Just In
Don't Miss!
- Finance
ಅಕ್ಸೆಂಚರ್ ಅನ್ನು ಹಿಂದಿಕ್ಕಿದ ಟಿಸಿಎಸ್: ಜಗತ್ತಿನ ನಂ 1 ಐ.ಟಿ. ಕಂಪನಿ
- News
ಸ್ಟಾರ್ಟ್ ಅಪ್ಗಳ ಅನುಷ್ಠಾನದಲ್ಲಿ ಕರ್ನಾಟಕದ ನಂಬರ್ 1
- Sports
ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನನ್ನ ಹೆಸರಲ್ಲ, ನಮ್ಮೂರಿನ ಹೆಸರನ್ನು ಮುಂದೆ ತರಬೇಕು - ಸೃಷ್ಟಿ

ತನ್ನ ಹೆಸರಿಗಿಂತ, ತನ್ನ ಊರಿನ ಹಾಗೂ ಸರ್ಕಾರಿ ಶಾಲೆಯ ಹೆಸರನ್ನು ಮುಂದೆ ತರಬೇಕು ಎನ್ನುವುದು ಸೃಷ್ಟಿ ಹಿರೇಮಠ್ ಆಸೆಯಂತೆ.
'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಸೃಷ್ಟಿ ಹಿರೇಮಠ್ ಈಗ ಅಂತಿಮ ಹಂತಕ್ಕೆ ಬಂದಿದ್ದಾರೆ. ಇಂತಹ ದೊಡ್ಡ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ ಎಂದು ತಿಳಿದಿರಲಿಲ್ಲ. ಈ ಅವಕಾಶ ನನಗೆ ಸಿಕ್ಕಿದ್ದು ತುಂಬ ಸಂತೋಷ ನೀಡಿದೆ ಎಂದರು ಸೃಷ್ಟಿ.
ಬಿಜಾಪುರದ ಹುಡುಗಿ ವರದಳ ಗಟ್ಟಿ ಮಾತು ಕೇಳೋದೆ ಚಂದ
ಸೃಷ್ಟಿ ಈವರೆಗೆ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ, ಹಳ್ಳಿ, ಮುಖ ನೋಡಿ ಮೊಳ ಹಾಕಬೇಡ, ಶಿಕ್ಷಣದ ಉದ್ದೇಶ ಜೀವನ ಕಲಿಸುವುದು, ಗಾಂಧೀಜಿ ಅವರ 'ಬದಲಾವಣೆ ನಿನ್ನಿಂದಲೇ ಶುರು ಆಗಲಿ' ಇಂತಹ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸೃಷ್ಟಿಗೆ ತಮ್ಮ ಸರ್ಕಾರಿ ಶಾಲೆಯ ಬಗ್ಗೆ ಬಹಳ ಅಭಿಮಾನ ಇದೆ. ತಮ್ಮ ಶಾಲೆಯ ಬಗ್ಗೆ ಮಾತನಾಡಲು ಸೃಷ್ಟಿಗೆ ತುಂಬ ಇಷ್ಟವಂತೆ.
ಶಾಲೆಗೆ ರಜೆ ಇದ್ದ ದಿನ ತಮ್ಮ ನಾಲ್ಕು ಗೆಳತಿಯರ ಜೊತೆಗೆ ಆಡಿಷನ್ ನೀಡಿದ್ದರು. ಅದರಲ್ಲಿ ಸೃಷ್ಟಿ ಆಯ್ಕೆ ಆಗಿ, ಮೆಗಾ ಆಡಿಷನ್ ನಲ್ಲಿಯೂ ಪಾಸ್ ಆದರು.
ಗಂಡು ಮೆಟ್ಟಿದ ನಾಡಿನ ಶ್ರೇಯಾಳ ಮಾತೇ ಬುಲೆಟ್
ಸೃಷ್ಟಿ ಈ ಹಂತಕ್ಕೆ ಬಂದಿರುವುದಕ್ಕೆ ಇಡೀ ಊರಿನವರು ಹೆಮ್ಮೆ ಪಡುತ್ತಿದ್ದಾರಂತೆ. ನಮ್ಮ ತಾಲ್ಲೂಕು, ನಮ್ಮ ಊರು ಯಾವುದರಲ್ಲಿಯೂ ಫೇಮಸ್ ಇರಲಿಲ್ಲ. ನೀನು ನಮ್ಮ ಊರಿನ ಹೆಸರನ್ನು ಕರ್ನಾಟಕಕ್ಕೆ ತಿಳಿಯುವಂತೆ ಮಾಡಿದೆ ಎನ್ನುತ್ತಿದ್ದಾರಂತೆ.
''ನಮ್ಮ ಸರ್ಕಾರಿ ಶಾಲೆ ಹಾಗೂ ನಮ್ಮ ಊರನ್ನು ಮುಂದೆ ತರಬೇಕು'' ಎನ್ನುವುದು ಸೃಷ್ಟಿ ಅವರ ಆಸೆಯಾಗಿದೆ.