ಸಂದರ್ಶನ : 'ಕೆಜಿಎಫ್' ಎನ್ನುವುದು ಹತ್ತು ಸಿನಿಮಾಗಳಿಗೆ ಸಮ

ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಸುತ್ತಾಟ. ಸಂದರ್ಶನಗಳ ಮೇಲೆ ಸಂದರ್ಶನಗಳು. ನೂರಾರು ಪ್ರಶ್ನೆಗಳಿಗೆ ಉತ್ತರಗಳು. ಪತ್ರಿಕಾ ಗೋಷ್ಠಿಗಳು ಹೀಗೆ ಕಳೆದ ಒಂದು ತಿಂಗಳಿಂದ ಈ ಕೆಲಸಗಳಲ್ಲಿಯೇ ಮುಳುಗಿ ಹೋಗಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ.

'ಕೆಜಿಎಫ್' ಕ್ವೀನ್ ಶ್ರೀನಿಧಿ ಶೆಟ್ಟಿ ಬಹಳ ಉತ್ಸುಕರಾಗಿದ್ದಾರೆ. ಇನ್ನು ಒಂದೇ ಒಂದು ದಿನದಲ್ಲಿ ಅವರ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ದಿನ ಸೂರ್ಯ ಮುಳುಗಿ ಮತ್ತೆ ನಾಳೆ ಹುಟ್ಟಿದಾಗ ಅವರೂ ಚಿತ್ರರಂಗದಲ್ಲಿ ಹುಟ್ಟುತ್ತಾರೆ.

ಜನರೇ ಈ ಮಟ್ಟಿಗೆ 'ಕೆಜಿಎಫ್' ಸಿನಿಮಾ ಬಗ್ಗೆ ಕಾಯುತ್ತಿದ್ದಾರೆ ಎಂದ ಮೇಲೆ ಶ್ರೀನಿಧಿಗೆ ಈ ಕ್ಷಣದಲ್ಲಿ ಹೇಗನಿಸುತ್ತಿರಬೇಕು ಯೋಚಿಸಿ. ಈ ಬ್ಯುಸಿಯ ನಡುವೆ ಈಗ ನಮ್ಮ ಜೊತೆಗೆ ಕೆಲ ನಿಮಿಷಗಳ ಕಾಲ ಶ್ರೀನಿಧಿ ಮಾತನಾಡಿದ್ದಾರೆ.

ಅಬ್ಬರಿಸಲು ಸಿದ್ಧವಾಗಿರುವ 'ಕೆಜಿಎಫ್' ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಅದರ ನಾಯಕಿ ಶ್ರೀನಿಧಿ ಶೆಟ್ಟಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಪೂರ್ಣ ಸಂದರ್ಶನ ಮುಂದಿದೆ ಓದಿ..

ಸಂದರ್ಶನ : ನವೀನ (ನವಿಕನಸು)

ರಿಲೀಸ್ ಗೆ ಒಂದೇ ದಿನ ಬಾಕಿ ಇದೆ ಹೇಗನಿಸುತ್ತಿದೆ?

ರಿಲೀಸ್ ಗೆ ಒಂದೇ ದಿನ ಬಾಕಿ ಇದೆ ಹೇಗನಿಸುತ್ತಿದೆ?

''ನಾನು ಪ್ರೇಕ್ಷಕರ ರೀತಿಯೇ ಕುತೂಹಲದಿಂದ ಕಾಯುತ್ತಿದ್ದೇನೆ. ರಿಲೀಸ್ ಗೆ ಇನ್ನು ಒಂದೇ ಒಂದು ದಿನ ಬಾಕಿ ಇದೆ. ನನ್ನೊಳಗೆ ಎಲ್ಲ ಭಾವನೆಗಳ ಇವೆ. ಸಿನಿಮಾ ಆಗ ರಿಲೀಸ್ ಆಗುತ್ತೆ, ಈಗ ರಿಲೀಸ್ ಆಗುತ್ತೆ ಅಂತ ಕಾಯ್ತ ಇದ್ದೆವು. ಫೈನಲಿ ನಾಳೆ ಸಿನಿಮಾ ಬಿಡುಗಡೆಯಾಗುತ್ತಿದೆ. ನಾನು ಸ್ಕ್ರೀನ್ ನಲ್ಲಿ ಹೇಗೆ ಕಾಣುತ್ತೇನೆ. ಜನ ಏನ್ ಹೇಳುತ್ತಾರೆ ಅಂತ ಕಾಯುತ್ತಿದ್ದೇನೆ.''

