ನನ್ನ ಮೊದಲ ಸಿನಿಮಾ : 'ಲೈಫು ಇಷ್ಟೇನೆ' ಇಷ್ಟ ಆಗಿಲ್ಲವೆಂದಿದ್ದರೇ 'ಲೂಸಿಯ' ಇರುತ್ತಿರಲಿಲ್ಲ

By Naveen

''ಇವತ್ತಿಗೂ ನನ್ನ ಮೂರು ಸಿನಿಮಾ ನೋಡಿದರೆ ಮೊದಲ ಚಿತ್ರ ಫ್ರಮ್ ದಿ ಹಾರ್ಟ್ ಮಾಡಿದ್ದು.. ಉಳಿದ ಎರಡು ಚಿತ್ರಗಳನ್ನು ಫ್ರಮ್ ದಿ ಬ್ರೈನ್ ಮಾಡಿದ್ದೀನಿ..'' ಇದು ನಿರ್ದೇಶಕ ಪವನ್ ಕುಮಾರ್ ತಮ್ಮ ಮೊದಲ ಸಿನಿಮಾ 'ಲೈಫು ಇಷ್ಟೇನೆ' ಬಗ್ಗೆ ಮಾತನಾಡುತ್ತ ಹೇಳಿದ ಒಂದು ಅದ್ಬುತ ಮಾತು.

ಪವನ್ ಕುಮಾರ್ ಕನ್ನಡ ಜನಕ್ಕೆ ವಿಭಿನ್ನ ಸಿನಿಮಾಗಳನ್ನು ತೊರಿಸುತ್ತಿರುವ ಬರುತ್ತಿರುವ ನಿರ್ದೇಶಕ ಇಂತಹ ನಿರ್ದೇಶಕ ಹುಟ್ಟಿದ್ದು 'ಲೈಫು ಇಷ್ಟೇನೆ' ಸಿನಿಮಾದ ಮೂಲಕ. 'ಫಿಲ್ಮಿಬೀಟ್ ಕನ್ನಡ'ದ 'ನನ್ನ ಮೊದಲ ಸಿನಿಮಾ' ಲೇಖನಕ್ಕೆ ನಿಮ್ಮ ಮೊದಲ ಸಿನಿಮಾದ ಬಗ್ಗೆ ಒಂದಷ್ಟು ವಿಷಯ ಹೇಳಿ ಎಂದಾಗ ಪವನ್ ಅನೇಕ ವಿಷಯಗಳನ್ನು ಮನಸು ಬಿಚ್ಚಿ ನಗು ನಗುತ್ತ ಹೇಳಿಕೊಂಡರು.

ಜಿ.ಪಿ.ನಗರದ 'ರಂಗಶಂಕರ'ದಲ್ಲಿ.. ಆ ಅದ್ಬುತ ರಂಗಭೂಮಿಯ ವಾತಾವರಣದಲ್ಲಿ ಪವನ್ ಕುಮಾರ್ ನಮ್ಮ ಜೊತೆಗೆ ಮಾತಿಗೆ ಇಳಿದರು. ಕೂದಲು ಸರಿ ಮಾಡಿಕೊಂಡು ಆರಾಮಾಗಿ ಕುಳಿತು ಸಂದರ್ಶನ ಶುರು ಮಾಡೋಣ ಎಂದರು.. ನಮ್ಮ ಪ್ರಶ್ನೆಗೆ ಅವರು ಉತ್ತರಿಸುತ್ತ ಹೊದರು....

ನನ್ನ ಫ್ರೆಂಡ್ ಒಬ್ಬನಿಗೆ ಬ್ರೇಕ್ ಅಪ್ ಆಗಿತ್ತು..

ನನ್ನ ಫ್ರೆಂಡ್ ಒಬ್ಬನಿಗೆ ಬ್ರೇಕ್ ಅಪ್ ಆಗಿತ್ತು..

