For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಚಿತ್ರತಂಡ ಸೇರಿಕೊಂಡ 'ಭೂಮಿ ಮೇಲಿನ ಅತಿ ಕೆಟ್ಟ ಮನುಷ್ಯ'

  |

  ವಿಜಯ್ ದೇವರಕೊಂಡ ನಟಿಸಿ, ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ 'ಲೈಗರ್' ಸಿನಿಮಾ ಹಲವು ಕಾರಣಗಳಿಗೆ ಈಗಾಗಲೇ ಸದ್ದು ಮಾಡುತ್ತಿದೆ. ಇದೀಗ ಭಾರಿ ದೊಡ್ಡ ಸುದ್ದಿಯೊಂದನ್ನು ಚಿತ್ರತಂಡ ಹೊರಹಾಕಿದೆ.

  ವಿಶ್ವ ವಿಜೇತ ಬಾಕ್ಸರ್, ಭೂಮಿಯ ಮೇಲಿನ ಅತಿ ಕೆಟ್ಟ ಮನುಷ್ಯ ಎಂದು ಮಾಧ್ಯಮಗಳಿಂದ ಕರೆಸಿಕೊಂಡಿದ್ದ ಮೈಕ್ ಟೈಸನ್ 'ಲೈಗರ್' ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ.

  'ಲೈಗರ್' ಸಿನಿಮಾವು ಬಾಕ್ಸಿಂಗ್ ಕುರಿತಾದ ಸಿನಿಮಾ ಆಗಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆದಾಗಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಮೈಕ್ ಟೈಸನ್ ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದ್ದು, ಬಾಕ್ಸಿಂಗ್ ರಿಂಗ್‌ಗಳ ಸೆಟ್‌ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಮೈಕ್ ಟೈಸನ್ ನೇರವಾಗಿ ಗೋವಾದ ಸೆಟ್‌ಗೆ ಆಗಮಿಸಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪುರಿ ಜಗನ್ನಾಥ್, ''ಮೊತ್ತ ಮೊದಲ ಬಾರಿಗೆ ಭಾರತೀಯ ಚಿತ್ರರಂಗಕ್ಕೆ ಮಾಸ್ಟರ್ ಆಫರ್ ರಿಂಗ್ಸ್ ಮೈಕ್ ಟೈಸನ್ ಅನ್ನು ಪರಿಚಯಿಸುತ್ತಿದ್ದೇವೆ. ಡೈನಮೈಟ್ ಮೈಕ್‌ ಟೈಸನ್ ಲೈಗರ್ ತಂಡ ಸೇರಿಕೊಂಡಿದ್ದಾರೆ'' ಎಂದಿದ್ದಾರೆ.

  ವಿಜಯ್ ದೇವರಕೊಂಡ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ''ನಾವು ಕ್ರೇಜಿತನವನ್ನು ನೀಡುವುದಾಗಿ ಮಾತು ಕೊಟ್ಟಿದ್ದೆವು. ಇದು ಅದರ ಆರಂಭವಷ್ಟೆ. ಭೂಮಿಯ ಅತಿ ಕೆಟ್ಟ ಮನುಷ್ಯ, ಬಾಕ್ಸಿಂಗ್ ದೇವರು, ರಾಕ್ಷಸ, ಸಾರ್ವಕಾಲಿಕ ಅತ್ಯುತ್ತಮ ಮೈಕ್ ಟೈಸನ್ ಮೊದಲ ಬಾರಿಗೆ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ'' ಎಂದಿದ್ದಾರೆ.

  ಮೈಕ್ ಟೈಸನ್‌ಗೆ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಅವರು ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬ್ಲ್ಯಾಕ್ ಆಂಡ್ ವೈಟ್', 'ಹ್ಯಾಂಗ್‌ ಓವರ್', 'ರಾಕಿ ಬಲ್ಬೋವಾ', 'ಸ್ಕೇರಿ ಮೂವಿ', 'ಗ್ರಡ್ಜ್ ಮ್ಯಾಚ್', 'ಐಪಿ ಮ್ಯಾನ್ 3', 'ಚೈನಾ ಸೇಲ್ಸ್ ಮ್ಯಾನ್', 'ಕಿಕ್‌ಬಾಕ್ಸರ್; ರಿಟ್ಯಾಲಿಯೇಷನ್', 'ಗರ್ಲ್ಸ್ 2', 'ಹ್ಯಾಮ್ಲೆಟ್ ಫರಾನ್' ಸಿನಿಮಾಗಳಲ್ಲಿ ಮೈಕ್ ಟೈಸನ್ ನಟಿಸಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

  ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾವು ಪ್ರಸ್ತುತ ಗೋವಾದಲ್ಲಿ ಕೆಲವು ಭರ್ಜರಿ ಆಕ್ಷನ್ ಸೀನ್‌ಗಳನ್ನು ಚಿತ್ರಿಸಿಕೊಳ್ಳುತ್ತಿದೆ. ಸಿನಿಮಾಕ್ಕೆ ನಟಿ ಚಾರ್ಮಿ ಮತ್ತು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ.

  English summary
  Great boxer Mike Tyson staring in Vijay Devarakonda's Telugu movie Liger. Puri Jagannadh directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X