ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್

By Bharath Kumar

Recommended Video

ಹೀಗೊಂದು ದಿನ' ಏನಗುತ್ತೆ?, ಸಿಂಧು ಲೋಕನಾಥ್ ಹೇಳ್ತಾರೆ ಕೇಳಿ | Filmibeat Kannada

ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಗಮನ ಸೆಳೆದಿರುವ ಈ ಸಿನಿಮಾ ಮಾರ್ಚ್ 30 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಸಿಂಧು ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಮೂರು ವರ್ಷದ ನಂತರ ಸಿಂಧು ಸಿನಿಮಾ ರಿಲೀಸ್ ಆಗುತ್ತಿದ್ದು, ಮದುವೆ ಆದ್ಮೇಲೆ ಬರ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಹೀಗಾಗಿ, ಸಹಜವಾಗಿ 'ಹೀಗೊಂದು ದಿನ' ಚಿತ್ರದ ಮೇಲೆ ಭರವಸೆ ಹೆಚ್ಚಿದೆ.

ಇನ್ನು ಈ ಚಿತ್ರದ ಬಗ್ಗೆ ನಟಿ ಸಿಂಧು ಲೋಕನಾಥ್ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಮಾತನಾಡಿದ್ದು, ನಮ್ಮ ಕಚೇರಿಗೂ ಭೇಟಿ ನೀಡಿದ್ದರು. ಈ ಸಿನಿಮಾದ ವಿಶೇಷತೆಗಳೇನು.? ಚಿತ್ರೀಕರಣ ಮಾಡಿದ ಅನುಭವ ಹೇಗಿತ್ತು.? ಎಂಬ ಕುತೂಹಲಕಾರಿ ಸಂಗತಿಗಳನ್ನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಪೂರ್ತಿ ಸಂದರ್ಶನ ಮುಂದೆ ಓದಿ....

(ಸಂದರ್ಶನ: ಭರತ್ ಕುಮಾರ್)

'ಹೀಗೊಂದು ದಿನ' ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತೆ.?

'ಹೀಗೊಂದು ದಿನ' ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತೆ.?

'ಹೀಗೊಂದು ದಿನ'ದಲ್ಲಿ ಜಾನವಿ ಎಂಬ ಬೋಲ್ಡ್ ಹುಡುಗಿ ಪಾತ್ರ ನನ್ನದು. ತನ್ನ ಗುರಿಯನ್ನ ಮುಟ್ಟುವುದಕ್ಕೆ ಕೊನೆಯ ದಿನ ಅದು. ಅವಳಿಗೆ ಕೊನೆಯ ಅವಕಾಶ. ಹೀಗಾಗಿ, ಏನಾದರು ಮಾಡಿ ಈ ಕೆಲಸ ಮಾಡಲೇಬೇಕು ಅಂತ ಮನೆಯಿಂದ ಹೊರಗೆ ಬರ್ತಾಳೆ. ಮನೆಯಿಂದ ಬಂದ ನಂತರ ಅವಳಿಗೆ ಏನೆಲ್ಲ ಕಷ್ಟ ಎದುರಾಗುತ್ತೆ. ಅದನ್ನ ಹೇಗೆ ಅವಳು ಎದುರಿಸುತ್ತಾಳೆ ಎಂಬುದು ನನ್ನ ಪಾತ್ರ.

ಇದು 'ಅನ್ ಕಟ್' ಸಿನಿಮಾ. ಹೇಗಿತ್ತು ಶೂಟಿಂಗ್ ಅನುಭವ.?

ಇದು 'ಅನ್ ಕಟ್' ಸಿನಿಮಾ. ಹೇಗಿತ್ತು ಶೂಟಿಂಗ್ ಅನುಭವ.?

ರೆಗ್ಯೂಲರ್ ಸಿನಿಮಾ ಮಾಡುವಾಗ ನಮಗೆ ಸಮಯ ಹೆಚ್ಚಿರುತ್ತೆ. ಡೈಲಾಗ್, ಅಭಿನಯ ಎಲ್ಲಾದರೂ ಬದಲಾವಣೆ ಬೇಕು ಅಂದ್ರೆ ಕಟ್ ಅಂತ ಹೇಳಿ ತಯಾರಿ ಮಾಡ್ಕೋಬಹುದು. ಆದ್ರೆ, ಇಲ್ಲಿ ಆ ತರ ಆಗಲ್ಲ. ಇದೊಂದು ರೀತಿ ನಾಟಕ ಇದ್ದಂತೆ. ಪೂರ್ವ ತಯಾರಿ ಇಲ್ಲದೇ ಆಗಲ್ಲ. ಇದೊಂದು ಪ್ರಯೋಗಾತ್ಮಕ ಸಿನಿಮಾ. ನನ್ನಲ್ಲಿದ್ದ ಅಭಿನಯವನ್ನ ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಲು ಸಹಾಯವಾಯಿತು.

ಚಿತ್ರದಲ್ಲಿ ಏನೆಲ್ಲ ವಿಶೇಷತೆಗಳಿವೆ.?

ಚಿತ್ರದಲ್ಲಿ ಏನೆಲ್ಲ ವಿಶೇಷತೆಗಳಿವೆ.?