''ನಾನು ಯಾವ ಸಿನಿಮಾ ಮಾಡಬೇಕು ಅಂತ ಯೋಚನೆ ಮಾಡುತ್ತಿದೆ. ಆಗ ನನ್ನ ಫ್ರೆಂಡ್ ಒಬ್ಬನಿಗೆ ಬ್ರೇಕ್ ಅಪ್ ಆಗಿತ್ತು. ತುಂಬ ದುಖಃದಲ್ಲಿ ಇದ್ದ ಅವನು ನಮ್ಮ ಮನೆಗೂ ಬರುತ್ತಿದ್ದ. ಆದರೆ ನನಗೆ ನನ್ನ ಮದುವೆಯಾದ ಮೇಲೆ ಇದೆಲ್ಲ ಫನ್ನಿ ಅನಿಸಿತ್ತು. ಆಗ 'ಲೈಫ್ ನಲ್ಲಿ ಬ್ರೇಕ್ ಅಪ್ ಗಳನ್ನು ನೆಗೆಟಿವ್ ಅನ್ಕೊಬೇಕಾ.. ಅಥಾವ ಅದರಿಂದ ನಾವು ಇನ್ನು ಚೆನ್ನಾಗಿ ಆದ್ವಿ..' ಅಂತ ಅನ್ಕೋಬೇಕಾ ಅಂತ ಅನಿಸಿತು. ಅದೇ ಥಾಟ್ ನಲ್ಲಿ 'ಲೈಫು ಇಷ್ಟೇನೆ' ಸಿನಿಮಾ ಶುರುವಾಯ್ತು. ನಾನು ಕಥೆಯನ್ನು ಒಬ್ಬನೇ ಬರೆಯುತ್ತೇನೆ. ಪೂರ್ತಿ ಬರೆದ ನಂತರ ಕೆಲವರಿಗೆ ಹೇಳುತ್ತೇನೆ. ಆದರೆ ಕೂತು ಕಥೆಯ ಚರ್ಚೆ ಅಂತ ಮಾಡುವುದಿಲ್ಲ. ಭಟ್ಟರ ಜೊತೆಗೆ ಇದ್ದಾಗ ಅವರಿಗೆ ಇಷ್ಟ ಆಗುವಂತಹ ಕಥೆಗಳನ್ನು ಬರೆಯುತ್ತಿದೆ.''

ಭಟ್ಟರ ಜೊತೆಗೆ ಕೆಲಸ ಮಾಡುತ್ತಿದೆ..

ಭಟ್ಟರ ಜೊತೆಗೆ ಕೆಲಸ ಮಾಡುತ್ತಿದೆ..

''ಮುಂಚೆಯಿಂದ ನಾನು ತುಂಬ ಬರೆಯುತ್ತಿದೆ. ಭಟ್ಟರ ಜೊತೆಗೆ ಹೀಗೆ ಮೂರು ವರ್ಷ ಕೆಲಸ ಮಾಡಿದೆ. ಒಂದು ಸಿನಿಮಾದಲ್ಲಿ ಕಥೆ ಎನ್ನುವುದು ಒಂದು ಅಂಶ ಆಗಿದ್ದರೆ, ಅದನ್ನು ಬಿಟ್ಟು ಸೆಟ್ ನಲ್ಲಿ ಹೇಗೆ ವಿಭಾಗಗಳನ್ನು ನಿಭಾಯಿಸುವುದು, ಸಿನಿಮಾವನ್ನು ಕೊನೆಯ ವರೆಗೆ ತೆಗೆದುಕೊಂಡು ಹೋಗುವುದು ಇರುತ್ತದೆ. ಅದೆಲ್ಲವನ್ನು ನಾನು ಯೋಗರಾಜ್ ಭಟ್ ಅವರ ಜೊತೆಗೆ ಇದ್ದಾಗ ಕಲಿತೆ. ಅವರ ಜೊತೆಗೆ ಎರಡು ಸಿನಿಮಾ ಫುಲ್ ಇದ್ದಿದ್ದರಿಂದ ಎಲ್ಲ ಚೆನ್ನಾಗಿ ಗೊತ್ತಾಯ್ತು. ಈಗ ಮಾಡದೆ ಇದ್ರೆ ಇನ್ ಯಾವಾಗ ಮಾಡೋದು.. ಅಂತ ಸ್ಟಾರ್ಟ್ ಮಾಡಿದೆ.''

'ಹಳೆ ಬೇಜಾರು' ಎನ್ನುವ ಟೈಟಲ್ ಇರಲಿ ಅನ್ಕೋಡಿಂದೆ..

'ಹಳೆ ಬೇಜಾರು' ಎನ್ನುವ ಟೈಟಲ್ ಇರಲಿ ಅನ್ಕೋಡಿಂದೆ..

