ನನ್ನ ಮೊದಲ ಸಿನಿಮಾ : ಎಲ್ಲೂ ರಿವೀಲ್ ಆಗದ 'A' ಚಿತ್ರದ ರೋಚಕ ಕತೆ

By Naveen

Recommended Video

ದ್ವಾರಕೀಶ್-ಗುರುಕಿರಣ್ ರಿಂದ ಆರಂಭವಾದ ಆಡಿಯೋ ಕಂಪನಿ | FIlmibeat Kannada

ಡಿಫರೆಂಟ್ ಸಿನಿಮಾ ಎನ್ನುವ ಪದಕ್ಕೆ ನಿಜವಾದ ಅರ್ಥ ಕೊಟ್ಟಿದ್ದು 'ಎ' ಸಿನಿಮಾ. ಈ ಸಿನಿಮಾವನ್ನು ಇಂದು ನೋಡಿದರು 'ಏನ್ ಸಿನಿಮಾ ಇದು..' ಎಂದು ಮೈ ರೋಮಾಂಚನ ಆಗುತ್ತದೆ. ಆಗಿದ್ದ ಮೇಲೆ 20 ವರ್ಷದ ಹಿಂದೆ ಅಂದಿನ ಜನ ಈ ಸಿನಿಮಾವನ್ನು ನೋಡಿ ಏನ್ ಹೇಳಿರಬೇಕು ಜಸ್ಟ್ ಊಹಿಸಿಕೊಳ್ಳಿ.

'ಫಿಲ್ಮಿಬೀಟ್ ಕನ್ನಡ'ದ 'ನನ್ನ ಮೊದಲ ಸಿನಿಮಾ' ಲೇಖನ ಸರಣಿಯ ಇಂದಿನ ವಿಶೇಷ ಗುರುಕಿರಣ್ ಅವರ 'ಎ' ಸಿನಿಮಾ. ಗುರುಕಿರಣ್ ಇಂದು 90ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಆದರೆ ಅವರ ಮೊದಲ ಸಿನಿಮಾದ ಮೇಲೆ ಇರುವ ಪ್ರೀತಿ ಇಂದಿಗೂ ಕರಗಿಲ್ಲ.

ಗುರುಕಿರಣ್ ತಮ್ಮ ಸ್ಟೂಡಿಯೋದಲ್ಲಿ ಕುಳಿತು.. ತಮ್ಮ ನೂರಾರೂ ಪ್ರಶಸ್ತಿಗಳ ನಡುವೆ.. 'ಎ' ಸಿನಿಮಾದ ತೆರೆ ಹಿಂದೆ ನಡೆದ ಅನೇಕ ಸತ್ಯ ಘಟನೆಗಳನ್ನು ಹೇಳಿದರು. 'ಎ' ಸಿನಿಮಾದ ರೀತಿ ಗುರುಕಿರಣ್ ಬಿಚ್ಚಿಟ್ಟ ಅನೇಕ ವಿಷಯಗಳು ಸಹ ತುಂಬ ಕುತೂಹಲಕಾರಿ ಆಗಿತ್ತು....

ಮೊದಲ ಸಿನಿಮಾ ಬಹಳ ಮುಖ್ಯ..

ಮೊದಲ ಸಿನಿಮಾ ಬಹಳ ಮುಖ್ಯ..

''ಮೊದಲ ಸಿನಿಮಾ ಯಾರಿಗೆ ಆಗಲಿ ಒಂದು ಇಮೇಜ್ ಕೊಡುತ್ತದೆ. ಹೀರೋಗಳ ರೀತಿ ಒಬ್ಬ ಸಿನಿಮಾ ತಂತ್ರಜ್ಞರಿಗೆ ಕೂಡ ಮೊದಲ ಸಿನಿಮಾ ವರ್ಕ್ ಔಟ್ ಆದರೆ ಮುಂದಿನ ಸಿನಿಮಾಗಳಿಗೆ ಬ್ರಾಂಡ್ ಆಗಿ ಇರುತ್ತಾರೆ. ಅದ್ದರಿಂದ ಮೊದಲ ಸಿನಿಮಾ ಎಲ್ಲರಿಗೂ ತುಂಬ ಮುಖ್ಯ.''

