For Quick Alerts
  ALLOW NOTIFICATIONS  
  For Daily Alerts

  ದರ್ಶನ್‌ ಸಿನಿಮಾ ನೋಡಲು ಜನ ಬಂದೇ ಬರ್ತಾರೆ ಅಂತಾರೆ ವಿ ಮನೋಹರ್!

  |

  ಎಲ್ಲರಂಗದ ಹಾಗೆ ಕಲಾವಿದರಿಗೆ ಕೂಡ ಕೆಲಸವೇ ಇರದಂಥ ಪರಿಸ್ಥಿತಿ ಇದು. ಆದರೆ ಕೊರೊನಾ ವೈರಸ್‌ನಿಂದ ಉಂಟಾಗಿರುವ ಲಾಕ್ಡೌನ್‌ ಸಂದರ್ಭದಲ್ಲಿಯೂ ಮನೆಯೊಳಗೆ ಕಾರ್ಯನಿರತರಾಗಿರುವವರು ಜನಪ್ರಿಯ ಸಂಗೀತ ನಿರ್ದೇಶಕ ವಿ ಮನೋಹರ್! ಅದು ಸಾಧ್ಯವಾಗಿದ್ದು ಅವರು ಒಪ್ಪಿಕೊಂಡಂಥ ಒಂದು ಸಿನಿಮೇತರ ಪ್ರಾಜೆಕ್ಟ್‌ನಿಂದಾಗಿ ಎನ್ನುವುದು ಅಷ್ಟೇ ಸತ್ಯ. ಅದು ದೊರಕಲು ಕಾರಣ ಮನೋಹರ್ ಅವರಲ್ಲಿನ ಬಹುಮುಖ ಪ್ರತಿಭೆ.

  ಮಂಗಳೂರು ಕರಾವಳಿಯ ವಿಟ್ಲದಿಂದ ಬೆಂಗಳೂರು ಸೇರಿಕೊಂಡ ಮನೋಹರ್ ಅವರು ಇಂದು ರಾಜ್ಯದಲ್ಲೇ ಹೆಸರುವಾಸಿ ಸಂಗೀತ ನಿರ್ದೇಶಕ. ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಥಮ ಬಾರಿ ಕನ್ನಡದಲ್ಲಿ ಶ್ರೇಷ್ಠ ಗಾಯಕ ರಾಜ್ಯ ಪ್ರಶಸ್ತಿ ದೊರಕಿರುವುದು ಇವರದೇ ಸಂಗೀತ ನಿರ್ದೇಶನದ ಓ ಮಲ್ಲಿಗೆ' ಚಿತ್ರದ ಮೂಲಕ. ಗಾಯಕ ರಮೇಶ್ಚಂದ್ರ, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರ ವೃತ್ತಿ ಬದುಕಿಗೆ ತಿರುವು ತಂದುಕೊಡುವಲ್ಲಿ ಮನೋಹರ್ ಅವರ ಪಾತ್ರ ದೊಡ್ಡದು.

  ಫಿಲ್ಮೀಬೀಟ್ ಲೈವ್: ಅಭಿಮಾನಿಗಳ ಪ್ರಶ್ನೆಗೆ ನಟಿ ರಾಧಿಕಾ ನಾರಾಯಣ್ ಉತ್ತರಗಳುಫಿಲ್ಮೀಬೀಟ್ ಲೈವ್: ಅಭಿಮಾನಿಗಳ ಪ್ರಶ್ನೆಗೆ ನಟಿ ರಾಧಿಕಾ ನಾರಾಯಣ್ ಉತ್ತರಗಳು

  ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲ, ಗೀತರಚನೆಕಾರರಾಗಿ, ನಟರಾಗಿ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಗುರುತಿಸಿಕೊಂಡವರು. ಮಜಾಟಾಕೀಸ್ ರಿಯಾಲಿಟಿ ಶೋ ಮೂಲಕ ಹಾಸ್ಯಪಾತ್ರವಾಗಿ ಪ್ರೇಕ್ಷಕರಿಗೆ ಪ್ರಿಯರಾದ ಮನೋಹರ್ ಅವರು ಚಂದನ ವಾಹಿನಿಯ ಮ್ಯೂಸಿಕ್ ರಿಯಾಲಿಟಿ ಸ್ಪರ್ಧೆಯಲ್ಲಿ ತೀರ್ಪುಗಾರರೂ ಹೌದು. ಅವರು ಭವಿಷ್ಯದ ಕನ್ನಡ ಸಿನಿಮಾಗಳ ಬಗ್ಗೆ ಮತ್ತು ಒಟ್ಟು ಲಾಕ್ಡೌನ್ ಪರಿಸ್ಥಿತಿಯ ಬಗ್ಗೆ ಫಿಲ್ಮೀಬೀಟ್ ಜತೆಗೆ ಆಡಿರುವ ಮಾತುಗಳು ಇಲ್ಲಿವೆ.

