'ಫಿಲ್ಮಿಬೀಟ್' ವಿಶೇಷ; 'ಅಕಿರ' ನಾಯಕ ಅನೀಶ್ ಸಂದರ್ಶನ
ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಸೌಂಡ್ ಮಾಡುತ್ತಿರುವ, ಬಹುನಿರೀಕ್ಷೆ ಹುಟ್ಟಿಸಿರುವ 'ಅಕಿರ' ಚಿತ್ರ ನಾಳೆ ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. 'ಪೊಲೀಸ್ ಕ್ವಾಟರ್ಸ್' ಖ್ಯಾತಿಯ ನಟ ಅನೀಶ್ ತೇಜೇಶ್ವರ್ ನಾಯಕನಾಗಿ, ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಚಿತ್ರ 'ಅಕಿರ'.
'ಅಕಿರ' ಚಿತ್ರದ ಪ್ರಚಾರ ನಿಮಿತ್ತ ನಾಯಕ ಅನೀಶ್ ತೇಜೇಶ್ವರ್, ನಾಯಕಿ ಅದಿತಿ ರಾವ್, ಕ್ರಿಷಿ ತಪಂಡಾ 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿದ್ರು. 'ಅಕಿರ' ಚಿತ್ರದ ಬಗ್ಗೆ ಅನೀಶ್ ತೇಜೇಶ್ವರ್ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.....

'ಅಕಿರ' ಅಂದ್ರೇನು?
'ಅಕಿರ' ಅಂದ್ರೆ ಏನು ಅನ್ನೋದು ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಗೊತ್ತಾಗುತ್ತೆ. ಚಿತ್ರದ ಸಸ್ಪೆನ್ಸ್ ಅದೇ. ನಾಳೆ ಮಿಸ್ ಮಾಡದೆ 'ಅಕಿರ' ನೋಡಿ...
ಅನೀಶ್ ತೇಜೇಶ್ವರ್ ಗೆ 'ಅಕಿರ' ಸಿನಿಮಾ ಎಷ್ಟು ಮುಖ್ಯ?
ಇದು ನನ್ನ ಲೈಫ್. ಇದರಿಂದಲೇ ನನಗೆ ದಾರಿ ಆಗಬೇಕು. ಒಂದುವರೆ ವರ್ಷ 'ಅಕಿರ' ಚಿತ್ರಕ್ಕಾಗಿ ನಾನು ಡೆಡಿಕೇಟ್ ಮಾಡಿದ್ದೀನಿ. 'ಅಕಿರ' ಸಿನಿಮಾದಿಂದ ನನಗೆ ಒಳ್ಳೆಯ ಹೆಸರು ಬಂದೇ ಬರುತ್ತೆ ಎಂಬ ನಂಬಿಕೆ ನನ್ನಲ್ಲಿದೆ. [ಈ ವಾರ ತೆರೆಗೆ ಬರುತ್ತಿದೆ ಬಹುನಿರೀಕ್ಷಿತ ಸಿನಿಮಾ 'ಅಕಿರ']

ನಿಮ್ಮ ಸಿಕ್ಸ್ ಪ್ಯಾಕ್ ನೋಡಿ, 'ಅಕಿರ' ಚಿತ್ರಕ್ಕೆ ಡೈರೆಕ್ಟರ್ ಸೆಲೆಕ್ಟ್ ಮಾಡಿದ್ರಂತೆ. ಹೌದಾ..?
ಇಲ್ಲ..'ಅಕಿರ' ಚಿತ್ರಕ್ಕಾಗಿ ನಾನು ಸಿಕ್ಸ್ ಪ್ಯಾಕ್ ಮಾಡಿದ್ದು. ಮುಂಚಿನಿಂದ್ಲೂ ನಾನು ವರ್ಕೌಟ್ ಮಾಡುತ್ತಿದೆ. ಆದ್ರೆ, 'ಅಕಿರ' ಸ್ಕ್ರಿಪ್ಟ್ ಗೆ ಸಿಕ್ಸ್ ಪ್ಯಾಕ್ ಬೇಕಾಗಿತ್ತು. ಹೀಗಾಗಿ, ದಿನಕ್ಕೆ ಮೂರು ಬಾರಿ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿದೆ.
'ಅಕಿರ' ಚಿತ್ರದಲ್ಲಿ ನಿಮ್ಮ ಪಾತ್ರ...
ತುಂಬಾ ಸ್ಟೈಲಿಶ್ ಹೀರೋ. ಆಗಷ್ಟೆ ಓದು ಮುಗಿಸಿರುವ ಶ್ರೀಮಂತ ಹುಡುಗನ ಪಾತ್ರ ನನ್ನದು. ['ಅಕಿರ' ಚಿತ್ರದ ಕಥೆಗೆ ಕ್ಲೀನ್ ಬೌಲ್ಡ್ ಆದ ನಾಯಕಿಯರು.!]

