For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: ಕೆಜಿಎಫ್-2 ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಎಕ್ಸ್ ಕ್ಲೂಸಿವ್ ಮಾತು

  |
  Vijay Kiragandur reveal 'KGF' total collection | FILMIBEAT KANNADA

  ವಿಜಯ್ ಕಿರಗಂದೂರ್ ಅವರ ಮೂಲ ಹೆಸರು ವಿಜಯ್ ಕುಮಾರ್. ರೈತ ಕುಟುಂಬದಲ್ಲಿ ಜನಿಸಿದ ವಿಜಯ್ ಇಂದು ಕನ್ನಡ ಚಿತ್ರರಂಗದ ಬಹುದೊಡ್ಡ ನಿರ್ಮಾಪಕ. ಪುನೀತ್ ಅಭಿನಯಿಸಿದ್ದ 'ನಿನ್ನಿಂದಲೇ' ಚಿತ್ರದ ಮೂಲಕ 'ಹೊಂಬಾಳೆ ಫಿಲಂಸ್' ಹುಟ್ಟುಹಾಕಿದ ವಿಜಯ್ ತಮ್ಮ ಚೊಚ್ಚಲ ಚಿತ್ರದಲ್ಲೇ ದೊಡ್ಡ ಬಜೆಟ್ ಹಾಕಿದ್ದರು. ನಂತರ 'ಮಾಸ್ಟರ್ ಪೀಸ್', 'ರಾಜಕುಮಾರ' ಅಂತಹ ಬ್ಲ್ಯಾಕ್ ಬಸ್ಟರ್ ಸಿನಿಮಾ ಮಾಡಿದ್ರು.

  ಈಗ ಕೆಜಿಎಫ್ ಎಂಬ ಬಹುದೊಡ್ಡ ಸಿನಿಮಾ ಮಾಡಿ ಇಡೀ ದೇಶವೇ ಸ್ಯಾಂಡಲ್ ವುಡ್ ಕಡೆ ನೋಡುವಂತೆ ಮಾಡಿದ್ದಾರೆ. ಐದು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಅತಿ ಗಳಿಕೆ ಕಾಣುವ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನ ವಿಸ್ತರಿಸಿ, ಸ್ಯಾಂಡಲ್ ವುಡ್ ತಾಕತ್ತು ಏನು ಎಂಬುದನ್ನ ಬೇರೆ ಇಂಡಸ್ಟ್ರಿಯವರಿಗೆ ತೋರಿಸಿದೆ.

  ಯಶ್ ಎಕ್ಸ್ ಕ್ಲೂಸಿವ್ ಸಂದರ್ಶನ: ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ ಯಶ್ ಎಕ್ಸ್ ಕ್ಲೂಸಿವ್ ಸಂದರ್ಶನ: ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ

  ಇಂತಹ ಯಶಸ್ಸಿನರುವ ವಿಜಯ್ ಕಿರಗಂದೂರ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಹೇಗಿರಲಿದೆ ಚಾಪ್ಟರ್ 2.? ಯಾವಾಗ ಶೂಟಿಂಗ್, ಯಾವಾಗ ರಿಲೀಸ್? ಏನೆಲ್ಲಾ ವಿಶೇಷತೆಗಳಿರಲಿವೆ ಎಂದು ಸಂದರ್ಶನದಲ್ಲಿ ಬಿಟ್ಟುಕೊಟ್ಟಿದ್ದಾರೆ. ಮುಂದೆ ಓದಿ.....

  ಸಂದರ್ಶನ: ಭರತ್ ಕುಮಾರ್

  ಕೆಜಿಎಫ್ 1 ನಂತರ ಏನು?

  ಕೆಜಿಎಫ್ 1 ನಂತರ ಏನು?