  ಲಾಕ್ಡೌನ್‌ ಬಳಿಕದ ಒಂದು ತಿಂಗಳು ತಂದಂಥ ಪರಿಸ್ಥಿತಿ ಹೇಗಿದೆ..?

  ಲಾಕ್ಡೌನ್‌ ಬಳಿಕದ ಒಂದು ತಿಂಗಳು ತಂದಂಥ ಪರಿಸ್ಥಿತಿ ಹೇಗಿದೆ..?

  ಯೋಜನೆ ಹಾಕಿದ ಕೆಲಸಗಳು ನಡೆಯಲಿಲ್ಲ ಎನ್ನುವುದನ್ನು ಹೊರತುಪಡಿಸಿ ಉಳಿದಂತೆ ನನಗೆ ದೊಡ್ಡ ಸಮಸ್ಯೆಗಳಾಗಿಲ್ಲ. ಅದಕ್ಕೆ ಕಾರಣ ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುವ ಉತ್ತಮ ಅವಕಾಶವೊಂದು ನನಗೆ ದೊರಕಿತು. ಅದು ಭಕ್ತಿಗೀತೆಗಳನ್ನು ರಚಿಸುವುದು. ಲಾಕ್ಡೌನ್‌ಗೂ ಮೊದಲೇ ಮೂವತ್ತು ಹಾಡುಗಳಿಗಾಗಿ ರಾಗ ಸಂಯೋಜನೆ ಮಾಡಿಟ್ಟಿದ್ದೆ. ಇದೀಗ ಆ ಎಲ್ಲ ಟ್ಯೂನ್‌ಗಳಿಗೆ ಹೊಂದುವಂತೆ ಆಂಜನೇಯನ ಭಕ್ತಿಗೀತೆಗಳ ರಚನೆ ಮಾಡುತ್ತಿದ್ದೇನೆ. ಭಕ್ತಿರಸವಾದ ಕಾರಣ ಅದನ್ನು ಬರೇ ಒಂದು ಕೆಲಸವಾಗಿ ಮಾತ್ರ ಕಾಣಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾಯಾ, ವಾಚಾ, ಮನಸಾ ಅದರಲ್ಲಿ ತೊಡಗಿಸಿಕೊಂಡಿದ್ದೇನೆ.

  ಮೂವತ್ತು ಭಕ್ತಿಗೀತೆಗಳನ್ನು ರಚಿಸಲು ವಿಶೇಷ ತಯಾರಿ ಬೇಕಾಯಿತೇ?

  ಮೂವತ್ತು ಭಕ್ತಿಗೀತೆಗಳನ್ನು ರಚಿಸಲು ವಿಶೇಷ ತಯಾರಿ ಬೇಕಾಯಿತೇ?

  ಭಕ್ತಿಗೀತೆಗಳನ್ನು ರಚಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಡಾ.ರಾಜ್‌ಕುಮಾರ್ ಅವರಿಗಾಗಿ ಅಯ್ಯಪ್ಪನ ಭಕ್ತಿಗೀತೆ ಸೇರಿದಂತೆ ದೇವಿ, ಶಿವ ಮಂದಾರ ಮೊದಲಾದ ಭಕ್ತಿಗೀತೆಗಳ ಸಿಡಿಗಳನ್ನು ಹೊರತಂದಿದ್ದೆ. ಆದರೆ ಇದೇ ಪ್ರಥಮ ಎನ್ನುವ ಹಾಗೆ ಎಲ್ಲ ಗೀತೆಗಳನ್ನು ಕೂಡ ಆಂಜನೇಯನ ಮೇಲೆ ಬರೆಯುವ ಅವಕಾಶ ದೊರಕಿದೆ. ಎಲ್ಲ ಭಕ್ತಿಯೂ ಒಂದೇ ಎನ್ನುವ ನಂಬಿಕೆ ಇರುವ ಕಾರಣ ದಾಸರ ಕೀರ್ತನೆಗಳನ್ನು, ಬಸವಣ್ಣನ ವಚನಗಳನ್ನು, ಸರ್ವಜ್ಞನ ವಚನಗಳನ್ನು ಓದಿ ಅವುಗಳಿಂದ ಇನ್ನಷ್ಟು ಸ್ಫೂರ್ತಿ ಪಡೆಯುತ್ತಿದ್ದೇನೆ. ಆಗಲೇ ಹೇಳಿದಂತೆ ಇದರಲ್ಲಿ ಸಮರ್ಪಣಾಭಾವದಿಂದ ತೊಡಗಿಸಿಕೊಂಡಿರುವ ಕಾರಣ ಮನಸು ಭಕ್ತಿರಸದ ರಚನೆಯಲ್ಲಿ ತುಂಬ ಚೆನ್ನಾಗಿ ಸ್ಪಂದಿಸುತ್ತಿದೆ.

