twitter
    For Quick Alerts
    ALLOW NOTIFICATIONS  
    For Daily Alerts

    'ಸಿನಿಮಾಗಳತ್ತ ನನ್ನ ಗಮನ' ಎನ್ನುತ್ತಾರೆ ಮಂಗಳೂರಿನ ಗಾನಾ

    |

    ಕಾಲೇಜ್ ನಿಂದ ನೇರ ಚಿತ್ರರಂಗಕ್ಕೆ ಬಂದು ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾದ ಬಳಿಕ ವಿದೇಶ ಸೇರಿಕೊಂಡು ಸೆಟಲಾಗುವ ಅನೇಕ ನಾಯಕಿಯರನ್ನು ಕಂಡಿರುತ್ತೇವೆ. ಆದರೆ ವಿದೇಶದಲ್ಲಿ ವೃತ್ತಿಯಲ್ಲಿದ್ದುಕೊಂಡು, ಸಿನಿಮಾ ಆಸಕ್ತಿಯಿಂದ ತಾಯ್ನಾಡಿಗೆ ಮರಳಿರುವ ಅಪರೂಪದ ರೂಪವತಿ ಗಾನ ಭಟ್.

    ಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭ

    ಹೆಸರಿನಲ್ಲಿ ಗಾನವಿದ್ದರೂ, ಈಕೆ ಗುರುತಿಸಿಕೊಂಡಿರುವುದು ಗಾಯನದಿಂದಲ್ಲ, ತಮ್ಮ ನಟನೆಯಿಂದ. ಮೂಲತಃ ಮಂಗಳೂರಿನ ಹುಡುಗಿಯಾದರೂ ಮೊದಲು ನಟಿಸಿದ ಕಿರುಚಿತ್ರಗಳು ತೆಲುಗು, ತಮಿಳಿನವುಗಳು. ಆದರೆ ಕನ್ನಡದಲ್ಲಿ ಒಂದು ಭರವಸೆಯ ಬ್ಯಾನರ್ ನ ಚಿತ್ರದ ಮೂಲಕವೇ ನಾಯಕಿಯಾಗಿ ಪ್ರವೇಶಿಸುತ್ತಿರುವುದು ಖುಷಿಯ ವಿಚಾರ. ಬೆಳದಿಂಗಳ ಬಾಲೆ' ಖ್ಯಾತಿಯ ಸುಮನ್ ನಗರ್ಕರ್ ಅವರ ನಿರ್ಮಾಣ ಸಹಭಾಗಿತ್ವದಲ್ಲಿರುವ ಚಿತ್ರ 'ಬಬ್ರೂ'ವಿನಲ್ಲಿ ಪ್ರಮಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ ಗಾನಾ. ಅವರೊಂದಿಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.

     ಮಂಗಳೂರಿನಿಂದ ಯುಎಸ್ ಗೆ ಹೋಗಿ, ಬಳಿಕ ಗಾಂಧಿನಗರಕ್ಕೆ ಕಾಲಿಡುವ ತನಕದ ನಿಮ್ಮ ಪಯಣ ಹೇಗಿತ್ತು?

    ಮಂಗಳೂರಿನಿಂದ ಯುಎಸ್ ಗೆ ಹೋಗಿ, ಬಳಿಕ ಗಾಂಧಿನಗರಕ್ಕೆ ಕಾಲಿಡುವ ತನಕದ ನಿಮ್ಮ ಪಯಣ ಹೇಗಿತ್ತು?

    ಜನಿಸಿದ್ದು ಮಂಗಳೂರಿನಲ್ಲಿ. ಆದರೆ ಬಾಲ್ಯ ಕಳೆದಿದ್ದು ಕೊಯಂಬತ್ತೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮಂಗಳೂರಿಗೆ ವಾಪಸಾದೆ. ಮಂಗಳೂರಿನ ಅಲೊಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಮಾಡಿ, ಶ್ರೀನಿವಾಸ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್ ನಲ್ಲಿ ವೃತ್ತಿಯಲ್ಲಿದ್ದೆ. ಬಳಿಕ ಯುಎಸ್ ಗೆ ಹೋಗಿ ಅಲ್ಲಿ ಯಾಹೂ ಸಂಸ್ಥೆಗೆ ಸೇರಿಕೊಂಡೆ. ಇದೀಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದರೂ ನಾನು ಇಂದಿಗೂ ಯಾಹೂನಲ್ಲೇ ವೃತ್ತಿಯಲ್ಲಿದ್ದೇನೆ.

    ಕನ್ನಡ ಎಂದರೆ ರೋಮಾಂಚನ' ಎನ್ನುತ್ತಾರೆ ಆರ್ಯವರ್ಧನ..!ಕನ್ನಡ ಎಂದರೆ ರೋಮಾಂಚನ' ಎನ್ನುತ್ತಾರೆ ಆರ್ಯವರ್ಧನ..!

