twitter
    For Quick Alerts
    ALLOW NOTIFICATIONS  
    For Daily Alerts

    ಕೃಷ್ಣಲೀಲಾ: ಸಂದರ್ಶನದಲ್ಲಿ ನಾಯಕ ಅಜೇಯ್ ರಾವ್ ಹೇಳಿದ್ದೇನು?

    |

    ಪ್ರ: ನೀವು ಲಕ್ ಮೇಲೆ ವಿಶ್ವಾಸ ಇಟ್ಟಿದ್ದೀರಾ?
    ಅಜೇಯ್: ಲಕ್ ನಂಬುತ್ತೇನೆ, ಅದರೆ ಎಷ್ಟು ಬೇಕೋ ಅಷ್ಟೇ. ನನಗೆ ನನ್ನ ಪರಿಶ್ರಮದ ಮೇಲೆ ನಂಬಿಕೆಯಿದೆ. ಒಂದು ಕ್ಲಾಸನ್ನು ನಂಬಿಕೊಂಡವನನ್ನಲ್ಲ. ಕೃಷ್ಣನ್ ಎನ್ನುವ ಬ್ರಾಂಡ್ ಮೇಲೆ ನನಗೆ ನಂಬಿಕೆಯಿದೆ. ಹೇಗೂ ಈ ಹೆಸರು ಬ್ರಾಂಡ್ ಆಗಿದೆ.

    ಪ್ರ: ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ?
    ಅಜೇಯ್ : ಇದು ಎಲ್ಲಾ ವಯಸ್ಸಿನವರಿಗೂ ಒಗ್ಗುವ ಸಿನಿಮಾ. ಇದು ಈಗಾಗಲೇ ನಾನು ಹೇಳಿದಂತೆ ಮೊಬೈಲ್ ಫೋನ್, ಮಧ್ಯಮವರ್ಗಕ್ಕೆ ಸಂಬಂಧಪಟ್ಟಂತಹ ಕಥೆ. (ನಿರ್ದೇಶಕರು ಮೇಕಪ್ ಬೇಡ ಅಂದಿದ್ರು)

    Krishna Leela Producer cum Hero Ajai Rao interview: Part 2

    ಪ್ರ: ಚಿತ್ರದಲ್ಲಿ ನಿಮ್ಮ ಪಾತ್ರದಲ್ಲಿ ಹೇಗೆ ಇನ್ವಾಲ್ ಆಗಿದ್ದೀರಾ?

    ಅಜೇಯ್ : ಪಾತ್ರದಲ್ಲಿ ನನ್ನಲ್ಲಿ ನಾನಾಗಿದ್ದೆ. ಶಾಲೆಯ ವ್ಯಾನ್ ಚಾಲಕನ ಪಾತ್ರಕ್ಕಾಗಿ ಮೂರ್ನಾಲ್ಕು ದಿನ ವ್ಯಾನ್ ಡ್ರೈವರ್ ಜೊತೆ ಕಾಲ ಕಳೆದಿದ್ದೇನೆ. ನನ್ನ ಖಾಸಗಿ ವಾಹನ ಚಾಲಕನ ಬಾಡಿ ಲಾಂಗ್ವೇಜ್ ಸ್ಟಡಿ ಮಾಡಿದ್ದೇನೆ.

    ಪ್ರ: ಈ ಚಿತ್ರದಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದೀರಾಂತೆ, ಹೌದಾ?
    ಅಜೇಯ್ : ಸಿನಿಮಾಕ್ಕೆ ಬರುವ ಮುಂಚೆ ಸ್ಟೇಜ್ ನಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. Excuse Me ಅಂತಹ ಚಿತ್ರ ಬಂದರೆ ಡ್ಯಾನ್ಸ್ ಮರೆತು ಹೋಗುತ್ತೇನೋ. ಈ ಚಿತ್ರದಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದೇನೆ. ಶಶಾಂಕ್ ಸರ್ ನನ್ನಿಂದ ಏನು ಸಾಧ್ಯನೋ ಎಲ್ಲಾನೂ ಮಾಡಿಸಿದ್ದಾರೆ.

    Krishna Leela Producer cum Hero Ajai Rao interview: Part 2

    ಪ್ರ: ಕಪಾಲಿ ಚಿತ್ರಮಂದಿರಕ್ಕೂ ನಿಮಗೂ ಏನಾದರೂ ಸೆಂಟಿಮೆಂಟ್ ಇದೆಯಾ?
    ಅಜೇಯ್: ಬೆಂಗಳೂರಿನ ಆನಂದ್ ರಾವ್ ಸರ್ಕಲಿನಲ್ಲಿ ಒಂದು ಗಣೇಶನ ದೇವಸ್ಥಾನವಿದೆ. ದೇವಸ್ಥಾನದ ಕಟ್ಟೆಯಲ್ಲಿ ಒಂದು ದಿನ ಕೂತಿದ್ದಾಗ ಅರ್ಚಕರು ಬಂದು ನನ್ನನ್ನು ಎಬ್ಬಿಸಿದ್ದರು. ಕಡ್ಲೆಕಾಯಿ ತಿನ್ಕೊಂಡು ಕಪಾಲಿ ಥಿಯೇಟರ್ ಮುಂದೆ ಸುತ್ತಾಡುತ್ತಿದೆ. ದೊಡ್ಡ ಪೋಸ್ಟರ್ ನೋಡ್ತಾ ಇದ್ದೆ, ನನಗೆ ಕನಸಿತ್ತು. ಈಗ ನನ್ನ ಕಟೌಟ್ ಅಲ್ಲಿ ಇರುತ್ತೆ ಎಂದರೆ ಸಂತೋಷವಾಗುತ್ತೆ.

    English summary
    Krishna Leela Producer cum Hero Ajai Rao interview to Filmibeat Kannada: Part 2
    Thursday, March 19, 2015, 10:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X