ಆಕ್ಸಿಡೆಂಟ್ ಆಗಿ ಉಪೇಂದ್ರ ಪರಿಚಯ ಆದರು..

ಆಕ್ಸಿಡೆಂಟ್ ಆಗಿ ಉಪೇಂದ್ರ ಪರಿಚಯ ಆದರು..

'ಎ' ಚಿತ್ರದ ಆಕ್ಸಿಡೆಂಟ್ ಆಗೋಗಿದೆ ರೀತಿಯೇ ಉಪೇಂದ್ರ ನನಗೆ ಆಕ್ಸಿಡೆಂಟ್ ಆಗಿ ಪರಿಚಯ ಆದರು. ಆಮೇಲೆ ಉಪೇಂದ್ರ ನನಗೆ ಒಳ್ಳೆ ಸ್ನೇಹಿತ ಆದ್ರು. ಆಗ ಅವರಿಗೆ, ರಾಘವೇಂದ್ರ ರಾಜ್ ಕುಮಾರ್, ಶೈಲೆಂದ್ರ ಬಾಬು ಮತ್ತು ವಿ.ಉಮಾಕಾಂತ್ ಈ ನಾಲ್ಕು ಜನರಿಗೆ ಸಿನಿಮಾ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೆ. ನಂತರ ಉಪೇಂದ್ರ ಅವರ ಕಡೆಯಿಂದ ನಾಲ್ಕು ತಿಂಗಳಿನಲ್ಲಿ ಒಂದು ಆಫರ್ ಬಂತು. ನಾನು ಆಗಲೇ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಆಗಿತ್ತು.. ಯಾವ ಅವಕಾಶವೂ ಇರಲಿಲ್ಲ. ಸೋ, ಇದೆಲ್ಲ ಬೇಡ ಅಂತ ಮಂಗಳೂರಿನಲ್ಲಿ ಒಂದು ರೆಸ್ಟೋರೆಂಟ್ ಇಡೋಣ ಅಂತ ಇದ್ದೇ. ಆದರೆ ಲಾಸ್ಟ್ ಟ್ರೈ ನೋಡೊಣ ಅಂತ 'ಎ' ಸಿನಿಮಾ ಮಾಡಿದ್ದು. ಅಲ್ಲಿಂದ ನನ್ನ ಜರ್ನಿ ಶುರು ಆಯ್ತು.''

'ಎ' ಹಾಡುಗಳು ಇಷ್ಟ ಆದರೂ ಆಫರ್ ಬರಲಿಲ್ಲ..

'ಎ' ಹಾಡುಗಳು ಇಷ್ಟ ಆದರೂ ಆಫರ್ ಬರಲಿಲ್ಲ..

''ಉಪೇಂದ್ರ ಮತ್ತು ನಾನು ಸೇರಿದರೆ ಏನೋ ಕೆಮಿಸ್ಟಿ ವರ್ಕ್ ಆಗುತ್ತಿತ್ತು. ಆ ಸಿನಿಮಾದಿಂದ ಡಿಫರೆಂಟ್ ಮ್ಯೂಸಿಕ್ ಡೈರೆಕ್ಟರ್ ಅಂತ ನನ್ನನ್ನು ಕರೆದರು. 'ಎ' ಹಾಡುಗಳು ಇಷ್ಟ ಆದರೂ ನನಗೆ ಹೆಚ್ಚು ಆಫರ್ ಬರಲಿಲ್ಲ. ಆಗ ಸುಮ್ಮನೆ ಊರಿಗೆ ಹೋಗಿದೆ. ಮತ್ತೆ ಉಪ್ಪಿ ತಮ್ಮ 'ಉಪೇಂದ್ರ' ಸಿನಿಮಾಗೆ ಕರೆದರು. ಮುಂದೆ ನನ್ನ ಎಲ್ಲ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗುತ್ತಿತ್ತು. ಒಂದು ಸಲ ಒಬ್ಬ ಡೈರೆಕ್ಟರ್ ಬಂದು ಅವರ ಚಿತ್ರಕ್ಕೆ ಎರಡೇ ಎರಡು ಹಿಟ್ ಹಾಡು ಕೊಡಿ ಸರ್ ಸಾಕು... ಎಂದು ಹೇಳಿದರು. ನಾನು ನನಗೆ ಐದಕ್ಕೆ ಐದು ಹಿಟ್ ಕೊಟ್ಟೆ ಅಭ್ಯಾಸ ಅಂತ ಉತ್ತರಿಸಿದೆ.''