''ಯೋಗರಾಜ್ ಭಟ್ ಅವರು ತುಂಬ ಮುಂಚೆಯಿಂದನ್ನೇ ಸಿನಿಮಾ ಮಾಡು ಅಂತ ತಳ್ಳುತ್ತಿದ್ದರು. ನಾನೇ ಸುಮ್ಮನಿದೆ. 'ಲೈಫು ಇಷ್ಟೇನೆ' ಎನ್ನುವ ಟೈಟಲ್ ಕೂಡ 'ಪಂಚರಂಗಿ' ಹಾಡಿನಲ್ಲಿ ಇತ್ತು. ಮೊದಲು ನಾನು ಕಥೆ ಬರೆಯುವಾಗ ಚಿತ್ರಕ್ಕೆ 'ಹಳೆ ಬೇಜಾರು' ಅಂತ ಟೈಟಲ್ ಇಟ್ಟಿದೆ. ಅದು ಅವರ ಹಳೆಯ ಪದ್ಯದ ಹೆಸರು. ಭಟ್, ಎಲ್ಲರೂ ಇದು ನೆಗೆಟಿವ್ ಆಗಿ ಇದೆ ಅಂದರು. ಆಗ 'ಲೈಫು ಇಷ್ಟೇನೆ' ಅಂತ ಚೆಂಚ್ ಮಾಡಿದೆ.''

ಮೊದಲ ಸಿನಿಮಾ ಆದರೂ.. ನಾನು ಬರೆದ ನಾಲ್ಕನೇ ಲವ್ ಸ್ಟೋರಿ ಇದು

ಮೊದಲ ಸಿನಿಮಾ ಆದರೂ.. ನಾನು ಬರೆದ ನಾಲ್ಕನೇ ಲವ್ ಸ್ಟೋರಿ ಇದು

''ಆಗ ನನಗೆ 'ಲೂಸಿಯ', 'ಯೂಟರ್ನ್' ಚಿತ್ರಗಳ ರೀತಿಯ ಐಡಿಯಾ ಇರಲಿಲ್ಲ. ಜನರಿಗೆ ಇಷ್ಟ ಆಗಬೇಕು ಅಂದರೆ ಒಂದು ಲವ್ ಸ್ಟೋರಿ ಇರಬೇಕು ಎನ್ನುವುದು ಆಗೆಲ್ಲ ಇತ್ತು. ಅದಕ್ಕೆ ಹಾಡುಗಳು ಕೂಡ ಆ ಚಿತ್ರದಲ್ಲಿ ಇದೆ. ದಿಗಂತ್ ಚೆನ್ನಾಗಿ ಪರಿಚಯ ಇದ್ದಿದ್ದರಿಂದ ಅವನಿಗಾಗಿಯೇ ಈ ಕಥೆ ಬರೆದೆ. ಇದು ನನ್ನ ಮೊದಲ ಸಿನಿಮಾ ಆಗಿದ್ದರು ಕೂಡ ನನ್ನು ಬರೆದ ನಾಲ್ಕನೇ ಲವ್ ಸ್ಟೋರಿ ಇದಾಗಿತ್ತು. ಇದರ ಕಥೆ ಬರೆಯುವಾಗ ಯಾರೂ ಯಾರೋ ನಿರ್ಮಾಪಕರು ಬಂದು ಮೀಟ್ ಆಗುತ್ತಿದ್ದರು. ಆದರೆ ಅದು ಯಾವುದು ವರ್ಕ್ ಔಟ್ ಆಗಲಿಲ್ಲ. ಅದೇ ವೇಳೆ ನಮ್ಮ 'ಮನಸಾರೆ' ಮತ್ತು 'ಪಂಚರಂಗಿ' ಚಿತ್ರದ ಎಡಿಟರ್ ನಿರ್ಮಾಪಕ ಜಾಕ್ ಮಂಜು ಅವರನ್ನು ಪರಿಚಯ ಮಾಡಿಸಿದರು. ಜಾಕ್ ಮಂಜು ಅವರಿಗೆ ಒಂದು ಲೈನ್ ಹೇಳಿದೆ. ಆಮೇಲೆ ಅವರು ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದೀರ ಅಂದರೆ ನಿಮಗೆ ಕೆಲಸ ಗೊತ್ತಿರುತ್ತದೆ ಎಂದರು. ಅವರು ಪ್ಲಾನ್ ಮಾಡಿದ ಬಜೆಟ್ ನಲ್ಲಿ ಈ ಸಿನಿಮಾ ಆಗುತ್ತದೆ ಎಂದು ಮುಂದುವರೆದರು.''

