For Quick Alerts
  ALLOW NOTIFICATIONS  
  For Daily Alerts

  'ರೇಮೊ'ನಲ್ಲಿ ಶರತ್ ಕುಮಾರ್ ಅವರದು ಪ್ರಧಾನ ಪಾತ್ರ: ಪವನ್ ಒಡೆಯರ್

  |

  'ನಟಸಾರ್ವಭೌಮ' ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ವಿಭಿನ್ನ ಇಮೇಜ್ ನಲ್ಲಿ ತೋರಿಸಿ ಸುದ್ದಿಯಾದವರು ನಿರ್ದೇಶಕ ಪವನ್ ಒಡೆಯರ್. ಇದೀಗ ಅವರು ತಮ್ಮ ನೂತನ ಚಿತ್ರ ರೇಮೋ'ಗಾಗಿ ಸುಪ್ರೀಮ್ ಸ್ಟಾರ್ ಬಿರುದಾಂಕಿತ ಶರತ್ ಕುಮಾರ್ ಅವರನ್ನು ಕರೆಸಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

  ರೇಮೋ ಚಿತ್ರಕ್ಕಾಗಿ ವಿಜಯನಗರದಲ್ಲಿ ಸುಮಾರು ಒಂದು ಕೋಟಿ ವೆಚ್ಚದ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿರುವ ಈ ಚಿತ್ರದಲ್ಲಿ ಪ್ರಸ್ತುತ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟ ಶರತ್ ಕುಮಾರ್ ಅವರ ಎಂಟ್ರಿಯಾಗುವುದರೊಂದಿಗೆ ಸಿನಿರಸಿಕರಲ್ಲಿ ಕುತೂಹಲ ಹೆಚ್ಚಾಗಿದೆ.

  ಚಿತ್ರದ ವಿಶೇಷತೆಗಳ ಬಗ್ಗೆ ಪವನ್ ಒಡೆಯರ್ ಅವರು ಫಿಲ್ಮೀಬೀಟ್ ಜತೆಯಲ್ಲಿ ನಡೆಸಿರುವ ವಿಶೇಷ ಮಾತುಕತೆ ಇದು.

   ಚಿತ್ರದ ಶೀರ್ಷಿಕೆಯಾಗಿರುವ `ರೇಮೊ’ ಎಂದರೇನು?

  ಚಿತ್ರದ ಶೀರ್ಷಿಕೆಯಾಗಿರುವ `ರೇಮೊ’ ಎಂದರೇನು?

  ರೇಮೊ ಎಂದರೆ ಒಂದು ರೀತಿ ಕಾವ್ಯನಾಮದ ಹಾಗೆ. ಚಿತ್ರದಲ್ಲಿ ನಾಯಕನ ಹೆಸರು ರೇವಂತ್ ಎಂದು ಇದ್ದರೆ, ನಾಯಕಿಯ ಹೆಸರು ಮೋಹನ ಎಂದಾಗಿರುತ್ತದೆ. ಹಾಗಾಗಿ ಎರಡು ಹೆಸರುಗಳ ಮೊದಲಾಕ್ಷರ ಸೇರಿಸಿಕೊಂಡು ನಾಯಕ ತನಗೆ ಇಂಥದೊಂದು ಹೆಸರು ಇರಿಸಿಕೊಂಡಿರುತ್ತಾನೆ. ಅದೇ ಚಿತ್ರದ ಹೆಸರು.

  ಮೊದಲ ಬಾರಿಗೆ ಪವನ್ ಚಿತ್ರಕ್ಕೆ ಅರ್ಜುನ್ ಮ್ಯೂಸಿಕ್ಮೊದಲ ಬಾರಿಗೆ ಪವನ್ ಚಿತ್ರಕ್ಕೆ ಅರ್ಜುನ್ ಮ್ಯೂಸಿಕ್

   ನಾಯಕನ ತಂದೆಯಾಗಿ ಶರತ್ ಕುಮಾರ್ ಅವರನ್ನು ಕರೆತರಲು ಕಾರಣವೇನು?

  ನಾಯಕನ ತಂದೆಯಾಗಿ ಶರತ್ ಕುಮಾರ್ ಅವರನ್ನು ಕರೆತರಲು ಕಾರಣವೇನು?

