ರಿಯಾ ಜಿಲ್ಕ' ಚಿತ್ರದ ನಾಯಕಿ. ಜಿಲ್ಕ ಎನ್ನುವುದು ಈಗಾಗಲೇ ತ್ರಿಭಾಷೆಗಳಲ್ಲಿ ಬಿಡುಗಡೆಗೆ ತಯಾರಾಗಿರುವ ಕನ್ನಡಿಗರ ಚಿತ್ರ.

  ಕವೀಶ್ ಶೆಟ್ಟಿ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ಜಿಲ್ಕದಲ್ಲಿ ಅವರಿಗೆ ಜೋಡಿಯಾಗಿದ್ದಾರೆ ಪ್ರಿಯಾ ಹೆಗ್ಡೆ. ಮೂಡಬಿದ್ರೆಯ ಊರಿನಿಂದ ಮೂಡಿರುವ ಈ ತಾರೆಗೆ ಚಂದನವನಕ್ಕೆ ಆದರದ ಸ್ವಾಗತ. ಆದರೆ ತುಳು, ಕನ್ನಡ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳ ಬಳಿಕ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿರುವ ಪ್ರಿಯಾ ಹೆಗ್ಡೆ ಮೂರನೇ ಚಿತ್ರದಲ್ಲೇ ಪಂಚಭಾಷಾ ತಾರೆಯಾಗುವ ಅದೃಷ್ಟ ಪಡೆದಿದ್ದಾರೆ. ಅವರೊಂದಿಗೆ ಫಿಲ್ಮೀಬೀಟ್' ನಡೆಸಿರುವ ವಿಶೇಷ ಮಾತುಕತೆ ಇದು.

   ನಿಮ್ಮ ಸಿನಿಮಾ ಪ್ರವೇಶ ಹೇಗಾಯಿತು?

  ನಿಮ್ಮ ಸಿನಿಮಾ ಪ್ರವೇಶ ಹೇಗಾಯಿತು?

  ನಾನು ಮೂಲತಃ ಮೂಡಬಿದ್ರೆಯ ಹುಡುಗಿ. ಸಿನಿಮಾ ಎಂದರೆ ನನಗೆ ಬಾಲ್ಯದಿಂದಲೂ ಇಷ್ಟ. ಮಾಡಲಿಂಗ್ ಕ್ಷೇತ್ರದಲ್ಲಿದ್ದು ಕೊಂಡು ಫ್ಯಾಷನ್ ಶೋ, ಪ್ರಿಂಟ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. ಹಾಗೆ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಾಗಲೇ `ದಗಲ್ ಬಾಜಿ' ಎನ್ನುವ ತುಳು ಚಿತ್ರದಲ್ಲಿ ನಟಿಸುವ ಅವಕಾಶ ಲಭಿಸಿತು.

   ಸಿನಿಮಾ ನಟಿಯಾಗಲು ನಿಮ್ಮ ಮನೆಯಿಂದ ಸಿಕ್ಕ ಪ್ರೋತ್ಸಾಹ ಹೇಗಿತ್ತು?

  ಸಿನಿಮಾ ನಟಿಯಾಗಲು ನಿಮ್ಮ ಮನೆಯಿಂದ ಸಿಕ್ಕ ಪ್ರೋತ್ಸಾಹ ಹೇಗಿತ್ತು?

