twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಸಿನಿಮಾ ಮೇಲೆ ಹಿಂದಿ ಸಿನಿಮಾ ಪ್ರಭಾವ ದೊಡ್ಡದು: ಫಿಲ್ಮಿಬೀಟ್ ಜೊತೆ ರಿಷಬ್ ಶೆಟ್ಟಿ

    |

    'ಕಾಂತಾರ' ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿದೆ. ಅದರಲ್ಲಿಯೂ ಬಾಲಿವುಡ್ ಭಾಗದಲ್ಲಿ ಕೆಲವೇ ದಿನಗಳಲ್ಲಿಯೇ 55 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುಂದೆ ಸಾಗುತ್ತಿದೆ.

    ಬಾಲಿವುಡ್ ಪ್ರದೇಶದಲ್ಲಿ ಸಿನಿಮಾ ದೊಡ್ಡ ಹಿಟ್ ಆದ ಬೆನ್ನಲ್ಲೆ ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಅಭಿಮಾನಿ ವರ್ಗವೊಂದು ಸೃಷ್ಟಿಯಾಗಿದೆ. ಮಾಧ್ಯಮಗಳಲ್ಲಿ ಸತತವಾಗಿ ರಿಷಬ್ ಶೆಟ್ಟಿ ಸಂದರ್ಶನಗಳು ಪ್ರಸಾರವಾಗುತ್ತಿವೆ.

    ಇದೀಗ ರಿಷಬ್ ಶೆಟ್ಟಿ, ಫಿಲ್ಮಿಬೀಟ್ ಇಂಗ್ಲೀಷ್‌ ಜೊತೆಗೆ ವಿಶೇಷ ಸಂದರ್ಶನ ನೀಡಿದ್ದು, 'ಕಾಂತಾರ' ಸಿನಿಮಾದ ಜೊತೆಗೆ ಬಾಲಿವುಡ್ ಸಿನಿಮಾ, ಅದರ ಏರಿಳಿತ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

    ಆ ಚರ್ಚೆಯಲ್ಲಿ ನಾನಿಲ್ಲ: ರಿಷಬ್ ಶೆಟ್ಟಿ

    ಆ ಚರ್ಚೆಯಲ್ಲಿ ನಾನಿಲ್ಲ: ರಿಷಬ್ ಶೆಟ್ಟಿ

    ''ಬಾಲಿವುಡ್‌ನಲ್ಲಿ ಅದಾಗುತ್ತಿದೆ. ದಕ್ಷಿಣ ಭಾರತ ಸಿನಿಮಾಗಳು ಮೇಲುಗೈ ಸಾಧಿಸುತ್ತಿವೆ ಎಂಬೆಲ್ಲ ಅನವಶ್ಯಕ ಚರ್ಚೆಯಲ್ಲಿ ನಾನಿಲ್ಲ. ಪ್ರತಿಯೊಂದು ಚಿತ್ರರಂಗಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ತನ್ನದೇ ನೆಲೆಯಲ್ಲಿ ಮುಖ್ಯವಾದದ್ದಾಗಿರುತ್ತದೆ. ಭಾರತೀಯ ಸಿನಿಮಾಕ್ಕೆ ಹಿಂದಿ ಸಿನಿಮಾದ ಯೋಗದಾನ ಬಹುದೊಡ್ಡದು, ಅದನ್ನು ನಾವು ಮರೆಯುವಂತಿಲ್ಲ'' ಎಂದಿದ್ದಾರೆ ರಿಷಬ್ ಶೆಟ್ಟಿ.

