twitter
    For Quick Alerts
    ALLOW NOTIFICATIONS  
    For Daily Alerts

    'ಮಗಳು ಜಾನಕಿ' ಧಾರಾವಾಹಿಯ ನಿರಂಜನ್ ಯಾರು? ಅವರ ಹಿನ್ನೆಲೆ ಏನು?

    By Naveen
    |

    ಕನ್ನಡ ಕಿರುತೆರೆಯಲ್ಲಿ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಗಳು ಅಂದ್ರೆ ಒಳ್ಳೆಯ ಬ್ರ್ಯಾಂಡ್ ಅಂತರ್ಥ. ದಿನ ಜನರನ್ನು ಟಿವಿ ಮುಂದೆ ಕೂರಿಸುವ ಶಕ್ತಿ ಸೀತಾರಾಮ್ ಅವರ ಬರವಣಿಗೆಗೆ ಇದೆ. ಸದ್ಯ, ಸೀತಾರಾಮ್ 'ಮಗಳು ಜಾನಕಿ'ಯ ಕಥೆ ಹೇಳುತ್ತಿದ್ದಾರೆ.

    ಮೊದಲು ತನ್ನ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ 'ಮಗಳು ಜಾನಕಿ' ಧಾರಾವಾಹಿ ಇದೀಗ ದಿನೇ ದಿನೇ ತನ್ನ ವೀಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ 25 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯ ಅನೇಕ ಪಾತ್ರಗಳು ನೋಡುಗರಿಗೆ ಹತ್ತಿರ ಆಗಿವೆ. ಅಂತಹ ಒಂದು ಪಾತ್ರ ನಿರಂಜನ್. ಜಾನಕಿಯನ್ನು ನಿರಂಜನ್ ಮದುವೆ ಆಗುತ್ತಾನಾ.. ಇಲ್ವಾ..? ಎಂಬುದು ವೀಕ್ಷಕರಲ್ಲಿ ಇರುವ ದೊಡ್ಡ ಕುತೂಹಲ.

    ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಮೋಸದ ಮದುವೆ ಮುರಿದು ಬೀಳುತ್ತಾ.? ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಮೋಸದ ಮದುವೆ ಮುರಿದು ಬೀಳುತ್ತಾ.?

    ಅಂದಹಾಗೆ, ನಿರಂಜನ್ ಪಾತ್ರ ಮಾಡಿರುವುದು ರಾಕೇಶ್ ಮೈಯ್ಯ. ಪುತ್ತೂರಿನಿಂದ ಬೆಂಗಳೂರಿಗೆ ಬಂದ ಇವರು 'ಮಗಳು ಜಾನಕಿ' ಮೂಲಕ ಹೆಸರು ಮಾಡುತ್ತಿದ್ದಾರೆ. ಸದ್ಯ, ತಮ್ಮ ಧಾರಾವಾಹಿ, ಹಾಗೂ ಹಿನ್ನೆಲೆ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಕೇಶ್ ಮೈಯ್ಯ ಅವರ ಸಂದರ್ಶನದ ಆಯ್ದ ಭಾಗ ಮುಂದಿದೆ ಓದಿ...

    ಹೇಗೆ ನಡೆಯುತ್ತಿದೆ ನಿಮ್ಮ ಸೀರಿಯಲ್? ಈ ಧಾರಾವಾಹಿಗೆ ನೀವು ಹೇಗೆ ಆಯ್ಕೆ ಆದ್ರಿ?

    ಹೇಗೆ ನಡೆಯುತ್ತಿದೆ ನಿಮ್ಮ ಸೀರಿಯಲ್? ಈ ಧಾರಾವಾಹಿಗೆ ನೀವು ಹೇಗೆ ಆಯ್ಕೆ ಆದ್ರಿ?

