For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬರ್ತಾರಾ 'ಕಬಾಲಿ' ಗಾಯಕ ಅರುಣ್ ರಾಜಾ ಕಾಮರಾಜ್.?

  By Harshitha
  |

  2016 ರಲ್ಲಿ ಬಿಡುಗಡೆ ಆದ 'ಕಬಾಲಿ' ಸಿನಿಮಾದ 'ನೆರುಪ್ಪು ಡಾ..' ಹಾಡು ಯಾರು ತಾನೆ ಕೇಳಿಲ್ಲ ಹೇಳಿ.? ಸೂಪರ್ ಡ್ಯೂಪರ್ ಹಿಟ್ ಆಗಿದ್ದ 'ನೆರುಪ್ಪು ಡಾ..' ಹಾಡಿಗೆ ದನಿ ಗೂಡಿಸಿದವರು ಗಾಯಕ ಅರುಣ್ ರಾಜಾ ಕಾಮರಾಜ್.

  ತಮಿಳಿನಲ್ಲಿ ಬಹು ಬೇಡಿಕೆಯ ಸಿಂಗರ್ ಆಗಿರುವ ಅರುಣ್ ರಾಜಾ ಕಾಮರಾಜ್ ಇದೀಗ ಸ್ಯಾಂಡಲ್ ವುಡ್ ಗೆ ಬರುವ ಸಾಧ್ಯತೆ ಇದೆ. ಪವನ್ ರಣಧೀರ ನಿರ್ದೇಶನದ 'ಕೆಫೆ ಗ್ಯಾರೇಜ್' ಚಿತ್ರದ ಹಾಡೊಂದಕ್ಕೆ ಅರುಣ್ ರಾಜಾ ಕಾಮರಾಜ್ ಗಾನಸುಧೆ ಹರಿಸುತ್ತಾರಂತೆ.

  ವಿಡಿಯೋ: ಪ್ರತಿಭಾವಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂದರ್ಶನ ವಿಡಿಯೋ: ಪ್ರತಿಭಾವಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂದರ್ಶನ

  'ಕೆಫೆ ಗ್ಯಾರೇಜ್' ಚಿತ್ರಕ್ಕೆ ಪ್ರತಿಭಾವಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಗಾಯಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರೂ, ಹಾಡೊಂದಕ್ಕೆ ಮಾತ್ರ ಗಡುಸು ಧ್ವನಿ ಇರುವ ಗಾಯಕರು ಬೇಕಂತೆ. ಹೀಗಾಗಿ, ಅರುಣ್ ರಾಜಾ ಕಾಮರಾಜ್ ರನ್ನ ಕರೆತರುವ ಪ್ರಯತ್ನ ನಡೆಯುತ್ತಿದೆ ಅಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಹೇಳಿದ್ದಾರೆ.

  ಲೋ ಬಜೆಟ್ ಚಿತ್ರಕ್ಕೆ ಫ್ರೀ ಆಗಿ ಸಾಂಗ್ ಕಂಪೋಸ್ ಮಾಡ್ತಾರಾ ನೋಬಿನ್ ಪೌಲ್.? ಲೋ ಬಜೆಟ್ ಚಿತ್ರಕ್ಕೆ ಫ್ರೀ ಆಗಿ ಸಾಂಗ್ ಕಂಪೋಸ್ ಮಾಡ್ತಾರಾ ನೋಬಿನ್ ಪೌಲ್.?

  ಅಂದ್ಹಾಗೆ, 'ಕೆಫೆ ಗ್ಯಾರೇಜ್' ಚಿತ್ರಕ್ಕೆ 'ಕಿರಿಕ್ ಪಾರ್ಟಿ'ಯ 'ಬೆಳಗೆದ್ದು ಯಾರ ಮುಖವಾ...' ಹಾಡಿನ ಖ್ಯಾತಿಯ ಧನಂಜಯ್ ಸಾಹಿತ್ಯ ಒದಗಿಸುತ್ತಿದ್ದಾರೆ. 'ಕೆಫೆ ಗ್ಯಾರೇಜ್' ಚಿತ್ರದ ಬಗ್ಗೆ ನೋಬಿನ್ ಪೌಲ್ ಹಂಚಿಕೊಂಡಿರುವ ಮಾಹಿತಿಯ ವಿಡಿಯೋ ಇಲ್ಲಿದೆ, ನೋಡಿರಿ....

  English summary
  Kannada Music Director Nobin Paul speaks about Cafe Garage movie. Watch video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X