ನಾರ್ವೆ (Land of Rising Sun) ಯಲ್ಲಿ ಶೂಟಿಂಗ್ ಅನುಭವ ಸ್ವಲ್ಪ ಹಂಚಿಕೊಳ್ಳಬಹುದಾ...
ಅಲ್ಲಿ, Sun ಇರಲೇ ಇಲ್ಲ. ನಾವು ಅಲ್ಲಿಗೆ ಹೋದಾಗ -6 ಡಿಗ್ರಿ ಇತ್ತು. ಅಷ್ಟು ಚಳಿ. ಅಲ್ಲಿ ಸಾಂಗ್ ಶೂಟ್ ಮಾಡಿದ್ವಿ. ತುಂಬಾ ಕಷ್ಟ ಆಯ್ತು. ಆದ್ರೀಗ, ಸಾಂಗ್ ನೋಡಿದ್ರೆ, ತುಂಬಾ ಖುಷಿ ಆಗುತ್ತೆ. ಅದೇ ಹಾಡಿಗೆ ಅಪ್ಪು ಸರ್ ವಾಯ್ಸ್ ಕೊಟ್ಟಿದ್ದಾರೆ. ಇಡೀ ಹಾಡು ಒಂದು ಪೇಂಟಿಂಗ್ ತರಹ ಕಾಣುತ್ತೆ. ನನ್ನ ಕೆರಿಯಲ್ ನಲ್ಲಿ ಇದು ಬೆಸ್ಟ್ ಸಾಂಗ್.
ನಿಮ್ಮ ಚಿತ್ರದ ಹಾಡಿಗೆ ಪುನೀತ್ ರಾಜ್ ಕುಮಾರ್ ದನಿಯಾಗಿದ್ದು ಹೇಗೆ...
ನಾವು ಮೊದಲು ನಾರ್ವೆಯಲ್ಲಿ ಸಾಂಗ್ ಶೂಟಿಂಗ್ ಮುಗಿಸಿಕೊಂಡು ಬಂದ್ವಿ. ಆಮೇಲೆ, ಅದನ್ನ ಪುನೀತ್ ಸರ್ ಗೆ ತೋರಿಸಿದ್ವಿ. ತಕ್ಷಣ ಅವರು ಹಾಡುವುದಕ್ಕೆ ಒಪ್ಪಿಕೊಂಡರು. ಮಾರನೇ ದಿನವೇ ರೆಕಾರ್ಡಿಂಗ್ ಮಾಡಿಕೊಟ್ಟರು. ಆ ಹಾಡು ಅಪ್ಪು ಸರ್ ಗೆ ತುಂಬಾ ಇಷ್ಟವಾಗಿದೆ.

'ಅಕಿರ' ಚಿತ್ರದ ಸಂಗೀತದ ಬಗ್ಗೆ...
ಅಜನೀಶ್ ಲೋಕನಾಥ್ ತುಂಬಾ ಚೆನ್ನಾಗಿ ಮ್ಯೂಸಿಕ್ ಮಾಡಿದ್ದಾರೆ. ಅವರು ಅಷ್ಟು ಒಳ್ಳೆ ಸಂಗೀತ ನೀಡಿದ್ದಕ್ಕೆ ನಾವು ಒಳ್ಳೆ ಲೋಕೇಷನ್ಸ್ ಹುಡುಕಿ ಶೂಟಿಂಗ್ ಮಾಡಿದ್ದೀವಿ, ಗ್ರ್ಯಾಂಡ್ ಸೆಟ್ ಹಾಕಿದ್ದೀವಿ. ಅಜನೀಶ್ ಕೊಟ್ಟ ಸಂಗೀತದಿಂದ ಚಿತ್ರದ ಬಜೆಟ್ ಜಾಸ್ತಿ ಆಯ್ತು.
'Its your love story' ಅಂತಿದೆ. ಯಾರ ಲವ್ ಸ್ಟೋರಿ.?
'ಅಕಿರ' ಸಿನಿಮಾ ನೋಡುವಾಗ, ಇದು ನನ್ನ ಜೀವನದಲ್ಲಿ ನಡೆದಿತ್ತು ಅಲ್ವಾ ಅಂತ ಎಲ್ಲರ ಮನಸ್ಸಲ್ಲಿ ಬಂದೇ ಬರುತ್ತೆ. ಅದಕ್ಕೆ 'Its your love story' ಅಂತ ಹಾಕಿದ್ದೀವಿ.

'ಅಕಿರ' ಚಿತ್ರ ನಾಳೆ ಬಿಡುಗಡೆ ಆಗುತ್ತಿದೆ. ನಮ್ಮ ಓದುಗರಿಗೆ ಏನು ಹೇಳ್ತೀರಾ?
'ಅಕಿರ' ಖಂಡಿತವಾಗಲೂ ಒಂದೊಳ್ಳೆ ಸಿನಿಮಾ. ಒಳ್ಳೆ ಪ್ರಯತ್ನ. ಕನ್ನಡಿಗರು ನಮ್ಮ ಸಿನಿಮಾ ನೋಡಿ, ನಮಗೆ ಆಶೀರ್ವಾದ ಮಾಡಬೇಕು. ಕನ್ನಡ ಚಿತ್ರಗಳಿಗೆ ಸಪೋರ್ಟ್ ಮಾಡಬೇಕು ಅಂತ ಕೇಳಿಕೊಳ್ಳುತ್ತೇನೆ.
ಸಂದರ್ಶನ - ಹರ್ಷಿತಾ ರಾಕೇಶ್


Click it and Unblock the Notifications