ಮೊದಲ ದಿನವೇ ಹಾಡು ಓಕೆ ಆಯ್ತು..

ಮೊದಲ ದಿನವೇ ಹಾಡು ಓಕೆ ಆಯ್ತು..

''ಈ ಚಿತ್ರದಲ್ಲಿ ಮೊದಲು ಟ್ಯೂನ್ ಮಾಡಿ ಹಾಡು ಮಾಡಿದ್ದು. ಕಥೆಯ ಜೊತೆಗೆ ಹಾಡು ಮಾಡಿಕೊಂಡು ಬಂದ್ವಿ. ಕಥೆ ಡಿಸ್ಕಷನ್, ಲೊಕೇಷನ್ ನೋಡುವ ಸಮಯದಲ್ಲಿಯೇ ಹಾಡು ಮಾಡುತ್ತಾ ಹೋಗಿದ್ದು. 'ಸುಮ್ ಸುಮ್ನೆ ನಗ್ತಾಳೆ..' ಹಾಡನ್ನು ಕೆಲಸ ಶುರು ಮಾಡಿದ ಮೊದಲ ದಿನವೇ ಮಾಡಿದೆ. ಫಸ್ಟ್ ಡೇನೆ ಹಾಡು ಓಕೆ ಆಯ್ತು. ಈ ಇಡೀ ಸಿನಿಮಾನೇ ತುಂಬ ಫನ್ ಇತ್ತು.''

ನಾವೇ ಗೋಡೆಗಳಿಗೆ ಪೋಸ್ಟರ್ ಅಂಟಿಸಿದ್ದು..

ನಾವೇ ಗೋಡೆಗಳಿಗೆ ಪೋಸ್ಟರ್ ಅಂಟಿಸಿದ್ದು..

''ನಾವೆಲ್ಲ ಹಳೆಯ ಸ್ನೇಹಿತರು. ಸಿನಿಮಾಗಿಂತ ಸ್ನೇಹಕ್ಕಾಗಿ ಇಲ್ಲಿ ಕೆಲಸ ಮಾಡಿದ್ವಿ. ಸಾಂಗ್ ರೆಕಾರ್ಡಿಂಗ್ ನಿಂದ ಹಿಡಿದು ಪೋಸ್ಟರ್ ಅಂಟಿಸುವವರೆಗೆ ಜೊತೆಗೆ ಇದ್ವಿ. ರಿಲೀಸ್ ಹತ್ತಿರ ಬರುತ್ತಿರುವಾಗ ಗೋಡೆಗಳಿಗೆ ಪೋಸ್ಟರ್ ಅಂಟಿಸುವುದು ಬ್ಯಾನ್ ಆಗಿತ್ತು. ಪೋಸ್ಟರ್ ಇಲ್ಲದೆ ಹೇಗೆ ಪಬ್ಲಿಸಿಟಿ ಆಗುತ್ತದೆ ಎಂದು ನಾವೇ ಕದ್ದು ಹೋಗಿ ಗೋಡೆಗಳಿಗೆ 'ಎ' ಚಿತ್ರದ ಪೋಸ್ಟರ್ ಹಚ್ಚಿ ಬಂದಿದ್ವಿ.''

ನಾನೇ ಕ್ಯಾಸೆಟ್ ಅಂಗಡಿಗೆ ಹೋಗಿ ಹೇಳುತ್ತಿದೆ..

