For Quick Alerts
  ALLOW NOTIFICATIONS  
  For Daily Alerts

  ಥರ್ಡ್ ಕ್ಲಾಸ್’ ಚಿತ್ರದಲ್ಲಿ ಫಸ್ಟ್ ಕ್ಲಾಸ್ ಪಾತ್ರ ಮಾಡಿದ್ದಾರಂತೆ ರೂಪಿಕಾ!

  |

  ರೂಪಿಕಾ ಎನ್ನುವ ನಟಿಯನ್ನು ಪರದೆಯ ಮೇಲೆ ನೋಡಿದವರಾಗಲೀ, ಅವರ ಮಾತುಗಳನ್ನು ಕೇಳಿದವರಾಗಲೀ ಥರ್ಡ್ ಕ್ಲಾಸ್' ಎನ್ನುವ ಪದವನ್ನು ಕನಸಲ್ಲಿಯೂ ನೆನಪಿಸಿಕೊಳ್ಳುವ ಸಂದರ್ಭಗಳಿಲ್ಲ. ಆದರೂ ಅವರನ್ನು ಥರ್ಡ್ ಕ್ಲಾಸ್ ಹೀರೋಯಿನ್ ಎನ್ನುವ ಸಂದರ್ಭ ಸೃಷ್ಟಿಯಾಗಿದೆ!

  Exclusive Interview : 'ಕ್ಲೋಸ್ ಟು ದಿ ಬೋನ್' ಪುಸ್ತಕ ಬರೆದ 'ಯುವರಾಜ' ನಟಿExclusive Interview : 'ಕ್ಲೋಸ್ ಟು ದಿ ಬೋನ್' ಪುಸ್ತಕ ಬರೆದ 'ಯುವರಾಜ' ನಟಿ

  ಯಾಕೆಂದರೆ, ಅವರು ನಾಯಕಿಯಾಗಿ ನಟಿಸಿ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಚಿತ್ರದ ಹೆಸರೇ ಥರ್ಡ್ ಕ್ಲಾಸ್! ಮುದ್ದಾದ ಕಾಲೇಜ್ ಹುಡುಗಿಯಾಗಿ ಜನಪ್ರಿಯತೆ ಪಡೆದಿದ್ದ ರೂಪಿಕಾ, ಮಿಂಚಿನ ಬಳ್ಳಿಯಂತೆ ಬದಲಾದ ಮೇಲೆ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಗಳಿಂದಲೂ ಸಿನಿಮಾ ಆಫರ್ ಪಡೆದುಕೊಂಡಿದ್ದಾರೆ. ಇಂಥ ತ್ರಿಭಾಷಾ ತಾರೆ ಥರ್ಡ್ ಕ್ಲಾಸ್ ಹೀರೋಯಿನ್ ಆಗಿದ್ದು ಹೇಗೆ ಎನ್ನುವುದರ ಬಗ್ಗೆ ಅವರು ಸ್ವತಃ ಫಿಲ್ಮೀ ಬೀಟ್ ಜತೆಗೆ ನೀಡಿರುವ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

   `ಥರ್ಡ್ ಕ್ಲಾಸ್’ ಎನ್ನುವ ಚಿತ್ರವನ್ನು ಒಪ್ಪಿಕೊಳ್ಳಲು ಹಿಂಜರಿಕೆಯಾಗಲಿಲ್ಲವೇ?

  `ಥರ್ಡ್ ಕ್ಲಾಸ್’ ಎನ್ನುವ ಚಿತ್ರವನ್ನು ಒಪ್ಪಿಕೊಳ್ಳಲು ಹಿಂಜರಿಕೆಯಾಗಲಿಲ್ಲವೇ?

