ಟ್ಯೂನ್ ಕದಿಯುವ ಮ್ಯೂಸಿಕ್ ಡೈರೆಕ್ಟರ್ ಗಳ ಬಗ್ಗೆ ಹೀಗಂದ್ರು ರಘು ದೀಕ್ಷಿತ್
ಕೆಲವು ಬಾರಿ ಕೆಲವು ಹಾಡುಗಳನ್ನ ಕೇಳಿದರೆ ಕಾಫಿ ಮಾಡಿರುವ ಫೀಲ್ ಬರುತ್ತದೆ. ಈ ಹಾಡಿನ ಟ್ಯೂನ್ ಎಲ್ಲಿದಲೋ ಕದ್ದಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ, ಈ ರೀತಿ ಒಬ್ಬ ಸಂಗೀತ ನಿರ್ದೇಶಕನಿಗೆ ಹಾಡುಗಳನ್ನು ಕಾಫಿ ಮಾಡುವ ಪರಿಸ್ಥಿತಿ ಏಕೆ ಬರುತ್ತದೆ ಎಂದು ರಘು ದೀಕ್ಷಿತ್ ವಿವರಿಸಿದ್ದಾರೆ.
ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಮಾತನಾಡಿರುವ ಸಂಗೀತ ನಿರ್ದೇಶಕ ರಘು ದೀಕ್ಷಿತ್ ''ಎಷ್ಟೊಂದು ಜನ ಮ್ಯೂಸಿಕ್ ಡೈರೆಕ್ಟರ್ ಗಳನ್ನು ನಾವು ಕಾಫಿ ಕ್ಯಾಟ್ ಅಂತ ಪರಿಗಣಿಸುತ್ತೇವೆ. ಇಲ್ಲಿಂದ, ಅಲ್ಲಿಂದ ಟ್ಯೂನ್ ಎತ್ತಿದ್ದಾನೆ ಅಂತ ಬೈಯುತ್ತೇವೆ. ಆದರೆ, ಅದರ ಹಿಂದೆ ಏನಾಗಿರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ.'' ಎಂದು ವಾಸ್ತವವನ್ನು ಹೇಳಿದ್ದಾರೆ.
''ಎಷ್ಟೊ ಬಾರಿ ಕೆಲವು ನಿರ್ದೇಶಕ, ನಿರ್ಮಾಪಕರೇ ಸಿಡಿ ತಂದು ಕೊಟ್ಟು ನನಗೆ ಇದೇ ತರದ ಹಾಡು ಬೇಕು ಎಂದು ಬಲವಂತ ಮಾಡುತ್ತಾರೆ. ಆಗ ಸಂಗೀತ ನಿರ್ದೇಶಕರಿಗೆ ಬೇರೆ ದಾರಿ ಇರುವುದಿಲ್ಲ. ಒತ್ತಾಯಕ್ಕೆ ಮಣಿದು ಅದೇ ಹಾಡಿನ ರೀತಿಯ ಟ್ಯೂನ್ ಮಾಡುತ್ತಾರೆ. ಆಗ ಜನರಿಗೆ ಕೂಡ ಕಾಫಿ ಮಾಡಿದ್ದು ಅಂತ ಗೊತ್ತಾಗಿ ಬಿಡುತ್ತದೆ.'' ಎಂದು ರಘು ದೀಕ್ಷಿತ್ ತಿಳಿಸಿದ್ದಾರೆ.

ಅಂದಹಾಗೆ, ಫಿಲ್ಮಿಬೀಟ್ ಕನ್ನಡಕ್ಕೆ ರಘು ದೀಕ್ಷಿತ್ ನೀಡಿರುವ ಸಂದರ್ಶನದ ಎರಡನೇ ಭಾಗ ಇಲ್ಲಿದೆ ನೋಡಿ...


Click it and Unblock the Notifications











