ಶುರು ಆಯ್ತು ಶೃಂಗೇರಿ ಹುಡುಗನ ಸಿನಿ ಪಯಣ

By Naveen

ಕನ್ನಡ ಚಿತ್ರರಂಗಕ್ಕೆ ಈಗ ಅನೇಕ ಯುವ ಸಾಹಿತಿಗಳು ಬರುತ್ತಿದ್ದಾರೆ. ತಮ್ಮ ಹೊಸ ರೀತಿಯ ಸಾಹಿತ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಶೃಂಗೇರಿಯ ಒಬ್ಬ ಹುಡುಗ ಈಗ ತನ್ನ ಸಾಹಿತ್ಯದ ಮೂಲಕ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದಾನೆ.

ಕಾಲೇಜಿನಲ್ಲಿ ಬೋರ್ ಆಗುತ್ತಿದೆ ಎಂದು ಸುಮ್ಮನೆ ಬರೆದ ಬರಹ ಇಂದು ಆತನನ್ನು ಸಿನಿಮಾ ಸಾಹಿತಿ ಆಗುವಂತೆ ಮಾಡಿದೆ. ಶೃಂಗೇರಿ ಪ್ರತಾಪ್ ಭಟ್ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಹ ಮಾರು ಹೋಗಿದ್ದಾರೆ.

ಅಂದಹಾಗೆ, ಯುವ ಸಿನಿ ಸಾಹಿತಿ ಪ್ರತಾಪ್ ಭಟ್ ತಮ್ಮ ಸಿನಿಮಾಗಳ ಬಗ್ಗೆ ಹಾಗೂ ಸಾಹಿತ್ಯ ಪಯಣದ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಸುಮ್ಮನೆ ಏನೇನೋ ಬರೆಯುತ್ತಿದೆ

ಸುಮ್ಮನೆ ಏನೇನೋ ಬರೆಯುತ್ತಿದೆ

''ದ್ವಿತೀಯ ಪಿಯುಸಿ ಓದುವಾಗ ಕ್ಲಾಸ್ ರೂಮಿನಲ್ಲಿ ಪಾಠ ಹೇಳದೆ ಸುಮ್ಮನೆ ಏನೇನೋ ಬರೆಯುತ್ತಿದೆ. ಅದನ್ನು ಮನೆಯಲ್ಲಿ ಹೋಗಿ ಪೂರ್ಣ ಮಾಡುತ್ತಿದೆ. ಹೀಗೆ ನನ್ನ ಸಾಹಿತ್ಯ ಪಯಣ ಶುರು ಆಯ್ತು. ನಮ್ಮ ತಂದೆ ಕೂಡ ಹೆಚ್ಚು ಪುಸ್ತಕ ಓದುತ್ತಿದ್ದರು. ಪೇಪರ್ ಗಳಿಗೆ ಲೇಖನ ಬರೆಯುತ್ತಿದ್ದರು. ಹಾಗಾಗಿ ನನಗೆ ಕೂಡ ಈ ವಿಷಯದ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತು''.

ಶೃಂಗೇರಿಯಲ್ಲಿಯೇ ಸಾಹಿತ್ಯ ಬರೆಯುತ್ತಿದ್ದೆ

ಶೃಂಗೇರಿಯಲ್ಲಿಯೇ ಸಾಹಿತ್ಯ ಬರೆಯುತ್ತಿದ್ದೆ

''ಕಾಲೇಜಿನಲ್ಲಿ ಮಾಡುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಬಲ, ಕೀ ಬೋರ್ಡ್ ನುಡಿಸುತ್ತಿದ್ದೆ, ಹಾಡು ಹಾಡುತ್ತಿದೆ. ಆದರೆ, ಸಿನಿಮಾಗೆ ಬರಬೇಕೆಂಬ ಪ್ಲಾನ್ ಇರಲಿಲ್ಲ. ಮೊದಲ ಅವಕಾಶದ ನಂತರ ಫೇಸ್ ಬುಕ್, ವಾಟ್ಸ್ ಅಪ್ ಮೂಲಕ ಚಿತ್ರರಂಗದ ಜೊತೆಗೆ ಸಂಪರ್ಕ ಇಟ್ಟುಕೊಂಡೆ. ಶೃಂಗೇರಿಯಲ್ಲಿ ಇದ್ದುಕೊಂಡೆ ಸಾಹಿತ್ಯ ಬರೆದುಕೊಡುತ್ತಿದೆ.''