ನಾನೇ ಕ್ಯಾಸೆಟ್ ಅಂಗಡಿಗೆ ಹೋಗಿ ಹೇಳುತ್ತಿದೆ..

''ಎ' ಹಾಡುಗಳು ದೊಡ್ಡ ಹಿಟ್ ಆಗಲಿ ಎನ್ನುವ ಕನಸು ನನಗೆ ಇರಲಿಲ್ಲ. ನಾಲ್ಕು ಜನ ನನ್ನ ಹಾಡುಗಳನ್ನು ಕೇಳಿ ಹೊಗಳಲಿ ಎನ್ನುವುದು ಇತ್ತು ಅಷ್ಟೆ. ಚಿತ್ರದ ಆಡಿಯೋ ರಿಲೀಸ್ ಆದಾಗ ನಾನೇ ಕ್ಯಾಸೆಟ್ ಅಂಗಡಿಗಳಿಗೆ ಹೋಗಿ 'ಹೊಸದಾಗಿ ಯಾವ ಸಿನಿಮಾ ಹಾಡುಗಳು ಬಂದಿದೆ.. ಎ ಸಿನಿಮಾ ಹಾಡುಗಳು ಹೇಗಿದೆ..?' ಎಂದು ಸುಮ್ಮನೆ ಅವರಿಗೆ ಕೇಳುತ್ತಿದೆ. ಅವರು 'ಸೂಪರ್ ಆಗಿದೆ ಸರ್.. ಆದರೆ ಎ ಅಂತ ಟೈಟಲ್ ಇಟ್ಟಿದ್ದಾರೆ..' ಅಂದರು. ಆಮೇಲೆ 'ಮರಿಕಣ್ಣು ಹೋರಿ ಮ್ಯಾಲೆ..' ಕ್ರೇಜ್ ಶುರು ಆಗಿತ್ತು. ಆಗ ನನ್ನ ಮುಂದೆಯೇ ಎಷ್ಟೊ ಜನ 'ಎ ಸಿನಿಮಾಗೆ ಸಖತ್ ಮ್ಯೂಸಿಕ್ ಹೊಡೆದವನೇ..' ಅಂತ ಹೊಗಳುತ್ತಿದ್ದರು. ಅದು ತುಂಬ ಖುಷಿ ಕೊಟ್ಟ ಕ್ಷಣ.''

ಸುದೀಪ್ ಫಸ್ಟ್ ಡೇ ಸಿನಿಮಾ ನೋಡಿದ್ದ..

ಸುದೀಪ್ ಫಸ್ಟ್ ಡೇ ಸಿನಿಮಾ ನೋಡಿದ್ದ..

''ಮೊದಲ ದಿನ ಸುದೀಪ್ 'ಎ' ಸಿನಿಮಾ ನೋಡಿದ್ದ. ಸುದೀಪ್ ನಾನು ಹಿಂದಿನಿಂದ ತುಂಬ ಒಳ್ಳೆಯ ಫ್ರೆಂಡ್ಸ್. ಇಬ್ಬರು ಒಟ್ಟಿಗೆ ಆಕ್ಟಿಂಗ್ ಅವಕಾಶ ಕೇಳುವುದಕ್ಕೆ ಎಲ್ಲ ಕಡೆ ಹೋಗುತ್ತಿದ್ವಿ. ಆಗ ಸುದೀಪ್ ಫಸ್ಟ್ ಡೇ ಸಿನಿಮಾ ನೋಡಿ ನನ್ನ ಹಾಡು ಕೇಳಿ, 'ಗುರು ನೀನು ಈ ಚಿತ್ರದಿಂದ ನಿಂತುಕೊಂಡೆ ಬಿಡು..' ಎಂದು ಹೇಳಿದ. ಸಿನಿಮಾ ಹಿಟ್ ಆದ ಮೇಲೆ ಇಂಡಸ್ಟ್ರಿ ಅವರು ಸಹ ಮಾತನಾಡಿದರು.''

ತಮಿಳುನಾಡಿನಲ್ಲಿ ನಮಗೆ ಟ್ಯಾಲೆಂಟ್ ಕಡಿಮೆ ಅಂದುಕೊಂಡಿದ್ದರು..

