twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ : ಓ ನನ್ನ ಚೇತನ, ಹಂಸಲೇಖ ಹೊಗಳಿದರು ನಿನ್ನ ಗಾಯನ

    By Naveen
    |

    ಒಂದು ಕಡೆ ಪ್ಯಾಶನ್ ಇನ್ನೊಂದು ಕಡೆ ಪ್ರೊಫೆಷನ್ ಹೀಗೆ ಎರಡು ದೋಣಿ ಮೇಲೆ ಪ್ರಯಾಣ ಮಾಡುತ್ತಿದ್ದ ಹುಡುಗ ಕಡೆಗೆ ಕೆಲಸ ಬಿಟ್ಟು ಸಂಗೀತದಲ್ಲಿಯೇ ಸಾಧನೆ ಮಾಡಲು ಹೊರಟ. ಈ ರೀತಿ ಹಠ ತೊಟ್ಟ ಹುಡುಗ ಇಂದು ಕನ್ನಡದಲ್ಲಿ ಒಬ್ಬ ಭರವಸೆಯ ಸಿಂಗರ್ ಆಗಿ ಬೆಳೆದಿದ್ದಾರೆ. ಅವರೇ ಚೇತನ್ ನಾಯಕ್.

    ಮೂಲತಃ ಶಿವಮೊಗ್ಗದ ಹುಡುಗನಾದ ಚೇತನ್ ಪ್ರಾರಂಭದಲ್ಲಿ ರಿಯಾಲಿಟಿ ಶೋ ಮೂಲಕ ಗಮನ ಸೆಳೆದರು. ಇದೀಗ ಹಂಸಲೇಖ, ಅರ್ಜುನ್ ಜನ್ಯ, ಶ್ರೀಧರ್.ವಿ.ಸಂಭ್ರಮ್, ಜೂಡಾ ಸ್ಯಾಂಡಿ, ಡಿ ಇಮಾನ್ ಹೀಗೆ ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಹಂಸಲೇಖ ಅವರೇ ಚೇತನ್ ಧ್ವನಿಯನ್ನು ಮೆಚ್ಚಿಕೊಂಡು ಈತ ಕನ್ನಡದ ಭರವಸೆಯ ಗಾಯಕ ಎಂದಿದ್ದಾರೆ.

    'ಚಮಕ್', 'ಕನಕ' ಸೇರಿದಂತೆ ಐವತ್ತಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಹಾಡಿರುವ ಚೇತನ್ ನಾಯಕ್ ತಮ್ಮದೇ ಆದ ರಾಕ್ ಬ್ಯಾಂಡ್ ಕೂಡ ಹೊಂದಿದ್ದಾರೆ. ಕಂಪನಿಯೊಂದಲ್ಲಿ ಕೈತುಂಬ ಸಂಬಳ ಬರುತ್ತಿದ್ದರೂ, ಅದನ್ನ ಬಿಟ್ಟು ಕನ್ನಡ ಚಿತ್ರರಂಗವನ್ನು ಅರಸಿ ಬಂದ ಚೇತನ್ ಗೆ ಸದ್ಯ ಉತ್ತಮ ಅವಕಾಶಗಳು ಲಭ್ಯವಾಗುತ್ತಿವೆ.

    ಅಂದಹಾಗೆ, ಇಂತಹ ಪ್ರತಿಭಾವಂತ ಗಾಯಕ ಚೇತನ್ ನಾಯಕ್ ಅವರ ಸಂದರ್ಶನ ಮುಂದಿದೆ ಓದಿ...

    ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದೆ

    ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದೆ

    ''ನಾನು ಶಿವಮೊಗ್ಗದ ಹುಡುಗ. 2012ರಲ್ಲಿ ನಮ್ಮ ಊರಿನಲ್ಲಿಯೇ ಎಂ ಬಿ ಎ ಮುಗಿಸಿದೆ. ಓದುವಾಗಲೇ ಅನೇಕ ರಿಯಾಲಿಟಿ ಶೋ ಗಳಲ್ಲಿ ಹಾಡು ಹೇಳುತ್ತಿದೆ. ಸುವರ್ಣ ವಾಹಿನಿಯ ಸ್ಟಾರ್ ಸಿಂಗರ್, ವಾಯ್ಸ್ ಆಫ್ ಬೆಂಗಳೂರು ಹೀಗೆ ಅನೇಕ ಶೋ ಗಳಲ್ಲಿ ಭಾಗವಹಿಸಿದ್ದೆ. ರೇಡಿಯೋ ಸಿಟಿ ಸೂಪರ್ ಸಿಂಗರ್ ಕಾರ್ಯಕ್ರಮದಲ್ಲಿ ವಿನ್ನರ್ ಆದೆ.''

    ಸಂಗೀತದ ಸಾಧನೆಗೆ ಕೆಲಸ ಬಿಟ್ಟೆ

    ಸಂಗೀತದ ಸಾಧನೆಗೆ ಕೆಲಸ ಬಿಟ್ಟೆ

    ''ಓದು ಮುಗಿದ ಮೇಲೆ ಬೆಂಗಳೂರಿನಲ್ಲಿಯೇ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದೆ. ಬೆಳಗ್ಗೆಯಿಂದ ರಾತ್ರಿ ವರೆಗೆ ಆಫೀಸ್ ಕೆಲಸ ಮಾಡಿ ಸಮಯ ಹಾಳು ಮಾಡುತ್ತಿದ್ದೇನೆ ಅನಿಸಿತು. ಸಂಗೀತದಲ್ಲಿಯೇ ಸಾಧನೆ ಮಾಡಬೇಕು ಅಂತ ಕೆಲಸ ಬಿಟ್ಟೆ. ಮೊದಲು ತುಂಬ ಕಷ್ಟ ಆಗುತ್ತಿತ್ತು. ಚಿತ್ರರಂಗದಲ್ಲಿ ಯಾರ ಸಂಪರ್ಕವೂ ಇರಲಿಲ್ಲ. ಎಲ್ಲಿ ಹೋಗಬೇಕು, ಯಾರನ್ನು ಕೇಳಬೇಕು ಏನು ಗೊತ್ತಿರಲಿಲ್ಲ.''

    ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರ ಪಡೆದ ಸರಿಗಮಪ ಸ್ಪರ್ಧಿ ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರ ಪಡೆದ ಸರಿಗಮಪ ಸ್ಪರ್ಧಿ

    ಅರ್ಜುನ್ ಜನ್ಯ ಸರ್ ಅವಕಾಶ ಕೊಟ್ಟರು

    ಅರ್ಜುನ್ ಜನ್ಯ ಸರ್ ಅವಕಾಶ ಕೊಟ್ಟರು

    ''ಒಮ್ಮೆ ನನ್ನ ಹಾಡು ಕೇಳಿದ್ದ ಅರ್ಜುನ್ ಜನ್ಯ ಸರ್ 'ಸ್ಟೈಲ್ ಕಿಂಗ್' ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಅವರ ಸಿನಿಮಾಗೆ ಹಾಡುವುದಕ್ಕೆ ಮುಂಚೆಯೇ 'ಶಾರ್ಪ್ ಶೂಟರ್' ಎಂಬ ಸಿನಿಮಾದಲ್ಲಿ ಹಾಡಿದೆ. ಒಂದೊಂದೆ ಹಾಡುಗಳನ್ನು ಹಾಡಿತ್ತಾ ಮುಂದೆಕ್ಕೆ ಬಂದೇ. ಎಲ್ಲ ಸಂಗೀತ ನಿರ್ದೇಶಕರು, ಚಿತ್ರದ ನಿರ್ದೇಶಕರು ಪ್ರೋತ್ಸಾಹ ನೀಡಿದರು. ಈಗ ಅವರೇ ಕರೆಸಿ ಹಾಡಿಸುತ್ತಾರೆ.''

