twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ : ಆಗ 'ಮಜಾ ಟಾಕೀಸ್'ಗೆ ಪಿಲ್ಲರ್, ಈಗ 'ರಾಬರ್ಟ್'ಗೆ ರೈಟರ್

    |

    'ಅಮ್ಮ..' ಎನ್ನುವ ಪದದ ಮೂಲಕ ನಮ್ಮ ಮಾತು ಶುರುವಾಗುತ್ತದೆ. ಅದೇ ರೀತಿ 'ಅಮ್ಮ ಐ ಲವ್ ಯೂ' ಸಿನಿಮಾದ ಮೂಲಕ ಚಿತ್ರ ಜೀವನ ಶುರು ಮಾಡಿದವರು ಸಂಭಾಷಣೆಕಾರ ರಾಜಶೇಖರ್.

    'ಅಮ್ಮ ಐ ಲವ್ ಯೂ' ನಿಂದ ಶುರುವಾಗಿ 'ವಿಕ್ಟರಿ 2' ಬಾರಿಸಿ ಈಗ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ರಾಬರ್ಟ್' ಸಿನಿಮಾಗೆ ಡೈಲಾಗ್ ರೈಟರ್ ಆಗಿದ್ದಾರೆ. 'ರಾಬರ್ಟ್' ಪೋಸ್ಟರ್ ನಲ್ಲಿ ಬಂದ ''ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು.'' ಮೂಲಕ ತಮ್ಮ ಡೈಲಾಗ್ ನ ಸ್ಯಾಂಪಲ್ ತೋರಿಸಿದ್ದಾರೆ.

    ಫೆಬ್ರವರಿ 16: ದಾಸನ ಅಭಿಮಾನಿಗಳ ನಿರೀಕ್ಷೆಗಳು 6 ಫೆಬ್ರವರಿ 16: ದಾಸನ ಅಭಿಮಾನಿಗಳ ನಿರೀಕ್ಷೆಗಳು 6

    'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಬರೋಬ್ಬರಿ 200 ಎಪಿಸೋಡ್ ಬರೆದ ಕೀರ್ತಿ ರಾಜಶೇಖರ್ ಅವರದ್ದು. ಕಾಮಿಡಿ ಬರೆಯುವುದು ಕಷ್ಟ, ಅದರಲ್ಲಿಯೂ ಒಂದೇ ಕಾರ್ಯಕ್ರಮಕ್ಕೆ ಇಷ್ಟೊಂದು ಸಂಚಿಕೆ ಬರೆದಿರುವುದು ತಮಾಷೆ ವಿಷಯವಲ್ಲ. ಜೊತೆಗೆ ತಾವು ಬರೆದ ಅಷ್ಟೂ ಎಪಿಸೋಡ್ ನಲ್ಲಿ ಜನರನ್ನು ನಗಿಸಿರುವುದು ರಾಜಶೇಖರ್ ಬರೆವಣಿಗೆಯ ಶಕ್ತಿ. ಅಲ್ಲದೆ, ಕನ್ನಡದ ಬಹುಪಾಲು ಹಿಟ್ ಕಾಮಿಡಿ ಸೀರಿಯಲ್ ಗೆ ಮಾತನ್ನು ತುಂಬಿಸಿದ್ದು ಕೂಡ ಇವರೇ.

    ಕಾಮಿಡಿ ಮಾತ್ರವಲ್ಲದೆ ಎಲ್ಲ ರೀತಿಯ ಡೈಲಾಗ್ ಗಳನ್ನು ಬರೆಯುವ ಸಾಮರ್ಥ್ಯ ಹೊಂದಿರುವ ರಾಜಶೇಖರ್ ಕನ್ನಡ ಚಿತ್ರರಂಗದ ಭರವಸೆಯ ಬರೆಹಗಾರನಾಗಿದ್ದಾರೆ. ತಾವು ಮಾಡಿದ ಎಲ್ಲ ಪ್ರಾಜೆಕ್ಟ್ ಗಳಲ್ಲಿ ನಟನೆ ಮಾಡಿದ್ದು, ಆಕ್ಟಿಂಗ್ ನಲ್ಲಿಯೂ ಒಳ್ಳೆಯ ಅವಕಾಶಗಳು ಬರುತ್ತಿವೆ. ಅಂದಹಾಗೆ, ಇಷ್ಟು ದಿನ ಇವರ ಕಾಮಿಡಿಗೆ ನಕ್ಕ ನೀವು ಅವರ ಸಂದರ್ಶನವನ್ನು ಓದಿ ಬಿಡಿ...