  ''ಕೆಜಿಎಫ್ ಚಿತ್ರವನ್ನ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕಿದೆ. ಹಾಗಾಗಿ, ರಾಜ್ಯಾದ್ಯಂತ ವಿಜಯಯಾತ್ರೆ ಹಮ್ಮಿಕೊಳ್ಳಲಿದ್ದೇವೆ. ಈಗ ಚಾಪ್ಟರ್ 2 ಸ್ಕ್ರಿಪ್ಟ್ ಮೇಲೆ ಕೆಲಸ ನಡೆಯುತ್ತಿದೆ. ಜನರ ರೆಸ್ಪಾನ್ಸ್ ನೋಡಿ ಏನಾದರೂ ಟ್ವಿಸ್ಟ್, ಬದಲಾವಣೆ ಬೇಕಾ ಎಂದು ಯೋಚಿಸುತ್ತಿದ್ದೇವೆ. ಸದ್ಯಕ್ಕೆ ಚಾಪ್ಟರ್ 2 ಬಿಟ್ಟರೇ ಬೇರೆ ಏನು ಇಲ್ಲ''

  ಎಕ್ಸ್ ಕ್ಲೂಸಿವ್ ಸಂದರ್ಶನ: 'ಕೆ.ಜಿ.ಎಫ್'ನಲ್ಲಿ ಕಂಡ ಸಂಪತ್ತುಎಕ್ಸ್ ಕ್ಲೂಸಿವ್ ಸಂದರ್ಶನ: 'ಕೆ.ಜಿ.ಎಫ್'ನಲ್ಲಿ ಕಂಡ ಸಂಪತ್ತು

  ಬಿಗ್ ಬಜೆಟ್ ಹಾಕಲು ನಿಮ್ಮ ಧೈರ್ಯ ಏನು?

  ಬಿಗ್ ಬಜೆಟ್ ಹಾಕಲು ನಿಮ್ಮ ಧೈರ್ಯ ಏನು?

  ''ಕನ್ನಡ ಚಿತ್ರರಂಗ ದೊಡ್ಡ ಮಟ್ಟಕ್ಕೆ ಹೋಗ್ಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ನನ್ನ ಮೊದಲ ಸಿನಿಮಾ 'ನಿನ್ನಿಂದಲೇ' ಚಿತ್ರವನ್ನ ನ್ಯೂಜೆರ್ಸಿಯಲ್ಲಿ 30 ದಿನ ಚಿತ್ರೀಕರಣ ಮಾಡಿದ್ವಿ. 'ಮಾಸ್ಟರ್ ಪೀಸ್' ಸಿನಿಮಾದ ಹಾಡೊಂದಕ್ಕೆ ಸಾವಿರಾರು ಡ್ಯಾನ್ಸರ್ ನ ಬಳಸಿ ಸಾಂಗ್ ಮಾಡಿದ್ವಿ. ರಾಜಕುಮಾರ ಈಗ ಕೆಜಿಎಫ್, ಇಷ್ಟು ಸಿನಿಮಾಗಳ ಅನುಭವ, ನಿರ್ದೇಶಕರ ಮೇಲಿನ ನಂಬಿಕೆ, ಕಥೆ, ನಟರ ಸಹಕಾರ, ನನ್ನ ಜೊತೆಗಿನ ತಂಡದ ಕೆಲಸವೇ ನನಗೆ ಧೈರ್ಯ ಅಂತ ಹೇಳ್ಬಹುದು''

  'ಕೆಜಿಎಫ್' ಚಿತ್ರಕ್ಕಾಗಿ ಯಶ್ ಕೊಟ್ಟಿದ್ದು ಬರೋಬ್ಬರಿ 70 ಸಂದರ್ಶನ.! 'ಕೆಜಿಎಫ್' ಚಿತ್ರಕ್ಕಾಗಿ ಯಶ್ ಕೊಟ್ಟಿದ್ದು ಬರೋಬ್ಬರಿ 70 ಸಂದರ್ಶನ.!

  ಬೇರೆ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡ್ತೀರಾ?

  ಬೇರೆ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡ್ತೀರಾ?

  ''ಸದ್ಯಕ್ಕೆ ನಾನು ಯಾವುದು ಯೋಚನೆ ಮಾಡಿಲ್ಲ. ಒಂದು ವೇಳೆ ಅಂತಹ ಆಫರ್ ಅಥವಾ ಅವಕಾಶ ಬಂದ್ರೆ ಖಂಡಿತಾ ನೋಡೋಣ. ಇದು ಮನರಂಜನೆಯೇ ಕ್ಷೇತ್ರ, ಇದಕ್ಕೆ ಭಾಷೆಯ ಗಡಿಯಿಲ್ಲ. ಕಲೆ, ಪ್ರತಿಭೆ ಇದ್ದರೇ ಅದಕ್ಕೆ ಯಶಸ್ಸು ಸಿಕ್ಕೇ ಸಿಗುತ್ತೆ. ಕೆಜಿಎಫ್ ಚಿತ್ರದಿಂದ ಎಲ್ಲರಿಗೂ ಮಾರ್ಕೆಟ್ ವಿಸ್ತರಣೆಯಾಗಿದೆ. ಬಟ್, ಈಗ ಯಾವುದೇ ಐಡಿಯಾ ಇಲ್ಲ''

  ಯಶ್, ಪುನೀತ್ ನಂತರ ಯಾವ ನಟನ ಜೊತೆ ಸಿನಿಮಾ?