  ಸಂದರ್ಶನ: ಹಾಸ್ಯದ ಜತೆಗೆ ಸಂದೇಶ; ಇದೇ ಶ್ರದ್ಧಾ ವಿಶೇಷ..!ಸಂದರ್ಶನ: ಹಾಸ್ಯದ ಜತೆಗೆ ಸಂದೇಶ; ಇದೇ ಶ್ರದ್ಧಾ ವಿಶೇಷ..!

  ಹಾಗಾದರೆ ನಿಮಗೆ ನಿಜದಲ್ಲಿ ಈಗಲೂ ಬಿಡುವಿಲ್ಲ ಎನ್ನಬಹುದೇ?

  ಹಾಗಾದರೆ ನಿಮಗೆ ನಿಜದಲ್ಲಿ ಈಗಲೂ ಬಿಡುವಿಲ್ಲ ಎನ್ನಬಹುದೇ?

  ಹಾಗೇನಿಲ್ಲ. ಈ ಸಂದರ್ಭದಲ್ಲಿ ಕೂಡ ಮನೆಯಲ್ಲಿದ್ದುಕೊಂಡು ಪತ್ನಿ ಮಕ್ಕಳಿಗೆ ಸಮಯ ನೀಡದಿರಲು ಸಾಧ್ಯವೇ? ನಾನು ಭಕ್ತಿಗೀತೆಗಳ ರಚನೆಗೆ ನಿರ್ಧಿಷ್ಟ ಸಮಯ ಮೀಸಲಿರಿಸಿದ್ದೇನೆ. ಉಳಿದಂತೆ ಪತ್ರಿಕೆ, ಮೊಬೈಲು, ಕಂಪ್ಯೂಟರ್ ಮೊದಲಾದವುಗಳಿಗೆಲ್ಲ ಸಮಯ ನೀಡುತ್ತೇನೆ. 1978ರಲ್ಲಿ ನೋಡಿದಂಥ ಕಾಶೀನಾಥ್ ಅವರ `ಅಪರಿಚಿ' ಸಿನಿಮಾವನ್ನು ಮತ್ತೊಮ್ಮೆ ನೋಡಿದೆ. ಅವರು ಚಿತ್ರಕತೆ ಮಾಡಿರುವ ರೀತಿ ಇಂದಿನ ಫಿಲ್ಮ್ ಮೇಕರ್ಸ್‌ಗೆ ಕೂಡ ಪಾಠವಾಗುವ ರೀತಿಯಲ್ಲಿದೆ. ಜತೆಗೆ ಎರಡು ಇಂಗ್ಲಿಷ್ ಸಿನಿಮಾಗಳನ್ನು ಕೂಡ ನೋಡಿದೆ. ಒಂದು ಬ್ಯೂಟಿಫುಲ್ ಪೀಪಲ್. ಅದು ಪ್ರಾಣಿಗಳ ಕುರಿತಾದ ಸಿನಿಮಾ . ಮತ್ತೊಂದು ಆಸ್ಕರ್ ಬಂದಿರುವಂಥ `ಲೈಫ್ ಈಸ್ ಬ್ಯೂಟಿಫುಲ್'. ಅದು ಯುದ್ಧದ ಕತೆಯನ್ನು ಹೊಂದಿತ್ತು.

  ಕೊರೋನ ವೈರಸ್ ವಿರುದ್ಧದ ನಮ್ಮ ಯುದ್ಧ ಸರಿಯದ ಹಾದಿಯಲ್ಲಿದೆಯೇ?

  ಕೊರೋನ ವೈರಸ್ ವಿರುದ್ಧದ ನಮ್ಮ ಯುದ್ಧ ಸರಿಯದ ಹಾದಿಯಲ್ಲಿದೆಯೇ?