  ನಿಜ ಹೇಳಬೇಕೆಂದರೆ ಆರಂಭದಲ್ಲಿ ಯಾವುದೇ ಪ್ರೋತ್ಸಾಹ ಇರಲಿಲ್ಲ. ವಿದ್ಯಾಭ್ಯಾಸದ ಕಡೆಗೆ ಗಮನ ಕೊಟ್ಟರೆ ಸಾಕು ಎನ್ನುತ್ತಿದ್ದರು. ಮಾತ್ರವಲ್ಲ, ಎರಡನೇ ಚಿತ್ರ ಜಿಲ್ಕದ ಆಫರ್ ಬಂದಾಗ ನಾನು ಸಾಫ್ಟ್ ವೇರ್ ಇಂಜಿನಿಯರಾಗಿ ವೃತ್ತಿ ಶುರು ಮಾಡಿದ್ದೆ. ಅಂಥದೊಂದು ಕೆಲಸಕ್ಕೆ ಚಕ್ಕರ್ ಹೊಡೆದು ಬಣ್ಣದ ಲೋಕದ ಹಿಂದೆ ಹೋಗುವುದು ಮಧ್ಯಮ ವರ್ಗದವರಾದ ನಮಗೆ ಸರಿಯಲ್ಲ ಎನ್ನುವುದು ನಮ್ಮ ಮನೆ ಮಂದಿಯ ಅನಿಸಿಕೆಯಾಗಿತ್ತು. ಆದರೆ ಈಗ ಬದಲಾಗಿದ್ದಾರೆ.

   ಜಿಲ್ಕ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?

  ಜಿಲ್ಕ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?

  ಜಿಲ್ಕ ಚಿತ್ರ ತ್ರಿಭಾಷೆಗಳಲ್ಲಿ ಬರಲಿದೆ ಎಂದಾಗ ಖುಷಿಯಿತ್ತು. ಆದರೆ ಕನ್ನಡ, ಹಿಂದಿ ಭಾಷೆಯಷ್ಟು ಸುಲಭದಲ್ಲಿ ಮರಾಠಿ ಮಾತನಾಡಲು ನನಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಪೂರ್ತಿ ಚಿತ್ರ ಕಷ್ಟಪಟ್ಟುಮಾಡಕೇನೋ ಎನ್ನುವ ಆತಂಕ ಇತ್ತು. ಆದರೆ ಗ್ರೂಮಿಂಗ್ ಕ್ಲಾಸ್ ನಡೆಸಿ, ಚಿತ್ರದ ಸ್ಕ್ರಿಪ್ಟ್ ಕೈಗೆ ಕೊಟ್ಟಿದ್ದು ನನ್ನನ್ನು ಪೂರ್ತಿಯಾಗಿ ಪಾತ್ರದೊಳಗೆ ಎಂಟ್ರಿಯಾಗಲು ಸಹಾಯ ಮಾಡಿತು. ತರಬೇತಿ, ಶೂಟಿಂಗ್ ಎಲ್ಲ ಮುಂಬೈನಲ್ಲಿತ್ತು. ತಾಯಿಗೆ ನನ್ನನ್ನು ಅಷ್ಟು ದೂರ ಕಳಿಸಿಕೊಡಲು ಆತಂಕ ಇದ್ದರೂ, ನನ್ನ ಸಾಕಷ್ಟು ಸಂಬಂಧಿಕರೆಲ್ಲ ಅಲ್ಲೇ ಇದ್ದ ಕಾರಣ ಅವರಿಗೆಲ್ಲ ಫೋನ್ ಮಾಡಿ ಹೇಳಿದ ಮೇಲೆಯೇ ನನ್ನ ಕಳಿಸಿದ್ದರು! ಜತೆಗೆ ನಿರ್ದೇಶಕರು ಕೂಡ ನಮ್ಮ ಉಡುಪಿಯವರೇ ಎನ್ನುವುದು ಪರಿಚಿತ ವಲಯದಲ್ಲಿದ್ದ ಹಾಗಿತ್ತು. ನನಗಂತೂ ಮುಂಬೈನಲ್ಲಿ ನಾಯಕನಿಗೆ ನೀಡುತ್ತಿದ್ದ ಅದೇ ಡಯಟ್ ಫುಡ್ ಜತೆಗೆ ರಾಯಲ್ ಟ್ರೀಟ್ಮೆಂಟ್ ಸಿಕ್ಕಿತ್ತು. ಹಾಗಾಗಿ ಅಲ್ಲಿ ಹೋದ ಮೇಲೆ ನನ್ನ ಫಿಟ್ನೆಸ್ ಚೆನ್ನಾಗಾಯಿತು.