ಇಷ್ಟೊಂದು ಸಂದರ್ಶನ ನೀಡಿದ್ದೀರಿ, ಅದರಲ್ಲಿ ಬೆಸ್ಟ್ ಇಂಟರ್ ವ್ಯೂ, ಬೆಸ್ಟ್ ಪ್ರಶ್ನೆ ಯಾವ್ದಾದ್ರೂ?

ಇಷ್ಟೊಂದು ಸಂದರ್ಶನ ನೀಡಿದ್ದೀರಿ, ಅದರಲ್ಲಿ ಬೆಸ್ಟ್ ಇಂಟರ್ ವ್ಯೂ, ಬೆಸ್ಟ್ ಪ್ರಶ್ನೆ ಯಾವ್ದಾದ್ರೂ?

''ಹಾಗೇನು ಇಲ್ಲ, ನನ್ನ ಮೊದಲ ಸಿನಿಮಾ ಆಗಿರುವ ಕಾರಣ ಎಲ್ಲರೂ ಒಂದೇ ರೀತಿಯ ಪ್ರಶ್ನೆಗಳನ್ನೇ ಹೆಚ್ಚು ಕೇಳುತ್ತಿದ್ದರು. ಆದರೆ, ಖುಷಿ ಏನೆಂದರೆ, ಎಲ್ಲರೂ ಮಾತನಾಡುವಾಗ ನಿಮ್ಮ ಮೊದಲ ಸಿನಿಮಾಗೆ ಇಂತಹ ಅವಕಾಶ ಸಿಕ್ಕಿದೆ ಅಂತ್ತಾರೆ. 'ಕೆಜಿಎಫ್' ಒಂದು ಸಿನಿಮಾ ನಾನು ಹತ್ತು ಸಿನಿಮಾ ಮಾಡುವುದರ ಸಮ. ಐ ಯಾವ್ ವೆರಿ ಗ್ರೇಟ್ ಫುಲ್''

ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಅಂತ ಓಡಾಡುತ್ತಲೇ ಇದ್ದೀರಿ.. ಊಟನಾದ್ರೂ ಮಾಡೋಕ್ಕೆ ಟೈಂ ಆಗುತ್ತಿದ್ಯಾ?

ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಅಂತ ಓಡಾಡುತ್ತಲೇ ಇದ್ದೀರಿ.. ಊಟನಾದ್ರೂ ಮಾಡೋಕ್ಕೆ ಟೈಂ ಆಗುತ್ತಿದ್ಯಾ?

(ನಗುತ್ತಾ) ''ನಿಜ ಹೇಳುತ್ತಿದ್ದೇನೆ ನಾನು ತುಂಬ ಊಟ ಮಾಡುವವಳು. ಆದರೆ, ಇಂಟರ್ ವ್ಯೂ, ಪ್ರಮೋಷನ್ ಗಳ ನಡುವೆ ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೇನೆ. ಆದರೂ ನನಗೆ ಇದೆಲ್ಲ ಖುಷಿ ಇದೆ. 'ಕೆಜಿಎಫ್' ನಮ್ಮೆಲ್ಲರ ಮಗು. ಇನ್ನು ಒಂದು ದಿನದಲ್ಲಿ ಹೆರಿಗೆ ಆಗುತ್ತದೆ. ಆ ಖುಷಿ ನಮ್ಮಲ್ಲಿ ಇದೆ. ಎಲ್ಲ ಕಡೆ ಪ್ರಮೋಷನ್ ಮುಗಿಸಿ ಈಗ ಕನ್ನಡ ಮೀಡಿಯಾ ಪ್ರಮೋಷನ್ ಮಾಡುತ್ತಿದ್ದೇವೆ. ಊಟ, ನಿದ್ದೆ ಇಲ್ಲದಿದ್ದರೂ ಪರವಾಗಿಲ್ಲ.''