'ಲೈಫು ಇಷ್ಟೇನೆ' ಇಷ್ಟ ಆಗಲಿದ್ದರೆ 'ಲೂಸಿಯ' ಇರುತ್ತಿರಲಿಲ್ಲ

'ಲೈಫು ಇಷ್ಟೇನೆ' ಇಷ್ಟ ಆಗಲಿದ್ದರೆ 'ಲೂಸಿಯ' ಇರುತ್ತಿರಲಿಲ್ಲ

''ಆ ಚಿತ್ರದಿಂದನೇ ನಾನು ತುಂಬ ಕಲಿತಿದ್ದು. ಆ ಸಿನಿಮಾ ಇವತ್ತು ರಿಲೀಸ್ ಆಗಿದ್ದರೆ ಇನ್ನೂ ದೊಡ್ಡ ಹಿಟ್ ಆಗುತ್ತಿತ್ತು. ಆಗ ಮಲ್ಟಿಪ್ಲೆಕ್ಸ್ ತುಂಬ ಕಡಿಮೆ. ಸಿಂಗಲ್ ಸ್ಕ್ರೀನ್ ನಲ್ಲಿ ಇದನ್ನು ನೋಡುತ್ತಿರಲಿಲ್ಲ. ಬೇಸರ ಏನು ಅಂದರೆ ಹುಬ್ಬಳ್ಳಿ ರೀತಿಯ ಜಿಲ್ಲೆಗಳಲ್ಲಿ ಅದೇ ಟೈಂ ಗೆ 'ದೂಕುಡು' ಸಿನಿಮಾ ರಿಲೀಸ್ ಆಗಿತ್ತು. 'ದೂಕುಡು' ಹೌಸ್ ಫುಲ್ ಆದರೆ ನಮ್ ಸಿನಿಮಾ ಖಾಲಿ ಇತ್ತು. ಸೋ, ಅದನ್ನೆಲ್ಲ ನೋಡಿದ ಮೇಲೆ ನನಗೆ 'ಲೂಸಿಯ' ರೀತಿಯ ಸಿನಿಮಾ ಮಾಡಬೇಕು ಅನಿಸಿತು. 'ಲೈಫು ಇಷ್ಟೇನೆ' ಚೆನ್ನಾಗಿ ಆಗಿದ್ದರಿಂದ 'ಲೂಸಿಯ' ಕ್ರೌಡ್ ಫಂಡಿಂಗ್ ಮಾಡಿದ್ದು. ಈ ಸಿನಿಮಾ ಜನರಿಗೆ ಇಷ್ಟ ಆಗಿರಲಿಲ್ಲ ಅಂದರೆ 'ಲೂಸಿಯ' ಕೂಡ ಸಕ್ಸಸ್ ಆಗುತ್ತಿರಲಿಲ್ಲ.''

