ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್

ಒಂದು ಕಡೆ ಬಸವಣ್ಣನ ವಚನ ಹೇಳುವ ಶ್ರೇಯಾ ಬಿ ಪಾಟೀಲ್ ಮತ್ತೊಂದು ಕಡೆ ಬುಲೆಟ್ ಹೊಡೆದ ರೀತಿ ಮಾತನಾಡುತ್ತಾಳೆ. ತನ್ನ ಮಾತುಗಳು ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವ ತಾಕತ್ತು ಈ ಹುಡುಗಿ ಕಂಠದಲ್ಲಿ ಇದೆ.

'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿ ಶ್ರೇಯಾ ಗಂಡು ಮೆಟ್ಟಿದ ನಾಡು ಹುಬ್ಬಳಿಯಿಂದ ಬಂದಿದ್ದಾಳೆ. ಕಾರ್ಯಕ್ರಮಕ್ಕೆ ಬಂದ ಮೊದಲ ಸಂಚಿಕೆಯಲ್ಲಿಯೇ ಈ ಹುಡುಗಿ ತೊಡೆ ತಟ್ಟಿ ಮಾತನಾಡಿ ಎಲ್ಲರಲ್ಲಿ ರೋಮಾಂಚನ ಉಂಟು ಮಾಡಿದ್ದಳು.

ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಶ್ರೇಯಾ ಕರ್ನಾಟಕದ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾಳೆ. ಆ ಸಂಚಿಕೆ ಆಕೆಗೆ ಒಳ್ಳೆಯ ಹೆಸರು ನೀಡಿದೆ.

kannadada kanmani contestant shreya b patil interview

ಮಹದಾಯಿ, ಇಂದಿನ ದಿನ ಸಂಸ್ಕೃತಿ ಉಳಿಯುತ್ತಿಲ್ಲ, ಭ್ರಷ್ಟಾಚಾರ, ವಿಜ್ಞಾನದ ಅನುಕೂಲ, ಡ್ರೈವರ್, ಪಂಪ ಅವರ 'ಮನುಷ್ಯ ಕುಲಂ ತಾನೋದೆ ಬಲಂ' ಈ ವಿಷಯಗಳ ಬಗ್ಗೆ ಈವರೆಗೆ ಶ್ರೇಯಾ ಮಾತನಾಡಿದ್ದಾಳೆ.

ಶ್ರೇಯಾ ಮಾತು ವೀಕ್ಷಕರಿಗೆ ಎಷ್ಟು ಇಷ್ಟ ಆಗುತ್ತದೆಯೋ, ತೀರ್ಪುಗಾರರಿಗೂ ಅಷ್ಟೇ ಇಷ್ಟ ಆಗುತ್ತಿದೆ. ಸಣ್ಣ ಹುಡುಗಿ ಇದ್ದಾಗಿನಿಂದ ಟಿವಿ ಆಡಿಷನ್ ನಲ್ಲಿ ಪ್ರಯತ್ನ ಮಾಡುತ್ತಿದ್ದ ಶ್ರೇಯಾಗೆ ಈಗ ಒಂದು ಅವಕಾಶ ಸಿಕ್ಕಿದೆ.

ಶಾಲೆಯಲ್ಲಿ ಮತ್ತು ಮನೆಯಲ್ಲಿ ಶ್ರೇಯಾ ಸಾಧನೆಗೆ ಖುಷಿ ಪಡುತ್ತಾರಂತೆ. ಮೂರು ತೀರ್ಪುಗಾರರ ಮುಂದೆ ಮಾತನಾಡುವುದು ನನಗೆ ಹೆಮ್ಮೆ ಅಂತ್ತಾರೆ ಶ್ರೇಯಾ.

More from Filmibeat

English summary
Zee kannada channel 'Kannadada Kanmani' contestant Shreya B Patil interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X