  ಬಹುಶಃ ಮೊದಲೇ ಟೈಟಲ್ ಇದು ಎಂದು ಹೇಳಿದ್ದರೆ ಅಂಜಿಕೆಯಾಗುತ್ತಿತ್ತೇನೋ! ಆದರೆ ನಾನು ಪೂರ್ತಿಯಾಗಿ ಕತೆ ಕೇಳಿ, ಪಾತ್ರ ಮಾಡಲು ಒಪ್ಪಿಕೊಂಡ ಬಳಿಕ ಶೀರ್ಷಿಕೆ ಇದು ಎನ್ನುವುದು ಅನಾವರಣವಾಯಿತು. ಪ್ರೊಡಕ್ಷನ್ ನಂಬರ್ ಒನ್ ಎನ್ನುವ ಹೆಸರಲ್ಲಿ ಕೇಳಿದ್ದ ಕತೆ ಫಸ್ಟ್ ಕ್ಲಾಸ್ ಆಗಿತ್ತು. ಆ ಕತೆಯನ್ನು ಬದಲಾಯಿಸದೇ ಶೀರ್ಷಿಕೆ ಮಾತ್ರ ಹೀಗೆ ಇರಿಸಿರುವ ಕಾರಣ ನನಗೆ ವಿರೋಧವೇನೂ ಇಲ್ಲ. ಹಾಗೆ ನೋಡಿದರೆ ನೆಗೆಟಿವ್ ಟೈಟಲ್ ನಲ್ಲಿ ಒಳ್ಳೆಯ ಚಿತ್ರ ಮಾಡಿದಾಗ ಅದು ಎಲ್ಲರ ಮನಸನ್ನು ಗೆದ್ದ ಸಂದರ್ಭವೂ ಇದೆ. ಉದಾಹರಣೆಗೆ ಇತ್ತೀಚೆಗೆ ತಾನೇ ಯಶಸ್ವಿಯಾದ `ಅಯೋಗ್ಯ' ಚಿತ್ರದ ಉದಾಹರಣೆಯನ್ನೇ ಹೇಳಬಹುದು.

  'ಚರ್ಚ್‌ನಲ್ಲಿದ್ದೀನಿ, ನಾನೇನು ಸನ್ಯಾಸಿ ಅಲ್ಲ': ಬೆಳ್ಳಿತೆರೆಗೆ ಮರಳಲಿರುವ ಮಹಾಲಕ್ಷ್ಮಿ'ಚರ್ಚ್‌ನಲ್ಲಿದ್ದೀನಿ, ನಾನೇನು ಸನ್ಯಾಸಿ ಅಲ್ಲ': ಬೆಳ್ಳಿತೆರೆಗೆ ಮರಳಲಿರುವ ಮಹಾಲಕ್ಷ್ಮಿ

   ಪಾತ್ರದ ವಿಚಾರಕ್ಕೆ ಬಂದರೆ ನಿಮ್ಮ ಇತರ ಚಿತ್ರಗಳಿಗಿಂತ ಎಷ್ಟು ವಿಭಿನ್ನವಾಗಿದೆ?

  ಪಾತ್ರದ ವಿಚಾರಕ್ಕೆ ಬಂದರೆ ನಿಮ್ಮ ಇತರ ಚಿತ್ರಗಳಿಗಿಂತ ಎಷ್ಟು ವಿಭಿನ್ನವಾಗಿದೆ?