    ಚಿತ್ರರಂಗದಲ್ಲಿ ಏರಿಳಿತ ಸಾಮಾನ್ಯ: ರಿಷಬ್

    ಚಿತ್ರರಂಗದಲ್ಲಿ ಏರಿಳಿತ ಸಾಮಾನ್ಯ: ರಿಷಬ್

    ''ಏರಿಳಿತಗಳು ಪ್ರತಿಯೊಂದು ಚಿತ್ರರಂಗದಲ್ಲಿಯೂ ಇರುತ್ತವೆ. ಸಿನಿಮಾ ನೋಡುವ ಪ್ರೇಕ್ಷಕನಲ್ಲಿ ಬದಲಾವಣೆ ಆಗುತ್ತದೆ. ಅವನ ಅಪೇಕ್ಷೆಗಳು ಬದಲಾಗುತ್ತವೆ. ಒಟಿಟಿಗಳಿಂದ ಅವರ ಆಯ್ಕೆಯೂ ಬದಲಾಗಿದೆ. ಬೇರೆ ಥರಹದ ಸಿನಿಮಾಗಳನ್ನು ನೋಡುವ ಅಪೇಕ್ಷೆ ಪ್ರೇಕ್ಷಕನಲ್ಲಿದೆ. ಒಟಿಟಿಗಳಿಂದಾಗಿ ವಿಶ್ವ ಸಿನಿಮಾಗಳನ್ನು ಅವರು ನೋಡುತ್ತಿದ್ದಾರೆ. ಹಾಗಾಗಿ ಒರಿನಲ್ ಕಂಟೆಂಟ್ ಅವರಿಗೆ ಹೆಚ್ಚು ಇಷ್ಟವಾಗುತ್ತಿದೆ'' ಎಂದಿದ್ದಾರೆ ರಿಷಬ್ ಶೆಟ್ಟಿ.

    ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್ ಹಿಟ್

    ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್ ಹಿಟ್

    ರಿಷಬ್ ಶೆಟ್ಟಿ ನಟಿಸಿರುವ 'ಕಾಂತಾರ' ಸಿನಿಮಾ ಹಿಂದಿ ಭಾಷಿಕ ಪ್ರದೇಶದಲ್ಲಿ ಸೂಪರ್-ಡೂಪರ್ ಹಿಟ್ ಆಗಿದೆ. ಕನ್ನಡದಲ್ಲಿ ಬಿಡುಗಡೆ ಆಗಿ ಒಂದು ವಾರದ ಬಳಿಕ ಹಿಂದಿ ಭಾಷೆಗೆ ಡಬ್ ಆಗಿ 'ಕಾಂತಾರ' ಸಿನಿಮಾ ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಹಿಂದಿ ಭಾಷಿಕ ಪ್ರದೇಶದಲ್ಲಿ ಮಾತ್ರವೇ ಕಾಂತಾರ ಸಿನಿಮಾ 55 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾ ಒಟ್ಟಾರೆಯಾಗಿ 200 ಕೋಟಿ ಕಲೆಕ್ಷನ್ ಅನ್ನು ದಾಟಿ ಮುಂದೆ ಸಾಗಿದೆ. 'ಕೆಜಿಎಫ್ 2' ದಾಖಲೆಗಳನ್ನು ಸಹ ಕೆಲವೆಡೆ ಮುರಿದು ಹಾಕಿದೆ.

    ಹೋಂಬಾಳೆ ಫಿಲಮ್ಸ್ ಬಂಡವಾಳ

    ಹೋಂಬಾಳೆ ಫಿಲಮ್ಸ್ ಬಂಡವಾಳ

    'ಕಾಂತಾರ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು, ಅವರೇ ನಟಿಸಿದ್ದಾರೆ ಸಹ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿದ್ದಾರೆ. ಪ್ರಮುಖ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಆದರೆ ಸಿನಿಮಾದ 'ವರಾಹ ರೂಪಂ' ಹಾಡು ವಿವಾದಕ್ಕೆ ಕಾರಣವಾಗಿದೆ. ಸಿನಿಮಾಕ್ಕೆ ಬಂಡವಾಳ ಹಾಕಿರುವುದು ಹೊಂಬಾಳೆ ಫಿಲಮ್ಸ್.

    English summary
    Kantara movie director, actor Rishab Shetty interview with Filmibeat. He talks about Bollywood, South Indian movie industry, OTT and many other things.
    Monday, November 7, 2022, 19:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X