'ಕೆಜಿಎಫ್' ನಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

'ಕೆಜಿಎಫ್' ನಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

''ಕೆಜಿಎಫ್' ಎನ್ನುವುದು ರಾಕಿಯ ಪಾತ್ರದ ಜರ್ನಿ. ಆ ಜರ್ನಿಯಲ್ಲಿ ನನ್ನ ಪಾತ್ರ ಕೂಡ ಬರುತ್ತದೆ. ಸಿನಿಮಾದಲ್ಲಿ ಹೊಸ ಹೊಸ ಪಾತ್ರಗಳಿವೆ. ರೆಟ್ರೋ ಸ್ಟೈಲ್ ನಲ್ಲಿ ನನ್ನ ಲುಕ್ ಇದೆ. ರಾಕಿ ಮತ್ತು ನನ್ನ ಪಾತ್ರ ವಿರುದ್ಧವಾಗಿದೆ. ನನ್ನ ಪಾತ್ರಕ್ಕೆ ಪೊಗರು ಇದೆ. ಪಾರ್ಟ್ 1, 2 ಎರಡೂ ಸೇರಿಸಿ ತುಂಬ ಶೇಡ್ ನನಗಿದೆ.''

'ಕೆಜಿಎಫ್' ಈ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡುತ್ತದೆ ಎಂಬ ಊಹೆ ಮೊದಲು ಇತ್ತೆ.?

'ಕೆಜಿಎಫ್' ಈ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡುತ್ತದೆ ಎಂಬ ಊಹೆ ಮೊದಲು ಇತ್ತೆ.?

''ನಾನು ಸಿನಿಮಾ ಆಯ್ಕೆ ಮಾಡಿದಾಗ 'ಕೆಜಿಎಫ್' ಕನ್ನಡ ಹೈ ಬಜೆಟ್ ಸಿನಿಮಾ ಎಂಬುದು ಮಾತ್ರ ಗೊತ್ತಿತ್ತು. ಪ್ರಶಾಂತ್ ನೀಲ್ ಹೆಸರು ಇರುವ ಕಾರಣ ಕಣ್ಣು ಮುಚ್ಚಿಕೊಂಡು ಸಿನಿಮಾ ಒಪ್ಪಿಕೊಂಡೆ. 'ಉಗ್ರಂ' ಸಿನಿಮಾ ನೋಡಿ ಇದರ ಡೈರೆಕ್ಟರ್ ಯಾರು ಅಂತ ಹುಡುಕಿದ್ದೆ. ಐದು ಭಾಷೆ, ಎರಡು ಪಾರ್ಟ್ ಅಂತ ಮೊದಲು ತಿಳಿದಿರಲಿಲ್ಲ. ಆದರೆ, ಸಿನಿಮಾ ಚೆನ್ನಾಗಿ ಆಗುತ್ತದೆ ಅಂತ ಮಾತ್ರ ಗೊತ್ತಿತ್ತು.''

ಐಶ್ವರ್ಯ ರೈ, ದೀಪಿಕಾ ರೀತಿ ಕರ್ನಾಟಕದಿಂದ ಶ್ರೀನಿಧಿ ಕೂಡ ಬಾಲಿವುಡ್ ಗೆ ಹೋಗ್ತಾರಾ?

ಐಶ್ವರ್ಯ ರೈ, ದೀಪಿಕಾ ರೀತಿ ಕರ್ನಾಟಕದಿಂದ ಶ್ರೀನಿಧಿ ಕೂಡ ಬಾಲಿವುಡ್ ಗೆ ಹೋಗ್ತಾರಾ?

''ಏನಾಗುತ್ತದೆ ಅಂತ ಗೊತ್ತಿಲ್ಲ. ನನಗೆ ಭಾಷೆಯ ಭೇದ ಇಲ್ಲ. ಕನ್ನಡದಲ್ಲಿ ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುತ್ತೇನೆ. ಅದೇ ರೀತಿ ಬಾಲಿವುಡ್ ನಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಅಲ್ಲಿಯೂ ಸಿನಿಮಾ ಮಾಡುತ್ತೇನೆ. ಒಳ್ಳೆಯ ಕಥೆ ಎಲ್ಲಿ ಸಿಕ್ಕರೂ ನನಗೆ ಓಕೆ. ಆದರೆ, ಎಲ್ಲಿಗೆ ಹೋದರು ಮತ್ತೆ ನಮ್ಮ ಮನೆಯಾಗಿರುವ ಕನ್ನಡಕ್ಕೆ ಬರಬೇಕಲ್ಲ.''

ಮುಂದೆ ಯಾವ ಸ್ಟಾರ್ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ?

