twitter
    For Quick Alerts
    ALLOW NOTIFICATIONS  
    For Daily Alerts

    ಅನಂತ್ ನಾಗ್ ಬಗ್ಗೆ ಕವಿರಾಜ್ ಏನಂದ್ರು

    By ಸುನಿ ಗೌಡ
    |

    ಚೊಚ್ಚಲ ಬಾರಿಗೆ ನಿರ್ದೇಶನ ಮಾಡುವಾಗ ಸಾಮಾನ್ಯವಾಗಿ ಎಲ್ಲರಿಗೂ ಇರುವಂತೆ ಕವಿರಾಜ್ ಅವರಿಗೂ ಸಣ್ಣ ಭಯ ಇದ್ದೇ ಇತ್ತು. ಅದರಲ್ಲೂ ಎವರ್ ಗ್ರೀನ್ ನಟ ಅನಂತ್ ನಾಗ್ ಅವರಿಗೆಲ್ಲ ಆಕ್ಷನ್-ಕಟ್ ಹೇಳುವಾಗ ಸ್ವಲ್ಪ ಅಳುಕಿದ್ರಂತೆ.

    ಆದರೆ ಅನಂತ್ ಬಾಯ್ತುಂಬ ಹೊಗಳಿದಾಗ ತುಂಬಾ ಖುಷಿಪಟ್ಟ ಕವಿರಾಜ್ ಅವರು ಶೂಟಿಂಗ್ ಸಂದರ್ಭದ ಸಿಹಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಕವಿರಾಜ್ ಅವರೊಂದಿಗಿನ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ..

    * ಶೂಟಿಂಗ್ ಸಂದರ್ಭದಲ್ಲಿ ಮರೆಯದ ಕ್ಷಣಗಳು ಏನಾದ್ರೂ ಇದ್ಯಾ?

    - ಶೂಟಿಂಗ್ ಸಂದರ್ಭದಲ್ಲಿ ಮರೆಯಲಾರದ್ದು, ಅಂದ್ರೆ ಅನಂತ್ ನಾಗ್ ಅಂತವರಿಗೆ ಆಕ್ಷನ್-ಕಟ್ ಹೇಳಿದ್ದು, ಅವರಿಗೆ ಸೀನ್ ಗಳನ್ನು ವಿವರಿಸೋದೆ ಒಂದು ಖುಷಿ. ಸಿನಿಮಾದಲ್ಲಿ ಒಂದು ಡೈಲಾಗ್ ಇದೆ ಅದನ್ನು ಅವರು ತುಂಬಾ ಹೊಗಳ್ತಾ ಇದ್ರು, ಅದಕ್ಕೆ ನಾನು ಅನಂತ್ ಅವರ ಹತ್ರ ಚೆನ್ನಾಗಿದ್ಯಾ ಸಾರ್ ಅಂತ ಕೇಳಿದಾಗ ಚೆನ್ನಾಗಿಲ್ಲದೆ ಯಾರು ಬರೆದಿದ್ದು ಅಂತ ನನ್ನ ಕೆನ್ನೆ ಹಿಂಡಿದ್ರು, ಅದೆಲ್ಲ ನನಗೆ ತುಂಬಾ ಖುಷಿ ಅನಿಸ್ತು.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

    ಯಾಕಂದ್ರೆ ಅನಂತ್ ನಾಗ್ ಅವರಂತ ನಟರಿಂದ ಆ ಮಟ್ಟಿನ ಪ್ರಶಂಸೆ ಗಿಟ್ಟಿಸಿಕೊಳ್ಳುವುದು, ಆವಾಗ ನಾನು ಧನ್ಯ ಅಂತ ಅನ್ನಿಸ್ತು. ನನಗೆ ತುಂಬಾ ಟೆನ್ಶನ್ ಇದ್ದಿದ್ದೇ ಅದು ದೊಡ್ಡ ನಟರನ್ನು ಹೇಗಪ್ಪಾ ಮ್ಯಾನೇಜ್ ಮಾಡೋದು ಅಂತ. ಅವರಿಗೆ ತುಂಬಾ ಗೊತ್ತಿರುತ್ತೆ, ಸಿನಿಮಾದ ಬಗ್ಗೆ ತುಂಬಾ ತಿಳ್ಕೊಂಡಿದ್ದಾರೆ. ನಾನು ಬೇರೆ ಹೊಸ ನಿರ್ದೇಶಕ ಅಂತ ಗೊಂದಲ, ಭಯ ಇತ್ತು.[ಕುಂಬಳಕಾಯಿಯತ್ತ, 'ಮದುವೆಯ ಮಮತೆಯ ಕರೆಯೋಲೆ']

    'MMK' movie debudent director Kaviraj Exclusive Interview Part 2nd

    * ಎಷ್ಟು ಚಿತ್ರಮಂದಿರದಲ್ಲಿ ಮದುವೆ ನಡೆಯುತ್ತೆ?

