ಸ್ಟಂಟ್ ಮ್ಯಾನ್ ಗಳ ಕಣ್ಣೀರ ಕಥೆ ಹೇಳಿದ್ದ ಹಂಸ
ಟಿವಿಯಲ್ಲಿ ರಿಯಾಲಿಟಿ ಶೋ ನೋಡುವ ಅಪ್ಪ ಅಮ್ಮನಿಗೆ ತನ್ನ ಮಗ - ಮಗಳು ಈ ರೀತಿಯ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುವ ಆಸೆ ಇರುತ್ತದೆ. ಅಂತಹ ಆಸೆಯನ್ನು ಹಂಸ ಈಡೇರಿಸಿದ್ದಾಳೆ.
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ನೋಡಿ ತನ್ನ ಮಗಳು ಅಂತಹ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಹಂಸ ಅವರ ತಾಯಿ ಕನಸು ಇಟ್ಟುಕೊಂಡಿದ್ದರು. ಅದೇ ವಾಹಿನಿಯ 'ಕನ್ನಡದ ಕಣ್ಮಣಿ' ಕಾರ್ಯಕ್ರಮಕ್ಕೆ ಆಯ್ಕೆ ಆಗುವ ಮೂಲಕ ಹಂಸ ಆ ಕನಸನ್ನು ನನಸು ಮಾಡಿದ್ದಾಳೆ.
ಶಾಲೆಯಲ್ಲಿ ಹಂಸ ಚೆನ್ನಾಗಿ ಮಾತನಾಡುತ್ತಾಳೆ ಎಂದು ಈ ಕಾರ್ಯಕ್ರಮದ ಆಡಿಷನ್ ನಲ್ಲಿ ಭಾಗಿಯಾಗಲು ಅವರ ಶಿಕ್ಷಕರು ಹೇಳಿದರು. ಆ ರೀತಿ ಕಾರ್ಯಕ್ರಮಕ್ಕೆ ಆಗಮಿಸಿದ ಹಂಸ ಇಂದು ಅಂತಿಮ ಹಂತಕ್ಕೆ ಬಂದು ನಿಂತಿದ್ದಾರೆ.

ಯಾವುದೇ ವಿಷಯ ನೀಡಿದರು ತನ್ನ ತನದ ಮೂಲಕ ಹಂಸ ಅದನ್ನು ವೇದಿಕೆ ಮೇಲೆ ನಿಂತು ಮಾತನಾಡುತ್ತಾಳೆ. ಈ ರೀತಿ ಕಾರ್ಯಕ್ರಮದ ಮೂಲಕ ತಮ್ಮ ಆತ್ಮ ವಿಶ್ವಾಸ ಹೆಚ್ಚಾಗಿದೆ ಎನ್ನುತ್ತಾರೆ ಹಂಸ.
ಹಂಸ ಈವರೆಗೆ, ಖಾಸಗಿ ಶಾಲೆ ಶಿಕ್ಷಣ ವ್ಯಾಪಾರಿಕರಣ, ಹೆಣ್ಮಕ್ಳೆ ಬೆಸ್ಟ್, ಇಂದಿನ ಧಾರಾವಾಹಿ, ವಿಜ್ಞಾನ ಒಳ್ಳೆಯದೇ ಕೆಟ್ಟದೆ, ಆಸೆಯೇ ದುಃಖಕ್ಕೆ ಮೂಲ, ಸ್ಟಂಟ್ ಮ್ಯಾನ್ ಈ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸ್ಟಂಟ್ ಮ್ಯಾನ್ ಕಷ್ಟಗಳ ಬಗ್ಗೆ ಮಾತನಾಡಿದ್ದ ಸಂಚಿಕೆ ಹಂಸಗೆ ದೊಡ್ಡ ಹೆಸರು ತಂದುಕೊಟ್ಟಿದೆ.

ಹಂಸ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅವರ ಅಪ್ಪ ಅಮ್ಮನಿಗೂ ಬಹಳ ಖುಷಿ ನೀಡಿದೆಯಂತೆ. ಅಪ್ಪ ಎಷ್ಟೋ ಬಾರಿ ಆಫೀಸ್ ಗೆ ರಜೆ ಹಾಕಿ ಕಾರ್ಯಕ್ರಮಕ್ಕೆ ಬರುತ್ತಾರಂತೆ. ಫೈನಲ್ ನಲ್ಲಿ ತುಂಬ ದೊಡ್ಡ ಸ್ಪರ್ಥೆ ಇದ್ದು, ಗೆಲ್ಲುವ ನಂಬಿಕೆ ಇದೆ ಎಂದರು ಹಂಸ.


Click it and Unblock the Notifications