   ಜಿಲ್ಕ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ

  ಜಿಲ್ಕ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ

  ಜಿಲ್ಕದಲ್ಲಿ ನನ್ನ ಪಾತ್ರ ಮಧ್ಯಂತರದ ಹೊತ್ತಿಗೆ ಎಂಟ್ರಿಯಾಗುತ್ತದೆ. ಪಾತ್ರದ ಹೆಸರು ಸ್ಫೂರ್ತಿ. ಲೇಟ್ ಆಗಿ ಬಂದರೂ ಚಿತ್ರದ ಕೊನೆಯವರೆಗೂ ಇರುವ, ಚಿತ್ರ ನೋಡಿದ ಮೇಲೆಯೂ ನೆನಪಲ್ಲಿರುವ ಪಾತ್ರ ದೊರಕಿರುವುದಕ್ಕೆ ಖುಷಿಯಾಗಿದೆ. ನಾನು ಹೇಗೆ ಇದ್ದೇನೆಯೋ, ಅದೇ ರೀತಿಯಲ್ಲಿ ಚಿತ್ರದಲ್ಲಿಯೂ ವರ್ತಿಸುವ ಸಂಪ್ರದಾಯಸ್ಥ ಯುವತಿಯ ಪಾತ್ರ. ನಿಜ ಹೇಳಬೇಕೆಂದರೆ ರಿಯಲ್ ಲೈಫಲ್ಲಿ ಪಾತ್ರಕ್ಕಿಂತ ನಾನೇ ಸ್ವಲ್ಪ ಮಾಡ್ ಎನ್ನಬಹುದು. ಚಿತ್ರದ ಹಾಡುಗಳು ಕೂಡ ಚೆನ್ನಾಗಿ ಮೂಡಿ ಬಂದಿವೆ. ಚಿತ್ರ ನೋಡಿದವರಿಗೆಲ್ಲ ಇಷ್ಟವಾಗಬಹುದು ಎನ್ನುವ ನಂಬಿಕೆ ಇದೆ.

   ಜಿಲ್ಕ ಸಿನಿಮಾದ ಬಳಿಕ ಹೊಸ ಆಫರ್ ಗಳು ಬಂದಿವೆಯೇ?

  ಜಿಲ್ಕ ಸಿನಿಮಾದ ಬಳಿಕ ಹೊಸ ಆಫರ್ ಗಳು ಬಂದಿವೆಯೇ?

  ನಾನು ಜಿಲ್ಕ ಚಿತ್ರದಲ್ಲಿ ನಟಿಸಿದ ಬಳಿಕ ಮತ್ತೆ ನನ್ನ ಸಾಫ್ಟ್ ವೇರ್ ಕ್ಷೇತ್ರಕ್ಕೆ ಮರಳಬೇಕು ಎಂದುಕೊಂಡಿದ್ದೆ. ಆದರೆ ಕವೀಶ್ ಶೆಟ್ಟಿಯವರು ನಿನಗೆ ಚಿತ್ರೋದ್ಯಮದಲ್ಲೇ ಮುದುವರಿಯುವ ಟ್ಯಾಲೆಂಟ್ ಇದೆ ಎನ್ನುತ್ತಿದ್ದರು. ಅದೇ ರೀತಿ ಜಿಲ್ಕಾದ ಸ್ಟಿಲ್ಸ್ ಎಲ್ಲ ಹೊರಗೆ ಬರುತ್ತಿರುವ ಹಾಗೆ ಅವಕಾಶಗಳು ಕೂಡ ಹೆಚ್ಚಾಗಿ ಬರತೊಡಗಿವೆ. ಅದರಲ್ಲಿ ಪೂರಿ ಜಗನ್ನಾಥ್ ಅವರ ಕೊ ಡೈರೆಕ್ಟರ್ ಒಬ್ಬರಿಂದಲೂ ಆಫರ್ ಬಂತು. ಹಾರರ್ ಸಬ್ಜೆಕ್ಟ್ ನ ಆ ಚಿತ್ರ ಲೇಡಿ ಓರಿಯೆಂಟೆಡ್ ಕೂಡ ಹೌದು. ಚಿತ್ರದ ಹೆಸರು ಮಿತ್ರ. ಟೈಟಲ್ ರೋಲ್ ನಲ್ಲಿ ನಟಿಸುವ ಅವಕಾಶ ಸಿಕ್ಕಿರುವ ಕಾರಣ ಸಂತಸದಿಂದಲೇ ಒಪ್ಪಿಕೊಂಡಿದ್ದೇನೆ.