ಮೊದಲ ದಿನವೇ ಕಷ್ಟ ಸೀನ್ ಡೈರೆಕ್ಟ್ ಮಾಡಿದೆ

ಮೊದಲ ದಿನವೇ ಕಷ್ಟ ಸೀನ್ ಡೈರೆಕ್ಟ್ ಮಾಡಿದೆ

''ನನ್ನ ನಾಟಕಗಳನ್ನು ನಾನೇ ಪ್ರೊಡ್ಯೂಸ್ ಮಾಡುತ್ತಿದೆ. ಅಲ್ಲಿ ನನಗೆ ಟೀಂ ಹ್ಯಾಂಡಲ್ ಮಾಡುವ ಅನುಭವ ಇತ್ತು. ಸಿನಿಮಾ ಸೆಟ್ ನಲ್ಲಿ ಸುಮಾರು 70 ಜನ ಇರುತ್ತಾರೆ. ಮೊದಲು ಭಯ ಇತ್ತು. ಮೊದಲ ದಿನನೇ ತುಂಬ ಕಷ್ಟ ಸೀನ್ ತೆಗೆದುಕೊಂಡೆ. 120 ಶಾಟ್ಸ್ ಪ್ಲಾನ್ ಮಾಡಿ 95 ಶಾಟ್ಸ್ ಶೂಟ್ ಮಾಡಿದ್ವಿ. ಅಷ್ಟು ಮಾಡಿದ ಮೇಲೆ ಸೆಟ್ ನಲ್ಲಿ ಇರುವ ಎಲ್ಲರಿಗೆ ನನಗೆ ಕೆಲಸ ಗೊತ್ತು ಅಂತ ಅನಿಸಿತು. ಈಗ ಡಿಜಿಟಲ್ ಇರುವುದರಿಂದ ರಿ ಟೇಕ್ ಎಲ್ಲ ಮಾಡುತ್ತೇವೆ. ಆದರೆ ಆಗ ಕ್ಯಾಮರಾ ಆನ್ ಆದರೆ ದುಡ್ಡು ಖರ್ಚಾಗುತಿತ್ತು. ಸೋ, ಮೊದಲ ಶಾಟ್ ತೆಗೆದಾಗ ಮೂರುವರೆ ನಿಮಿಷ ಕಟ್ ಅಂತ ಹೇಳೆ ಇರಲಿಲ್ಲ. ಕ್ಯಾಮರಾ ಓಡ್ತಾನೆ ಇತ್ತು. ನಾನು ಮಾನಿಟರ್ ನೋಡುತ್ತಾ ಕೂತ್ತಿದೆ. ಆಮೇಲೆ ಕಟ್ ಹೇಳಬೇಕು ಅಂತ ಗೊತ್ತಾಯ್ತು. ಆವಾಗ ಇದೇ ರೀತಿ ಮಾಡುತ್ತ ಇದ್ದಾರೆ ಮೂರೇ ದಿನಕ್ಕೆ ಸಿನಿಮಾ ನಿಲ್ಲಿಸಬೇಕಾಗುತ್ತದೆ ಅಂತ ಪ್ರಜ್ಞೆ ಇಟ್ಟು ಶೂಟಿಂಗ್ ಮಾಡಿದೆ.''

ನಮ್ಮಲ್ಲಿ ರೈಟರ್ ಗಳಗೆ ಹೆಚ್ಚು ಬೆಲೆ ಇಲ್ಲ..

ನಮ್ಮಲ್ಲಿ ರೈಟರ್ ಗಳಗೆ ಹೆಚ್ಚು ಬೆಲೆ ಇಲ್ಲ..

'' ನಾನು ಮೊದಲು ಬರೀ ನಾಟಕದಲ್ಲಿಯೇ ಇರಬೇಕು ಅಂತ ಇದ್ದೇ. ಆದರೆ ನಾನು ನಾಟಕದಲ್ಲಿ ಬರೆಯುತ್ತಿದ್ದ ಕೆಲವು ಕಥೆ ಸಿನಿಮಾ ಮಾಡಿದರೆ ಚೆನ್ನಾಗಿ ಇರುತ್ತದೆ ಅನಿಸಿತು. ಶಾರ್ಟ್ ಫಿಲ್ಮ್ ಗಳನ್ನು ಮಾಡಿ ಕ್ಯಾಮರಾ, ಎಡಿಟಿಂಗ್ ಎಲ್ಲ ಕಲಿತೆ. ನಾನು ಒಬ್ಬ ನಟ ಆಗಬೇಕು ಅಂತ ಬಂದೆ. ಆಮೇಲೆ ವಾಸನೆ ಬಾಬು ರೀತಿಯ ಪಾತ್ರಗಳನ್ನು ಮಾಡಿದ ಮೇಲೆ ಇಲ್ಲಿ ಇದೇ ರೀತಿಯ ಪಾತ್ರ ಸಿಗುತ್ತದೆ ಅನಿಸಿತು. ಆಗ ಭಟ್ಟರು ನನ್ನನ್ನು ಬರೆಯಲು ಕರೆದುಕೊಂಡು ಹೋದರು. ನಮ್ಮಲ್ಲಿ ರೈಟರ್ ಗಳಗೆ ಹೆಚ್ಚು ಬೆಲೆ ಇಲ್ಲ. ಬೆಲೆ ಇದ್ದಿದ್ದರೆ ನಾನು ರೈಟರ್ ಆಗಿಯೇ ಇರುತ್ತಿದೆ. ಇಲ್ಲಿ ನಿಮ್ಮ ಕಥೆಯನ್ನು ಬೇರೆಯವರು ಮಾಡಲ್ಲ. ಬೇರೆಯವರಿಗೆ ಬೇಕಾಗುವ ರೀತಿ ನೀವು ಬರೆಯಲು ಆಗಲ್ಲ. ಹೀಗೆ ಯೋಗರಾಜ್ ಭಟ್ ಅವರ ಜೊತೆಗೆ ಇದ್ದಾಗ ನನಗೆ ಡೈರೆಕ್ಷನ್ ಇಷ್ಟ ಆಗ್ತಾ ಬಂತು.. ಹಾಗೆ ಡೈರೆಕ್ಷನ್ ಕಡೆ ವಾಲಿದೆ.''

