twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ: ಅವಕಾಶಗಳ ವ್ಯೂಹದಲ್ಲಿ ಸಿಲುಕುವ ಆಸೆಯಲ್ಲಿ ಪ್ರಜ್ವಲ್ 'ಅಭಿಮನ್ಯು'

    |

    ಪ್ರಜ್ವಲ್ ಅಭಿಮನ್ಯು ಎನ್ನುವ ಹೆಸರು ಕೇಳುವಾಗ ಇಬ್ಬರಿದ್ದಾರೆ ಎನ್ನುವ ಕಲ್ಪನೆ ಬರಬಹುದು. ಆದರೆ ಇದು ಚಂದನವನಕ್ಕೆ ಕಾಲಿಟ್ಟಿರುವ ಒಬ್ಬ ಯುವ ನಟನ ಹೆಸರು. ಇವರು ಕಿರುತೆರೆಯ ಮನರಂಜನಾ ಪ್ರೇಕ್ಷಕರಿಗೆ ಈಗಾಗಲೇ ಸುಪರಿಚಿತರು. ಆದರೆ ಸಿನಿಮಾರಂಗಕ್ಕೆ ತೀರ ಹೊಸಬರು. ಆದರೆ ಪ್ರಮುಖ ಪಾತ್ರವಹಿಸಿದ ಪ್ರಥಮ ಚಿತ್ರದಲ್ಲೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗುರುತಿಸಿಕೊಂಡರು.

    Recommended Video

    ಜಿಮ್ ನಲ್ಲಿ ಅನುಶ್ರೀ ಏನೇನ್ ಮಾಡ್ತಾರೆ ನೋಡಿ! | Anchor Anushree | Gym Life | Fitness | Gym

    12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ ಚಿತ್ರವೇ 'ಒಂದು ಶಿಕಾರಿಯ ಕಥೆ.' ಸಿನಿಮಾದಲ್ಲಿ ಪ್ರಮುಖವಾದ ಪಾತ್ರವೊಂದನ್ನು ನಿಭಾಯಿಸಿರುವ ಪ್ರಜ್ವಲ್ ಅಭಿಮನ್ಯು ಅವರ ನಟನೆಯನ್ನು ಚಿತ್ರ ಕಂಡವರು ಮರೆಯಲು ಅಸಾಧ್ಯ. ಯಾರು ಈ ನಟ? ಎಲ್ಲಿಂದ ಬಂದರು? ಇದುವರೆಗೆ ಎಲ್ಲಿದ್ದರು ಎನ್ನುವ ಪ್ರಶ್ನೆಗಳಿಗೆ ಅವರಿಂದಲೇ ಪಡೆದಿರುವ ಉತ್ತರಗಳನ್ನು ಫಿಲ್ಮೀಬೀಟ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

    `ಪ್ರಜ್ವಲ್ ಅಭಿಮನ್ಯು’ ಎನ್ನುವ ಎರಡು ಹೆಸರೇಕೆ?

    `ಪ್ರಜ್ವಲ್ ಅಭಿಮನ್ಯು’ ಎನ್ನುವ ಎರಡು ಹೆಸರೇಕೆ?