ತಮಿಳುನಾಡಿನಲ್ಲಿ ನಮಗೆ ಟ್ಯಾಲೆಂಟ್ ಕಡಿಮೆ ಅಂದುಕೊಂಡಿದ್ದರು..

''ಆ ಟೈಂ ನಲ್ಲಿ ಸ್ಯಾಕ್ಸ್ ರಾಜ ಅವರು ತುಂಬ ಫೇಮಸ್ ಆಗಿದ್ದರು. ಅವರು 'ಎ' ಹಾಡುಗಳನ್ನು ಕೇಳಿ ಬೇರೆ ಒಂದು ಸಿನಿಮಾಗೆ ನನ್ನ ಹೆಸರು ರೆಫರ್ ಮಾಡಿದ್ದರು. ಬೇರೆ ಮ್ಯೂಸಿಕ್ ಡೈರೆಕ್ಟರ್ ಬೇಡ ಈ ಚಿತ್ರಕ್ಕೆ ಗುರುಕಿರಣ್ ಹಾಕಿಕೊಳ್ಳಿ ಎಂದು ಹೇಳಿದ್ದರು. ಅಂತಹ ದೊಡ್ಡ ಸಂಗೀತಗಾರ ಅವರ ಆಲ್ಬಂ ಗೆ ನನ್ನ ಹೆಸರು ರೆಫರ್ ಮಾಡಿದ್ದು ಮರೆಯೋಕ್ಕೆ ಆಗಲ್ಲ. ಆಗ ತಮಿಳುನಾಡಿನಲ್ಲಿ ಕರ್ನಾಟಕದವರು ಅಂದರೆ ಅವರಿಗೆ ಟ್ಯಾಲೆಂಟ್ ಕಡಿಮೆ ಅಂತ ಅಂದುಕೊಂಡಿದ್ದರು.''

ಅರ್ಥ ಆಗಲ್ಲ ಎನ್ನುವುದು ಬೇರೆ.. ಅರ್ಥ ಮಾಡಿಕೊಳ್ಳುವುದಕ್ಕೆ ಇಷ್ಟ ಇಲ್ಲ ಎನ್ನುವುದು ಬೇರೆ...

ಅರ್ಥ ಆಗಲ್ಲ ಎನ್ನುವುದು ಬೇರೆ.. ಅರ್ಥ ಮಾಡಿಕೊಳ್ಳುವುದಕ್ಕೆ ಇಷ್ಟ ಇಲ್ಲ ಎನ್ನುವುದು ಬೇರೆ...

''ಎ ನಲ್ಲಿ ನಾವು ಕಥೆ ಜೊತೆ ಇದ್ವಿ. ಕಥೆ ಬೇರೆ ನಾವೇ ಬೇರೆ ಅಂತ ನಮಗೆ ಅನಿಸಿರಲ್ಲ. ಈ ಚಿತ್ರ ಅರ್ಧ ಆಗಲ್ಲ ಅಂತ ಹೇಳುತ್ತಾರೆ. ಕೆಲವರಿಗೆ ಏನು ಹೇಳಿದರು ಅರಗಿಸಿಕೊಳ್ಳುವುದಕ್ಕೆ ಆಗಲ್ಲ. ಅರ್ಥ ಆಗಲ್ಲ ಎನ್ನವುದು ಬೇರೆ.. ಆದರೆ ಅರ್ಥ ಮಾಡಿಕೊಳ್ಳುವುದಕ್ಕೆ ಇಷ್ಟ ಇಲ್ಲ ಎನ್ನುವುದು ಬೇರೆ... ಮನಸಿಲ್ಲ ಅಂದರೆ ಯಾವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆಗಲ್ಲ. ಆ ಸಿನಿಮಾ ತುಂಬ ಸಿಂಪಲ್ ಆಗಿ ಇತ್ತು. ಪ್ರೀತಿ ಮತ್ತು ಪ್ರಾಕ್ಟಿಕಾಲಿಟಿ ನಡುವೆ ಚಿತ್ರದ ಕಥೆ ಇತ್ತು. ನಾವು ಕಥೆ ಜೊತೆಗೆ ಇದ್ದಾಗ ಹಾಡು ಕೂಡ ಅಷ್ಟೇ ಚೆನ್ನಾಗಿ ಬಂತು.''

