twitter
    For Quick Alerts
    ALLOW NOTIFICATIONS  
    For Daily Alerts

    ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್

    |

    ಒಂದು ಕಡೆ ಬಸವಣ್ಣನ ವಚನ ಹೇಳುವ ಶ್ರೇಯಾ ಬಿ ಪಾಟೀಲ್ ಮತ್ತೊಂದು ಕಡೆ ಬುಲೆಟ್ ಹೊಡೆದ ರೀತಿ ಮಾತನಾಡುತ್ತಾಳೆ. ತನ್ನ ಮಾತುಗಳು ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವ ತಾಕತ್ತು ಈ ಹುಡುಗಿ ಕಂಠದಲ್ಲಿ ಇದೆ.

    'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿ ಶ್ರೇಯಾ ಗಂಡು ಮೆಟ್ಟಿದ ನಾಡು ಹುಬ್ಬಳಿಯಿಂದ ಬಂದಿದ್ದಾಳೆ. ಕಾರ್ಯಕ್ರಮಕ್ಕೆ ಬಂದ ಮೊದಲ ಸಂಚಿಕೆಯಲ್ಲಿಯೇ ಈ ಹುಡುಗಿ ತೊಡೆ ತಟ್ಟಿ ಮಾತನಾಡಿ ಎಲ್ಲರಲ್ಲಿ ರೋಮಾಂಚನ ಉಂಟು ಮಾಡಿದ್ದಳು.

    ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ

    ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಶ್ರೇಯಾ ಕರ್ನಾಟಕದ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾಳೆ. ಆ ಸಂಚಿಕೆ ಆಕೆಗೆ ಒಳ್ಳೆಯ ಹೆಸರು ನೀಡಿದೆ.

    kannadada kanmani contestant shreya b patil interview

    ಮಹದಾಯಿ, ಇಂದಿನ ದಿನ ಸಂಸ್ಕೃತಿ ಉಳಿಯುತ್ತಿಲ್ಲ, ಭ್ರಷ್ಟಾಚಾರ, ವಿಜ್ಞಾನದ ಅನುಕೂಲ, ಡ್ರೈವರ್, ಪಂಪ ಅವರ 'ಮನುಷ್ಯ ಕುಲಂ ತಾನೋದೆ ಬಲಂ' ಈ ವಿಷಯಗಳ ಬಗ್ಗೆ ಈವರೆಗೆ ಶ್ರೇಯಾ ಮಾತನಾಡಿದ್ದಾಳೆ.

    ಶ್ರೇಯಾ ಮಾತು ವೀಕ್ಷಕರಿಗೆ ಎಷ್ಟು ಇಷ್ಟ ಆಗುತ್ತದೆಯೋ, ತೀರ್ಪುಗಾರರಿಗೂ ಅಷ್ಟೇ ಇಷ್ಟ ಆಗುತ್ತಿದೆ. ಸಣ್ಣ ಹುಡುಗಿ ಇದ್ದಾಗಿನಿಂದ ಟಿವಿ ಆಡಿಷನ್ ನಲ್ಲಿ ಪ್ರಯತ್ನ ಮಾಡುತ್ತಿದ್ದ ಶ್ರೇಯಾಗೆ ಈಗ ಒಂದು ಅವಕಾಶ ಸಿಕ್ಕಿದೆ.

    ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ

    ಶಾಲೆಯಲ್ಲಿ ಮತ್ತು ಮನೆಯಲ್ಲಿ ಶ್ರೇಯಾ ಸಾಧನೆಗೆ ಖುಷಿ ಪಡುತ್ತಾರಂತೆ. ಮೂರು ತೀರ್ಪುಗಾರರ ಮುಂದೆ ಮಾತನಾಡುವುದು ನನಗೆ ಹೆಮ್ಮೆ ಅಂತ್ತಾರೆ ಶ್ರೇಯಾ.

    English summary
    Zee kannada channel 'Kannadada Kanmani' contestant Shreya B Patil interview.
    Saturday, May 25, 2019, 12:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X