    ಹೆಸರು ತಂದು ಕೊಟ್ಟ ಹಾಡುಗಳು

    ಹೆಸರು ತಂದು ಕೊಟ್ಟ ಹಾಡುಗಳು

    ''ಸದ್ಯ 50ಕ್ಕೂ ಹೆಚ್ಚು ಸಿನಿಮಾಗೆ ಹಾಡು ಹಾಡಿದ್ದೇನೆ. 'ಚಮಕ್' ಸಿನಿಮಾದ 'ಅವಲಕ್ಕಿ ಪವಲಕ್ಕಿ..' ಹಾಡು ಒಳ್ಳೆಯ ಬ್ರೇಕ್ ನೀಡಿತು. ಈ ಚಿತ್ರಕ್ಕೆ ಅವಕಾಶ ನೀಡಿದ್ದ ಜೂಡಾ ಸ್ಯಾಂಡಿ ಮತ್ತೆ ತಮ್ಮ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿಯೂ ಹಾಡಿಸಿದರು. 'ಕನಕ' ಸಿನಿಮಾ 'ಪುಟ್ಟ ಪುಟ್ಟ ಕಣ್ಣುಗಳು..', 'ಸ್ಟೈಲ್ ಕಿಂಗ್' ಸಿನಿಮಾದ 'ಗಂಗು ಗಂಗು..' ಹಾಡುಗಳು ಒಳ್ಳೆಯ ಹೆಸರು ತಂದು ಕೊಟ್ಟವು.''

    'ಶಕುಂತ್ಲೆ' ಬಳಿಕ ಮತ್ತೊಂದು ಐತಿಹಾಸಿಕ ಚಿತ್ರದತ್ತ ಹಂಸಲೇಖ ಒಲವು 'ಶಕುಂತ್ಲೆ' ಬಳಿಕ ಮತ್ತೊಂದು ಐತಿಹಾಸಿಕ ಚಿತ್ರದತ್ತ ಹಂಸಲೇಖ ಒಲವು

    ಚೇತನ್ ಪ್ರತಿಭೆ ಮೆಚ್ಚಿದ ಹಂಸಲೇಖ

    ಚೇತನ್ ಪ್ರತಿಭೆ ಮೆಚ್ಚಿದ ಹಂಸಲೇಖ

    ''ಹಂಸಲೇಖ ಸರ್ ಅವರ ಹಾಡುಗಳನ್ನು ಕೇಳಿ ಬೆಳೆದ ಹುಡುಗ ನಾನು. ಈಗ ಅವರ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದರೆ ನನಗೆ ಆಶ್ಚರ್ಯ ಆಗುತ್ತದೆ. ಅವರ ಸಂಗೀತದಲ್ಲಿ ಹಾಡುವ ಭಾಗ್ಯ ನನಗೆ ಸಿಕ್ಕಿದೆ. ಪ್ರತಿಭಾವಂತ ಗಾಯಕ ಎಂದು ಅವರು ನನ್ನ ಹೆಸರನ್ನು ಹೇಳಿದ್ದು ತುಂಬ ಖುಷಿ ಕೊಟ್ಟಿತ್ತು.''