ಫಸ್ಟ್ ಡೇ ಜನ ಇರುತ್ತಾರ.. ಇಲ್ವಾ.. ನಮಗೆ ಗೊತ್ತಿರಲಿಲ್ಲ..

ಫಸ್ಟ್ ಡೇ ಜನ ಇರುತ್ತಾರ.. ಇಲ್ವಾ.. ನಮಗೆ ಗೊತ್ತಿರಲಿಲ್ಲ..

''ರಿಲೀಸ್ ಹಿಂದೆ ದಿನ ತುಂಬ ಟೆನ್ಷನ್ ಇತ್ತು. ಫಸ್ಟ್ ಡೇ ಜನ ಇರುತ್ತಾರ.. ಇಲ್ವಾ.. ಅಂತ ನಮಗೆ ಗೊತ್ತಿರಲಿಲ್ಲ. ಮೊದಲ ದಿನ ನಾನು ಉಪೇಂದ್ರ ಜೊತೆಗೆ ಮೂರ್ನಾಲ್ಕು ಚಿತ್ರಮಂದಿರಕ್ಕೆ ಹೋಗಿದ್ವಿ. ಹೊದ ತಕ್ಷಣ ಉಪೇಂದ್ರ ಅವರನ್ನು ಜನ ಮುತ್ತಿಕೊಂಡರು. ಅಂದು ಒಬ್ಬ ಸ್ಟಾರ್ ಹುಟ್ಟಿದ ದಿನ. ಚಿತ್ರಮಂದಿರದಿಂದ ಬರುವವರು 'ಮಾರಿಕಣ್ಣು..' ಅಂತ ಕೂಗುತ್ತಾ ಜನ ಬರುತ್ತಿದ್ದರು. ಮಾರ್ನಿಂಗ್ ಶೋ ದಿಂದ ಸಂಜೆ ಶೋ ಒಳಗೆ ಆದ ವ್ಯತ್ಯಾಸ ಗೊತ್ತಾಯ್ತು. ಬೆಳ್ಳಗೆಗಿಂತ ಸಂಜೆ ಶೋ ಗಳಿಗೆ ಜನ ಜಾಸ್ತಿ ಆಗಿ ಗಲಾಟೆ ಆಗಿತ್ತು. ಅದನ್ನೆಲ್ಲ ಯಾವತ್ತು ಮರೆಯೋಕ್ಕೆ ಆಗಲ್ಲ.''

'ಎ' ಸಿನಿಮಾವನ್ನು ಲಾಂಚ್ ಮಾಡಿದ್ದು ಒಬ್ಬ ಪ್ರೇಕ್ಷಕ..

'ಎ' ಸಿನಿಮಾವನ್ನು ಲಾಂಚ್ ಮಾಡಿದ್ದು ಒಬ್ಬ ಪ್ರೇಕ್ಷಕ..

