ಕನ್ನಡಕ್ಕೆ ಬರ್ತಾರಾ 'ಕಬಾಲಿ' ಗಾಯಕ ಅರುಣ್ ರಾಜಾ ಕಾಮರಾಜ್.?
2016 ರಲ್ಲಿ ಬಿಡುಗಡೆ ಆದ 'ಕಬಾಲಿ' ಸಿನಿಮಾದ 'ನೆರುಪ್ಪು ಡಾ..' ಹಾಡು ಯಾರು ತಾನೆ ಕೇಳಿಲ್ಲ ಹೇಳಿ.? ಸೂಪರ್ ಡ್ಯೂಪರ್ ಹಿಟ್ ಆಗಿದ್ದ 'ನೆರುಪ್ಪು ಡಾ..' ಹಾಡಿಗೆ ದನಿ ಗೂಡಿಸಿದವರು ಗಾಯಕ ಅರುಣ್ ರಾಜಾ ಕಾಮರಾಜ್.
ತಮಿಳಿನಲ್ಲಿ ಬಹು ಬೇಡಿಕೆಯ ಸಿಂಗರ್ ಆಗಿರುವ ಅರುಣ್ ರಾಜಾ ಕಾಮರಾಜ್ ಇದೀಗ ಸ್ಯಾಂಡಲ್ ವುಡ್ ಗೆ ಬರುವ ಸಾಧ್ಯತೆ ಇದೆ. ಪವನ್ ರಣಧೀರ ನಿರ್ದೇಶನದ 'ಕೆಫೆ ಗ್ಯಾರೇಜ್' ಚಿತ್ರದ ಹಾಡೊಂದಕ್ಕೆ ಅರುಣ್ ರಾಜಾ ಕಾಮರಾಜ್ ಗಾನಸುಧೆ ಹರಿಸುತ್ತಾರಂತೆ.

'ಕೆಫೆ ಗ್ಯಾರೇಜ್' ಚಿತ್ರಕ್ಕೆ ಪ್ರತಿಭಾವಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಗಾಯಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರೂ, ಹಾಡೊಂದಕ್ಕೆ ಮಾತ್ರ ಗಡುಸು ಧ್ವನಿ ಇರುವ ಗಾಯಕರು ಬೇಕಂತೆ. ಹೀಗಾಗಿ, ಅರುಣ್ ರಾಜಾ ಕಾಮರಾಜ್ ರನ್ನ ಕರೆತರುವ ಪ್ರಯತ್ನ ನಡೆಯುತ್ತಿದೆ ಅಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಹೇಳಿದ್ದಾರೆ.
ಅಂದ್ಹಾಗೆ, 'ಕೆಫೆ ಗ್ಯಾರೇಜ್' ಚಿತ್ರಕ್ಕೆ 'ಕಿರಿಕ್ ಪಾರ್ಟಿ'ಯ 'ಬೆಳಗೆದ್ದು ಯಾರ ಮುಖವಾ...' ಹಾಡಿನ ಖ್ಯಾತಿಯ ಧನಂಜಯ್ ಸಾಹಿತ್ಯ ಒದಗಿಸುತ್ತಿದ್ದಾರೆ. 'ಕೆಫೆ ಗ್ಯಾರೇಜ್' ಚಿತ್ರದ ಬಗ್ಗೆ ನೋಬಿನ್ ಪೌಲ್ ಹಂಚಿಕೊಂಡಿರುವ ಮಾಹಿತಿಯ ವಿಡಿಯೋ ಇಲ್ಲಿದೆ, ನೋಡಿರಿ....


Click it and Unblock the Notifications