    - ಮದುವೆ ಛತ್ರದಲ್ಲಿ ಅಲ್ಲ ಚಿತ್ರಮಂದಿರದಲ್ಲಿ ಅಂತ ನಾವು ಈ ಮೊದಲೇ ಹೇಳಿದ್ದೀವಿ. ಇಡೀ ಕರ್ನಾಟಕದಾದ್ಯಂತ 150 ಥಿಯೇಟರ್ ಗಳಲ್ಲಿ ಈ ಮದುವೆ ನಡೆಯುತ್ತೆ. ದಯವಿಟ್ಟು ಎಲ್ಲರೂ ತಪ್ಪದೇ ಬಂದು ನೋಡಬೇಕು. ನಿಮಗೆ ಮನರಂಜನೆಯ ಮೃಷ್ಟನ್ನಾ ಭೋಜನ, ಸುಮಾರು ಎರಡೂವರೆ ಘಂಟೆ ಮನೋರಂಜನೆ ಗ್ಯಾರಂಟಿ, ಮಿಸ್ಸೇ ಇಲ್ಲ. ಜೊತೆಗೆ ಒಂದು ಪುಟ್ಟ ಸಂದೇಶ ಇದೆ ಅದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ ನಿಮ್ಮ ಜೀವನ ಮತ್ತಷ್ಟು ಸುಂದರವಾಗುತ್ತೆ.

    * ಎಲ್ಲೆಲ್ಲಿ ಶೂಟಿಂಗ್ ಆಗಿದೆ?

    - ಹೆಚ್ಚಾಗಿ ಮಾಡಿರೋದು ಬೆಂಗಳೂರಲ್ಲಿ ನಂತರ ಬೆಂಗಳೂರಿನ ಹೊರವಲಯದ ಹಾರವಳ್ಳಿ ಎಂಬ ಮನೆಯಲ್ಲಿ ಶೂಟ್ ಮಾಡಿದ್ದೇವೆ. ಅದು ಬಿಟ್ರೆ ಹಾಡುಗಳಿಗೆ ಅಂತ ಮಲೇಷ್ಯಾ ಹೋಗಿದ್ದೇವೆ, ರಾಮನಗರದಲ್ಲಿ ಕ್ಲೈಮಾಕ್ಸ್, ಜಾಸ್ತಿ ಕರ್ನಾಟಕದಲ್ಲಿ ಚಿತ್ರೀಕರಣ ಆಗಿದೆ.

    * 'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ಸರಳ ಮದುವೆಯ ಬಗ್ಗೆ ಏನಾದ್ರೂ ಸಂದೇಶ ಇದ್ಯಾ?

    -ಸರಳ ಮದುವೆಗೆ ನಾನು ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗಿ ಸಂದೇಶ ಕೊಟ್ಟೆ. ಆದ್ರೆ ಸಿನಿಮಾದಲ್ಲಿ ತುಂಬಾ ಆಡಂಭರನೂ ಇಲ್ಲ ತುಂಬಾ ಸರಳವಾಗಿಯೂ ಇಲ್ಲ. ಇಡೀ ಸಿನಿಮಾ ತುಂಬಾ ಮದುವೆ ಇಲ್ಲ ಕ್ಲೈಮ್ಯಾಕ್ಸ್ ನಲ್ಲಿ ನಡೆಯುತ್ತೆ. ಒಟ್ಟು ಮದುವೆಯ ಸುತ್ತ ರಂಗಾಗಿ ನಡೆಯುವ ಕಥೆ. ಇಲ್ಲಿ ತುಂಬಾ ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಇದೆ. ಒಟ್ಟು ಮನೋರಂಜನೆಯ ಮೂಟೆಯೇ ಇದೆ ನೋಡಿ.

    ಕವಿರಾಜ್ ಅವರ ಅನುಭವಗಳನ್ನು ಅವರ ಮಾತುಗಳಲ್ಲಿಯೇ ಕೇಳಲು ಈ ವಿಡಿಯೋ ನೋಡಿ..

    English summary
    Kannada Movie 'Maduveya Mamatheya Kareyole' releasing this week (January 8th). Kannada Lyricist Kaviraj spoke to Filmibeat. Lyricist Kaviraj Shared his experience about 'Maduveya Mamatheya Kareyole' movie shooting. Here is the Exclusive Interview.
    Thursday, January 7, 2016, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X