''ಎ ಚಿತ್ರದ ಮುಹೂರ್ತ ಆದಾಗ ನಾನು ಆ ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್ ಆಗಿಲಿಲ್ಲ ಅದಕ್ಕೆ ಬೇರೆ ಒಬ್ಬರು ಇದ್ದರು. ಉಪೇಂದ್ರ ಫ್ರೆಂಡ್ ಆಗಿ ನಾನು ಮುಹೂರ್ತಕ್ಕೆ ಹೋಗಿದೆ. ಉಪ್ಪಿ ಮುಹೂರ್ತದ ಆಮಂತ್ರಣ ಪತ್ರಿಕೆಯಲ್ಲಿ ಒಬ್ಬ 'ಸ್ಟಾರ್ ಮೇಕರ್' ರಿಂದ 'ಎ' ಸಿನಿಮಾ ಲಾಂಚ್ ಆಗುತ್ತೆ ಎಂದು ಹಾಕಿಸಿದ್ದರು. ಎಲ್ಲರೂ ಕೂಡ ಮಣಿರತ್ನಂ, ಸುಭಾಶ್ ಗೈ ರೀತಿಯ ಯಾರೋ ದೊಡ್ಡ ನಿರ್ದೇಶಕರು ಬರುತ್ತಾರೆ ಎಂದುಕೊಂಡಿದ್ದರು. ನನಗೂ ಕೂಡ ಯಾರು ಬರ್ತಾರೆ ಗೊತ್ತಿರಲಿಲ್ಲ. ಎಲ್ಲರೂ ಕಾದು ನೋಡುತ್ತಿದ್ದಾಗ ಅಲ್ಲಿಯೇ ಪಕ್ಕದ ಚಿತ್ರಮಂದಿರದಲ್ಲಿ ಟಿಕೆಟ್ ಗಾಗಿ ಕಾದು ನಿಂತಿದ್ದ ಒಬ್ಬ ವ್ಯಕ್ತಿಯನ್ನು ಕರೆದು ತಂದು ಅವನ ಕೈ ನಲ್ಲಿ ಸಿನಿಮಾ ಲಾಂಚ್ ಮಾಡಿಸಿದರು. ಒಬ್ಬ ನಿಜವಾದ ಸ್ಟಾರ್ ಮೇಕರ್ ಒಬ್ಬ ಪ್ರೇಕ್ಷಕ ಎಂದು ಉಪ್ಪಿ ಈ ಚಿತ್ರವನ್ನು ಅವರ ಕೈ ನಲ್ಲಿಯೇ ಲಾಂಚ್ ಮಾಡಿಸಿದರು.''

ಎ ಪೋಸ್ಟರ್ ವಿಚಿತ್ರವಾಗಿ ಇತ್ತು..

ಎ ಪೋಸ್ಟರ್ ವಿಚಿತ್ರವಾಗಿ ಇತ್ತು..

''ನಾನು, ಉಪ್ಪಿ, ಹೆಚ್.ಸಿ.ವೇಣು, ಹಿರೋಯಿನ್ ಹೀಗೆ.. 'ಎ' ಸಿನಿಮಾದಿಂದ ಎಷ್ಟೋ ಜನರು ಹುಟ್ಟಿಕೊಂಡರು. ಆಗ ಸಿನಿಮಾ ಬಂದಾಗ ಚೆನ್ನಾಗಿದ್ದರು ಕೆಲವರು ಏನೇನೋ ಹೇಳುತ್ತಿದ್ದರು. 'ಎ' ಎಂದು ಹೆಸರಿಟ್ಟಾಗ ಭಯ ಇತ್ತು. ಆದರೆ 'ಬುದ್ಧಿವಂತರಿಗೆ ಮಾತ್ರ' ಎನ್ನುವ ಕ್ಯಾಪ್ಷನ್ ಚೆನ್ನಾಗಿ ವರ್ಕ್ ಆಯ್ತು. 'ಎ' ಚಿತ್ರದ ಪೋಸ್ಟರ್ ಡಿಸೈನ್ ತುಂಬ ವಿಭಿನ್ನವಾಗಿತ್ತು. ಅದು ಸಿನಿಮಾಗೆ ದೊಡ್ಡ ಪಬ್ಲಿಸಿಟಿ ಆಗಿತ್ತು. ನಾಗಭೂಷಣ್ ಅಂತ ತುಂಬ ಚೆನ್ನಾಗಿ ಮಾಡಿದ್ದರು. ಆ ಪೋಸ್ಟರ್ ಗಳನ್ನು ನೋಡಿ ಜನ ತಲೆಕೊಡಿಸಿಕೊಂಡರು. ಆಗೆಲ್ಲ ಪೋಸ್ಟರ್ ಎಂದರೆ ಹೀರೋ ಹಿರೋಯಿನ್ ಮುಖ ಅದಕ್ಕೆ ಒಂದಷ್ಟು ಬಣ್ಣ ಇರುತ್ತಿತ್ತು. ಆದರೆ 'ಎ' ಪೋಸ್ಟರ್ ವಿಚಿತ್ರವಾಗಿ ಇತ್ತು.''

