'ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು

By ಹರ್ಷಿತಾ ರಾಕೇಶ್

''ಡಾ.ವಿಷ್ಣುವರ್ಧನ್ ರವರನ್ನ ಸ್ಕ್ರೀನ್ ಮೇಲೆ ನೋಡಲು ನೀವೆಲ್ಲರೂ ಬಂದಿದ್ದೀರಾ ಅಂತ ನನಗೆ ಗೊತ್ತು.!'' - ಹೀಗಂತ ಹೇಳಿದ್ದು ಸ್ಯಾಂಡಲ್ ವುಡ್ ಕ್ವೀನ್, ಮಂಡ್ಯದ ಮಾಜಿ ಸಂಸದೆ ನಟಿ ರಮ್ಯಾ (ದಿವ್ಯ ಸ್ಪಂದನ).

ನಿನ್ನೆ (ಮೇ 30) ಸಂಜೆ ಬೆಂಗಳೂರಿನ ಭೂಮಿಕಾ ಥಿಯೇಟರ್ ನಲ್ಲಿ ನಡೆದ 'ನಾಗರಹಾವು' ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಕೋಡಿ ರಾಮಕೃಷ್ಣ, ಸಂಗೀತ ನಿರ್ದೇಶಕ ಗುರುಕಿರಣ್ ಜೊತೆ ನಟಿ ರಮ್ಯಾ ಭಾಗವಹಿಸಿ, ಜನರತ್ತ ಕೈಬೀಸಿ, ಮಾತನಾಡಲು ಆರಂಭಿಸಿದ ಪರಿ ಅದು.

ಚಿತ್ರಮಂದಿರದ ಒಳಗೆ ಬಂದ ಕೂಡಲೆ, ಡಾ.ವಿಷ್ಣುವರ್ಧನ್ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟಿ ರಮ್ಯಾ, ನಂತರ ಸಮಸ್ತ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ವೀಕ್ಷಿಸಿದರು.

-

-

-

-

-

-

-

-

-

-

-

-

-

-

'ನಾಗರಹಾವು' ಚಿತ್ರದ ನಾಯಕಿ ಆಗಿರುವ ರಮ್ಯಾ, ಚಿತ್ರದ ಮೊದಲ ಟೀಸರ್ ಕಂಡು ಹರ್ಷಿತರಾದರು. ಅದೇ ಹರ್ಷದಲ್ಲಿ ನಟಿ ರಮ್ಯಾ ಮಾಧ್ಯಮಗಳ ಜೊತೆ ಮಾತಿಗಿಳಿದರು. ಆ ಚುಟುಕು ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಓದಿ....

* 'ನಾಗರಹಾವು' ಟೀಸರ್ ನೋಡಿ ಹೇಗನ್ನಿಸಿತು.?
ಟೀಸರ್ ನೋಡಿ, ವಿಷ್ಣು ಸರ್ ನ ತೆರೆ ಮೇಲೆ ನೋಡಿ ತುಂಬಾ ಖುಷಿ ಆಯ್ತು. ಗ್ರಾಫಿಕ್ಸ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ ಎಂಬ ನಂಬಿಕೆ ಇದೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

* ಡಾ.ವಿಷ್ಣುವರ್ಧನ್ ಹಾಗೂ ನಿಮ್ಮ ಕಾಂಬಿನೇಷನ್...
ಡಾ.ರಾಜ್ ಕುಮಾರ್ ಅವರು ನನ್ನನ್ನ ಚಿತ್ರರಂಗಕ್ಕೆ ಇಂಟ್ರೊಡ್ಯೂಸ್ ಮಾಡಿದ್ರು. ಅಂಬರೀಶ್ ರವರ ಜೊತೆ ನಾನು ಆಕ್ಟ್ ಮಾಡಿದ್ದೀನಿ. ಈಗ ಡಾ.ವಿಷ್ಣುವರ್ಧನ್ ರವರ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟ ನಮ್ಮ ಡೈರೆಕ್ಟರ್ ಗೆ ಥ್ಯಾಂಕ್ಸ್ ಹೇಳುತ್ತೇನೆ.

'ನಾಗರಹಾವು' ಚಿತ್ರದ ಟೀಸರ್ ಇಲ್ಲಿದೆ ನೋಡಿ......

* 'ನಾಗರಹಾವು' ಚಿತ್ರಕ್ಕೆ ಡಾ.ವಿಷ್ಣುವರ್ಧನ್ ಎಂಟ್ರಿ ಆಗಿದ್ದು ಹೇಗೆ...
ಮುಂಚೆ ಒಂದು ಒಳ್ಳೆ ಕ್ಲೈಮ್ಯಾಕ್ಸ್ ನಮ್ಮ ಮೈಂಡ್ ಗೆ ಬಂದಿರ್ಲಿಲ್ಲ. ಆಮೇಲೆ ನಾವೆಲ್ಲರೂ ಯೋಚನೆ ಮಾಡಿ, ಡಾ.ವಿಷ್ಣುವರ್ಧನ್ ರವರನ್ನ ಗ್ರಾಫಿಕ್ಸ್ ಮೂಲಕ ತೋರಿಸಬಹುದು ಅಂತ ಪ್ಲಾನ್ ಮಾಡಿದ್ವಿ. ಅದು ವರ್ಕ್ ಆಯ್ತು.

* 'ನಾಗರಹಾವು' ಚಿತ್ರದಲ್ಲಿ ನಿಮ್ಮ ಪಾತ್ರ...
'ನಾಗರಹಾವು' ಪಾತ್ರ ಡಾ.ವಿಷ್ಣುವರ್ಧನ್ ರವರದ್ದು. ನನ್ನ ಪಾತ್ರ ಸ್ವಲ್ಪ ಭಿನ್ನವಾಗಿದೆ. [ಅಭಿಮಾನಿಗಳಿಗೆ ಅಚ್ಚರಿ: 'ನಾಗರಹಾವಿನ' ಹೆಡೆ ಮುಂದೆ ನಟಿ ರಮ್ಯಾ.!]

kannada-actress-ramya-s-reaction-over-nagarahavu-teaser

* ತುಂಬಾ ಡಿಲೇ ಆಯ್ತು ಅಂತ ಕಾಣುತ್ತೆ...
ಈ ಸಿನಿಮಾನ ನಾವು 2011 ರಲ್ಲಿ ಶೂಟ್ ಮಾಡೋಕೆ ಶುರು ಮಾಡಿದ್ದು. ಬಹಳ ಕಷ್ಟ ಆಯ್ತು. ನಾವು ಸಿನಿಮಾ ಮುಗಿಸಿದ್ದು 2013 ರಲ್ಲಿ. ಗ್ರಾಫಿಕ್ಸ್ ಹೆಚ್ಚು ಇರುವುದರಿಂದ ತುಂಬಾ ಟೈಮ್ ತೆಗೆದುಕೊಳ್ತು.

'ನಾಗರಹಾವು' ಚಿತ್ರದ ಟೀಸರ್ ಇಲ್ಲಿದೆ ನೋಡಿ......

More from Filmibeat

English summary
Legendary Actor Dr.Vishuvardhan's 201st movie 'Nagarahavu' teaser was released yesterday (May 30th) in Bhoomika Theatre, Bengaluru. 'Nagarahavu' also features Kannada Actress, EX MP, Congress Politician Ramya in the lead role. Here is a small chit-chat with Ramya on her role in 'Nagarahavu'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X