    ಸಂದರ್ಶನ : ನವಿ ಕನಸು (ನವೀನ್ ಎಮ್ ಎಸ್)

    ನಿಮ್ಮ ಬರವಣಿಗೆ ಯಾವಾಗ, ಹೇಗೆ ಶುರುವಾಯ್ತು?

    ನಿಮ್ಮ ಬರವಣಿಗೆ ಯಾವಾಗ, ಹೇಗೆ ಶುರುವಾಯ್ತು?

    ''ನಮ್ಮೂರು ಗಂಗಾವತಿ ಹತ್ತಿರ ಒಂದು ಹಳ್ಳಿ. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುಬೇಕು ಎಂಬ ಆಸೆ ಮೂರನೇ ಕ್ಲಾಸ್ ನಲ್ಲಿಯೇ ಇತ್ತು. ನಾನು ಬೆಳೆದೆ.. ನನ್ನ ಜೊತೆಯೇ ಸಿನಿಮಾ ಪ್ರೀತಿ ಬೆಳೆಯಿತು. ಇಂಡಸ್ಟ್ರಿ ಬಂದು ಅದು ಹೇಗೆ ಕರೆದುಕೊಂಡು ಹೋಗುತ್ತಿದೆ ಹಾಗೆ ಹೋಗುತ್ತಿದ್ದೇನೆ.''

    ಬರವಣಿಗೆ ಜೊತೆ ಜೊತೆಗೆ ಮತ್ತೇನು ಮಾಡುತ್ತೀರಿ?

    ಬರವಣಿಗೆ ಜೊತೆ ಜೊತೆಗೆ ಮತ್ತೇನು ಮಾಡುತ್ತೀರಿ?

    ''ಚಿತ್ರರಂಗಕ್ಕೆ ಬಂದು 12 ವರ್ಷ ಆಗಿದೆ. ರೈಟರ್, ಡೈರೆಕ್ಟರ್, ಆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಆರೇಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನ ಮಾಡಿದ್ದೆ. 'SSLC ನನ್ ಮಕ್ಳು', 'ರೋಬೊ ಫ್ಯಾಮಿಲಿ', 'ಪಡುವಾರಳ್ಳಿ ಪಡ್ಡೆಗಳು', 'ಸಿಂಗಾರಿ ಬಂಗಾರಿ' ಧಾರಾವಾಹಿಗಳಿಗೆ ಎಪಿಸೋಡ್ ಡೈರೆಕ್ಟರ್, ಸ್ಕ್ರಿಪ್ಟ್ ವರ್ಕ್, ಕೆಲವು ಬಾರಿ ಆಕ್ಟಿಂಗ್ ಸಹ ಮಾಡಿದ್ದೇನೆ. 'ಮಜಾ ಟಾಕೀಸ್' ಮೊದಲ ಸೀಸನ್ ಗೆ 200 ಎಪಿಸೋಡ್ ಬರೆದಿದ್ದೇನೆ.''

    ದರ್ಶನ್-ತರುಣ್ ಚಿತ್ರದ ಟೈಟಲ್ 'ರಾಬರ್ಟ್' ದರ್ಶನ್-ತರುಣ್ ಚಿತ್ರದ ಟೈಟಲ್ 'ರಾಬರ್ಟ್'

    ಹೇಗಿತ್ತು 'ಮಜಾ ಟಾಕೀಸ್' ಮಹಾ ಅನುಭವ?

    ಹೇಗಿತ್ತು 'ಮಜಾ ಟಾಕೀಸ್' ಮಹಾ ಅನುಭವ?

    ''ನಾನು ಇಂದು ಏನೇ ಮಾಡುತ್ತಿದ್ದರು ಅದಕ್ಕೆ ಬುನಾದಿ 'ಮಜಾ ಟಾಕೀಸ್'. ಹೊರಗಿನ ಪ್ರಪಂಚಕ್ಕೆ ನನ್ನನ್ನು ಪರಿಚಯ ಮಾಡಿಸಿದ್ದು 'ಮಜಾ ಟಾಕೀಸ್' ಕಾರ್ಯಕ್ರಮ. ಆ ಕಾರ್ಯಕ್ರಮಕ್ಕೆ, ಸೃಜನ್ ಸರ್ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. 'ರೋಬೋ ಫ್ಯಾಮಿಲಿ' ಸೀರಿಯಲ್ ಮಾಡುವ ಸಮಯದಲ್ಲಿ 'ಮಜಾ ಟಾಕೀಸ್' ಶುರು ಆಗಿತ್ತು. ಅಲ್ಲಿ ರೈಟರ್ ಅನ್ನು ಹುಡುಕುತಿದ್ದಾಗ ಪವನ್ ತಿಳಿಸಿದರು. ಒಂದು ಎಪಿಸೋಡ್ ಬರೆಯಿರಿ ಅಂತ ಶುರುವಾಗಿದ್ದು, 200 ಎಪಿಸೋಡ್ ವರೆಗೆ ಬಂತು.''

