Akshata Deshpande: ಬೆಳಗಾವಿಯಿಂದ ಬೆಂಗಳೂರಿಗೆ ಹೆಜ್ಜೆ ಹಾಕಿದ ಕೃತಿ ಉರ್ಫ್ ಅಕ್ಷತಾ ಜರ್ನಿ ಹೇಗಿತ್ತು?

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಬರ್ತಾ ಇದೆ. ಅದರಲ್ಲಿ ಕೃತಿಯ ಪಾತ್ರವನ್ನು ಎಲ್ಲರೂ ಮೆಚ್ಚಿ ಕೊಂಡಾಡಿರುತ್ತೀರಿ. ಯಾಕಂದ್ರೆ ಕೃತಿ, ನ್ಯಾಯದ ಪರ ನಿಲ್ಲುವವಳು, ಅನ್ಯಾಯವನ್ನು ಬಡಿದು ಓಡಿಸುವವಳು, ತನ್ನ ಸಂಸಾರಕ್ಕಾಗಿ ಹಗಲು ರಾತ್ರಿಯೆನ್ನದೆ ಕಷ್ಟಪಡುವವಳು. ಆದ್ರೆ ಇಂಥ ಕೃತಿಯ ರಿಯಲ್ ಲೈಫ್ ಹೇಗಿದೆ ಎಂಬುದನ್ನು ಫಿಲ್ಮಿ ಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.

ಸದ್ಯ ಬಹದ್ದೂರ್ ಮನೆಯ ಸೊಸೆಯಾಗಿ, ಎಲ್ಲರ ಹಿತವನ್ನೇ ಬಯಸುತ್ತಾಳೆ. ಸದ್ಯ ಅಕ್ಕನ ಜೀವನಕ್ಕಾಗಿ ಬಹದ್ದೂರ್ ಮನೆಯಲ್ಲಿಯೇ ಹೋರಾಟ ಮುಂದುವರೆಸಿದ್ದಾಳೆ. ಅಕ್ಕನ ಮದುವೆಯನ್ನು ಮಾಡಿ ಮುಗಿಸಿದ್ದಾಳೆ. ಕೃತಿ ಪಾತ್ರ ಮಾಡಿರುವ ಅಕ್ಷತಾ ದೇಶಪಾಂಡೆ ರಿಯಲ್ ಲೈಫ್‌ನಲ್ಲೂ ಇಷ್ಟೇ ಖಡಕ್ ಅಂತೆ.

Katheyondu Shuruvagide Kruthi Fame Akshata Deshpande Life Story

ಯಾವಾಗಿಂದ ಶುರು ಮಾಡಿದ್ರು ಆಕ್ಟಿಂಗ್..?

ಅಕ್ಷತಾ ಅವರನ್ನು ಫಿಲ್ಮಿಬೀಟ್ ಮಾತನಾಡಿಸಿದಾಗ ಅವರ ನಟನೆಯ ಆರಂಭದ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ, "ಫಸ್ಟ್ ಇಯರ್ ಸೆಕೆಂಡ್ ಇಯರ್ ಎಲ್ಲಾ ಇದ್ದಾಗ ಲೈಫ್‌ನಲ್ಲಿ ಏನು ಮಾಡಬೇಕು ಎಂಬುದು ಗೊತ್ತಿರಲಿಲ್ಲ. ನನ್ನ ಅಕ್ಕನಿಗೆ ಫ್ಯಾಷನ್ ಡಿಸೈನಿಂಗ್ ನಲ್ಲೆಲಾ ಇಂಟ್ರೆಸ್ಟಿಂಗ್ ಇತ್ತು. ಓದುವುದರಲ್ಲೂ ನಾನು ಟಾಪರ್ ಅಲ್ಲ. ಬೇರೆ ಬೇರೆ ಆಕ್ಟಿವಿಟೀಸ್‌ನಲ್ಲೂ ನಾನು ಮುಂದೆ ಇರಲಿಲ್ಲ. ಲೈಫ್‌ನಲ್ಲಿ ಮುಂದೆ ಏನು ಮಾಡಬೇಕು ಎಂಬ ಯೋಚನೆ ಮಾಡುತ್ತಿರುವಾಗ, ನಟನೆಯಲ್ಲಿ ಆಸಕ್ತಿ ಇತ್ತು. ಆದರೆ ಹೇಗೆ ಬರುವುದು ಎಂಬುದರ ಐಡಿಯಾ ಇರಲಿಲ್ಲ. ಈ ಫೀಲ್ಡ್‌ನಲ್ಲಿ ನಂಗೆ ಫ್ರೆಂಡ್ಸ್ ಇರಲಿಲ್ಲ. ಫ್ಯಾಮಿಲಿಯವರು ಇರಲಿಲ್ಲ. ಬೆಂಗಳೂರು ಬರುವುದು ಅಂದ್ರೆ ದೊಡ್ಡ ಮಾತಾಗಿತ್ತು ನಮಗೆ. ಮನೆಯಲ್ಲೂ ಚಿಕ್ಕವಳು ಅಂತ ಕಳುಹಿಸುತ್ತಾ ಇರಲಿಲ್ಲ. ಫೇಸ್ ಬುಕ್‌ನಲ್ಲಿ ಒಮ್ಮೆ ಮೆಸೇಜ್ ಬಂದಿತ್ತು. ಇಂಡಸ್ಟ್ರಿಯವರು. ಸೀರಿಯಲ್‌ನಲ್ಲಿ ಅವಕಾಶವಿದೆ ಅಂತ. ನಾನು ಮೊದಲಿಗೆ ನಂಬಿರಲಿಲ್ಲ. ಆಮೇಲೆ ಮತ್ತೊಮ್ಮೆ ಬಂದಾಗ ಒಮ್ಮೆ ಟ್ರೈ ಮಾಡಿದ್ದೆ."

