ಕಳೆದ 12 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಫೇಮಸ್ ಆದ ಕನ್ನಡ ನಟರ ಪಟ್ಟಿ ಬಿಡುಗಡೆ; ನಂ.1 ಯಾರು?

ಟ್ವಿಟರ್.. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕ್ರೇಜ್ ಹಾಗೂ ಬಳಕೆದಾರರನ್ನು ಪಡೆದುಕೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ಪ್ರಮುಖ ವೇದಿಕೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಮಾಲೀಕತ್ವದಲ್ಲಿ ಭಾರೀ ಬದಲಾವಣೆಗಳಾಗಿ, ಟ್ವಿಟರ್‌ನ ನೀತಿ, ನಿಯಮಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯಾದರೂ ಈ ಅಪ್ಲಿಕೇಶನ್‌ನ ಕ್ರೇಜ್ ಮಾತ್ರ ಸ್ವಲ್ಪವೂ ತಗ್ಗಿಲ್ಲ. ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ.

ಇನ್ನು ಇತರೆ ಸಾಮಾಜಿಕ ಜಾಲತಾಣದ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಟ್ವಿಟರ್ ವೇಗವಾಗಿ ಅತಿಹೆಚ್ಚು ನಿಖರವಾಗಿ ಸುದ್ದಿಗಳನ್ನು ತಲುಪಿಸುವ ಕಾರಣದಿಂದ ಈ ಅಪ್ಲಿಕೇಶನ್ ಕಂಡರೆ ನೆಟ್ಟಿಗರಿಗೆ ಬಲು ಇಷ್ಟ. ಸಿನಿಮಾ ಕ್ಷೇತ್ರಕ್ಕೆ ಬಂದರೆ ಅಲ್ಲಿಯೂ ಈ ಟ್ವಿಟರ್ ದೊಡ್ಡ ಮಟ್ಟದಲ್ಲಿಯೇ ತನ್ನ ಪಾಲಿನ ಕೊಡುಗೆಯನ್ನು ನೀಡುತ್ತಿದೆ. ಹೌದು, ಟ್ವಿಟರ್ ಸಿನಿಮಾಗಳ ಪ್ರಚಾರದ ಪ್ರಮುಖ ವೇದಿಕೆಯಾಗಿದೆ.

Most mentioned kannada actors on twitter in past 12 days; Darshan tops the list

ಸಿನಿಮಾವೊಂದು ಸೆಟ್ಟೇರಿದರೆ ಅಥವಾ ಸಿನಿಮಾಗಳ ಕುರಿತು ಯಾವುದೇ ಸುದ್ದಿಗಳು ಹೊರಬಿದ್ದರೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತವೆ. ಈ ರೀತಿ ಟ್ರೆಂಡ್ ಆದರೆ ಸಿನಿಮಾ ಕುರಿತು ಜನರಿಗೆ ಹೈಪ್ ಇದೆ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಟಾರ್ ನಟರ ವಿಷಯಕ್ಕೆ ಬಂದರೆ ಟ್ವಿಟರ್‌ನಲ್ಲಿ ಅವರ ಬಗ್ಗೆ ಪ್ರತಿದಿನವೂ ಪೋಸ್ಟ್‌ಗಳು ಬರುತ್ತಲೇ ಇರುತ್ತವೆ.

ತಮ್ಮ ನೆಚ್ಚಿನ ಸ್ಟಾರ್ ನಟರ ಚಿತ್ರಗಳ ಅಪ್‌ಡೇಟ್ ಬಂದಾಗ ಅದರದ್ದೇ ಆದ ವಿಶೇಷ ಹ್ಯಾಷ್‌ಟ್ಯಾಗ್ ಮಾಡಿ ಅವುಗಳನ್ನು ಟ್ರೆಂಡ್ ಮಾಡುವ ಅಭಿಮಾನಿಗಳು ಚಿತ್ರದ ಮೇಲೆ ತಮಗಿರುವ ಕ್ರೇಜ್ ಅನ್ನು ತೋರಿಸುತ್ತಾರೆ. ಕೇವಲ ಸಿನಿಮಾಗಳ ಬಗ್ಗೆ ಮಾತ್ರವಲ್ಲದೇ ಸ್ಟಾರ್‌ಗಳ ಏನೇ ಅಪ್‌ಡೇಟ್ ಅಥವಾ ಸುದ್ದಿಗಳಿದ್ದರೂ ಅದು ಟ್ವಿಟರ್‌ನಲ್ಲಿ ಪೋಸ್ಟ್ ಆಗಿರುತ್ತವೆ.