ಹಾಡು ಹಾಡಿಸೋಕ್ಕೆ ದುಡ್ಡು ಇರಲಿಲ್ಲ..

ಹಾಡು ಹಾಡಿಸೋಕ್ಕೆ ದುಡ್ಡು ಇರಲಿಲ್ಲ..

''ಮೊದಲು 'ಹೇಳ್ಕೋಳೋಕೆ ಒಂದೂರು..' ಹಾಡಿನ ಜಾಗಕ್ಕೆ 'ಮಾರಿಕಣ್ಣು..' ಹಾಡು ಇತ್ತು. 'ಮಾರಿಕಣ್ಣು..' ಜಾಗಕ್ಕೆ ಬೇರೆ ಒಂದು ಸಾಂಗ್ ಇತ್ತು. ನಾಳೆ ರೆಕಾರ್ಡಿಂಗ್ ಅಂದರೆ ಇವತ್ತು ಹಾಡು ಮಾಡೋಕ್ಕೆ ಹೇಳಿದ್ದರು. 'ಹೇಳ್ಕೋಳೋಕೆ ಒಂದೂರು..' ಹಾಡು 20 ನಿಮಿಷದಲ್ಲಿ ರೆಕಾರ್ಡ್ ಮಾಡಿದ್ದು. ಚಿತ್ರದ ಕೆಲವು ಹಾಡುಗಳನ್ನು ಹಾಡಿಸೋಕ್ಕೆ ದುಡ್ಡು ಇರಲಿಲ್ಲ. ಮೊದಲು ಎಲ್ಲ ಹಾಡುಗಳ ಟ್ರಾಕ್ ಅನ್ನು ಎಲ್ ಎನ್ ಶಾಸ್ತಿ ಹಾಡಿದ್ದರು. ರಾಜೇಶ್ ಕೃಷ್ಣನ್ ನನ್ನ ಸ್ನೇಹಿತ ಆಗಿದ್ದರಿಂದ ಪೇಮೆಂಟ್ ಇಲ್ಲದೆ ಒಂದು ಹಾಡು ಹಾಡಿದ. ಶಾಸ್ತಿ ಹಾಡಿದ ಮೂರು ಟ್ರಾಕ್ ಹಾಡನ್ನು ಹಾಗೆ ಉಳಿಸಿಕೊಂಡೆವು. 13, 15 ಸಾವಿರದಲ್ಲಿ ಒಂದು ಹಾಡನ್ನು ಮಾಡಿದ್ವಿ. ಎಸ್ ಪಿ ಬಿ ಅವರು 'ಮಾರಿಕಣ್ಣು..' ಹಾಡನ್ನು ಹಾಡಿದ್ರು.''

'ಎ' ಸಿನಿಮಾ ನನ್ನ ಲೈಫ್

'ಎ' ಸಿನಿಮಾ ನನ್ನ ಲೈಫ್

''ನನಗೆ 'ಎ' ಸಿನಿಮಾ ಲೈಫ್. ಇವತ್ತು ಜನ ನನ್ನನ್ನು ಗುರುತಿಸಬೇಕಾದರೆ ಅದಕ್ಕೆ ಮುಖ್ಯ ಕಾರಣ 'ಎ'. ಇಂಗ್ಲೀಷ್ ನಲ್ಲಿ ಮೊದಲ ಅಕ್ಷರ 'A' ಅದೇ ರೀತಿ ನನ್ನ ಮೊದಲ ಸಿನಿಮಾ 'ಎ'. ಈ ಸಿನಿಮಾ ನನ್ನ ಪಾಲಿಗೆ ಆ ಸಿನಿಮಾದ ನೆನಪು ಎಂದಿಗೂ ಇರುತ್ತದೆ.''

More from Filmibeat

English summary
Nanna Modala Cinema Series: Kannada music director Gurukiran spoke about his first movie 'A' in an Exclusive interview with FilmiBeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X