    ''ಮಗಳು ಜಾನಕಿ'ಯನ್ನು ತುಂಬ ಚೆನ್ನಾಗಿ ಜನರು ಸ್ವೀಕರಿಸಿದ್ದಾರೆ. ಒಂದೊಂದು ಪಾತ್ರದ ಬಗ್ಗೆ ಚರ್ಚೆ ಆಗುತ್ತಿರುವುದು ತುಂಬ ಖುಷಿ ಆಗುತ್ತಿದೆ. ನಾನು 'ಅವಳು' ಅಂತ ಉದಯ ಟಿವಿಗೆ ಒಂದು ಸೀರಿಯಲ್ ಮಾಡುತ್ತಿದ್ದೆ. ಒಮ್ಮೆ ಸೀತಾರಾಮ್ ಸರ್ ಟೀಂ ಇಂದ ಒಂದು ಕಾಲ್ ಬಂತು. ಮೊದಲು ನಾನು ನಂಬಿರಲಿಲ್ಲ. ಆಮೇಲೆ ಆಡಿಷನ್ ಗೆ ಹೋದೆ. ನಮ್ಮನ್ನು ಯಾರು ಸೆಲೆಕ್ಟ್ ಮಾಡುತ್ತಾರೆ ಅಂತ ಸುಮ್ಮನೆ ಇದ್ದೆ. ಎರಡನೇ ಬಾರಿ ಮತ್ತೆ ಆಡಿಷನ್ ಅಂತ ಕರೆದರು. ಫಸ್ಟ್ ಟೇಕ್ ಗೆ ಸರ್ ಓಕೆ ಮಾಡಿದರು. ನಿರಂಜನ್ ಪಾತ್ರದ ಬಗ್ಗೆ ಹೇಳಿ, ಆಕ್ಟ್ ಮಾಡುತ್ತೀಯಾ ಅಂತ ಸೀತಾರಾಮ್ ಸರ್ ಕೇಳಿದರು. ನಾನು ಖುಷಿಯಿಂದ ಒಪ್ಪಿಕೊಂಡೆ.''

    ಜಾನಕಿಯನ್ನು ನಿರಂಜನ್ ಮದುವೆ ಆಗುತ್ತಾನಾ..ಇಲ್ವಾ..?

    ಜಾನಕಿಯನ್ನು ನಿರಂಜನ್ ಮದುವೆ ಆಗುತ್ತಾನಾ..ಇಲ್ವಾ..?

    ''ನಿಮ್ಮ ಪ್ರಕಾರ ಏನು..? ಜಾನಕಿಯನ್ನು ನಿರಂಜನ್ ಮದುವೆ ಆಗಬೇಕಾ ಬೇಡ್ವಾ ಎನ್ನುವುದನ್ನು ನಾನು ವೀಕ್ಷಕರಿಗೆ ಬಿಡುತ್ತೇನೆ. ನಾನು ಈಗ ಹೇಳಿ ಬಿಟ್ಟರೆ ಸೀರಿಯಲ್ ನ ಕಥೆ ಮಿಸ್ ಆಗುತ್ತದೆ. ನಮ್ಮ ಮನೆಯಲ್ಲಿಯೂ ಇದೇ ಪ್ರಶ್ನೆ ಕೇಳುತ್ತಾರೆ. ಎಲ್ಲಿ ಹೋದರು ನಿರಂಜನ್ ಎಂದು ಜನ ಕರೆಯುತ್ತಾರೆ. ನನಗೆ ನಿರಂಜನ್ ಎಂಬ ಪಾತ್ರವನ್ನು ಗುರುತಿಸಿದಾಗ ಖುಷಿ ಆಗುತ್ತದೆ.''

    ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.? ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.?

    ಹಿಂದಿನಿಂದ ಸೀತಾರಾಮ್ ಸರ್ ಅವರ ಧಾರಾವಾಹಿಯನ್ನು ನೀವು ನೋಡುತ್ತಿದ್ರಾ?

    ಹಿಂದಿನಿಂದ ಸೀತಾರಾಮ್ ಸರ್ ಅವರ ಧಾರಾವಾಹಿಯನ್ನು ನೀವು ನೋಡುತ್ತಿದ್ರಾ?

    ''ಹೌದು.. ಸೀತಾರಾಮ್ ಸರ್ ಎಂದ ತಕ್ಷಣ 'ಮಾಯಾಮೃಗ' ಧಾರಾವಾಹಿ ನೆನಪಾಗುತ್ತದೆ. ನಾನು ಆಗ ನಾಲ್ಕನೇ ಅಥವಾ ಐದನೇ ಕ್ಲಾಸ್ ಇದ್ದೇ ಅನಿಸುತ್ತದೆ. ಸ್ಕೂಲ್ ಮುಗಿದ ತಕ್ಷಣ ಧಾರಾವಾಹಿ ನೋಡೋಕ್ಕೆ ಬೇಗ ಮನೆಗೆ ಓಡಿ ಹೋಗುತ್ತಿದ್ವಿ. ಏನಾದ್ರೂ ಮಿಸ್ ಆಗಿದ್ದರೆ ಕಥೆ ಏನಾಯಿತು ಅಂತ ಮನೆಯವರಿಗೆ ಕೇಳುತ್ತಿದ್ವಿ. ಅವರ ಎಲ್ಲ ಸೀರಿಯಲ್ ಗಳ ಟೈಟಲ್ ಸಾಂಗ್ ಗಳು ನನಗೆ ತುಂಬ ಇಷ್ಟ.''

