ನನ್ನ ಮೊದಲ ಸಿನಿಮಾ : ಸೂರಿ ಜೊತೆಗೆ ಕೆಲಸ ಮಾಡುತ್ತಿದ್ದ ವಿಕ್ಕಿ ಹೀರೋ ಆದ ಕಥೆ

By Naveen

'ದುನಿಯಾ' ಸಿನಿಮಾದಲ್ಲಿ ದುನಿಯಾ ವಿಜಯ್ ಅವರನ್ನು ಹೀರೋ ಆಗಿ ಪರಿಚಯ ಮಾಡಿದ್ದ ನಿರ್ದೇಶಕ ಸೂರಿ ನಂತರ ಮತ್ತೆ ಹೊಸ ಹೀರೋ ಜೊತೆಗೆ ಕೆಲಸ ಮಾಡಿದ್ದೆ 'ಕೆಂಡಸಂಪಿಗೆ' ಸಿನಿಮಾದಲ್ಲಿ.

ನಿರ್ದೇಶಕನಾಗಬೇಕು ಎಂದುಕೊಂಡು ಸೂರಿ ಅವರ ಜೊತೆಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಇದ್ದಕ್ಕಿದ್ದ ಹಾಗೆ 'ಕೆಂಡಸಂಪಿಗೆ' ಸಿನಿಮಾಗೆ ಹೀರೋ ಆಗಿ ಬಿಡುತ್ತಾರೆ. ಆ ರೀತಿ ಯಾವುದೇ ಕನಸು ಕಾಣದೆ ನಟನಾಗಿ ತೆರೆ ಮೇಲೆ ಮಿಂಚಿದವರು ನಟ ವಿಕ್ಕಿ ವರುಣ್.

ಕೆಂಡಸಂಪಿಗೆ ವಿಕ್ಕಿ ಅಂತ್ತಾನೆ ಜನಪ್ರಿಯರಾಗಿರುವ ಈ ನಟ ಇದೀಗ ತಮ್ಮ ಮೊದಲ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ನನ್ನ ಮೊದಲ ಸಿನಿಮಾ' ಸರಣಿ ಲೇಖನದಲ್ಲಿ ವಿಕ್ಕಿ 'ಕೆಂಡಸಂಪಿಗೆ'ಯ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಡೈರೆಕ್ಟರ್ ಆಗಬೇಕು ಅಂತ ಇದ್ದೆ

ಡೈರೆಕ್ಟರ್ ಆಗಬೇಕು ಅಂತ ಇದ್ದೆ

''ಒಬ್ಬ ನಿರ್ದೇಶಕ ಆಗಬೇಕು ಅಂತ ನಾನು ಚಿತ್ರರಂಗಕ್ಕೆ ಬಂದೆ. ಸೂರಿ ಸರ್ ಅವರ ಜೊತೆಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಮೂರು ಸಿನಿಮಾ ಕೆಲಸ ಮಾಡಿದೆ. 'ಕೆಂಡಸಂಪಿಗೆ' ಮಾಡುವಾಗ ಆ ಕಥೆಗೆ ನಾಯಕನನ್ನು ಹುಡುಕುತ್ತ ಇದ್ವಿ. ಒಮ್ಮೆ ಸೂರಿ ಸರ್ ನೀನೆ ಹೀರೋ ಆಗಿ ಮಾಡು ಎಂದರು. ನಾನು ಹೀರೋ ಆಗುತ್ತೇನೆ ಎಂದು ಯಾವತ್ತು ನಾನು ಅಂದುಕೊಂಡಿರಲಿಲ್ಲ. ದೇವರು ಯಾವಾಗಲಾದರೂ ಅವಕಾಶ ಕೊಡುತ್ತಾನೆ. ಅದನ್ನು ಮಿಸ್ ಮಾಡಿಕೊಳ್ಳಬಾರದು ಅಂತ ಅವರು ಹೇಳಿದ್ದಾಗ ಸರಿ ಸರ್ ಮಾಡುತ್ತೇನೆ ಅಂತ ಒಪ್ಪಿಕೊಂಡೆ. ಹಾಗೆ ಎಲ್ಲ ಶುರುವಾಯ್ತು.''