    ನಮ್ಮದೇ ಒಂದು ರಾಕ್ ಬ್ಯಾಂಡ್ ಇದೆ

    ನಮ್ಮದೇ ಒಂದು ರಾಕ್ ಬ್ಯಾಂಡ್ ಇದೆ

    ''ಸಿನಿಮಾಗೆ ಹಾಡುವುದನ್ನು ಬಿಟ್ಟರೆ 'NJPL' ಎಂಬ ನಮ್ಮದೇ ಒಂದು ರಾಕ್ ಬ್ಯಾಂಡ್ ಇದೆ. ಹೇಮಂತ್ ಜೋಯಿಸ್, ಪೃಥ್ವಿ ಮಂಗಿರಿ, ಗಣೇಶ್ ಪ್ರಸಾದ್, ವಿಶಾಲ್ ನೈದ್ರುವ್, ಅರಿನಂದಮ್ ನನ್ನ ಬ್ಯಾಂಡ್ ಮೇಟ್ಸ್. ಅದರಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತೇವೆ, ಬಹಳ ಒಳ್ಳೆಯ ರೆಸ್ಪಾನ್ಸ್ ಇದೆ. ಕನ್ನಡ ಹಾಡನ್ನು ಮಾತ್ರ ನಮ್ಮ ಬ್ಯಾಂಡ್ ನಲ್ಲಿ ಹಾಡುತ್ತೇವೆ. ಕನ್ನಡದ ಹಳೆ ಹಾಡುಗಳಿಗೆ ರಾಕ್ ಮ್ಯೂಸಿಕ್ ನೀಡಿತ್ತೇವೆ.''

    ಮಹಾ ಗುರು ಹಂಸಲೇಖ ಬಳಿ ಕೆಲಸ ಮಾಡಿದ್ದರು ಎ ಆರ್ ರೆಹಮಾನ್ ಮಹಾ ಗುರು ಹಂಸಲೇಖ ಬಳಿ ಕೆಲಸ ಮಾಡಿದ್ದರು ಎ ಆರ್ ರೆಹಮಾನ್

    ಅನೇಕ ಸಂಗೀತ ನಿರ್ದೇಶಕ ಜೊತೆ ಕೆಲಸ ಮಾಡಿದ್ದೇನೆ

    ಅನೇಕ ಸಂಗೀತ ನಿರ್ದೇಶಕ ಜೊತೆ ಕೆಲಸ ಮಾಡಿದ್ದೇನೆ

    ''ಹಂಸಲೇಖ, ಅರ್ಜುನ್ ಜನ್ಯ, ಶ್ರೀಧರ್ ವಿ.ಸಂಭ್ರಮ್, ಜೂರಾ ಸ್ಯಾಂಡಿ, ಡಿ ಇಮಾನ್ ಹೀಗೆ ಅನೇಕ ಸಂಗೀತ ನಿರ್ದೇಶಕ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡಕ್ಕೆ ಈಗ ಹೊಸ ಹೊಸ ರೀತಿಯ ಮ್ಯೂಸಿಕ್ ಬರುತ್ತಿದೆ. ಜನಕ್ಕೆ ಬೇಕಾದ ರೀತಿಯ ಮ್ಯೂಸಿಕ್ ಅನ್ನು ಹೊಸ ಸಂಗೀತ ನಿರ್ದೇಶಕರು ನೀಡುತ್ತಿದ್ದಾರೆ.''

    ಒಳ್ಳೆ ಒಳ್ಳೆಯ ಅವಕಾಶ ಸಿಗುತ್ತಿದೆ

    ಒಳ್ಳೆ ಒಳ್ಳೆಯ ಅವಕಾಶ ಸಿಗುತ್ತಿದೆ

    ಸದ್ಯ ಸಿನಿಮಾಗಳಲ್ಲಿ ಒಳ್ಳೆ ಒಳ್ಳೆಯ ಅವಕಾಶ ಸಿಗುತ್ತಿದೆ. 'ತಾಯಿಗೆ ತಕ್ಕ ಮಗ', 'ಸ್ವಾರ್ಥರಥ', 'ಅಂದವಾದ', 'ಸಿಂಗಲ್', 'ಜಲ್ಲಿಕಟ್ಟು' ಚಿತ್ರಗಳ ಜೊತೆಗೆ ಹಂಸಲೇಖ ಅವರ ಹೊಸ ಆಲ್ಬಂ ಗೆ ಎರಡು ಹಾಡನ್ನು ಇತ್ತೀಚಿಗೆ ಹಾಡಿ ಬಂದೆ.

    English summary
    Kannada singer Chetan Naik interview. Chetan is a playback singer he sing more than 50 movie songs.
    Sunday, July 22, 2018, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X