  ನಾನು ಪಾತ್ರಗಳ ವಿಚಾರಕ್ಕೆ ಬಂದರೆ ವಿಭಿನ್ನವಾದ ಆಯ್ಕೆಗಳನ್ನೇ ಮಾಡುತ್ತಾ ಬಂದಿದ್ದೇನೆ. ಹಾದಿ ಬೀದಿ ಲವ್ ಸ್ಟೋರಿಯಲ್ಲಿ ಬಜಾರಿ, ರುದ್ರಾಕ್ಷಿಪುರದಲ್ಲಿ ಜಿಮಾಲಜಿಸ್ಟ್ ಆಗಿ, ಮಂಜರಿಯಲ್ಲಿ ಹಾರರ್ ಪಾತ್ರಗಳನ್ನು ನಿಭಾಯಿಸಿದ್ದರೆ, ಮುಂದಿನ ಚಿತ್ರಗಳಲ್ಲಿ ಡಾಕ್ಟರ್, ಪೊಲೀಸ್ ಹೀಗೆ ವಿಭಿನ್ನ ಕ್ಯಾರೆಕ್ಟರ್ ಗಳು ಲಭಿಸಿವೆ. ಮುಖ್ಯವಾಗಿ ಪಾತ್ರಗಳು ಎಷ್ಟೇ ವಿಭಿನ್ನವಾಗಿದ್ದರೂ, ಆ ಚಿತ್ರಗಳು ಗೆದ್ದಾಗ ಮಾತ್ರ ಜನರು ಅವುಗಳನ್ನು ನೆನಪಿಸುತ್ತಾರೆ. ಈ ಚಿತ್ರದಲ್ಲಿ ನಾನು ಹೋಮ್ ಮಿನಿಸ್ಟರ್ ಮಗಳ ಪಾತ್ರ ಮಾಡಿದ್ದೇನೆ. ಹಾಗಾಗಿ ಒಂದು ಮಹಾರಾಣಿಯ ಸೌಲಭ್ಯ ಪಡೆದದಂಥ ಯುವತಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಗೆಲ್ಲುವುದರ ಜತೆಗೆ ನನ್ನ ಪಾತ್ರ ಕೂಡ ಜನಮಾನಸದಲ್ಲಿ ನೆಲೆಸುತ್ತದೆ ಎನ್ನುವ ಭರವಸೆ ಹೊಂದಿದ್ದೇನೆ.

   ಹೊಸಬರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

  ಹೊಸಬರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

  ಇದು ಮೇಲ್ನೋಟಕ್ಕೆ ಮಾತ್ರ ಹೊಸಬರ ತಂಡ. ಯಾಕೆಂದರೆ ಚಿತ್ರತಂಡದವರು ಪಕ್ಕಾ ಚಿತ್ರಕತೆ ಮಾಡಿ ಅಪ್ರೋಚ್ ಮಾಡಿದ ರೀತಿಯಲ್ಲಿಯೇ ವೃತ್ತಿಪರತೆ ಎದ್ದು ಕಾಣುತ್ತಿತ್ತು. ಚಿತ್ರದಲ್ಲಿ ಸಂಗೀತ ನಿರ್ದೇಶಕ ಜಸ್ಸಿ ಗಿಫ್ಟ್ , ಸಂಕಲನಕಾರ ಶ್ರೀಕಾಂತ್, ಛಾಯಾಗ್ರಾಹಕ ಶ್ಯಾಮ್ ಸೇರಿದಂತೆ ಈಗಾಗಲೇ ಚಿತ್ರೋದ್ಯಮದಲ್ಲಿ ಹೆಸರು ಮಾಡಿದವರೇ ಇದ್ದಾರೆ. ನಿರ್ದೇಶಕರು ಕೂಡ ಈ ಹಿಂದೆ ಡ್ಯಾನ್ಸರ್ ಆಗಿ ನೃತ್ಯ ನಿರ್ದೇಶಕರಾಗಿ ಅನುಭವ ಹೊಂದಿದವರು. ಕಲಾವಿದರಾಗಿ ಅವಿನಾಶ್, ರಮೇಶ್ ಭಟ್, ಸಂಗೀತಾ, ಮಜಾ ಟಾಕೀಸ್ ಪವನ್ ಮೊದಲಾದ ಜನಪ್ರಿಯರೇ ಇದ್ದಾರೆ. ನಾಯಕ- ನಿರ್ಮಾಪಕರಾಗಿ ಜಗದೀಶ್ ಅವರಿಗೆ ಇದು ಪ್ರಥಮ ಚಿತ್ರವಾದರೂ ಸಿನಿಮಾ ಬಗ್ಗೆ ಸಾಕಷ್ಟು ಪ್ಯಾಶನ್ ಹೊಂದಿದವರಾಗಿದ್ದಾರೆ.

   ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಳ್ಳುತ್ತಿರುವ ಬಗ್ಗೆ ಏನಂತೀರಿ?

  ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಳ್ಳುತ್ತಿರುವ ಬಗ್ಗೆ ಏನಂತೀರಿ?