   ನಿಮ್ಮ ಮುಂದಿನ ಗುರಿ, ಕನಸುಗಳೇನು?

  ನಿಮ್ಮ ಮುಂದಿನ ಗುರಿ, ಕನಸುಗಳೇನು?

  ಶೇಖರ್ ಹೆಗ್ಡೆ ಶಾರದಾ ಹೆಗ್ಡೆ ದಂಪತಿಯ ಮೂವರು ಪುತ್ರಿಯರಲ್ಲಿ ನಾನೇ ಮಧ್ಯದ ಮಗಳು. ಅಕ್ಕ ಪೂರ್ಣಿಮಾ ಹೆಗ್ಡೆ ಊರಲ್ಲಿ ಸರ್ಕಾರಿ ಕೆಲಸದಲ್ಲಿದ್ದಾರೆ. ಅವರ ವಿಶನ್ ಕೂಡ ಬೇರೆ. ತಂಗಿ ಭಾನುಪ್ರಿಯಾ ಕೂಡ ಬುದ್ಧಿವಂತ ವಿದ್ಯಾರ್ಥಿನಿ. ಹೋಲಿಕೆಯಲ್ಲಿ ನಾನು ಅವರಷ್ಟು ಬುದ್ಧಿವಂತೆಯಲ್ಲ. ಬಾಲ್ಯದಿಂದಲೇ ಸಿನಿಮಾ ಹುಚ್ಚು ಬೆಳೆಸಿಕೊಂಡವಳು. ಅವರು ಅವರ ಕ್ಷೇತ್ರದಲ್ಲಿ ಸಾಧಿಸಿರುವಾಗ ನಾನು ನಟಿಯಾಗಿ ಕೂಡ ತಕ್ಕಮಟ್ಟಿಗೆ ಹೆಸರು ಮಾಡಬೇಕು ಎನ್ನುವುದು ನನ್ನ ಗುರಿ. ನನಗೆ ಅನುಷ್ಕಾ ಶೆಟ್ಟಿ ರೋಲ್ ಮಾಡೆಲ್. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನ ಫೇವರೆಟ್ ಹೀರೋ. ಅವರ ಹಾಡುಗಳನ್ನು ನೋಡುತ್ತಿದ್ದರೆ ನಾಯಕಿಯರ ಸ್ಥಾನದಲ್ಲಿ ನಾನು ಯಾವಾಗ ಇರುತ್ತೀನೋ ಎಂದು ಕನಸು ಕಾಣುತ್ತಿದ್ದೆ. ಕಲಾದೇವಿ ಆ ಅವಕಾಶ ನೀಡುವಷ್ಟು ಸಾಧನೆ ನನ್ನಿಂದಾಗಿಸಲಿ ಎನ್ನುವುದೇ ನನ್ನ ಪ್ರಾರ್ಥನೆ.

  English summary
  Priya Hegde Famous Actress in Tulu film Industry. Now She is Entering in to Kannada Film Industry. Jilka is her Debut Movie in Kannada. Here She talks about her Acting carrier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X