  ಖಂಡಿತವಾಗಿ. ಲಾಕ್ಡೌನ್ ನಿರ್ಧಾರದ ಹೊರತು ಬೇರೇನೂ ಮಾಡುವಂತೆ ಇರಲಿಲ್ಲ. ನಮ್ಮ ವೈದ್ಯರು ಪೊಲೀಸರು ಮತ್ತು ಸ್ವಯಂಪ್ರೇರಿತರಾಗಿ ಸಮಾಜ ಸೇವೆಯಲ್ಲಿ ನಿರತರಾದವರು ಎಲ್ಲರದ್ದು ಕೂಡ ಕೊರೊನಾ ವೈರಸ್ ವಿರುದ್ಧ ನಡೆಸಲಾಗಿರುವಂಥ ಯುದ್ಧ. ಇದರ ಜತೆಗೆ ಇದನ್ನು ಅಂತಾರಾಷ್ಟ್ರೀಯ ಮಟ್ಟದ ಅಟಾಮಿಕ್ ವಾರ್ ಎನ್ನಬಹುದು. ಅದು ಯಾವ ಕ್ಲೈಮ್ಯಾಟ್‌ನಲ್ಲಿ ಕೂಡ ಇರುತ್ತದೆ ಎಂದು ಹೇಳುವಾಗಲೇ ಅದನ್ನು ನಾನು ಅದು ಅಟಾಮಿಕ್ ರೇಡಿಯೇಶನ್ ಎಂದು ಅಂದಾಜು ಮಾಡಿದ್ದೆ. ಇತ್ತೀಚೆಗೆ ಜಪಾನ್‌ನ ವಿಜ್ಞಾನಿಗಳು ಕೂಡ ಇದಕ್ಕೆ ಪೂರಕವಾದ ವಿಚಾರಗಳನ್ನು ಹಂಚಿಕೊಂಡಿರುವುದನ್ನು ನೋಡಿದ್ದೇನೆ. ಅದೇನೇ ಇರಲಿ, ನಾವು ನಮ್ಮ ಎಚ್ಚರಿಕೆಯಲ್ಲಿರುವುದು ಮುಖ್ಯ. ಸ್ವಲ್ಪ ಸಮಯ ತೆಗೆದುಕೊಂಡರು ಕೂಡ ಈ ಯುದ್ಧದಲ್ಲಿ ನಾವು ಗೆಲ್ಲುವುದು ಖಚಿತ.

  ಸಂದರ್ಶನ: ಸಿನಿಮಾ ಜೊತೆಗೆ ಹೊಸ ತುಡಿತಕ್ಕೆ ಸಿಲುಕಿರುವ ರಾಜ್‌ ಬಿ ಶೆಟ್ಟಿಸಂದರ್ಶನ: ಸಿನಿಮಾ ಜೊತೆಗೆ ಹೊಸ ತುಡಿತಕ್ಕೆ ಸಿಲುಕಿರುವ ರಾಜ್‌ ಬಿ ಶೆಟ್ಟಿ

  ಸಿನಿಮಾರಂಗದಲ್ಲಿ ಏನೇನು ತೊಂದರೆಗಳು ಕಾಡಬಹುದು?

  ಸಿನಿಮಾರಂಗದಲ್ಲಿ ಏನೇನು ತೊಂದರೆಗಳು ಕಾಡಬಹುದು?

  ಸಿನಿಮಾರಂಗಕ್ಕೆ ಈಗಾಗಲೇ ಆರ್ಥಿಕ ಹೊಡೆತ ಬಿದ್ದಿದೆ. ಸಿನಿಮಾ ಮಾಡುವುದು ಮತ್ತು ನೋಡುವುದು ಇವೆರಡೂ ವಿಚಾರಗಳಲ್ಲಿ ಸೋಶಿಯಲ್ ಡಿಸ್ಟೆನ್ಸಿಂಗ್ ಕಷ್ಟದ ವಿಚಾರವಾದ ಕಾರಣ, ಲಾಕ್ಡೌನ್ ಮುಗಿದ ಬಳಿಕವೂ ಚಿತ್ರರಂಗಕ್ಕೆ ಕಷ್ಟದ ಪರಿಸ್ಥಿತಿ ಬರಲಿದೆ. ಇನ್ನು ಸಿನಿಮಾ ಪ್ರೇಕ್ಷಕರಲ್ಲಿ ಕೂಡ ತೀವ್ರ ಕೊರತೆ ಆರಂಭದಿಂದಲೂ ಇದೆ. ಈ ವರ್ಷಾರಂಭದಿಂದ ಅನೇಕ ಒಳ್ಳೆಯ ಚಿತ್ರಗಳು ಬಂದಿದ್ದರೂ, ಎಲ್ಲ ಚಿತ್ರಗಳಿಗೂ ಪ್ರೇಕ್ಷಕರ ಕೊರತೆ ಇತ್ತು. ಈಗಾಗಲೇ ರಜಾದಿನಗಳಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌, ಉದಯ ಟಿವಿಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ನೋಡಿರುವವರಿಗೆ ಇದೀಗ ಥಿಯೇಟರ್‌ನಂಥ ಜನಸೇರುವ ಪ್ರದೇಶಗಳಲ್ಲಿ ಬಂದು ಚಿತ್ರ ನೋಡುವ ಉತ್ಸಾಹ, ಧೈರ್ಯ ಎರಡೂ ಇರುವುದಿಲ್ಲ. ಆದರೆ ದರ್ಶನ್ ಅವರಂಥ ದೊಡ್ಡ ಸ್ಟಾರ್ ಸಿನಿಮಾಗಳನ್ನು ಬಹಳ ದಿನಗಳಿಂದ ಕಾಯುತ್ತಿರುವ ಕಾರಣ, `ರಾಬರ್ಟ್' ಸಿನಿಮಾದ ಮೂಲಕ ಥಿಯೇಟರ್‌ನತ್ತ ಜನ ಬರಬಹುದು. ಅದೇ ರೀತಿ `ಕೆಜಿಎಫ್‌' ಚಿತ್ರದ ಎರಡನೇ ಭಾಗಕ್ಕೂ ಪ್ರೇಕ್ಷಕರು ಇರಬಹುದು. ಅದಕ್ಕೂ ಮೊದಲು ಚಿತ್ರಮಂದಿರ ತೆರೆಯಲು ಸರ್ಕಾರ ಯಾವಾಗ ಒಪ್ಪಿಗೆ ಕೊಡಲಿದೆ ನೀಡಲಿದೆ ಎನ್ನುವುದು ಮುಖ್ಯ ವಿಚಾರ.