ಇದು ಮಹಿಳಾ ಪ್ರಧಾನ ಅಥವಾ ಪುರುಷ ಪ್ರಧಾನ ಎಂಬ ಕಾರಣಕ್ಕೆ ಸಿನಿಮಾ ನೋಡಬೇಕು ಅಂತಲ್ಲ. ಇದೊಂದು ಸಿನಿಮಾ ಎಂದೇ ಪ್ರೇಕ್ಷಕ ಬಂದು ನೋಡಲಿ. ಕಮರ್ಷಿಯಲ್ ಚಿತ್ರಗಳಲ್ಲಿರುವ ಎಲ್ಲ ಅಂಶಗಳು ಈ ಚಿತ್ರದಲ್ಲೂ ಇದೆ. ಆದ್ರೆ, ಅನ್ ಕಟ್ ಮಾದರಿಯಲ್ಲಿದೆ. ಸಾಂಗ್ಸ್, ಕಾಮಿಡಿ, ಡ್ರಾಮಾ, ದೊಡ್ಡ ಕಲಾವಿದರ ಬಳಗ ಇದೆ. ಹೀಗಾಗಿ, ಒಂದೊಳ್ಳೆ ಮನರಂಜನೆ ಸಿಗುತ್ತೆ.

ಹೊಸ ತಂತ್ರಜ್ಞರು ಮತ್ತು ಅನುಭವಿ ಕಲಾವಿದರ ಜೊತೆ ಕೆಲಸ ಹೇಗಿತ್ತು.?

ಹೊಸ ತಂತ್ರಜ್ಞರು ಮತ್ತು ಅನುಭವಿ ಕಲಾವಿದರ ಜೊತೆ ಕೆಲಸ ಹೇಗಿತ್ತು.?

'ಹೀಗೊಂದು ದಿನ'ದ ಟೆಕ್ನಿಕಲ್ ತಂಡ ಪೂರ್ತಿ ಹೊಸಬರು. ನಿರ್ದೇಶಕ ವಿಕ್ರಮ್ ಯೋಗಾನಂದ್, ಕಥೆ-ವಿಕಾಸ್, ರಾಮಕೃಷ್ಣ-ಸಾಹಿತ್ಯ, ಅಭಿಲಾಷ್ ಗುಪ್ತಾ-ಸಂಗೀತ ನಿರ್ದೇಶಕ, ನಿರ್ಮಾಪಕರು ಚಂದ್ರಶೇಖರ್ ಎಲ್ಲರಿಗೂ ಮೊದಲ ಸಿನಿಮಾ. ಆದ್ರೆ, ಪ್ರವೀಣ್ ತೇಜ್, ಶೋಭರಾಜ್, ಗಿರೀಜಾ ಲೋಕೇಶ್, ಮಿತ್ರಾ, ಗುರುಪ್ರಸಾದ್, ಪದ್ಮಜಾ ರಾವ್ ಎಲ್ಲರೂ ಅನುಭವಿ ಕಲಾವಿದರೇ. ಹೊಸ ತಾಂತ್ರಿಕ ತಂಡ ಮತ್ತು ಅನುಭವಿ ಕಲಾವಿದರ ತಂಡ ಸೇರಿ ಮಾಡಿರುವ ಹೊಸತನದ ಸಿನಿಮಾ.

ಮದುವೆ ಆದ್ಮೇಲೆ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ. ಹೇಗೆ ಅನಿಸುತ್ತಿದೆ?

ಮದುವೆ ಆದ್ಮೇಲೆ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ. ಹೇಗೆ ಅನಿಸುತ್ತಿದೆ?

ಸಂದರ್ಶನಗಳಲ್ಲಿ ಈ ಪ್ರಶ್ನೆ ಕೇಳಿ ಕೇಳಿ ಬಹುಶಃ ಇದಕ್ಕೆ ನಾನು ಪ್ರಾಮುಖ್ಯತೆ ಕೊಡಬೇಕು ಅನ್ನೋತರ ಆಗಿದೆ. ನನಗೆ ಪರ್ಸನಲಿ ಏನೂ ವಿಶೇಷ ಕಾಣ್ತಿಲ್ಲ. ಮೊದಲು ಯಾವ ರೀತಿ ಸಿನಿಮಾ ಮಾಡ್ತಿದ್ನೋ ಈಗಲೂ ಅದೇ ರೀತಿ ಸಿನಿಮಾ ಮಾಡ್ತೀನಿ. ಆದ್ರೀಗ ಪ್ಲಸ್ ಒನ್ ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂಬುದು ಖುಷಿ ಅಷ್ಟೇ.

'ಹೀಗೊಂದು ದಿನ' ಚಿತ್ರದ ನಂತರ ಮುಂದಿನ ಸಿನಿಮಾಗಳು ಯಾವುದು.?

'ಹೀಗೊಂದು ದಿನ' ಚಿತ್ರದ ನಂತರ ಮುಂದಿನ ಸಿನಿಮಾಗಳು ಯಾವುದು.?

'ಹೀಗೊಂದು ದಿನ' ಚಿತ್ರದ ನಂತರ 'ಕಾಣದಂತೆ ಮಾಯವಾದನೂ' ಸಿನಿಮಾ ರಿಲೀಸ್ ಆಗುತ್ತೆ. ಯೋಗರಾಜ್ ಭಟ್ ಬ್ಯಾನರ್ ನಲ್ಲಿ ಅವರ ಸಹಾಯಕರು ನಿರ್ದೇಶನ ಮಾಡಿರುವ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿದಿದೆ. ಕ್ಲೈಮ್ಯಾಕ್ಸ್ ಮಾತ್ರ ಬಾಕಿಯಿದೆ. ಬಹುಶಃ ಈ ವರ್ಷದ ಅಂತ್ಯದಲ್ಲಿ ತೆರೆಕಾಣಬಹುದು.

More from Filmibeat

English summary
Kannada actress sindhu lokanath interview. sindhu lokanath starrer heegondu dina movie will releasing on march 30th. the movie directed by vikram yoganand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X