ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ
Recommended Video

'ಹಾಯ್ ಹಲೋ ನಮಸ್ಕಾರ.. ನನ್ನ ಹೆಸರು ಸಾನಿಕಾ..' ಹೀಗೆ ಈ ಹುಡುಗಿ ಮಾತನಾಡಲು ಶುರು ಮಾಡಿದರೆ ನಿಲ್ಲಿಸೋದೆ ಇಲ್ಲ. ಯಾಕೆಂದರೆ, ಈ ಹುಡುಗಿ ಆಂಕರ್ ಆಗುವ ಆಸೆ ಹೊಂದಿದ್ದಾರೆ.
ಈಗಾಗಲೇ ತನ್ನ ಯೂಟ್ಯೂಬ್ ಚಾನಲ್ ಹೊಂದಿರುವ ಸನಿಕಾ ಅವರ ಮೂಲಕವೇ ತಮ್ಮ ನಿರೂಪಣಾ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಇದರಿಂದಲೇ ಆಕೆಗೆ 'ಕನ್ನಡದ ಕಣ್ಮಣಿ' ಆಡಿಷನ್ ನಲ್ಲಿ ಅವಕಾಶ ಸಿಕ್ಕಿದೆ.
''ಕನ್ನಡದ ಕಣ್ಮಣಿ' ಕಾರ್ಯಕ್ರಮ ತುಂಬ ಚೆನ್ನಾಗಿತ್ತು. ತುಂಬ ವಿಷಯ ಕಲಿತೆ, ಈ ಕಾರ್ಯಕ್ರಮದಿಂದ ಸಮಾಜದಲ್ಲಿ ಕಷ್ಟದಲ್ಲಿ ಇರುವವರ ಬಗ್ಗೆ ತಿಳಿದುಕೊಂಡೆ. ಅಂತಹವರಿಗೆ ಸಹಾಯ ಮಾಡಲು ನಾನು ಹೆಗಲು ನೀಡುತ್ತೇನೆ'' ಎಂದರು ಸಾನಿಕಾ.

ನರ್ಸ್ ಬಗ್ಗೆ ಅವರ ಕಷ್ಟಗಳ ಬಗ್ಗೆ ಮಾತನಾಡಿದ್ದ ಎಪಿಸೋಡ್ ಸನಿಕಾಗೆ ದೊಡ್ಡ ಹೆಸರು ತಂದುಕೊಟ್ಟಿದೆ. ನರ್ಸ್ ಗಳ ಕಷ್ಟಗಳ ಬಗ್ಗೆ ಹೇಳುತ್ತಾ ಅನೇಕರು ಭಾವುಕರಾಗುವಂತೆ ಸಾನಿಕಾ ಮಾಡಿದ್ದರು.
ಅಪ್ಪ ಅಮ್ಮ ಮಕ್ಕಳಿಗೆ ಸಮಯ ನೀಡುತ್ತಿಲ್ಲ, ಬದುಕಲು ಸಿಟಿ ಚಂದ, ಜನರಿಕ್ ಮೆಡಿಸನ್, ವಿಜ್ಞಾನ ಬೇಡ, ನರ್ಸ್, ಸ್ವಾಮಿ ವಿವೇಕನಂದರ 'ಯೋಚನೆ ಮಾಡದೆ ಆಡುವ ಒಂದೊಂದು ಮಾತು.. ಒಂದೊಂದು ನಿಮಿಷನು ಯೋಚನೆ ಮಾಡುವ ಹಾಗೆ ಮಾಡುತ್ತದೆ'. ಈ ವಿಷಯಗಳ ಬಗ್ಗೆ ಸಾನಿಕಾ ಈವರಗೆ ಮಾತನಾಡಿದ್ದಾರೆ.
ಮುಂದೆ ಡಾಕ್ಟರ್ ಆಗುವ ಆಸೆ ಇದ್ದು, ಜೊತೆಗೆ ಆಂಕರಿಗ್ ಸಹ ಮಾಡುತ್ತೇನೆ ಎಂದರು.


Click it and Unblock the Notifications