     ಚಿತ್ರರಂಗದ ಕಡೆಗಿನ ಒಲವು ಮೂಡಿದ್ದು ಹೇಗೆ?

    ಚಿತ್ರರಂಗದ ಕಡೆಗಿನ ಒಲವು ಮೂಡಿದ್ದು ಹೇಗೆ?

    ನನಗೆ ಶಾಲಾ ಕಾಲೇಜು ದಿನಗಳಿಂದಲೇ ಡಾನ್ಸ್ ಮಾಡುವ ಹವ್ಯಾಸವಿತ್ತು. ಹಾಗಂತ ಶಾಸ್ತ್ರೀಯವಾಗಿ ನೃತ್ಯಾಭ್ಯಾಸ ಮಾಡಿರಲಿಲ್ಲ. ಆದರೆ ಬಾಲಿವುಡ್ ಶೈಲಿಯ ನೃತ್ಯ ಮಾಡುವ, ಕೊರಿಯೋಗ್ರಫಿ ಮಾಡಿ ಕುಣಿಸುವ ಹವ್ಯಾಸವಿತ್ತು. ಇನ್ಫೊಸಿಸ್ ಸಂಸ್ಥೆಗಾಗಿ ಒಂದು ವಿಡಿಯೋ ಮಾಡಿದ್ದೆವು. ಅದರಲ್ಲಿ ನಾನು ಪಾರ್ಟಿಸಿಪೇಟ್ ಮಾಡಿದ್ದೆ. ಅದರ ನಿರ್ದೇಶಕ ನಾಗರಾಜ್ ಭಟ್ ಅವರೇ ಬಳಿಕ ಟ್ಯಾಕ್ಸಿ 24 ಇನ್ ಟು 7 ಹಿಂದಿ ಕಿರುಚಿತ್ರ ನಿರ್ದೇಶನ ಮಾಡುವಾಗ ಅವರೇ ನನ್ನನ್ನು ಕರೆಸಿ ಆಡಿಶನ್ ನಡೆಸಿದರು. ಹಾಗೆ ನಟಿಯಾಗಿ ಬದಲಾದೆ.

     ಇದುವರೆಗೆ ಎಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೀರಿ?

    ಇದುವರೆಗೆ ಎಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೀರಿ?

    ಟ್ಯಾಕ್ಸಿ 24 ಇನ್ ಟು 7 ಎನ್ನುವ ಹಿಂದಿ ಕಿರುಚಿತ್ರದ ಮೂಲಕ ವೃತ್ತಿ ಬದುಕು ಶುರುವಾಯಿತು. ಅದರಲ್ಲಿ ನಾನು ಇಂಗ್ಲಿಷ್ ಹುಡುಗಿಯ ಪಾತ್ರ ಮಾಡಿದ್ದೆ. ಆಮೇಲೆ ತಮಿಳು, ತೆಲುಗು ಭಾಷೆಗಳಲ್ಲಿ ಸಣ್ಣ ಪುಟ್ಟ ಅವಕಾಶಗಳು ಸಿಗತೊಡಗಿದವು. ತೆಲುಗಲ್ಲಿ ಮೈಮರಪು' ಎನ್ನುವ ಒಂದು ವೆಬ್ ಸೀರೀಸ್ ನಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿದ್ದೆ. `ನಿನ್ನು ಕೋರಿ' ಎನ್ನುವ ಚಿತ್ರದಲ್ಲಿ ನಟ ನಾನಿಯವರ ಜತೆಗೆ ಸಣ್ಣದೊಂದು ಪಾತ್ರ ಮಾಡಿದ್ದೇನೆ. ಯುಎಸ್ ನ ಮಂದಿ ಮಾಡಿರುವ ಒಂದು ಗಂಟೆ ಕಾಲಾವಧಿಯ ಹಿಂದಿ ಸಿನಿಮಾದಲ್ಲಿ ಕೂಡ ನಟಿಸಿದ್ದೇನೆ. ಇನ್ನೊಂದಷ್ಟು ಪ್ರಾಜೆಕ್ಟ್ ಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ತಮಿಳು ನಟ ಧನುಷ್ ಅವರು ಹಾಡಿದ ಆದರೆ ಸಿನಿಮಾದಲ್ಲಿ ಬಳಸಿರದ ಹಾಡಿಗೆ ಕತೆ ಮಾಡಿ ಅದರಲ್ಲಿ ನಾನು ನಟಿಸಿದ್ದೇನೆ. ಅದರ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅದನ್ನು ಮೆಚ್ಚಿಕೊಂಡು ತಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಅವಕಾಶ ನೀಡಿದ್ದಾರೆ.

    ಹೆಸರಿನಲ್ಲೆ ಸೆಳೆವಂಥ ಇವರು ಸುಂದರ್ ವೀಣಾ..!