ಒಂದು ವರ್ಷ ಸಿನಿಮಾ ನೋಡಿದೆ, ಒಂದು ವರ್ಷ ಪುಸ್ತಕ ಓದಿದೆ

ಒಂದು ವರ್ಷ ಸಿನಿಮಾ ನೋಡಿದೆ, ಒಂದು ವರ್ಷ ಪುಸ್ತಕ ಓದಿದೆ

''ಸುರೇಶ್, ಸುಧೀರ್, ಮನು ಅಂತ ನನ್ನ ಗೆಳೆಯರು ಇದ್ದರು. ಅದರಲ್ಲಿ ಸುರೇಶ್, ಮತ್ತು ಸುಧೀರ್ ಇಬ್ಬರು ಯೋಗರಾಜ್ ಸರ್ ಸಿನಿಮಾಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಅವರ ಮೂಲಕ ಯೋಗರಾಜ್ ಸರ್ ಭೇಟಿ ಮಾಡಿದೆ. ಆಮೇಲೆ ಎರಡು ವರ್ಷ ಸಿನಿಮಾವನ್ನು ಕಲಿತೆ. ಒಂದು ವರ್ಷ ಸಿನಿಮಾಗಳನ್ನು ನೋಡಿದೆ. ಒಂದು ವರ್ಷ ಪುಸ್ತಕ ಓದಿದೆ. ಅದೆಲ್ಲ ಮಾಡಿ ಯೋಗರಾಜ್ ಸರ್ ಜೊತೆಗೆ ಕೆಲಸ ಮಾಡಿದೆ. ನಂತರ ಅವರು ಸೂರಿ ಸರ್ ಜೊತೆಗೆ ಕೆಲಸ ಮಾಡು ಅಂದರು. 'ಜಾಕಿ' ಸಿನಿಮಾ ಮುಗಿಯುವ ವೇಳೆಗೆ ನಾನು ಸೂರಿ ಸರ್ ಜೊತೆಗೆ ಸೇರಿಕೊಂಡೆ.

ಸೂರಿ ಸರ್ ನನ್ನ ಹಣೆಬರಹವನ್ನು ಬೇರೆ ಬರೆದರು

ಸೂರಿ ಸರ್ ನನ್ನ ಹಣೆಬರಹವನ್ನು ಬೇರೆ ಬರೆದರು

''ಸೂರಿ ಸರ್ ಆ ಸಿನಿಮಾಗೆ ಹೀರೋ ಮಾಡಿರಲಿಲ್ಲ ಅಂದಿದ್ದರೆ ಬೇರೆ ಯಾವ ಡೈರೆಕ್ಟರ್ ಗಳು ನನ್ನನ್ನು ಹೀರೋ ಮಾಡುತ್ತಿರಲಿಲ್ಲ ಅನಿಸುತ್ತದೆ. ಪಾತ್ರಕ್ಕೆ ನಾನು ತುಂಬ ಹತ್ತಿರ ಆಗುತ್ತೇನೆ ಅಂತ ನನ್ನ ಕೈನಲ್ಲಿ ಮಾಡಿಸಿದರು. ಸೂರಿ ಸರ್ ನನ್ನ ಹಣೆಬರಹವನ್ನು ಬೇರೆ ಬರೆದರು. 'ಕಡ್ಡಿಪುಡಿ' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೆ. ಅವರ ಜೊತೆಗೆ ಐದಾರೂ ವರ್ಷ ಕೆಲಸ ಮಾಡಿದ್ದರಿಂದ ಅವರ ನನ್ನ ನಡುವೆ ಒಳ್ಳೆಯ ಬಾಂದವ್ಯ ಇತ್ತು.''