    ನಿಮ್ಮ ಬರೆವಣಿಗೆಯಲ್ಲಿ ಕಾಮಿಡಿಯೇ ಹೆಚ್ಚಿದೆ ಏಕೆ?

    ನಿಮ್ಮ ಬರೆವಣಿಗೆಯಲ್ಲಿ ಕಾಮಿಡಿಯೇ ಹೆಚ್ಚಿದೆ ಏಕೆ?

    ''ಹಾಗೆನಿಲ್ಲ. ನನ್ನ ಕಾಮಿಡಿ ರೈಟಿಂಗ್ ಹೈಲೆಟ್ ಆಗಿದೆ ಅಷ್ಟೇ. ನಾನು ಎಲ್ಲ ರೀತಿಯಲ್ಲಿ ಬರೆಯುತ್ತೇನೆ. 'ವಿಕ್ಟರಿ 2', 'ಮಜಾ ಟಾಕೀಸ್' ಬಿಟ್ಟರೆ, 'ಅಮ್ಮ ಐ ಲವ್ ಯೂ' ಸಿನಿಮಾದಲ್ಲಿ ಸೆಂಟಿಮೆಂಟ್ ಡೈಲಾಗ್ ಗಳು ಇತ್ತು. 'ರಾಬರ್ಟ್'ನಲ್ಲಿಯೂ ವೆರೈಟಿ ಇದೆ. ಮಾಸ್, ಕಾಮಿಡಿ, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಬರವಣಿಗೆ ಗೊತ್ತಿದೆ.''

    ಸತತ 200 ಎಪಿಸೋಡ್ ಬರೆಯುವುದು ದೊಡ್ಡ ಸವಾಲು ಅಲ್ವಾ?

    ಸತತ 200 ಎಪಿಸೋಡ್ ಬರೆಯುವುದು ದೊಡ್ಡ ಸವಾಲು ಅಲ್ವಾ?

    ''ನಿಜ. ಇದು ಸಿನಿಮಾಗೆ ಬರೆಯುವ ಕಾಮಿಡಿ ಆಗಲ್ಲ. ಇಲ್ಲಿ ಒಂದೇ ಒಂದು ವೇದಿಕೆಯಲ್ಲಿ, ಎಷ್ಟು ಜನ ಇರುತ್ತಾರೊ ಅವರನ್ನೇ ಇಟ್ಟುಕೊಂಡು ಕಾಮಿಡಿ ಬರೆಯಬೇಕು. ಒಂದು ದುಃಖನ ನೆನೆಸಿಕೊಂಡು ಹತ್ತು ಬಾರಿ ಅಳುತ್ತೇವೆ. ಆದರೆ, ಒಂದು ಕಾಮಿಡಿಗೆ ಎರಡು ಸಲ ನಗುವುದಿಲ್ಲ. ಹೀಗಿರುವಾಗ, ಒಂದು ಗಂಟೆ, ಒಂದೇ ವೇದಿಕೆ ಮೇಲೆ ನಾಲ್ಕು ಜನರನ್ನು ಇಟ್ಟುಕೊಂಡು ನಗಿಸಬೇಕು ಎನ್ನುವುದು ದೊಡ್ಡ ಚಾಲೆಂಜ್. ಪ್ರತಿ ಎಪಿಸೋಡ್ ಅನ್ನು ನನ್ನ ಮೊದಲ ಎಪಿಸೋಡ್ ಎಂದುಕೊಂಡೆ ಬರೆದೆ. ಅದಕ್ಕೆ ಆ ಕಾರ್ಯಕ್ರಮ ಅಷ್ಟು ಚೆನ್ನಾಗಿ ಬಂತು.''

    ಇಂಡಸ್ಟ್ರಿಯಲ್ಲಿ ರೈಟರ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ ಅಂತಾರೆ ನಿಜನಾ?