    ಪ್ರಜ್ವಲ್ ಎನ್ನುವುದು ನನಗೆ ಮನೆಯಲ್ಲಿ ಇಟ್ಟಂಥ ಹೆಸರು. ಆದರೆ ಚಿತ್ರರಂಗದಲ್ಲಿ ಈಗಾಗಲೇ ಪ್ರಜ್ವಲಿಸುತ್ತಿರುವ ಡೈನಾಮಿಕ್ ಪ್ರಿನ್ಸ್ ಇರಬೇಕಾದರೆ, ನನಗೆ ಬೇರೆ ಹೆಸರು ಬೇಕಾಗಿತ್ತು. ವಾಸ್ತವದಲ್ಲಿ ನಾನು ಧಾರಾವಾಹಿಯಲ್ಲಿರುವಾಗಲೇ ಅಭಿಮನ್ಯು ಎಂದು ಹೆಸರು ಬದಲಾಯಿಸಿಕೊಂಡಿದ್ದೆ. ಆದರೆ ಅಲ್ಲಿ ಪಾತ್ರದ ಹೆಸರಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಸಿನಿಮಾದಲ್ಲಿ ಹೊಸ ಹೆಸರು ಬೇಕಿತ್ತು. ನಿಜವಾದ ಹೆಸರನ್ನು ಬಿಡಲು ಮನಸ್ಸಿರಲಿಲ್ಲ. ಆದರೆ ಈಗ ಅಭಿಮನ್ಯು ಎಂದೇ ಗುರುತಿಸಲ್ಪಡಲು ಬಯಸುತ್ತೇನೆ.

    ಧಾರಾವಾಹಿ ಕ್ಷೇತ್ರದಲ್ಲಿನ ನಿಮ್ಮ ಅನುಭವವೇನು?

    ಧಾರಾವಾಹಿ ಕ್ಷೇತ್ರದಲ್ಲಿನ ನಿಮ್ಮ ಅನುಭವವೇನು?

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ 'ಗಾಂಧಾರಿ' ನನ್ನ ಮೊದಲ ಧಾರಾವಾಹಿ. ಅದರಲ್ಲಿ ನಾನು ನಾಯಕನ ಸಹೋದರನಾಗಿ `ಆಯುಷ್' ಎನ್ನುವ ಪಾತ್ರ ಮಾಡಿದ್ದೆ. ಅದೇ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾದ 'ಪುಟ್ಟ ಗೌರಿ ಮದುವೆ'ಯಲ್ಲಿ ಗೌರಿಯ ಆಪ್ತಮಿತ್ರ ಆಚಾರ್ಯನ ಪಾತ್ರ ನಿರ್ವಹಿಸಿದ್ದೆ. ಸ್ಟಾರ್ ಸುವರ್ಣದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕಿಯ ಪ್ರಿಯಕರನಾಗಿ ವಿಕ್ರಂ ಎನ್ನುವ ಖಳನಾಗಿ ನಟಿಸಿದ್ದೆ.

    `ಒಂದು ಶಿಕಾರಿಯ ಕಥೆ’ ಚಿತ್ರಕ್ಕೆ ನಿಮ್ಮ ಪ್ರವೇಶ ಆಗಿದ್ದು ಹೇಗೆ?

    `ಒಂದು ಶಿಕಾರಿಯ ಕಥೆ’ ಚಿತ್ರಕ್ಕೆ ನಿಮ್ಮ ಪ್ರವೇಶ ಆಗಿದ್ದು ಹೇಗೆ?

    ಆಡಿಶನ್ ಗೆ ಹೋಗುವುದಾಗಿ ಹೇಳಿದ್ದೆ. ಆದರೆ ಮನೆಯಲ್ಲಿ ಸ್ವಲ್ಪ ತೊಂದರೆಯಾದ ಕಾರಣ, ಊರಿಗೆ ಹೋಗಬೇಕಾಗಿತ್ತು. ನಿರ್ದೇಶಕರು ನನ್ನ ನಟನೆಯ ವಿಡಿಯೋವನ್ನು ಬೈಟ್ ಮೂಲಕ ಕಳಿಸುವಂತೆ ಹೇಳಿದ್ದರು. ನಾನು ಮುಳ್ಳಯ್ಯನ ಗಿರಿ ಬೆಟ್ಟದ ಹಿನ್ನೆಲೆಯಲ್ಲಿ ನಿಂತುಕೊಂಡು ನಟಿಸಿದ ವಿಡಿಯೋ ಕಳಿಸಿದ್ದೆ. ಅದೃಷ್ಟವೆನ್ನುವ ಹಾಗೆ ಅದು ಸೆಲೆಕ್ಟ್ ಆಗಿ ಬೆಂಗಳೂರಿಗೆ ಕರೆಸಿದರು. ಅಲ್ಲಿ 120 ಪುಟಗಳ ಸ್ಕ್ರಿಪ್ಟ್ ಕೈಗೆ ನೀಡಿದ್ದರು. ನಾವು ಹೆಚ್ಚಿನವರು ಹೊಸಬರಿದ್ದೆವು. ನಟನೆಗೂ ಮೊದಲು ನಿರ್ದೇಶಕರು ನಮ್ಮಿಂದ ರಿಹರ್ಸಲ್ ಮಾಡಿಸುತ್ತಿದ್ದರು.