    'ಮಗಳು ಜಾನಕಿ' ಟೈಟಲ್ ಸಾಂಗ್ ದೊಡ್ಡ ಹಿಟ್ ಆಗಿದೆ. ಆ ಹಾಡು ನಿಮ್ಗೂ ಇಷ್ಟನಾ.?

    'ಮಗಳು ಜಾನಕಿ' ಟೈಟಲ್ ಸಾಂಗ್ ದೊಡ್ಡ ಹಿಟ್ ಆಗಿದೆ. ಆ ಹಾಡು ನಿಮ್ಗೂ ಇಷ್ಟನಾ.?

    ''ತುಂಬ ಅರ್ಥ ಇರುವ ಹಾಡು ಅದು.. ಅದಕ್ಕೆ ಸರಿಯಾದ ಮ್ಯೂಸಿಕ್ ಕೊಟ್ಟಿದ್ದು ನಮ್ಮ ಪ್ರವೀಣ್ ಸರ್. ಇದು ತುಂಬ ದೊಡ್ಡ ಸಾಂಗ್ . ಈ ಹಾಡಿನಲ್ಲಿ ನಾನು ಇದ್ದೇನೆ ಎನ್ನುವುದು ಖುಷಿ ಆಗುವ ವಿಷಯ. ವಾಣಿ ಜಯಶ್ರೀ ಅವರ ಫೀಮೇಲ್ ವರ್ಷನ್ ಕೂಡ ಇದೆ. ವಿಜಯ ಪ್ರಕಾಶ್ ಸರ್ ಆ ಹಾಡನ್ನು ಹಾಡಿದ್ದಾರೆ, ಅವರ ಬಗ್ಗೆ ಹೇಳುವುದೇ ಬೇಡ.. ಆಸ್ಕರ್ ಲೆವೆಲ್ ನಲ್ಲಿ ಅವರು ಇದ್ದಾರೆ. ದಿನಕ್ಕೆ ಹತ್ತು ಸಲವಾದರೂ ಈ ಹಾಡನ್ನು ಕೇಳುತ್ತೇನೆ.''

    ಕ್ರಿಮಿನಲ್ ಲಾಯರ್ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿದೆ.! ಕ್ರಿಮಿನಲ್ ಲಾಯರ್ ಸಿ.ಎಸ್.ಪಿ ತಲೆಯಲ್ಲಿ ಅನುಮಾನದ ಹುಳ ಹೊಕ್ಕಿದೆ.!

    ಕಿರುತೆರೆಯ ನಂಟು ಶುರು ಆಗುವುದು ಯಾವಾಗ?

    ಕಿರುತೆರೆಯ ನಂಟು ಶುರು ಆಗುವುದು ಯಾವಾಗ?

    ''ನಾನು ಶುರುವಿನಲ್ಲಿ ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದು ಬಿಟ್ಟ ಮೇಲೆ 'ವಿಜಯವಾಣಿ'ಯಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡಿದೆ. ಆಮೇಲೆ ವಿನು ಬಳಂಜ ಅವರ ಸೀರಿಯಲ್ ಗೆ ಆಡಿಷನ್ ನಡೆಯುತ್ತಿತ್ತು. ಆರೇಳು ತಿಂಗಳು ಆದ ಮೇಲೆ ಅವರ 'ಲವಲವಿಕೆ' ಸೀರಿಯಲ್ ನಲ್ಲಿ ಹೀರೋ ಅಣ್ಣನ ರೋಲ್ ಮಾಡಿದ್ದೆ. 'ಪ್ರೀತಿ ಪ್ರೇಮ,' 'ಅವಳು' ಹಾಗೂ 'ನಿಹಾರಿಕಾ' ಧಾರಾವಾಹಿಯಲ್ಲಿ ಒಂದು ಪಾತ್ರ ಮಾಡಿದ್ದೇನೆ. ಈ ಇಂಡಸ್ಟ್ರಿಯಲ್ಲಿ ನನ್ನ ಗುರುಗಳು ವಿನು ಬಳಂಜ ಹಾಗೂ ಬಿ.ಸುರೇಶ್.''

    ನಿಮ್ಮ ಹಿನ್ನೆಲೆ ಹೇಳಿ.. ಯಾವ ಊರು.. ಏನ್ ಮಾಡ್ತಿದ್ರಿ ಮೊದಲು?