ಮುಂದೆ ಯಾವ ಸ್ಟಾರ್ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ?

''ನನಗೆ ಇದೇ ಸ್ಟಾರ್ ಜೊತೆಗೆ ಸಿನಿಮಾ ಮಾಡಬೇಕು ಅಂತ ಏನ್ ಇಲ್ಲ. ಮೊದಲು ಯಶ್ ಅವರ ಜೊತೆಗೆ ಸಿನಿಮಾ ಸಿಗುತ್ತದೆ ಅಂತ ಗೊತ್ತಿರಲಿಲ್ಲ. 'ಕೆಜಿಎಫ್' ಸಿಕ್ಕಿದ್ದು ಅನಿರೀಕ್ಷಿತ. ನಾನು ಫ್ಲೋ ನಲ್ಲಿ ಹೋಗುತ್ತಿದ್ದೇನೆ. ನನಗೆ ಕಥೆ ಮತ್ತು ಪಾತ್ರ ಇಷ್ಟ ಆಗಬೇಕು.''

'ಕೆಜಿಎಫ್' ಸಿನಿಮಾವನ್ನು ನೀವು ನೋಡಿದ್ದೀರಾ?

'ಕೆಜಿಎಫ್' ಸಿನಿಮಾವನ್ನು ನೀವು ನೋಡಿದ್ದೀರಾ?

''ಇಲ್ಲ ಪೂರ್ಣ ಸಿನಿಮಾ ನೋಡಿಲ್ಲ. ಸಣ್ಣ ಸಣ್ಣ ತುಣುಕುಗಳಲ್ಲಿ ಸಿನಿಮಾ ನೋಡಿದ್ದೇನೆ. ಇಡೀ ಸಿನಿಮಾ ಪ್ರೇಕ್ಷಕರ ಜೊತೆಗೆ ನೋಡಲು ನಾನೂ ಕಾಯುತ್ತಿದ್ದೇನೆ. ನಾನು ದೊಡ್ಡ ಪರದೆ ಮೇಲೆ ಹೇಗೆ ಕಾಣುತ್ತೇನೆ. ಜನ ಯಾವ ದೃಶ್ಯಗಳಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಇದೆ.''

'ಕೆಜಿಎಫ್' ಬಗ್ಗೆ ಒಂದು ಪದ ಅಥವಾ ಒಂದು ಸಾಲು ಹೇಳಬಹುದೆ?

'ಕೆಜಿಎಫ್' ಬಗ್ಗೆ ಒಂದು ಪದ ಅಥವಾ ಒಂದು ಸಾಲು ಹೇಳಬಹುದೆ?

''ಕೆಜಿಎಫ್' ಎನ್ನುವುದು ಒಂದು ಮ್ಯಾಜಿಕ್. ಅದು ಒಂದು ಮಾಯಾಲೋಕ. ಅದನ್ನು ನೋಡಿದರೆ ಬೇರೆಯದೆ ಲೋಕಕ್ಕೆ ಹೋದ ಹಾಗೆ ಇರುತ್ತದೆ.''

'ಕೆಜಿಎಫ್' ಬಗ್ಗೆ ಕೊನೆಯ ಮಾತು?

'ಕೆಜಿಎಫ್' ಬಗ್ಗೆ ಕೊನೆಯ ಮಾತು?

''ನನ್ನನ್ನು ಈ ಸಿನಿಮಾಗೆ ಆಯ್ಕೆ ಮಾಡಿದ್ದಕ್ಕೆ ಪ್ರಶಾಂತ್ ನೀಲ್, ವಿಜಯ್ ಸರ್ ಹಾಗೂ ಯಶ್ ಅವರಿಗೆ ಥ್ಯಾಂಕ್ಯು ಹೇಳುತ್ತೇನೆ. ನಟನೆಯ ಅನುಭವ ಇಲ್ಲದೆ ಇದ್ದರೂ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದರು. ನಮ್ಮ ಇಡೀ ತಂಡಕ್ಕೆ ಧನ್ಯವಾದ. ಜನ ಕೂಡ ತುಂಬ ಪ್ರೀತಿ ಮಾಡುತ್ತಿದ್ದಾರೆ. ಡಿಸೆಂಬರ್ 21ಕ್ಕೆ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ.''

More from Filmibeat

English summary
KGF kannada movie actress Srinidhi Shetty interview. The movie is releasing tomorrow December 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X