    ಮೂಲತಃ ನೀವು ಯಾವ ಊರಿನವರು?

    ಮೂಲತಃ ನೀವು ಯಾವ ಊರಿನವರು?

    ನಾನು ಹುಟ್ಟಿ ಒಂದು ಹಂತದ ತನಕ ಬೆಳೆದಿದ್ದು ಎಲ್ಲವೂ ಚಿಕ್ಕಮಗಳೂರಿನಲ್ಲಿ. ಆದರೆ ಕರಾವಳಿಯ ಮಂಗಳೂರು, ಸಾಂಸ್ಕೃತಿಕ ನಗರಿಯಾದ ಮೈಸೂರು, ಕಾಸ್ಮೋಪಾಲಿಟನ್ ಸಿಟಿಯಾದ ಬೆಂಗಳೂರು ಹೀಗೆ ವಿವಿಧ ಊರುಗಳಲ್ಲಿ ಹಂಚಿಹೋದ ಜೀವನ‌ ನನ್ನದು. ಅದರಿಂದಾಗಿ ಬೇರೆ ಬೇರೆ ರೀತಿಯ ಜನಜೀವನ, ವೈವಿಧ್ಯಮಯ ಬದುಕು, ಚಿಂತನೆ, ಸಂಸ್ಕೃತಿ ಮತ್ತು ವೃತ್ತಿಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.

    ನಟನಾ ಕ್ಷೇತ್ರದೆಡೆಗಿನ ನಿಮ್ಮ ಆಸಕ್ತಿಗೆ ಕಾರಣವೇನು?

    ನಟನಾ ಕ್ಷೇತ್ರದೆಡೆಗಿನ ನಿಮ್ಮ ಆಸಕ್ತಿಗೆ ಕಾರಣವೇನು?

    ಸಿನಿಮಾದೆಡೆಗೆ ನನಗೆ ಆಸಕ್ತಿ ಮೂಡಿಸಿದ ಮೊದಲನೆಯ ಹೆಸರು ಡಾ.ರಾಜ್ ಕುಮಾರ್ ಅವರದದು. ಯಾಕೆಂದರೆ ನನ್ನ ಅಜ್ಜಿ ಅಣ್ಣಾವ್ರ ಅಭಿಮಾನಿಯಾಗಿದ್ದರು! ಅವರು ರಾಜ್ ಕುಮಾರ್ ಸಿನಿಮಾಗಳತ್ತ ತೋರುತ್ತಿದ್ದ ಆಸಕ್ತಿ ನನ್ನನ್ನು ಸಿನಿಮಾಗಳತ್ತ ಮತ್ತು ಅಭಿನಯದತ್ತ ಸೆಳೆಯುವಂತೆ ಮಾಡಿತು. ಆದರೆ ನನ್ನ ತಂದೆ ತಂದೆ ಎಂ.ಆರ್ ರಾಜು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ಈಗ ನಿವೃತ್ತಿ ಹೊಂದಿದ್ದಾರೆ. ಅಮ್ಮನ ವೀಣಾ. ಅವರು ಗೃಹಿಣಿಯಾಗಿದ್ದರೂ ತಂದೆಯ ಜತೆ ಸೇರಿಕೊಂಡು ಸಿನಿಮಾಸಕ್ತಿ ಬಿಟ್ಟು ಬಿಡುವಂತೆ ಒತ್ತಾಯಿಸಿದ್ದರು. ಹಾಗೆ ಇಂಜಿನಿಯರಿಂಗ್ ಓದಿದೆ. ಆದರೆ ಐ.ಟಿ ವೃತ್ತಿಯಲ್ಲಿದ್ದರೂ ಅದನ್ನು ತೊರೆದು ಕಿರುತೆರೆಯಲ್ಲಿ ಧಾರಾವಾಹಿ ನಟನಾದೆ. ಈಗ ಮನೆಯವರ ವಿರೋಧ ನಿಂತಿದೆ.