ಏನೋ ಸಾಧಿಸಿ ಬಿಡ್ತೀನಿ ಅಂದುಕೊಂಡಿದ್ದೆʼ

"ಮೊದಲ ಆಡಿಷನ್‌ನಲ್ಲಿಯೇ ನೆಗೆಟಿವ್ ರೋಲ್‌ಗೆ ಸೆಲೆಕ್ಟ್ ಆಗಿದ್ದೆ. ವರ್ಕ್ ಶಾಪ್ ಇರುತ್ತೆ ಎಂದಾಗ ಲಗೇಜ್ ಎಲ್ಲಾ ಪ್ಯಾಕ್ ಮಾಡಿಕೊಂಡು ಬೆಂಗಳೂರಿಗೆ ಬಂದೆ. ಆ ಟೈಮ್ ನಲ್ಲಿ ನನ್ನ ಎಕ್ಸಾಂ ಕೂಡ ಸ್ಕಿಪ್ ಮಾಡುವುದಕ್ಕೆ ಸಿದ್ದವಾಗಿದ್ದೆ. ಏನೋ ನಾನು ಈ ಫೀಲ್ಡ್ ನಲ್ಲಿ ದೊಡ್ಡ ಹೆಸರು ಮಾಡಿ ಬಿಡ್ತೀನಿ ಅಂತ. ಆದ್ರೆ ಆಮೇಲೆ ಮೂರು ದಿನದಲ್ಲಿಯೇ ನನ್ನ ಪಾತ್ರಕ್ಕೆ ರಿಪ್ಲೇಸ್ ಮಾಡಿದ್ರು. ತಂಗಿ ಪಾತ್ರಕ್ಕೆ ಹೇಳಿದ್ರು. ನಾನು ಒಪ್ಪದೆ ಮತ್ತೇ ಬೆಳಗಾವಿಗೆ ಹೋದೆ. ಎಕ್ಸಾಂ ಬರೆದೆ. ಹಳೆ ಸೀರಿಯಲ್‌ಗೆ ಸಾಕಷ್ಟು ಹಣ ಖರ್ಚು ಮಾಡಿದ್ದೆ. ಆಡಿಷನ್‌ಗೆ ಅಂತ ಮತ್ತೆ ಕರೆದಾಗ ನಾನು ಬರಲ್ಲ, ಫೈನಲ್ ಸೆಲೆಕ್ಟ್ ಆದ್ಮೇಲೆ ಹೇಳಿ ಅಂದಿದ್ದೆ. ಯಾಕಂದ್ರೆ, ಮತ್ತೆ ಮತ್ತೆ ಅಪ್ಪ ಅಮ್ಮನ ಬಳಿ ಹಣ ತೆಗೆದುಕೊಳ್ಳುವುದಕ್ಕೆ ನನಗೆ ಇಷ್ಟವಿರಲಿಲ್ಲ. ಇಲ್ಲ ನೀವೇ ಸೆಲೆಕ್ಟ್ ಆಗಿದ್ದೀರಿ ಬನ್ನಿ ಎಂದಾಗ, ಹೋದೆ. ಅಲ್ಲಿಂದ ನನ್ನ ಜರ್ನಿ ಶುರುವಾಯ್ತು"

Katheyondu Shuruvagide Kruthi Fame Akshata Deshpande Life Story

ಅಕ್ಷತಾ ಅಪ್ಪ ಅಮ್ಮ ಹೇಳಿದ್ದೇನು..?