    ನಿಮ್ಮ ಹಿನ್ನೆಲೆ ಹೇಳಿ.. ಯಾವ ಊರು.. ಏನ್ ಮಾಡ್ತಿದ್ರಿ ಮೊದಲು?

    ''ನಾನು ಸ್ಕೂಲ್, ಕಾಲೇಜು ಎಲ್ಲ ಓದಿದ್ದು ಪುತ್ತೂರಿನಲ್ಲಿ. ನಮ್ಮ ಕುಟುಂಬ ಈಗ ಬೆಂಗಳೂರಿನಲ್ಲಿ ಇದ್ದೇವೆ. ಬಿ ಕಾಂ ಆದ ಮೇಲೆ ಎಂ ಬಿ ಎ ಕೂಡ ಮಾಡಿದೆ. ಕಾಲೇಜ್ ಡೇಸ್ ನಲ್ಲಿಯೇ ಶಾರ್ಟ್ ಫಿಲ್ಮ್ಸ್ ಮಾಡಲು ಶುರು ಮಾಡಿದೆ. ಏನೂ ಗೊತ್ತಿಲ್ಲದೆ ಅದೆಲ್ಲ ಮಾಡುತ್ತಿದ್ವಿ. ಕಳೆದ ವರ್ಷದಿಂದ ಬೇರೆಯವರ ಶಾರ್ಟ್ ಫಿಲ್ಮ್ಸ್ ಗಳಲ್ಲಿ ನಟನೆ ಮಾಡುತ್ತಿದ್ದೇನೆ. 'ಲಾಸ್ಟ್ ಸೆಮಿಸ್ಟರ್' ಅಂತ ಮ್ಯೂಸಿಕ್ ವಿಡಿಯೋ ಒಳ್ಳೆಯ ಹೆಸರು ತಂದು ಕೊಟ್ಟಿತು. ನಮ್ದು ಕೆ ಚಾನಲ್ ಗೆ ಮೂರು ಕಿರುಚಿತ್ರ ಹಾಗೂ 'ಸಿಲ್ಕ್ ಬೋರ್ಡ್' ಅಂತ ಶಾರ್ಟ್ ಮೂವಿ ಮಾಡಿದೆ.''

    'ಮಗಳು ಜಾನಕಿ'ಯ ಯಾವ ಪಾತ್ರ ನಮಗೆ ಇಷ್ಟ?

    'ಮಗಳು ಜಾನಕಿ'ಯ ಯಾವ ಪಾತ್ರ ನಮಗೆ ಇಷ್ಟ?

    ''ನನಗೆ 'ಮಗಳು ಜಾನಕಿ'ಯಲ್ಲಿ ಚಂದು ಭಾರ್ಗಿ ಪಾತ್ರ ಇಷ್ಟ. ಆ ಪಾತ್ರ ನೋಡುವಾಗ ಎಷ್ಟೊಂದು ಚೆನ್ನಾಗಿ ಮಾಡುತ್ತಾರೆ ಅನಿಸುತ್ತದೆ. ಜಾನಕಿ ಪಾತ್ರ ಮಾಡುತ್ತಿರುವ ಗಾನವಿ ಅವರು ಎಷ್ಟೊಂದು ಸಟಲ್ ಆಗಿ ನಟಿಸುತ್ತಾರೆ. ಎಲ್ಲ ಪಾತ್ರಗಳಿಗೂ ಒಂದು ತೂಕ ಇದೆ. ಈ ವಿಷಯದಲ್ಲಿ ಮೊದಲು ಸೀತಾರಾಮ್ ಸರ್ ಗೆ ಧನ್ಯವಾದ ಹೇಳಬೇಕು. ಅವರು ಬ್ರಿಲಿಯಂಟ್.''

    ಮುಂದೆ ಸಿನಿಮಾ ಮಾಡುವ ಆಸೆ ಇದೆಯಾ..?

    ಮುಂದೆ ಸಿನಿಮಾ ಮಾಡುವ ಆಸೆ ಇದೆಯಾ..?

    ''ಸಿನಿಮಾ ಆಸೆ ಖಂಡಿತ ಇದೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರವನ್ನು ಮಾಡಿದ್ದೇನೆ. ಮೂರು ಸಿನಿಮಾ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವರ ಬ್ಯಾನರ್ ನಲ್ಲಿ ಒಂದು ವೆಬ್ ಸೀರೀಸ್ ಮಾಡುತ್ತಿದ್ದೇನೆ.''

    English summary
    Kannada serial 'Magalu Janaki' actor Rakesh Maiy interview.
    Thursday, August 16, 2018, 15:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X