ನನಗೆ ಇಲ್ಲಿ ಯಾರು ಪರಿಚಯ ಇರಲಿಲ್ಲ..

ನನಗೆ ಇಲ್ಲಿ ಯಾರು ಪರಿಚಯ ಇರಲಿಲ್ಲ..

''ನನಗೆ ಯಾರು ಪರಿಚಯ ಇರಲಿಲ್ಲ. ದಿಗಂತ್ ನನಗೆ ಆಗಲೇ ಫ್ರೆಂಡ್ ಆಗಿದ್ದ. ಆಗ ಅವನಿಗೂ ನನಗೂ ಇಬ್ಬರಿಗೂ ಒಳ್ಳೆಯ ಸಿನಿಮಾ ಮಾಡಬೇಕಿತ್ತು. ಇನ್ನು ಹಿಂದೆ ಒಂದು ಶಾರ್ಟ್ ಫಿಲ್ಮ್ ಮಾಡುವಾಗ ಸಿಂಧು ಲೋಕನಾಥ್ ಪರಿಚಯ ಆಗಿ ಈ ಸಿನಿಮಾಗೂ ಅವರು ನಾಯಕಿ ಆದರು. ಒಮ್ಮೆ ಕಾರ್ ನಲ್ಲಿ ನಾನು ಸತೀಶ್ ಹೋಗುವಾಗ ಸಂಗಮ್ ಸರ್ಕಲ್ ನಲ್ಲಿ ಸಂಯುಕ್ತ ಬೆಳವಾಡಿ ಪಾಸ್ ಆದರು. ನಾನು ಈ ಕಥೆಯ ಒಂದು ನಾಯಕಿ ಈ ಹುಡುಗಿ ರೀತಿ ಇರಬೇಕು ಅಂದೆ. ಆಮೇಲೆ ಅವರು ಸುಧಾ ಬೆಳವಾಡಿ ಮಗಳು ಅಂತ ತಿಳಿದ ಮೇಲೆ ಫೋನ್ ಮಾಡಿ ಸಂಪರ್ಕ ಮಾಡಿದ್ವಿ.''

ಫಸ್ಟ್ ಡೇ ಚಿತ್ರಮಂದಿರದಲ್ಲಿ..

ಫಸ್ಟ್ ಡೇ ಚಿತ್ರಮಂದಿರದಲ್ಲಿ..

''ಭಟ್ಟರ ಜೊತೆಗೆ ಕೆಲಸ ಮಾಡಿದ್ದರಿಂದ ಆಗಲು ಮೊದಲ ದಿನ ಚಿತ್ರಮಂದಿರಕ್ಕೆ ಹೋಗಿ ಜನರ ಜೊತೆಗೆ ನಮ್ಮ ಸಿನಿಮಾ ನೋಡಿತಿದ್ವಿ. ಆದರೆ ಇದು ಡೈರೆಕ್ಟರ್ ಆಗಿ ಎಲ್ಲ ಮೊದಲ ಸಲದ ಅನುಭವ. ಕೆಲವು ಸಲ ಚಿತ್ರಮಂದಿರದಲ್ಲಿ ನೋಡುವಾಗ ನಾವು ಅಂದುಕೊಳ್ಳದ ಅಂಶಗಳು ಸಹ ವರ್ಕ್ ಆಗುತ್ತಿತ್ತು. ಅದೇ ರೀತಿ ನಾವು ಅಂದುಕೊಂಡಿದ್ದು ವರ್ಕ್ ಆಗುತ್ತಿರಲಿಲ್ಲ. ಅದೆಲ್ಲ ತುಂಬ ಖುಷಿ ಕೊಟ್ಟಿತು.''

ಇದು ಮರೆಯಲಾಗದ ಘಟನೆ..

ಇದು ಮರೆಯಲಾಗದ ಘಟನೆ..