"ನನ್ನ ಅಪ್ಪ ಅಮ್ಮನಿಗೆ ಇಷ್ಟವಿರಲಿಲ್ಲ. ಹೊರಗೆ ಮಾತುಗಳು ಬೇರೆ ಬೇರೆ ಬರುತ್ತಾ ಇರುತ್ತೆ ಅಂತ. ಆದ್ರೆ, ನನ್ನ ಜೊತೆಗೆ ನನ್ನ ಅಕ್ಕ ಬರ್ತಾ ಇದ್ಲು. ಅವಳು ಅಪ್ಪ ಅಮ್ಮನಿಗೆ ಹೇಳ್ತಾ ಇದ್ಲು. ಆ ರೀತಿಯೆಲ್ಲಾ ಏನು ಇರಲ್ಲ. ನಾವೂ ಹೇಗೆ ನಡೆದುಕೊಳ್ಳುತ್ತೀವಿ ಆ ರೀತಿ ಇರುತ್ತೆ ಅಂತ ಅಪ್ಪ ಅಮ್ಮನಿಗೆ ಹೇಳಿದಾಗ, ಒಪ್ಪಿದ್ರು. ಆಮೇಲೆ ಅಪ್ಪ ಅಮ್ಮ ಕೂಡ ಸೆಟ್‌ಗೆ ಬಂದು ನೋಡಿದಾಗ ಸಮಾಧಾನಗೊಂಡಿದ್ದರು. ಆತಂಕ ಇತ್ತು. ಏನೋ ಬಂದು ಬಿಟ್ಟಿದ್ದೀನಿ. ನನ್ನ ಕೈನಲ್ಲಿ ಆಗುತ್ತಾ..? ಜನ ನನ್ನ ರಿಸೀವ್ ಮಾಡಿಕೊಳ್ಳುತ್ತಾರಾ ಎಂಬ ಭಯವಿತ್ತು. ಇದೊಂದು ಗಾಢ್ ಗಿಫ್ಟ್ ಅಂತಾನೆ ಹೇಳಬಹುದು. ಬೆಂಗಳೂರು ಕನ್ನಡ ಬೇಗ ಬಂತು. ಮತ್ತೆ ನಂಗೆ ಮೆಮೊರಿ ಪವರ್ ಇರೋದ್ರಿಂದ ಡೈಲಾಗ್ ಎಲ್ಲಾ ನೆನಪಿಟ್ಟುಕೊಳ್ತಿದ್ದೆ. ಆದ್ರೆ ಈಗ ಹೇಗೆ ಆಗೋಗಿದೆ ಅಂದ್ರೆ ನಂಗೆ ಈಗ ಕ್ಯಾಮೆರಾ, ನಟನೆಯೇ ಲೈಫ್ ಎನಿಸಿಬಿಟ್ಟಿದೆ. ನಂಗೆ ಈಗ ಏನು ಭಯವಿಲ್ಲ"

ಕಥೆಯೊಂದು ಶುರುವಾಗಿದ್ದು ಹೇಗೆ..?

"ಕಥೆಯೊಂದು ಶುರುವಾಗಿದೆ ಧಾರಾವಾಹಿ ಒಪ್ಪಿಕೊಳ್ಳುವುದಕ್ಕೆ ಕಾರಣ ಸ್ಟಾರ್ ಸುವರ್ಣ. ಮತ್ತೊಂದು ಕಾರಣ ಅನಿಲ್ ಕೋರಮಂಗಲ ಸರ್. ಅಮೃತ ವರ್ಷಿಣಿ ಧಾರಾವಾಹಿಯಲ್ಲೂ ಇವರೇ ಡೈರೆಕ್ಟರ್. ಅವರೇ ಕೇಳಿದಾಗ ನಾನು ಒಪ್ಪಿಕೊಂಡೆ. ಆಮೇಲೆ ನಾನು ಕಥೆ ಕೇಳಿದೆ. ಕೃತಿ ಪಾತ್ರ ನನಗೆ ತೀರಾ ಹತ್ತಿರವಾದಂತಹ ಕ್ಯಾರೆಕ್ಟರ್. ರಿಯಲ್ ಲೈಫ್‌ನಲ್ಲೂ ನಾವಿಬ್ಬರೇ ಹೆಣ್ಣು ಮಕ್ಕಳು. ನಮ್ಮಿಬ್ಬರಿಗೂ ಇಂಥದ್ದೇ ಆಸೆ ಇರುವುದು. ಹೀಗಾಗಿ ರಿಯಲ್ ಲೈಫ್‌ಗೆ ಹತ್ತಿರ ಅಂತ ಒಪ್ಪಿಕೊಂಡೆ" ಎಂದು ನಟಿ ಕೃತಿ ಹೇಳಿದ್ದಾರೆ.

More from Filmibeat

English summary
Katheyondu Shuruvagide Kruthi Fame Akshata Deshpande Life Story . Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X