ಮದುವೆಯ ಹುಡುಗಿ ಅಣ್ಣಮ್ಮನ ಸ್ಟೆಪ್ ಹಾಕಿದ್ರೆ ಹೇಗಿರಬಹುದು?
ಸಾಮಾನ್ಯವಾಗಿ ಇಲ್ಲಿಯವರೆಗೆ ಬಂದಿರುವ ಎಲ್ಲಾ ಸಿನಿಮಾಗಳಲ್ಲಿ ಸದಾ ಪುಟ್ಟ ಹುಡುಗಿಯಂತೆ ಚೆಲ್ಲು ಚೆಲ್ಲಾಗಿ ಆಡುತ್ತಿದ್ದ ನಟಿ ಅಮೂಲ್ಯಾ ಅವರು ಈ ಸಿನಿಮಾದಲ್ಲಿ ಮಾತ್ರ ತುಂಬಾ ಗಂಭೀರವಾಗಿ ಅಪ್ಪ-ಅಮ್ಮನ ಮುದ್ದು ಮಗಳಾಗಿ, ಗಂಡುಬೀರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ನಟಿ ಅಮೂಲ್ಯ ಅವರು ಇದೇ ಮೊದಲ ಬಾರಿಗೆ ಅಣ್ಣಮ್ಮನ ಸ್ಟೆಪ್ ಹಾಕುವ ಮೂಲಕ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಇನ್ನು ಸಿನಿಮಾದಲ್ಲಿ ಅಮೂಲ್ಯ ಅವರ ಪಾತ್ರದ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ, ಮುಂದೆ ಓದಿ..
* ಈ ಸಿನಿಮಾದಲ್ಲಿ ನಿಮ್ಮ ಪಾತ್ರ ಏನು?
- ನನ್ನದು ಈ ಸಿನಿಮಾದಲ್ಲಿ ಗಂಡುಬೀರಿ ಪಾತ್ರ. ವೆಲ್ ಸೆಟಲ್ ಅಗಿರೋ ತುಂಬಾ
ಬುದ್ದಿವಂತ ಹುಡುಗಿಯಾಗಿ ನಟಿಸಿದ್ದೇನೆ. ಎಲ್ಲೆಲ್ಲಿ ಯಾವ ಯಾವ ಸಂದರ್ಭಕ್ಕೆ ಹೇಗಿರಬೇಕೋ ಆ ತರ ಇರ್ತಾಳೆ. ಯಾರನ್ನು ಕೇರ್ ಮಾಡದೇ ಆರಾಮಾಗಿ ನಾನಾಯ್ತು ನನ್ನ ಪಾಡಾಯ್ತು ಅಂತ. ಅಲ್ಲಿ ನಿಮಗೆ ಒಂಥರ ಎರಡು ಶೇಡ್ ಕಾಣಿಸಬಹುದು ಫಸ್ಟ್ ಹಾಫ್ ನಲ್ಲಿ ಫುಲ್ ಟಫ್, ಸೆಕೆಂಡ್ ಹಾಫ್ ನಲ್ಲಿ ಅಪ್ಪನ ಮಾತು ಮೀರದೇ ಇರೋದು. ಅಪ್ಪನಿಗೋಸ್ಕರ ಅಥವಾ ಅಮ್ಮನಿಗೋಸ್ಕರ, ಫ್ಯಾಮಿಲಿಗೋಸ್ಕರ ಆ ತರ.[ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']
* ಅಣ್ಣಮ್ಮನ ಡ್ಯಾನ್ಸ್ ಶೂಟಿಂಗ್ ಸ್ಪಾಟ್ ನಲ್ಲಿ ಅನುಭವ ಹೇಗಿತ್ತು?
- ವಾವ್ ಅದು ತುಂಬಾ ವಂಡರ್ ಫುಲ್, ನನಗೆ ಆ ತರ ಡ್ಯಾನ್ಸ್ ಮಾಡ್ಬೇಕು ಅಂತ ತುಂಬಾ ಆಸೆ ಇತ್ತು. ನಾನು ಮೊದ್ಲಿಗಿಂತಲೂ ನೋಡ್ತಾ ಇದ್ದೆ ಹುಡುಗ್ರೆಲ್ಲಾ ಯಾವ ತರ ಸ್ಟೆಪ್ ಹಾಕ್ತಾರೆ, ಹುಡುಗೀರು ಹೀಗೆ ಮಾಡಲ್ಲ ಅಲ್ವಾ ಅಂತ. ಆದರೆ ಈ ಸಿನಿಮಾದಲ್ಲಿ ಆ ತರ ಕಾನ್ಸೆಪ್ಟ್ ಇದೆ ಅಂತ ಗೊತ್ತಾದಾಗ ನಾನು ತುಂಬಾ ಖುಷಿ ಪಟ್ಟೆ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]
'ಆಕ್ಚುವಲಿ ನಾನು ಕುಡಿದು ಬಿಟ್ಟು ಅಪ್ಪನಿಗೆ ಆವಾಜ್ ಹಾಕಿ ಡ್ಯಾನ್ಸ್ ಮಾಡುವ ಸೀನ್ ಅದು. ಇದು ನನಗೆ ತುಂಬಾ ಒಳ್ಳೆಯ ಅವಕಾಶ. ನಾನು ತುಂಬಾ ಖುಷಿ ಅಗಿದ್ದೇನೆ. ೫೦% ರೀಚ್ ಆಗಿದ್ದೇನೆ ಅಂತ ಭಾವಿಸುತ್ತೇನೆ. ಯಾವುದೇ ಒಬ್ಬ ಆರ್ಟಿಸ್ಟ್ ಗೆ ತಾವು ಮಾಡುವ ಸೀನ್ಸ್ ಗಳು ಅವರನ್ನು ಎಕ್ಸೈಟ್ ಮಾಡ್ಬೇಕು. ಹಾಗಾಗಿ ನನಗೆ, ನನ್ನ ವೃತ್ತಿ ಜೀವನದಲ್ಲಿ ನನಗೆ ಖುಷಿ ಕೊಟ್ಟ ಸಿನಿಮಾ ಇದು.
* ಮುಂದಿನ ಸಿನಿಮಾ ಯಾವುದು? ಯಾವುದಾದ್ರೂ ಸಿನಿಮಾ ಒಪ್ಕೊಂಡಿದ್ದೀರಾ?
ಮುಂದಿನ ಸಿನಿಮಾ 'ಕೃಷ್ಣ ರುಕ್ಕು' ಅದು ಜನವರಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಆಗುತ್ತೆ ಆಮೇಲೆ ಮುಂದಿನ ಸಿನಿಮಾ ಯಾವುದು ಅಂತ ನೋಡಬೇಕು ಇನ್ನೂ ಡಿಸೈಡ್ ಆಗಿಲ್ಲ.
ನಿಮ್ಮೆಲ್ಲರ ಪ್ರೀತಿಯ ಅಮೂಲ್ಯ ಅವರ ಸಂದರ್ಶನ ನೋಡಲು ಈ ವಿಡಿಯೋ ನೋಡಿ...


Click it and Unblock the Notifications