    ಕಲಾವಿದನಾಗಿ ಬೆಳೆಯಲು ನಿಮಗೆ ಸಹಾಯವಾದ ಅಂಶಗಳು ಯಾವುವು?

    ಕಲಾವಿದನಾಗಿ ಬೆಳೆಯಲು ನಿಮಗೆ ಸಹಾಯವಾದ ಅಂಶಗಳು ಯಾವುವು?

    ಆಗಲೇ ಹೇಳಿದಂತೆ ಬೇರೆ ಬೇರೆ ಊರುಗಳಲ್ಲಿ ಕಾಲಕಳೆದಿರುವುದು ನನಗೆ ಮನುಷ್ಯರ ವರ್ತನೆ, ಪ್ರತಿಕ್ರಿಯೆ, ರೀತಿ ನೀತಿಗಳನ್ನು ಅರಿಯುವ ಅವಕಾಶ ಮಾಡಿಕೊಟ್ಟಿತು. ಆದರೆ ಎಷ್ಟೇ ಅರಿತುಕೊಂಡರೂ ಒಂದು ಜೀವನದಲ್ಲಿ ಮನುಷ್ಯನಿಗೆ ಒಂದೇ ರೀತಿಯ ವರ್ತನೆ ತೋರುವ ಅವಕಾಶಗಳಿರುತ್ತವೆ. ಆದರೆ ನಾನು ಕಣ್ಣಾರೆ ಕಂಡು ಕಲಿತ ವರ್ತನೆಗಳನ್ನು ವಿವಿಧ ಪಾತ್ರಗಳಲ್ಲಿ ತೋರಿಸುವ ಅವಕಾಶ ದೊರಕಿತು. 'ಮಾಲ್ ಆಫ್ ಮೈಸೂರು' ಬೀದಿ ನಾಟಕ ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ವೇದಿಕೆಗಳಲ್ಲಿ ಡ್ರಾಮ, ಸ್ಕಿಟ್ ಗಳ ಪ್ರದರ್ಶನ ನೀಡಿದೆ. ಸಿನಿಮಾಗಳಿಂದ, ಯೂ ಟ್ಯೂಬ್ ವಿಡಿಯೋಗಳಿಂದ ಸ್ಟೇಜ್ ಪ್ರೆಸೆನ್ಸ್, ನಟನೆ ಮೊದಲಾದವನ್ನು ಅಭ್ಯಾಸ ಮಾಡಿದ್ದೇನೆ. ನನ್ನ ಕಲಿಕೆ ಪರಿಣಾಮಕಾರಿಯಾಗಿದೆ ಎನ್ನುವುದನ್ನು ಸಮರ್ಥಿಸುವಂತೆ ತೆರಕಾಣಲಿರುವ `ಬ್ರಾಹ್ಮಿ', `ಯಲ್ಲೊ ಬೋರ್ಡ್' ಮೊದಲಾದ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿದೆ.

    English summary
    Abhimanyu Acted 3 Kannada Serial’s. And he is famous for ondu shikariya kathe’ films acting. Here he talks about his Acting career.
    Tuesday, March 31, 2020, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X