    ಇಂಡಸ್ಟ್ರಿಯಲ್ಲಿ ರೈಟರ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ ಅಂತಾರೆ ನಿಜನಾ?

    ''ಹೌದು.. ಇಂಡಸ್ಟ್ರಿ ಎಂದ ಮೇಲೆ ಎಲ್ಲವೂ ಇರುತ್ತದೆ. ಇಲ್ಲಿ ಎಲ್ಲರೂ ರೈಟರ್ ಗೆ ಬೆಲೆ ಕೊಡುತ್ತಾರೆ ಅಂತ ಅಲ್ಲ. ಹಾಗೆಂದ ಮಾತ್ರಕ್ಕೆ ಯಾರು ರೈಟರ್ ಗಳಿಗೆ ಬೆಲೆ ನೀಡುವುದಿಲ್ಲ ಎಂದೂ ಅಲ್ಲ. ಒಂದಷ್ಟು ಜನ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾನ್ ಹೇಳೋದು ಕ್ರಿಯೇಟರ್ ಮಾನಸಿಕವಾಗಿ ನೆಮ್ಮದಿಯಾಗಿ ಇರಬೇಕು. ಅವನಿಗೆ ಸಿಗುವ ಸಂಭಾವನೆ ಸರಿಯಾಗಿ ಸಿಕ್ಕರೆ ಖುಷಿಯಾಗಿ ಬರೆಯುತ್ತಾನೆ. ನೂರೆಂಟು ತಲೆ ನೋವು ಇದ್ದಾಗ ಹೊಸದು ಹೇಗೆ ಹುಟ್ಟುತ್ತದೆ.''

    'ಮಜಾ ಟಾಕೀಸ್'ನಲ್ಲಿ ತುಂಬ ಚಾಲೆಂಜಿಂಗ್ ಅನಿಸಿದ ಸಂಚಿಕೆ ಯಾವುದು?

    'ಮಜಾ ಟಾಕೀಸ್'ನಲ್ಲಿ ತುಂಬ ಚಾಲೆಂಜಿಂಗ್ ಅನಿಸಿದ ಸಂಚಿಕೆ ಯಾವುದು?

    ''75 ನೇ ಎಪಿಸೋಡ್ ಗೆ ಶಿವಣ್ಣ ಅವರು ಬರಬೇಕಿತ್ತು. ಅವರಿಗೆ ತಕ್ಕ ಹಾಗೆ ಸಿಪ್ಟ್ ರೆಡಿ ಇತ್ತು. ನಾಳೆ ರಿಯಸರ್ಲ್, ನಾಡಿದ್ದು ಎಪಿಸೋಡ್ ಶೂಟಿಂಗ್ ಇತ್ತು. ಆ ದಿನವೇ ಶಿವಣ್ಣ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ಆಗ ಅರ್ಜುನ್ ಸರ್ಜಾ ಸರ್ ಆ ಸಂಚಿಕೆಗೆ ಫಿಕ್ಸ್ ಆದರು. ಆಗ ಒಂದೇ ದಿನ ಕುಳಿತು ಹೊಸದಾಗಿ ಎರಡು ಎಪಿಸೋಡ್ ಸ್ಕ್ರಿಪ್ಟ್ ಬರೆದಿದ್ದೆ. ಇದು ದೊಡ್ಡ ಚಾಲೆಂಜ್ ಆಗಿತ್ತು. ಆ ಸಂಚಿಕೆ ತುಂಬ ಚೆನ್ನಾಗಿ ಬಂತು. ಅರ್ಜುನ್ ಸರ್ ಸಹ ಖುಷಿ ಆದರು.''

    ಶಿವಣ್ಣನಿಗೆ ನಿಮ್ಮ ಡೈಲಾಗ್ಸ್ ಬಹಳ ಇಷ್ಟ ಅಂತೆ?

    ಶಿವಣ್ಣನಿಗೆ ನಿಮ್ಮ ಡೈಲಾಗ್ಸ್ ಬಹಳ ಇಷ್ಟ ಅಂತೆ?