  ಯಶ್, ಪುನೀತ್ ನಂತರ ಯಾವ ನಟನ ಜೊತೆ ಸಿನಿಮಾ?

  ''ಪುನೀತ್ ರಾಜ್ ಕುಮಾರ್ ಮತ್ತು ಯಶ್ ನನ್ನನ್ನು ಸಹೋದರನಂತೆ ಕಾಣ್ತರೆ. ಇವರಿಬ್ಬರು ನನಗೆ ತುಂಬಾ ಕಂಫರ್ಟ್ ಆಗಿದ್ದಾರೆ. ಹೀಗಿರುವಾಗ ಮೂರನೇ ವ್ಯಕ್ತಿ ಬಳಿ ಹೋಗಲು ಸಾಧ್ಯವಾಗ್ತಿಲ್ಲ. ಸದ್ಯಕ್ಕೆ ಆ ರೀತಿ ಯಾವ ಪ್ಲಾನ್ ಆಗಿಲ್ಲ. ಮುಂದಿನ ದಿನದಲ್ಲಿ ಸಾಧ್ಯವಾಗುತ್ತಾ ನೋಡೋಣ''

  ಕೆಜಿಎಫ್-2 ರಿಲೀಸ್ ದಿನಾಂಕ ಘೋಷಿಸಿದ ವಿಜಯ್ ಕಿರಗಂದೂರ್ ಕೆಜಿಎಫ್-2 ರಿಲೀಸ್ ದಿನಾಂಕ ಘೋಷಿಸಿದ ವಿಜಯ್ ಕಿರಗಂದೂರ್

  ಚಾಪ್ಟರ್ 2ನಲ್ಲಿ ಸಂಜಯ್ ದತ್ ವಿಲನ್ ಅಂತೆ ಹೌದಾ?

  ಚಾಪ್ಟರ್ 2ನಲ್ಲಿ ಸಂಜಯ್ ದತ್ ವಿಲನ್ ಅಂತೆ ಹೌದಾ?

  ''ಚಾಪ್ಟರ್ 2 ನಲ್ಲಿ ಹಲವು ಟ್ವಿಸ್ಟ್, ರೋಚಕತೆ ನೀಡಬೇಕಾಗಿದೆ. ಮೂರ್ನಾಲ್ಕು ಹೊಸ ವಿಲನ್ ಗಳು ಎಂಟ್ರಿಯಾಗ್ತಾರೆ. ಸಂಜಯ್ ದತ್ ಜೊತೆಯಲ್ಲೀ ಚರ್ಚೆಯಾಗ್ತಿದೆ. ಬಟ್, ಇನ್ನು ಕನ್ ಫರ್ಮ್ ಆಗಿಲ್ಲ. ಬಹುಶಃ ದತ್ ಅವರು ಬರಬಹುದು''

  'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು? 'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?

  ಚಾಪ್ಟರ್ 2 ಯಾವಾಗ ಆರಂಭವಾಗುತ್ತೆ?

  ''ಸದ್ಯಕ್ಕೆ ಸ್ಕ್ರಿಪ್ಟ್ ಮೇಲೆ ಇನ್ನೊಂದು ಸುತ್ತು ಕೆಲಸ ನಡೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಶುರು ಮಾಡಬಹುದು. ವರ್ಷಾಂತ್ಯಕ್ಕೆ ಚಿತ್ರೀಕರಣ ಮುಗಿಸಬಹುದು. ಬಟ್, 2020ರಲ್ಲೇ ರಿಲೀಸ್ ಆಗೋದು''

  English summary
  Kgf movie producer vijay kiragandur interview. KGF movie has opens market for everyone, like director, hero, technician and production: vijay kiragandur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X