twitter
    For Quick Alerts
    ALLOW NOTIFICATIONS  
    For Daily Alerts

    ಟಿವಿ ನಿರೂಪಕಿ ಇದೀಗ ಚಲನಚಿತ್ರ ನಿರ್ಮಾಪಕಿ

    By ಮಧುಸೂದನ ಹೆಗಡೆ
    |

    ಯಕ್ಷಗಾನದ ಮಾರ್ದನಿಸುವ ಚಂಡೆ ಸದ್ದು, ಭೂತದ ವೇಷ, ನಾಗಾರಾಧನೆಗೆ ಹೆಸರಾದ ತುಳುನಾಡಲ್ಲಿಗ 'ಐಸ್ ಕ್ರೀಮ್ ' ನದ್ದೇ ಮಾತು. ಆದರೆ ಈ ಐಸ್ ಕ್ರೀಮ್ ಅಂಗಡಿಗಳಲ್ಲಿ ಸಿಗಲ್ಲ ಬದಲಾಗಿ ಥಿಯೇಟರ್ ಗೆ ಹೋಗಿ ಸವಿಯಬೇಕು!

    ತುಳು ನಾಡಿನ ಜನರಿಗೆ ನವೆಂಬರ್ 20 ರಿಂದ ಐಸ್ ಕ್ರೀಮ್ ಕೊಡುಗೆ, ಹೊಸಬರ ನಿರ್ಮಾಣದ ಹೊಸತನದ ತುಳು ಚಿತ್ರ 'ಐಸ್ ಕ್ರೀಮ್' ಶುಕ್ರವಾರ ಬಿಡುಗಡೆಯಾಗಲಿದೆ. ಮಂಗಳೂರು ಮೂಡಬಿದಿರೆ, ಕಾರ್ಕಳ, ಉಡುಪಿಯಲ್ಲಿ ಐಸ್ ಕ್ರೀಮ್ ಸವಿಯಲು ಅವಕಾಶವಿದೆ.

    ಸುದ್ದಿ ಮಾಧ್ಯಮದ ನಿರೂಪಕಿ ನವಿತ ಜೈನ್ ಇಲ್ಲಿ ಚಿತ್ರ ನಿರ್ಮಾಪಕಿಯಾಗಿದ್ದಾರೆ. ಅವರಿಗೆ ಪ್ರೀತಮ್ ಸಾಗರ್ ಸಾಥ್ ನೀಡಿದ್ದಾರೆ. ವೇಣುಗೋಪಾಲ್ ಶೆಟ್ಟಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮಂಗಳೂರಿನ ರೂಪೇಶ್ ಶೆಟ್ಟಿ, ಅನ್ವಿತರಾವ್ ನಾಯಕ-ನಾಯಕಿಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ದಿನೇಶ್ ಅತ್ತಾವರ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ತುಳು ರಂಗ ಭೂಮಿಯ ಮತ್ತು ಚಿತ್ರರಂಗದ ನಟರಾದ ಚೇತನ್ ರೈ ಮಾಣಿ, ರೋಹಿನಿ ಜಗರಾಂ ಕಾಣಸಿಗಲಿದ್ದಾರೆ.[ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು']

    ಚಲನಚಿತ್ರ ಬಿಡುಗಡೆ ಸಂಭ್ರಮದಲ್ಲಿದ್ದ ನಿರ್ಮಾಪಕಿ ನವಿತ ಜೈನ್ ಒನ್ ಇಂಡಿಯಾ ಕನ್ನಡದೊಂದಿಗೆ ಮಾತಿಗೆ ಸಿಕ್ಕರು. ಯಾಕೆ ಚಿತ್ರ ನಿರ್ಮಾಣ ಮಾಡಿದ್ದೇವೆ? ಇದರಲ್ಲಿನ ಹೊಸತನವೇನು? ಚಿತ್ರ ಬಿಡುಗಡೆ ಬಗ್ಗೆ ತುಳುನಾಡಿನ ಜನರ ಮನದ ಇಂಗಿತವೇನು? ಎಂಬ ಹಲವಾರು ಸಂಗತಿಗಳನ್ನು ಜೈನ್ ಒಂದೊಂದಾಗಿ ತೆರೆದಿಟ್ಟರು.