     ಸುಮನ್ ನಗರ್ಕರ್ ಅವರ `ಬಬ್ರೂ’ ಚಿತ್ರ ತಂಡದಲ್ಲಿ ಸೇರಿಕೊಂಡ ಬಗ್ಗೆ ಹೇಗೆ?

    ಸುಮನ್ ನಗರ್ಕರ್ ಅವರ `ಬಬ್ರೂ’ ಚಿತ್ರ ತಂಡದಲ್ಲಿ ಸೇರಿಕೊಂಡ ಬಗ್ಗೆ ಹೇಗೆ?

    ‘ಬಬ್ರೂ' ಚಿತ್ರದ ನಿರ್ದೇಶಕ ಸುಜಯ್ ಅವರು ಬೇರೆ ಒಂದು ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಅದು ನಡೆಯಲಿಲ್ಲ. ಆದರೆ ಬಬ್ರುವಿನಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರದಲ್ಲಿ ಒಂದು ವಿದೇಶೀ ಹುಡುಗಿಯ ಪಾತ್ರ ಬೇಕಾಗಿತ್ತು. ನಾನು ಭಾರತೀಯಳಾದರೂ ನನ್ನನ್ನು ಯುಎಸ್ ಮಂದಿ ಕೂಡ ರಷ್ಯನ್ ಅಥವಾ ಸ್ಪಾನಿಷ್ ಹುಡುಗಿ ಎಂದುಕೊಳ್ಳುವುದೇ ಹೆಚ್ಚು. ವಸಂತ ಸಮೀರನ್ ಎನ್ನುವ ತೆಲುಗು ಸಿನಿಮಾದಲ್ಲಿ ಕೂಡ ನನ್ನನ್ನು ಸ್ಪಾನಿಷ್ ಹುಡುಗಿಯಾಗಿ ತೋರಿಸಿದ್ದಾರೆ. ಭಾರತದಲ್ಲಿ ನನ್ನನ್ನು ನಾರ್ತ್ ಇಂಡಿಯನ್ ಹುಡುಗಿ ಇರಬೇಕು ಎಂದುಕೊಳ್ಳುವವರೇ ಅಧಿಕ. ಬಹುಶಃ ಈ ಲುಕ್ ನಿಂದಾಗಿಯೇ ನನಗೆ ಬಬ್ರೂವಿನಲ್ಲಿ ಕೂಡ ಅವಕಾಶ ಸಿಕ್ಕಿತೆನ್ನಬಹುದು. ಆದರೆ ಈ ಚಿತ್ರದ ಬಳಿಕ ನನ್ನ ನಟನೆಯಿಂದಾಗಿ ಇನ್ನಷ್ಟು ವೈವಿಧ್ಯಮಯ ಪಾತ್ರಗಳು ಸಿಗಬಹುದೆನ್ನುವ ನಿರೀಕ್ಷೆ ಇದೆ.

     ನಿಮ್ಮ ಕೌಟುಂಬಿಕ ಬದುಕಿನ ಬಗ್ಗೆ ಹೇಳಿ

    ನಿಮ್ಮ ಕೌಟುಂಬಿಕ ಬದುಕಿನ ಬಗ್ಗೆ ಹೇಳಿ

    ನನ್ನ ತಂದೆ ದಾಮೋದರ ಭಟ್ ಮಂಗಳೂರಲ್ಲಿ ಬಿಸ್ನೆಸ್ ನಲ್ಲಿ ತೊಡಗಿಸಿಕೊಂಡಿರುವವರು. ತಾಯಿ ಶೈಲಜಾ ಮೃದಂಗ ನುಡಿಸಬಲ್ಲರು. ಅವರಿಗೆ ನಾನು ಮತ್ತು ನಮ್ಮಕ್ಕ ಇಬ್ಬರೇ ಮಕ್ಕಳು. ಅಕ್ಕ ಮಧುರಾ ಭಟ್ ಫಿಸಿಯೋಥೆರಪಿಸ್ಟ್ ಆಗಿದ್ದು, ಹಾಂಕಾಂಗ್ ನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ನಾನು ಸದ್ಯಕ್ಕೆ ಬೆಂಗಳೂರಿಗೆ ಬಂದಿದ್ದೇನೆ. ಸಿನಿಮಾ ಬದುಕಿಗೆ ಹೊಂದಿಕೊಳ್ಳುವ ಹಾಗೆ ಬೆಂಗಳೂರಿನ ಬ್ರ್ಯಾಂಚ್ ಆಫೀಸಲ್ಲಿ ವೃತ್ತಿಯಲ್ಲಿದ್ದೇನೆ.

    English summary
    Manglorean Actress Gana Bhat interview. She started her film career from Babru kannada Movie.
    Thursday, November 7, 2019, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X