ಸಂದರ್ಶನ: ಪ್ರಶಸ್ತಿಗಳು ಕಲಾವಿದರ ಬಲ ಹೆಚ್ಚಿಸುತ್ತೆ-ತಾರಾ

2017ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ನಟಿ ತಾರಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ತಾರಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ 'ಹೆಬ್ಬೆಟ್ ರಾಮಕ್ಕ' ಚಿತ್ರದ ಅದ್ಭುತ ನಟನೆಗಾಗಿ ಈ ಪ್ರಶಸ್ತಿ ಸಿಕ್ಕಿದೆ.

ವಿಶೇಷ ಅಂದ್ರೆ, ಇದೇ ಚಿತ್ರಕ್ಕೆ 2017ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಈಗ ಈ ಚಿತ್ರದ ನಟಿಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಈ ಮೂಲಕ ಚಿತ್ರಕ್ಕೆ ಡಬಲ್ ಧಮಾಕ. ಅನಕ್ಷರಸ್ಥ ಮಹಿಳೆ ರಾಜಕೀಯ ರಂಗಕ್ಕೆ ಬಂದಾಗ ಯಾವ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನ 'ಹೆಬ್ಬೆಟ್ ರಾಮಕ್ಕ' ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ, ಪ್ರೇಕ್ಷಕರ ಮನಮುಟ್ಟುವಂತೆ ತೋರಿಸಲಾಗಿದೆ.

ಅಂದ್ಹಾಗೆ, ತಾರಾ ಅವರಿಗೆ ಇದು ಐದನೇ ರಾಜ್ಯ ಪ್ರಶಸ್ತಿ. ಈ ಹಿಂದೆ ಅತ್ಯುತ್ತಮ ನಟಿ ವಿಭಾಗದಲ್ಲಿ ಮೂರು ಹಾಗೂ ಅತ್ಯುತ್ತಮ ಪೋಷಕ ನಟಿ ವಿಭಾದಲ್ಲಿ ಒಂದು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಈಗ ಇದು ಐದನೇ ಪ್ರಶಸ್ತಿ. ಜೊತೆಗೆ ಒಂದು ರಾಷ್ಟ್ರ ಪ್ರಶಸ್ತಿಯೂ ತಾರಾ ಅವರ ಖಾತೆಯಲ್ಲಿದೆ. ಹೀಗೆ, ಪ್ರಶಸ್ತಿಗಳ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದ ತಾರಾ, ನಮ್ಮ ಶ್ರಮಕ್ಕೆ ಮತ್ತು ಅದ್ಭುತ ಚಿತ್ರಗಳನ್ನ ಗುರುತಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಮುಂದೆ ಓದಿ.....

ಸಂದರ್ಶನ - ಭರತ್ ಕುಮಾರ್

ರಾಜ್ಯ ಪ್ರಶಸ್ತಿ ಸಿಕ್ಕಿರುವ ಬಗ್ಗೆ ನಿಮ್ಮ ಅಭಿಪ್ರಾಯ.?

ರಾಜ್ಯ ಪ್ರಶಸ್ತಿ ಸಿಕ್ಕಿರುವ ಬಗ್ಗೆ ನಿಮ್ಮ ಅಭಿಪ್ರಾಯ.?

'ಸಾಮಾನ್ಯವಾಗಿ ಪ್ರಶಸ್ತಿ ಬಂದಾಗ ಸಂತೋಷ ಆಗುತ್ತೆ. ಸಿನಿಮಾಗಾಗಿ ನಾವು ಪಟ್ಟ ಶ್ರಮವನ್ನ ಈ ರೀತಿ ಗುರುತಿಸಿದಾಗ ಖುಷಿಯಾಗುತ್ತೆ. ಸಿನಿಮಾ ಆಗುವುದಕ್ಕೂ ಮುಂಚೆ ಒಂದು ವರ್ಷದ ಹಿಂದೆ ನಿರ್ದೇಶಕರು ನನಗೆ ಕಥೆ ಹೇಳಿದ್ದರು. ಆದ್ರೆ, ಕಾರಣಾಂತರಗಳಿಂದ ಮಾಡುವುದಕ್ಕೆ ಆಗಿರಲಿಲ್ಲ. ಮತ್ತೆ ಬಂದ್ರು. ಆಗ ಬೇರೆ ಯಾವುದೋ ಕಥೆ ತಗೊಂಡು ಬಂದಿದ್ದಾರೆ ಅಂದುಕೊಂಡೆ. ಇಲ್ಲ ಅದೇ ಕಥೆನಾ ಸಿನಿಮಾ ಮಾಡ್ಬೇಕು ಅಂತ ಹೇಳಿದ್ರು. ಆಗ ತುಂಬಾ ಸಂತೋಷ ಆಯ್ತು. ಈಗ ಆ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ಸಹಜವಾಗಿ ಸಂತಸ ತಂದಿದೆ' - ತಾರಾ

ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ

ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ

'ನನಗೆ ಇದು ಹನ್ನೆರಡು ವರ್ಷದ ನಂತರ ರಾಜ್ಯ ಪ್ರಶಸ್ತಿ ಬಂದಿರುವುದು. ರಾಷ್ಟ್ರ ಪ್ರಶಸ್ತಿ ಬಂದಾಗಲೂ ನಿರೀಕ್ಷೆ ಮಾಡಿರಲಿಲ್ಲ. ಈಗಲೂ ನಿರೀಕ್ಷೆ ಮಾಡಿಲ್ಲ. ಯಾವುದೇ ಸಿನಿಮಾ ಮಾಡಿದಾಗಲು ಪ್ರಶಸ್ತಿ ಬರುತ್ತೆ ಅಂತ ಆಕ್ಟ್ ಮಾಡಲ್ಲ. ಎಲ್ಲ ಸಿನಿಮಾಗಳನ್ನ ನಾನು ಒಂದು ಸವಾಲಾಗಿ ಸ್ವೀಕರಿಸಿ ಮಾಡ್ತೀನಿ. ಬಂದ್ರೆ ಖುಷಿ, ಇಲ್ಲ ಅಂದ್ರೂ ಬೇಜಾರಿಲ್ಲ ಅದು ನಮ್ಮ ಕೆಲಸ'

ಪ್ರಶಸ್ತಿಗಳು ನಮಗೆ ಬಲ

ಪ್ರಶಸ್ತಿಗಳು ನಮಗೆ ಬಲ

'ಪ್ರಶಸ್ತಿಗಳು ನನಗೆ ತಲೆಗೆ ಹೋಗಲ್ಲ. ನಮ್ಮ ವೃತ್ತಿಜೀವನದಲ್ಲಿ ಇದು ಒಂಥರಾ ಟಾನಿಕ್. ಯಾರಾದರೂ ಪ್ರಶಂಸೆ ಮಾಡಿದಾಗ, ಅಥವಾ ಈ ರೀತಿ ಪ್ರಶಸ್ತಿ ಸಿಕ್ಕಾಗ, ಯಾರಾದರೂ ಚೆನ್ನಾಗಿ ಬೆನ್ನು ತಟ್ಟಿದಾಗ ಆಗೋ ಸಂತೋಷವನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಿಜ ಪ್ರಶಸ್ತಿಗಳು ನಮಗೆ ಬಲ ಕೊಡುತ್ತೆ. ಆದ್ರೆ, ನಮ್ಮ ನಟನೆಯಲ್ಲಿ, ಕೆಲಸದಲ್ಲಿ ನಾವು ಬದಲಾಗಲ್ಲ''

ಈಗಿನ ನಟಿಯರು ವೆರಿಗುಡ್

ಈಗಿನ ನಟಿಯರು ವೆರಿಗುಡ್

'ಈಗಿನ ನಟಿಯರು ತುಂಬಾ ಪ್ರತಿಭಾನ್ವಿತರು. ನಾವು ಇಂಡಸ್ಟ್ರಿಗೆ ಬಂದಮೇಲೆ ಡ್ರೈವಿಂಗ್, ಹಾರ್ಸ್ ರೈಡಿಂಗ್ ಹೀಗೆ ಕಲಿತಿದ್ದು. ಬಟ್, ಈಗ ಮೊದಲೇ ಇದೆಲ್ಲವನ್ನ ಕಲಿತು ಬರ್ತಾರೆ. ಇದನ್ನ ನೋಡಿದ್ರೆ ತುಂಬಾ ಖುಷಿ ಆಗುತ್ತೆ. ಈಗಿನ ನಟಿಯರು, ನೃತ್ಯ, ಸ್ವಿಮ್ಮಿಂಗ್, ರೈಡಿಂಗ್ ಎಲ್ಲವೂ ತಯಾರಿ ಮಾಡಿಕೊಂಡು ಬಂದಿರ್ತಾರೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ. ಸಿನಿಮಾಗಳಿಗೆ ಅವರು ತೊಡಗಿಸಿಕೊಳ್ಳುವ ರೀತಿ ತುಂಬಾ ಚೆನ್ನಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

More from Filmibeat

English summary
2017 Karnataka film state Awards announced: Kannada Actress Tara wins Best Actress award for 'Hebbet Ramakka'. here is an Interview with Kannada actress Tara Anuradha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X