ಮೊದಲ ಶಾಟ್ ನಲ್ಲಿಯೇ ಹೊಡೆತ ತಿಂದೆ

ಮೊದಲ ಶಾಟ್ ನಲ್ಲಿಯೇ ಹೊಡೆತ ತಿಂದೆ

''ಸಿನಿಮಾದಲ್ಲಿ ಪೊಲೀಸರು ನನಗೆ ಹಿಂದೆಯಿಂದ ಹೊಡೆಯುತ್ತಾರೆ. ಅದೇ ನನ್ನ ಮೊದಲ ಶಾಟ್. ಎಪ್ರಿಲ್ 24 ರಂದು ಅಣ್ಣಾವ್ರ ಹುಟ್ಟುಹಬ್ಬದ ದಿನ ಶೂಟ್ ಮಾಡಿದ್ದು. ಇವತ್ತಿಗೂ ಆ ದೃಶ್ಯ ನೆನಪಿದೆ. ಆ ಶಾಟ್ ಆದ ಮೇಲೆ ನಮ್ಮ ಟೀಂ ನವರು ನೀನು ಫಸ್ಟ್ ಶಾಟ್ ನಲ್ಲಿಯೇ ಹೊಡೆಸಿಕೊಳ್ಳುತ್ತಿದ್ದೀಯಾ ಸಿನಿಮಾರಂಗದಲ್ಲಿ ಬೆಳೆಯುತ್ತಿಯಾ ಎಂದರು. ನನ್ನ ಕೆರಿಯರ್ ಶುರು ಆಗಿದ್ದೆ ಹಾಗೆ. ಮೊದಲ ಶಾಟ್ ನಲ್ಲಿಯೇ ಹೊಡೆತ ತಿಂದೆ''

ಬೇರೆ ದೇಶದಲ್ಲಿಯೂ ಜನ ಗುರುತಿಸಿದ್ರು

ಬೇರೆ ದೇಶದಲ್ಲಿಯೂ ಜನ ಗುರುತಿಸಿದ್ರು

''ನಾನು ಹೀರೋ ಆಗ್ತಿನಿ, ನನ್ನ ಸಿನಿಮಾವನ್ನು ಜನ ನೋಡಿ ಗುರುತು ಹಿಡಿದು ಮಾತನಾಡಿಸುತ್ತಾರೆ ಅಂತ ಯಾವುದೇ ಐಡಿಯಾ ಇರಲಿಲ್ಲ. ಕರ್ನಾಟಕದಲ್ಲಿ ಕನ್ನಡ ಸಿನಿಮಾ ನೋಡುತ್ತಾರೆ ಓಕೆ. ಆದರೆ, ನಾನು ದುಬೈ ಸೇರಿದಂತೆ ಕೆಲವು ದೇಶಕ್ಕೆ ಹೋದಾಗ ಅಲ್ಲಿಯೂ ಕೆಲವರು ಗುರುತಿಸಿದರು. ಇನ್ನೂ ಆ ಸಿನಿಮಾಗೆ ಫ್ಯಾನ್ಸ್ ಇದ್ದಾರೆ. ಯೂ ಎಸ್ ನ ಪತ್ರಿಕೆಯಲ್ಲಿ 'ಕೆಂಡಸಂಪಿಗೆ' ರಿವ್ಯೂ ಹಾಕಿದ್ದರು. ನಾನು ಸೈಮಾಗೆ ನಾಮಿನೇಟ್ ಆಗಿದ್ದೆ.''

ಕೈಗೆ ಹೊಡೆತ ಬಿದ್ದು ಹೊಲಿಗೆ ಹಾಕಿದ್ದರು

ಕೈಗೆ ಹೊಡೆತ ಬಿದ್ದು ಹೊಲಿಗೆ ಹಾಕಿದ್ದರು

''ಚಿತ್ರದಲ್ಲಿ ಒಂದು ಚೇಸಿಂಗ್ ಸೀನ್ ಇತ್ತು. ಕೈಗೆ ಹೊಡೆತ ಬಿದ್ದು ಹೊಲಿಗೆ ಹಾಕಿದ್ದರು. ಸೂರಿ ಸರ್ ಶೂಟಿಂಗ್ ಕ್ಯಾನ್ಸಲ್ ಮಾಡೋಣ್ವ? ಅಂತ ಕೇಳಿದ್ದರು. ನಾನು ಬೇಡ ಸರ್ ಮಾಡ್ತಿನಿ ಅಂದೆ. ಅವತ್ತು ನನ್ನೊಬ್ಬನದ್ದೆ ಸೀನ್ ಇತ್ತು. ಆ ದಿನ ರಾತ್ರಿ ಮೋರಿಯ ಸೀನ್ ಕೂಡ ಶೂಟ್ ಮಾಡಿದ್ವಿ. ಈಗಲೂ ಆ ಸೀನ್ ನೋಡಿದರೆ ಅದರಲ್ಲಿ ನನ್ನ ಬಲಗೈ ಸ್ವಲ್ಪ ಅವೈಡ್ ಆಗಿದೆ. ಚಿತ್ರವನ್ನು ತುಂಬ ಜಿಲ್ಲೆಗಳಲ್ಲಿ ಶೂಟ್ ಮಾಡಿದ್ವಿ. ಪ್ರತಿ ಜಿಲ್ಲೆಗೆ ಹೋದರು ಜನ ಖುಷಿಯಿಂದ ಮಾತನಾಡಿಸುತ್ತಾರೆ.''