ಸಾಹಿತ್ಯ ಮೆಚ್ಚಿ ಕರೆದ ರಘು ದೀಕ್ಷಿತ್

ಸಾಹಿತ್ಯ ಮೆಚ್ಚಿ ಕರೆದ ರಘು ದೀಕ್ಷಿತ್

''ಒಮ್ಮೆ ನಾನು ಬರೆದ ಹಾಡನ್ನು ಬ್ಲಾಗರ್ ನಲ್ಲಿ ಹಾಕಿದ್ದರು. ಅದನ್ನು ಫೇಸ್ ಬುಕ್ ನಲ್ಲಿ ರಘು ದೀಕ್ಷಿತ್ ಸರ್ ಓದಿ ಇಷ್ಟ ಪಟ್ಟರು. 2015 ರಲ್ಲಿ ಇದೆಲ್ಲ ಪ್ರಾರಂಭ ಆಯ್ತು. ಒಂದು ಹಾಡು ಮಾಡೋಣ ಅಂತ ರಘು ಸರ್ ಮನೆಗೆ ಕರೆದರು. ಆಗ ನನಗೆ ಬರೆಯುವ ಆಸಕ್ತಿ ಜಾಸ್ತಿ ಆಯ್ತು. ಸಿನಿಮಾ ಸಾಹತ್ಯ ಇಷ್ಟ ಆಗುತ್ತ ಬಂತು.''

ವಾಸು ದೀಕ್ಷಿತ್ ಸಂಗೀತಕ್ಕೆ ಹಾಡು ಬರೆದೆ

ವಾಸು ದೀಕ್ಷಿತ್ ಸಂಗೀತಕ್ಕೆ ಹಾಡು ಬರೆದೆ

''ಬಳಿಕ ರಘು ದೀಕ್ಷಿತ್ ಅವರ ಸಹೋದರ ವಾಸು ದೀಕ್ಷಿತ್ ಅವರ ಮ್ಯೂಸಿಕ್ ಗೆ ಒಂದು ಹಾಡು ಬರೆದೆ. 'ಅಮ್ಮ..' ಅಂತ ಆ ಹಾಡು. ಆ ಹಾಡು ತುಂಬ ದೊಡ್ಡ ಹಿಟ್ ಆಗಿದೆ. ಆ ಹಾಡಿನ ಮೂಲಕ ನನಗೆ ಹೆಚ್ಚು ಅವಕಾಶಗಳ ಬಂತು. ಹೊಸ ಹೊಸ ಅವಕಾಶಗಳು ಈ ಹಾಡಿನ ಮೂಲಕ ಸಿಕ್ಕಿತು.''

ಆಲ್ಬಂ ಹಾಡುಗಳನ್ನು ಬರೆದೆ

ಆಲ್ಬಂ ಹಾಡುಗಳನ್ನು ಬರೆದೆ

''ಬಳಿಕ ಬ್ಯಾಂಡ್ ಗಳಿಗೆ ಹಾಡು ಬರೆದೆ. ಜೋಯಿಸ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದೆ. 'ತುಂತುರು...' ಹಾಡು ಸೇರಿದಂತೆ ಕೆಲ ಆಲ್ಬಂ ಹಾಡುಗಳನ್ನು ಬರೆದೆ. ಇತ್ತೀಚಿಗೆ 'ಸ್ಟೇಟ್ ಮೆಂಟ್ 8/11' ಎಂಬ ಸಿನಿಮಾದಲ್ಲಿ ಒಂದು ಐಟಂ ಸಾಂಗ್ ಪ್ರಯತ್ನ ಮಾಡಿದೆ.''

ಕಿರು ಚಿತ್ರಕ್ಕೆ ಸಂಗೀತ ನಿರ್ದೇಶನ

ಕಿರು ಚಿತ್ರಕ್ಕೆ ಸಂಗೀತ ನಿರ್ದೇಶನ

'ಶೋಧ' ಎಂಬ ಶಾರ್ಟ್ ಮೂವಿಗೆ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ ಮಾಡಿದೆ. ಆದರೆ, ಶಾರ್ಟ್ ಮೂವಿ ಇನ್ನೂ ಬಿಡುಗಡೆಯಾಗಿಲ್ಲ. 'ಮಹಿರಾ' ಎಂಬ ಸಿನಿಮಾ ಒಂದು ಹಾಡು ಬರೆದಿದ್ದೇನೆ. ಇನ್ನು ಎರಡು ಹಾಡು ಅದೇ ಸಿನಿಮಾಗೆ ಬರೆಯಬೇಕಿದೆ. 'ಬ್ರಹ್ಮಿ' ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೇನೆ. ಇವುಗಳ ಜೊತೆಗೆ ಇನ್ನು ಕೆಲವು ಸಿನಿಮಾಗಳು ಇವೆ.''

More from Filmibeat

English summary
Kannada young lyrics writer Pratap Bhatt spoke about his musical journey in an interview with Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X