  ನೀವು ಕೊರೋನ ಬಗ್ಗೆ ಯಾವುದೇ ಜಾಗೃತಿ ಗೀತೆ ರಚಿಸಿಲ್ಲವೇಕೆ?

  ನೀವು ಕೊರೋನ ಬಗ್ಗೆ ಯಾವುದೇ ಜಾಗೃತಿ ಗೀತೆ ರಚಿಸಿಲ್ಲವೇಕೆ?

  ನಾನು ಹಾಡು ಬರೆದಿಲ್ಲ ನಿಜ. ಯಾಕೆಂದರೆ ಇವೆಲ್ಲದರ ನಡುವೆ ಸದ್ಯಕ್ಕೆ ಎರಡು ಹೊಸ ಸಿನಿಮಾ ಹಾಡುಗಳ ಸಿದ್ಧತೆಯೂ ನಡೆದಿದೆ. `ದಿಲ್ ಸೆ' ಮತ್ತು `ಕ್ಯಾಂಪಸ್ ಕ್ರಾಂತಿ' ಎನ್ನುವ ಚಿತ್ರಗಳಿಗೆ ಟ್ಯೂನ್, ಹಾಡು ರೆಡಿಯಾಗುತ್ತಿವೆ. ಕೊರೊನಾ ಗೀತೆ ನಾನು ಬರೆಯದಿದ್ದರೂ ಸಹ, ನನ್ನ ಟ್ಯೂನಲ್ಲಿ ಹಾಡಂತೂ ಬಂದಿದೆ! ಆದರೆ ಆ ಗೀತೆಯನ್ನು ರಚಿಸಿ ಹಾಡಿರುವುದು ಬೇರೆ ವ್ಯಕ್ತಿ. `ಸ್ವಸ್ತಿಕ್' ಚಿತ್ರದಲ್ಲಿದ್ದಂಥ `ಇದು ಏಳೇಳು ಜನ್ಮದ ಲವ್..' ಟ್ಯೂನ್ ನಲ್ಲಿ ಕೊರೊನಾ ಹಾಡು ಮಾಡಲಾಗಿತ್ತು. `ಸರಿಗಮಪ' ರಿಯಾಲಿಟಿ ಶೋ ಗಾಯಕರೊಬ್ಬರು ಬರೆದು ಹಾಡಿದ್ದಾರೆ. ಅವರ ಹೆಸರು ಕಂಬದ ರಂಗಯ್ಯ. ಅದರ ಕರೊಕೆ ಟ್ರ್ಯಾಕ್ ಮಾಡಿಸಿ ನಾನೇ ಕೊಟ್ಟಿದ್ದೆ. ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ವಿಭಾಗದಲ್ಲಿ ಅದನ್ನು ಬಳಸಿಕೊಂಡಿರುವುದಾಗಿ ರಂಗಯ್ಯ ಹೇಳಿದ್ದಾರೆ.

  English summary
  V Manohar talks about the locdown period and Also Kannada Film industry’s future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X