    ''ಹೌದು.. 'ಮಜಾ ಟಾಕೀಸ್' 100ನೇ ಎಪಿಸೋಡ್ ಗೆ ಶಿವಣ್ಣ ಬಂದಿದ್ದರು. ನಿಮ್ಮ ಡೈಲಾಗ್ ಗಳ ಪಂಚ್ ಚೆನ್ನಾಗಿರುತ್ತದೆ, ರಾತ್ರಿ ಮಲಗುವಾಗ ನಾನು 'ಮಜಾ ಟಾಕೀಸ್' ನೋಡುತ್ತ ನಗು ನಗುತ್ತಾ ಮಲಗುತ್ತೇನೆ. ಇದರಿಂದ ಬೆಳಗ್ಗೆ ಖುಷಿ ಖುಷಿಯಾಗಿ ಶುರು ಆಗುತ್ತದೆ ಎಂದಿದ್ದರು. ನಿಜಕ್ಕೂ ಇದು ನನಗೆ ಬಹಳ ಖುಷಿ ನೀಡಿದ ವಿಷಯ.''

    ರೈಟರ್ ರಾಜಶೇಖರ್, ಡೈರೆಕ್ಟರ್ ಆಗುತ್ತಾರಾ?

    ರೈಟರ್ ರಾಜಶೇಖರ್, ಡೈರೆಕ್ಟರ್ ಆಗುತ್ತಾರಾ?

    ''ಹೌದು, ಮುಂದೆ ಡೈರೆಕ್ಷನ್ ಮಾಡುವ ಪ್ಲಾನ್ ಇದೆ. ಆದರೆ, ಡೈಲಾಗ್ ರೈಟರ್ ಆಗಿ ಒಳ್ಳೆಯ ಆಫರ್ ಗಳು ಬರುತ್ತಿದೆ. ಹಾಗಾಗಿ ಸದ್ಯಕ್ಕೆ ಇದರಲ್ಲಿ ಮುಂದುವರೆಯುತ್ತೇನೆ. ನಾನು ಇಷ್ಟು ದಿನ ಮಾಡಿದ ಕೆಲಸ ಈವರೆಗೆ ಕರೆದುಕೊಂಡು ಬಂದಿದೆ. ಮುಂದೆ ಡೈರೆಕ್ಷನ್ ಮಾಡುವ ಆಸೆಯೂ ಇದೆ.''

    'ರಾಬರ್ಟ್' ಬಗ್ಗೆ ರೈಟರ್ ಏನ್ ಹೇಳುತ್ತಾರೆ?

    'ರಾಬರ್ಟ್' ಬಗ್ಗೆ ರೈಟರ್ ಏನ್ ಹೇಳುತ್ತಾರೆ?

    ''ದರ್ಶನ್ ಸರ್ ಕ್ರೇಜ್ ಅಂದರೆ ಬಹಳ ದೊಡ್ಡದಿರುತ್ತದೆ. ಅವರನ್ನು ನೋಡಲು ಎಷ್ಟೋ ಲಕ್ಷ ಜನ ಕಾಯುತ್ತಿರುತ್ತಾರೆ. ಹೀಗಿರುವಾಗ, ನಮಗೆ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಪುಣ್ಯ. ವೈಯಕ್ತಿಕವಾಗಿ ಈ ಸಿನಿಮಾಗೆ ಬರೆಯುತ್ತಿರುವುದು ಬಹಳ ಖುಷಿ ನೀಡಿದೆ. ಅವರ ಸಿನಿಮಾಗಳನ್ನು ನೋಡಿ ಬೆಳೆದ ನಾನು, ಈಗ ಅವರ ಚಿತ್ರಕ್ಕೆ ಬರೆಯುತ್ತಿದ್ದೇನೆ. ಒಬ್ಬ ಸೂಪರ್ ಸ್ಟಾರ್ ಆಗಿರುವ ಅವರು ನಮ್ಮ ಜೊತೆಗೆ ನಡೆದುಕೊಳ್ಳುವ ರೀತಿ ನೋಡಿದರೆ ಹೀಗೂ ಇರಲು ಸಾಧ್ಯನಾ ಅನಿಸುತ್ತದೆ. ಈ ಮೂಲಕ ನನಗೆ ಅವಕಾಶ ಕೊಟ್ಟಿದ್ದಕ್ಕೆ ತರುಣ್ ಸರ್, ಉಮಾಪತಿ ಸರ್ ಹಾಗೂ ದರ್ಶನ್ ಸರ್ ಗೆ ವಿಶೇಷವಾಗಿ ಧನ್ಯವಾದ ಹೇಳುತ್ತಾನೆ.''

    English summary
    Color super 'Majaa Talkies' fame writer Raja Shekar interview. Raja Shekar wrote 200 episodes for 'Maja Talkies' show and now he working as a dialogue writer for Darshan's 'Robert' movie.
    Thursday, March 7, 2019, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X