  ಇದು ಅಪ್ಪಟ ಲವ್ ಸ್ಟೋರಿಯಾದರೂ ಚಿತ್ರದಲ್ಲಿ ತಂದೆ ಮಗನ ಕುರಿತಾದ ಸನ್ನಿವೇಶಗಳು ಕೂಡ ಅಗತ್ಯವಾಗಿದೆ. ಮಾತ್ರವಲ್ಲ ನಾಯಕನ ತಂದೆಯ ಪಾತ್ರದ ಮೂಲಕ ಒಂದು ಸಸ್ಪೆನ್ಸ್ ರಿವೀಲ್ ಆಗುವ ಸನ್ನಿವೇಶ ಕೂಡ ಇರುತ್ತದೆ. ಹಾಗಾಗಿ ಈಗಾಗಲೇ ರಾಜಕುಮಾರ ಚಿತ್ರದಲ್ಲಿ ಪುನೀತ್ ಅವರ ತಂದೆಯಾಗಿ ಕನ್ನಡ ಸಿನಿರಸಿಕರ ಮನಗೆದ್ದ ಶರತ್ ಕುಮಾರ್ ಅವರೇ ತಂದೆಯ ಪಾತ್ರಕ್ಕೆ ಸೂಕ್ತ ಎಂದು ಅವರನ್ನು ಸಮೀಪಿಸಿದೆ. ಅವರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಹಾಗೆ ರೇಮೋನಲ್ಲಿ ಕರ್ನಾಟಕದ ಶ್ರೀಮಂತ ಸಂಸ್ಥೆಯೊಂದರ ಚೇರ್ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

   ಯುವ ಕಲಾವಿದರನ್ನು ಇರಿಸಿಕೊಂಡು ದೊಡ್ಡ ಬಜೆಟ್ ಚಿತ್ರ ಮಾಡುವ ಧೈರ್ಯ ಹೇಗೆ ಬಂತು?

  ಯುವ ಕಲಾವಿದರನ್ನು ಇರಿಸಿಕೊಂಡು ದೊಡ್ಡ ಬಜೆಟ್ ಚಿತ್ರ ಮಾಡುವ ಧೈರ್ಯ ಹೇಗೆ ಬಂತು?

  ಹೌದು. ಅಂದಾಜು ಹದಿನೈದು ಕೋಟಿ ವೆಚ್ಚದಲ್ಲಿ ಚಿತ್ರ ಮಾಡುತ್ತಿರುವುದು ನಮ್ಮ ರೇಮೋ ತಾರಾಗಣದ ಪಾಲಿಗೆ ದೊಡ್ಡ ಬಜೆಟ್ ಎಂದೇ ಹೇಳಬಹುದು. ಆರ್ಥಿಕ ಧೈರ್ಯದ ವಿಚಾರಕ್ಕೆ ಬಂದರೆ ಅದಕ್ಕೆ ನಿರ್ಮಾಪಕ ಸಿ ಆರ್ ಮನೋಹರ್ ಸರ್ ಅವರೇ ಕಾರಣ. ಅವರಿಗೆ ನಾನು ಎರಡು ಕತೆಗಳನ್ನು ಹೇಳಿದ್ದೆ. ಇನ್ನೊಂದು ಸಣ್ಣ ಬಜೆಟ್ ಚಿತ್ರವಾಗಿತ್ತು. ಆದರೆ ಅವರು ಖರ್ಚು ಹೆಚ್ಚಾದರೂ ಪರವಾಗಿಲ್ಲ, ರೇಮೊ ಕತೆಯನ್ನೇ ಚಿತ್ರ ಮಾಡುವುದಾಗಿ ಹೇಳಿದರು.

  'ರೆಮೋ' ಚಿತ್ರಕ್ಕಾಗಿ ನಿರ್ಮಿತವಾಗಿದೆ 1 ಕೋಟಿ ವೆಚ್ಚದ ದುಬಾರಿ ಸೆಟ್'ರೆಮೋ' ಚಿತ್ರಕ್ಕಾಗಿ ನಿರ್ಮಿತವಾಗಿದೆ 1 ಕೋಟಿ ವೆಚ್ಚದ ದುಬಾರಿ ಸೆಟ್

   ಅದ್ಧೂರಿತನ ಪರದೆಯ ಮೇಲೆ ಯಾವ ರೀತಿ ಮೂಡಿಬರಲಿದೆ?

  ಅದ್ಧೂರಿತನ ಪರದೆಯ ಮೇಲೆ ಯಾವ ರೀತಿ ಮೂಡಿಬರಲಿದೆ?