ಈ ರೀತಿಯಾಗಿ ಟ್ವಿಟರ್ ಸಿನಿಮಾ ಮಂದಿಗೆ ದೊಡ್ಡ ವೇದಿಕೆಯಾಗಿದ್ದು, ರಾಜ್ಯವನ್ನೂ ದಾಟಿ ರೀಚ್ ಆಗಲು ಸಹಕಾರಿಯಾಗಿದೆ. ಇನ್ನು ಈ ಟ್ವಿಟರ್‌ನಲ್ಲಿ ಯಾವ ನಟರ ಬಗ್ಗೆ ಕಳೆದ ಇಂತಿಷ್ಟು ದಿನಗಳಲ್ಲಿ ಹೆಚ್ಚು ಚರ್ಚೆಗಳು ನಡೆದಿವೆ ಎಂಬ ಮಾಹಿತಿಯನ್ನು ಅರಿಯಬಹುದಾಗಿದ್ದು, ಸದ್ಯ ಟಿಒಐ ಮೂವಿಸ್ ಕಳೆದ 12 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ಕನ್ನಡ ನಟರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕನ್ನಡದ ಐವರು ನಟರು ಈ ಪಟ್ಟಿಯಲ್ಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಹೆಚ್ಚು ಬಾರಿ ಮೆನ್ಷನ್ ಆಗಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಮೂಲಕ ದರ್ಶನ್ ಸದ್ಯ ಟ್ವಿಟರ್‌ನಲ್ಲಿ ಫೇಮಸ್ ಕನ್ನಡ ನಟ ಎನಿಸಿಕೊಂಡಿದ್ದಾರೆ.

Most mentioned kannada actors on twitter in past 12 days; Darshan tops the list

ಅತಿಹೆಚ್ಚು ಬಾರಿ ಮೆನ್ಷನ್ ಆದ ಕನ್ನಡ ನಟರ ಪಟ್ಟಿ ( ಫೆಬ್ರವರಿ 25ರಿಂದ ಮಾರ್ಚ್ 8ರವರೆಗೆ )

1. ದರ್ಶನ್ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಕಳೆದ 12 ದಿನಗಳಲ್ಲಿ ಕ್ರಾಂತಿ ಚಿತ್ರ ಓಟಿಟಿಗೆ ಬಂದದ್ದರ ಕುರಿತು ಹಾಗೂ ದರ್ಶನ್ ನಟನೆಯ ಮುಂದಿನ ಚಿತ್ರಗಳ ಕುರಿತು ಹೆಚ್ಚು ಟ್ವೀಟ್‌ಗಳು ದಾಖಲಾಗಿರುವುದರಿಂದ ದರ್ಶನ್ ಅತಿಹೆಚ್ಚು ಬಾರಿ ಮೆನ್ಷನ್ ಆಗಿದ್ದಾರೆ.

2. ಎರಡನೇ ಸ್ಥಾನದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಸದ್ಯ ಸುದೀಪ್ ಕಬ್ಜ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಚರ್ಚೆಗಳಾದಾಗ ಸುದೀಪ್ ಮೆನ್ಷನ್ ಅಗಿದ್ದಾರೆ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮತ್ತು ಕನ್ನಡ ಚಲನಚಿತ್ರ ಕಪ್ ನಡೆದ ಕಾರಣ ಸುದೀಪ್ ಹೆಸರು ಹೆಚ್ಚು ಮೆನ್ಷನ್ ಆಗಲು ಕಾರಣವಾಗಿದೆ.

3. ಯಶ್ ಮುಂದಿನ ಚಿತ್ರ ಯಾವುದು ಎಂಬ ಚರ್ಚೆ ಹಲವು ದಿನಗಳಿಂದ ನಡೆಯುತ್ತಲೇ ಇದೆ. ಹೀಗಾಗಿಯೇ ಯಶ್ ಹೆಸರು ಹೆಚ್ಚಾಗಿ ಟ್ವಿಟರ್‌ನಲ್ಲಿ ಮೆನ್ಷನ್ ಆಗಿದ್ದು, ಈ ಪಟ್ಟಿಯಲ್ಲಿ ಯಶ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

4. ರಿಷಬ್ ಶೆಟ್ಟಿ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಚಂದನವನ ಕ್ರಿಟಿಕ್ ಅವಾರ್ಡ್, ಕಾಂತಾರ ಬಗೆಗಿನ ಚರ್ಚೆ ಹಾಗೂ ಮಗಳು ರಾದ್ಯಾ ಹುಟ್ಟುಹಬ್ಬದ ಕಾರಣ ರಿಷಬ್ ಶೆಟ್ಟಿ ಹೆಸರು ಅತಿಹೆಚ್ಚು ಬಾರಿ ಮೆನ್ಷನ್ ಆಗಿದೆ.

5. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಪುನೀತ್ ಅಭಿಮಾನಿಗಳಿಂದ ದೈಹಿಕವಾಗಿ ಮಾತ್ರ ದೂರಾಗಿದ್ದಾರೆ ಎನ್ನಬಹುದು. ಪ್ರತಿದಿನ ಪುನೀತ್ ಕುರಿತು ಪೋಸ್ಟ್‌ಗಳು ದಾಖಲಾಗುತ್ತಲೇ ಇದ್ದು, ಯುವ ಟೈಟಲ್ ಘೋಷಣೆಯಾದಾಗಲೂ ಪುನೀತ್ ರಾಜ್‌ಕುಮಾರ್ ಹೆಸರು ಹೆಚ್ಚು ಮೆನ್ಷನ್ ಆಗಿತ್ತು. ಹೀಗಾಗಿ ಅಪ್ಪು ಹೆಸರು ಈ ಪಟ್ಟಿಯಲ್ಲಿದೆ.

More from Filmibeat

English summary
Most mentioned kannada actors on twitter in past 12 days; Darshan tops the list. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X