    ನವಿತ ಜೈನ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ... ಅವರ ಮಾತುಗಳಲ್ಲೇ ಚಿತ್ರದ ಸಮಗ್ರ ಮಾಹಿತಿ ಪಡೆದುಕೊಳ್ಳಿ

    13 ಚಿತ್ರಮಂದಿರದಲ್ಲಿ ಬಿಡುಗಡೆ

    13 ಚಿತ್ರಮಂದಿರದಲ್ಲಿ ಬಿಡುಗಡೆ

    ಒಟ್ಟು 13 ಚಿತ್ರಮಂದಿರಗಳಲ್ಲಿ ಚಿತ್ರ ಆಸ್ವಾದಿಸಬಹುದು. ಮಂಗಳೂರು, ಮೂಡಬಿದಿರೆ, ಕಾರ್ಕಳ, ಉಡುಪಿಯಲ್ಲಿ ಚಿತ್ರ ತೆರೆ ಕಾಣಲಿದೆ. ಒಂದು ವಾರದ ನಂತರ ಮಂಡ್ಯ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿಯೂ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದೇವೆ.

    ಮಾತೃಭಾಷಾ ಧನ್ಯತೆ

    ಮಾತೃಭಾಷಾ ಧನ್ಯತೆ

    ಮಾತೃಭಾಷೆಯ ಚಿತ್ರವೊಂದರ ನಿರ್ಮಾಣ ಮಾಡಿದ್ದು ನನ್ನಲ್ಲಿ ಧನ್ಯತಾ ಭಾವ ಮೂಡಿಸಿದೆ. ಕಾಲೇಜುಗಳಿಗೆ ತೆರಳಿ ಪ್ರಚಾರ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಕೋಸ್ಟಲ್ ವುಡ್‌ನಲ್ಲಿ ಖಂಡಿತ ಬೆಂಬಲ ಸಿಗಲಿದೆ.

    ವಿಭಿನ್ನ ಚಿತ್ರ

    ವಿಭಿನ್ನ ಚಿತ್ರ

    ಹಾಸ್ಯ, ಥ್ರಿಲ್ಲರ್, ಹಾರರ್ ಮತ್ತು ಪ್ರೇಮ ಕತೆಯನ್ನು ಒಳಗೊಂಡಿರುವ ಇದೊಂದು ವಿಭಿನ್ನ ಚಿತ್ರ. ತುಳುನಾಡ ಸಂಸ್ಕೃತಿಯನ್ನು ಬಿಂಬಿಸುತ್ತಲೇ ನಿಮ್ಮನ್ನು 1 ಗಂಟೆ 55 ನಿಮಿಷ ಕಾಲ ಹಿಡಿದಿಡಲಿದೆ.

     ಸದ್ಯಕ್ಕೆ ನಾಯಕಿಯಾಗಲ್ಲ

    ಸದ್ಯಕ್ಕೆ ನಾಯಕಿಯಾಗಲ್ಲ

    ನಾಯಕಿಯಾಗಿ ನಟನೆ ಮಾಡಲು ಆಫರ್ ಬಂದಿದ್ದನ್ನು ತಿರಸ್ಕರಿಸಿದ್ದೇನೆ. ಕೆಲ ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿದ್ದೇನೆ. ಸದ್ಯಕ್ಕೆ ನಾಯಕಿಯಾಗಲ್ಲ. ಉತ್ತಮ ಪಾತ್ರ ಸಿಕ್ಕರೆ ನೋಡೋಣ.

     ಮಾಧ್ಯಮವೇ ನನ್ನ ಆಯ್ಕೆ

    ಮಾಧ್ಯಮವೇ ನನ್ನ ಆಯ್ಕೆ

    ಸಿನಿಮಾ ಮತ್ತು ಮಾಧ್ಯಮ ಎರಡನ್ನು ಪ್ರೀತಿಸುತ್ತೇನೆ. ಆದರೆ ಮಾಧ್ಯಮವೇ ನನ್ನ ಆಯ್ಕೆ. ಎರಡೂ ಕ್ಷೇತ್ರಗಳು ಪ್ರತಿದಿನ ಸವಾಲು ಹಾಕುತ್ತವೆ, ನಾವದನ್ನು ಎದುರಿಸಲೇಬೇಕು. ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ.

    English summary
    Much-awaited Tulu movie 'Ice Cream' is ready for release on 20th November 2015. The Tulu Movie is produced by Mangaluru-based journalist Navitha Jain and Pritham Sagar. The movie will be released in 13 theatres across Dakshina Kannada and Udupi districts. Producer Navitha Jain speaks with Oneindia Kannada Filmibeat.
    Thursday, November 19, 2015, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X