  ಹೌದು. ತೆಲುಗು ಭಾಷೆಯಲ್ಲಿ ಒಂದರ ಹಿಂದೊಂದಾಗಿ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿದೆ. ಅಲ್ಲಿ ಯಶಸ್ವಿಯಾಗಿದ್ದ `ಜಬರ್ ದಸ್ತ್' ಚಿತ್ರತಂಡದೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದೇನೆ. ಶಕಲಕ ಶಂಕರ್ ಅದರ ನಾಯಕ. ಸದ್ಯದಲ್ಲೇ ತೆಲುಗಿನ `ದಾಡಿ` ಚಿತ್ರದಲ್ಲಿ ನಟಿಸಲು ಆಂಧ್ರಕ್ಕೆ ತೆರಳುತ್ತಿದ್ದೇನೆ. ಅದರ ತಾರಾಗಣದಲ್ಲಿ ನಮ್ಮ ಚರಣ್ ರಾಜ್ ಮೊದಲಾದವರು ಇದ್ದಾರೆ. ನನ್ನನ್ನು ಅಲ್ಲಿನ ಮಂದಿ ಸೌಂದರ್ಯ, ಜ್ಯೂನಿಯರ್ ಮಹಾನಟಿ ಎನ್ನುವ ವಿಶೇಷ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದಾರೆ. ನನ್ನದೇ ಐಡೆಂಟಿಟಿಗಾಗಿ ಈ ಚಿತ್ರಗಳು ಬಿಡುಗಡೆಯಾಗಬೇಕಿದೆ ಎನ್ನಬಹುದು.

  'ಕುಂಗ್ ಫು' ಕಲಿತು ಆಕ್ಷನ್ ಸಿನಿಮಾ ಮಾಡುವಾಸೆ ಎಂದ 'ದಮಯಂತಿ' ರಾಧಿಕಾ!'ಕುಂಗ್ ಫು' ಕಲಿತು ಆಕ್ಷನ್ ಸಿನಿಮಾ ಮಾಡುವಾಸೆ ಎಂದ 'ದಮಯಂತಿ' ರಾಧಿಕಾ!

   ನಿಮ್ಮ ಡ್ಯಾನ್ಸ್ ಸ್ಟುಡಿಯೋ ಕಾರ್ಯವೈಖರಿ ಹೇಗಿದೆ?

  ನಿಮ್ಮ ಡ್ಯಾನ್ಸ್ ಸ್ಟುಡಿಯೋ ಕಾರ್ಯವೈಖರಿ ಹೇಗಿದೆ?

  ಚೆನ್ನಾಗಿದೆ. `ಗೆಜ್ಜೆ' ಎನ್ನುವುದು ಅದರ ಹೆಸರು. ಸ್ಟುಡಿಯೋ ಇರುವುದು ಚಾಮರಾಜಪೇಟೆಯ ಶಂಕರಪುರದಲ್ಲಿನ ನಮ್ಮ ಮನೆಯ ಮೇಲ್ಭಾಗದಲ್ಲೇ. ಅಲ್ಲಿ ಮಕ್ಕಳಿಗೆ ವಿವಿಧ ರೀತಿಯ ಡ್ಯಾನ್ಸ್ ಕ್ಲಾಸ್ ತರಬೇತಿ ನೀಡಲಾಗುತ್ತದೆ. ನಾನು ಚಿತ್ರೀಕರಣದಲ್ಲಿರುವಾಗಲೆಲ್ಲ ನೃತ್ಯಾಭ್ಯಾಸಕ್ಕೆ ಬೇರೆ ಗುರುಗಳಿಂದಲೂ ತರಬೇತಿ ನೀಡಲಾಗುತ್ತದೆ. ಸದ್ಯಕ್ಕೆ 20 ಮಂದಿಯ ತಂಡ ಇದ್ದು ಮುಂದಿನ ತಿಂಗಳಿನಿಂದ ಹೊಸ ತರಗತಿ ಆರಂಭಗೊಳ್ಳಲಿದೆ. ಈಗಾಗಲೇ ಸಾಕಷ್ಟು ಮಕ್ಕಳು ನೋಂದಾಯಿಸಿಕೊಳ್ಳುತ್ತಿದ್ದಾರೆ.

  English summary
  Roopika is Famous Kannad Actress. Now Her New Film Third Class is ready to release. Here She talks about her variety film character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X