''ಈ ಸಿನಿಮಾದಲ್ಲಿ ತುಂಬ ಹೊಸದನ್ನು ಪ್ರಯತ್ನ ಮಾಡಿದ್ವಿ. ಲಡಾಕ್ ನಲ್ಲಿ ಶೂಟಿಂಗ್ ಮಾಡಬೇಕು ಅಂದಾಗ ಮೊದಲು ನಾನು ಮತ್ತು ನನ್ನ ಅಸಿಸ್ಟೆಂಟ್ ಹೋಗುವಾಗ ಪೂರ್ತಿ ಸ್ನೋ ಆಗಿತ್ತು. ರೋಡ್ ನಲ್ಲಿ ಹೋಗುವಾಗ ಪೂರ್ತಿ ಜಾರುತ್ತಿತ್ತು. ಹೋಗುವಾಗ ನಮಗೆ ಫುಲ್ ಆಳ ಕಾಣುತ್ತಿತ್ತು. ನನಗೆ ಆಗ ಮದುವೆ ಆಗಿ 6 ತಿಂಗಳು ಆಗಿತ್ತು ಅಷ್ಟೇ. ಆಗ ನಾನು ನನ್ನ ಅಸಿಸ್ಟೆಂಟ್ ಇಬ್ಬರು ನಾವು ವಾಪಸ್ ಬರೆದೆ ಇದ್ದರೇ ಅಂತ ನಮ್ಮ ಒಂದು ವಿಡಿಯೋ ಶೂಟ್ ಮಾಡಿಕೊಂಡಿದ್ವಿ.''

ನನ್ನ ಹಿನ್ನಲೆ ಗಾಂಧಿನಗರಕ್ಕೆ ಮ್ಯಾಚ್ ಆಗುತ್ತಿರಲಿಲ್ಲ..

ನನ್ನ ಹಿನ್ನಲೆ ಗಾಂಧಿನಗರಕ್ಕೆ ಮ್ಯಾಚ್ ಆಗುತ್ತಿರಲಿಲ್ಲ..

''ನಾವು ಬಂದಿದ್ದು.. ನನ್ನ ವಿಧ್ಯಾಭ್ಯಾಸ ಹಿನ್ನಲೆ ಗಾಂಧಿನಗರಕ್ಕೆ ಮ್ಯಾಚ್ ಆಗುತ್ತಿರಲಿಲ್ಲ. ಅಲ್ಲಿ ಇರುವ ಕೆಲವರು ಸಿನಿಮಾವನ್ನು ಅಂದರೆ ಹೀಗೆ.. ಅಂತ ಹೇಳುತ್ತಿದ್ದಾಗ ನಮಗೆ ಸಿನಿಮಾ ಅಂದರೆ ಅದಲ್ಲ.. ಅಂತ ಅನಿಸುತ್ತಿತ್ತು. ನಾವು ಬಂದ ಟೈಂ ನಲ್ಲಿಯೇ ಫಿಲ್ಮ್ ಟು ಡಿಜಿಟಲ್ ಸ್ವೀಚ್ ಆಯ್ತು. ಅದೆಲ್ಲ ನನಗೆ ತುಂಬ ಸಹಾಯ ಆಯ್ತ. ನಾನು ಆನ್ ಲೈನ್ ಸೋಷಿಯಲ್ ಮೀಡಿಯದಲ್ಲಿ ಆಕ್ಟಿವ್ ಆಗಿದೆ. ದುಡ್ಡು ಕೊಟ್ಟು ಆನ್ ಲೈನ್ ನಲ್ಲಿ ನೋಡುವುದು ಕೂಡ ಆಗ ಶುರು ಆಗಿತ್ತು. ಆಮೇಲೆ ಹೋಮ್ ಟಾಕೀಸ್ ಅಂತ ಶುರು ಮಾಡಿದ್ವಿ. ಈ ರೀತಿ ಎಕ್ಸಪೆರಿಮೆಂಟ್ ಮಾಡಿದ್ದು 'ಲೈಫು ಇಷ್ಟೇನೆ' ಸಿನಿಮಾದ ಟೈಂನಲ್ಲಿಯೇ. ನಾನೇನು ಮಾರ್ಕೆಟಿಂಗ್ ಕೋರ್ಸ್ ಮಾಡಿಲ್ಲ. ನಾವು ಮಾಡಿದ ಸಿನಿಮಾವನ್ನು ಹೆಚ್ಚು ಜನರಿಗೆ ರೀಚ್ ಮಾಡಬೇಕು ಎನ್ನುವ ಹಸಿವು ಇದ್ದಾಗ ಎಲ್ಲ ಐಡಿಯಾ ಬರುತ್ತದೆ.''

ಒಂದು ಹಾಡಿನ ಶೂಟಿಂಗ್ ಗಾಗಿ ದುಡ್ಡು ಇರಲಿಲ್ಲ..

ಒಂದು ಹಾಡಿನ ಶೂಟಿಂಗ್ ಗಾಗಿ ದುಡ್ಡು ಇರಲಿಲ್ಲ..

''ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಬರುವ ಮೊದಲ ಹಾಡಿನ ಶೂಟಿಂಗ್ ಗಾಗಿ ದುಡ್ಡು ಇರಲಿಲ್ಲ. ಆಗ ದಿಗಂತ್ ದುಬೈನಲ್ಲಿ ಸುಮ್ಮನೆ ಒಡಾಡಿದ್ದನ್ನೇ ಶೂಟ್ ಮಾಡಿ ಎಡಿಟ್ ಮಾಡಿ ಸಿನಿಮಾದಲ್ಲಿ ಹಾಕಿದೆ. ಅದೇ 'ಲೂಸಿಯ'ದಲ್ಲಿಯೂ ಕ್ಯಾರಿ ಆಯ್ತು. ಈ ಸಿನಿಮಾವನ್ನು ಅದಷ್ಟು ಜನ ನನ್ನ ಸಿನಿಮಾ ನೋಡಬೇಕು ಅಂದಾಗ ಒಂದು ಸಾಹಿತ್ಯ ಸ್ಪರ್ಧೆ ಮಾಡಿದ್ವಿ. ಮನೋಮೂರ್ತಿ ಅವರು ಒಂದು ಟ್ಯೂನ್ ಮಾಡಿದ್ದರು. ಅದು ಸಿನಿಮಾದಲ್ಲಿ ಎಲ್ಲಿಯೂ ಸೂಟ್ ಆಗುತ್ತಿರಲಿಲ್ಲ. ಆಗ ಭಟ್ಟರ ಕೈ ನಲ್ಲಿ ಬರೆಸೋಣ ಅಂತ ಒಡಾಡುತ್ತಿದೆ. ಅವರು 'ಪರಮಾತ್ಮ' ಚಿತ್ರದಲ್ಲಿ ಬಿಜಿ ಇದ್ದರು. ಆಗ ಇದನ್ನು ಹೇಗೆ ಬರೆಸೋಣ ಎಂದಾಗ ಒಂದು ಸಾಹಿತ್ಯ ಸ್ಪರ್ಧೆ ಮಾಡಿದ್ವಿ.''

ಎಷ್ಟೊ ಜನ ನನ್ನ ಮೊದಲ ಸಿನಿಮಾ 'ಲೂಸಿಯ' ಅಂದುಕೊಂಡಿದ್ದಾರೆ

ಎಷ್ಟೊ ಜನ ನನ್ನ ಮೊದಲ ಸಿನಿಮಾ 'ಲೂಸಿಯ' ಅಂದುಕೊಂಡಿದ್ದಾರೆ

''ಎಷ್ಟೊ ಜನ ನನ್ನ ಮೊದಲ ಸಿನಿಮಾ 'ಲೂಸಿಯ' ಅಂತ ತಿಳಿದುಕೊಂಡಿದ್ದಾರೆ. ಆದರೆ ನನ್ನ ಮೊದಲ ಸಿನಿಮಾ 'ಲೈಫು ಇಷ್ಟೇನೆ' ಆಗಿದ್ದು ತುಂಬ ಖುಷಿ ಇದೆ. ಈ ಸಿನಿಮಾದಲ್ಲಿಯೇ ನಾನು ಎಷ್ಟೊ ಮನುಷ್ಯನ ಭಾವನೆಗಳನ್ನು ತೋರಿಸಿದ್ದೇನೆ. ಆ ರೀತಿಯ ಚಿತ್ರ ಇನ್ನೊಂದು ಸಲ ಮಾಡಬೇಕು ಅನಿಸಿತ್ತು. 'ಲೈಫು ಇಷ್ಟೇನೆ' ಬರವಣಿಗೆ 'ಲೂಸಿಯ' ಮತ್ತು 'ಯೂಟರ್ನ್'ಗಿಂತ ಕಷ್ಟ. ಈಗ ಆ ಸಿನಿಮಾ ನೋಡಿದಾಗ ಮೇಕಿಂಗ್ ಇನ್ನು ಬೇಟರ್ ಮಾಡಬಹುದು, ಡೈಲಾಗ್ ಕಡಿಮೆ ಮಾಡಬೇಕು ಅನಿಸಿತ್ತದೆ.''

More from Filmibeat

English summary
Nanna Modala Cinema Series: Kannada director Pawan Kumar spoke about his first movie 'Lifeu Ishtene' in an Exclusive interview with FilmiBeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X