  ಪೂರಿ ಜಗನ್ನಾಥ್ ಅವರ ನಿರ್ದೇಶನದ ರೋಗ್ ಚಿತ್ರದ ಮೂಲಕ ನಾಯಕರಾದ ಇಶಾನ್ ಗೆ ಇದು ರಿಲಾಂಚ್ ತರಹ ಆಗಲಿದೆ. ಹಾಗಾಗಿ ಗುಣಮಟ್ಟದ ಸೆಟ್ ಗಳು ಮತ್ತು ಲೊಕೇಶನ್ ಗಳಿಂದಾಗಿ ಪರದೆಯ ಮೇಲೆ ಅದ್ಧೂರಿತನ, ಚೆಲುವು ಎಲ್ಲವೂ ಕಂಗೊಳಿಸಲಿದೆ.

   ಎಲ್ಲೆಲ್ಲಿ ಚಿತ್ರೀಕರಣ?

  ಎಲ್ಲೆಲ್ಲಿ ಚಿತ್ರೀಕರಣ?

  ಬೆಂಗಳೂರು ಹೈದರಾಬಾದ್ ಗಳಲ್ಲಿ ಚಿತ್ರೀಕರಣ ಮುಂದುವರಿದಿದೆ. ಉಳಿದಂತೆ ಥಾಯ್ಲ್ಯಾಂಡ್, ಸಿಂಗಾಪುರ, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾ ಮೊದಲಾದೆಡೆಗಳಲ್ಲಿ ಚಿತ್ರೀಕರಣ ನಡೆಸಬೇಕಿದೆ. ಚಿತ್ರದ ಮೊದಲಾರ್ಧ ಪೂರ್ತಿ ವಿದೇಶದಲ್ಲೇ ನಡೆಯುತ್ತದೆ. ನಾಯಕ ಮತ್ತು ನಾಯಕಿ ಇಬ್ಬರೂ ಭಾರತದಲ್ಲೇ ಇದ್ದರೂ ಕಾರಣವೊಂದರಿಂದ ವಿದೇಶಗಳಿಗೆ ಸುತ್ತಾಡಬೇಕಾಗುತ್ತದೆ.

   ಒಟ್ಟು ಚಿತ್ರದ ವಿಶೇಷತೆಗಳೇನು?

  ಒಟ್ಟು ಚಿತ್ರದ ವಿಶೇಷತೆಗಳೇನು?

  ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅವರೊಂದಿಗೆ ಇದು ನನ್ನ ಮೊದಲ ಕಾಂಬಿನೇಶನ್. ಹಾಡುಗಳು ಈಗ ತಾನೇ ರೆಡಿಯಾಗುತ್ತಿವೆ! ಆದರೆ ಆನಂದ್ ಆಡಿಯೋದವರು ಮೊದಲೇ ದೊಡ್ಡ ಮೊತ್ತಕ್ಕೆ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿವೆ. ನಾನು ಮತ್ತು ಕವಿರಾಜ್ ಬರೆದಿದ್ದೇವೆ. ಗೂಗ್ಲಿ ಚಿತ್ರ ಆದಮೇಲೆ ಅಂಥದೊಂದು ಲವ್ ಸ್ಟೋರಿ ನಾನು ಮಾಡಿರಲಿಲ್ಲ.

   ಯಾವಾಗ ತೆರೆಗೆ ತರುವ ಯೋಜನೆ?

  ಯಾವಾಗ ತೆರೆಗೆ ತರುವ ಯೋಜನೆ?

  ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ದಿನ ಚಿತ್ರ ತೆರೆಗೆ ತರುವ ಯೋಜನೆ ಹಾಕಿದ್ದೇವೆ. ಇತ್ತೀಚೆಗೆ ತಿಳಿಯಾದ ಮನಸುಗಳ ಪ್ರೇಮಕತೆ ಬರುತ್ತಿಲ್ಲ. ಹಾಗಾಗಿ ಅಂಥ ಜನರ್ ಚಿತ್ರಗಳನ್ನು ಮಿಸ್ ಮಾಡುವವರಿಗೆ ಇದು ಸುಪರ್ಬ್ ಎನಿಸುವ ಭರವಸೆ ಇದೆ.

  English summary
  Pavan Wadeyar famous for his Kannada movies. Now his New Film Raymo team welcomes Actor Sharathkumar as one of the lead Role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X