ಸಿನಿಮಾ ಹಿಟ್ ಆಗುವವರೆಗೆ ಜಾಸ್ತಿ ಮಾತನಾಡುತ್ತಿರಲಿಲ್ಲ

ಸಿನಿಮಾ ಹಿಟ್ ಆಗುವವರೆಗೆ ಜಾಸ್ತಿ ಮಾತನಾಡುತ್ತಿರಲಿಲ್ಲ

''ಸೂರಿ ಸರ್ ಕೇಳಿದಾಗ ಓಕೆ ಅಂತ ಹೇಳಿದ್ದೆ. ಆದರೆ ಶೂಟಿಂಗ್ ಶುರು ಮಾಡಿದಾಗ ನನಗೆ ಸ್ಪಲ್ಪ ಭಯ ಆಯ್ತು. ಸೂರಿ ಸರ್ ಸಿನಿಮಾ ಚೆನ್ನಾಗಿ ಇರುತ್ತದೆ. ಆದರೆ ಆಕಸ್ಮತ್ ಸಿನಿಮಾ ಸಕ್ಸಸ್ ಆಗದೆ ಇದ್ದರೆ, ಇವನು ಹೀರೋ ಆಗಿ ಬೆಳೆಯಲು ಆಗಲಿಲ್ಲ ಇನ್ನೂ ಡೈರೆಕ್ಟರ್ ಆಗಿ ಬೆಳೆಯುತ್ತಾನಾ ಎಂದು ಎಲ್ಲರೂ ಅಂದುಕೊಳ್ಳುತ್ತಾರಾ ಎನ್ನುವ ಅಳುಕು ಇತ್ತು. ಅದಕ್ಕೆ ನಾನು ಆ ಸಿನಿಮಾ ಹಿಟ್ ಆಗುವವರೆಗೆ ಎಲ್ಲಿಯೂ ಜಾಸ್ತಿ ಮಾತನಾಡುತ್ತಿರಲಿಲ್ಲ. ಸೂರಿ ಸರ್ ಆಗಲೇ ದೊಡ್ಡ ಹೆಸರು ಮಾಡಿದ್ದರು. ಸಿನಿಮಾ ಸೋಲಬಾರದು, ಒಂದು ಒಳ್ಳೆಯ ಪ್ರಯತ್ನ ಗೆಲ್ಲಬೇಕು ಅಂತ ಕಷ್ಟಪಟ್ಟು ಕೆಲಸ ಮಾಡಿದ್ವಿ.''

ಮನೆಯವರಿಗೆ, ಗೆಳೆಯರಿಗೆ ನನ್ನ ಬಗ್ಗೆ ಗೊತ್ತಿರಲಿಲ್ಲ

ಮನೆಯವರಿಗೆ, ಗೆಳೆಯರಿಗೆ ನನ್ನ ಬಗ್ಗೆ ಗೊತ್ತಿರಲಿಲ್ಲ

''ನಾನು ಹೀರೋ ಆದಾಗ ನನ್ನ ಬಗ್ಗೆ ಮೊದಲ ಬಾರಿಗೆ ಚಿಕ್ಕ ಲೇಖನ ಉದಯವಾಣಿಯಲ್ಲಿ ಬಂದಿತ್ತು. ಸೂರಿ ಸಿನಿಮಾಗೆ ಸಂತೋಷ್ (ವಿಕ್ಕಿ ಹಳೆ ಹೆಸರು) ನಾಯಕ ಅಂತ ಬರೆದಿದ್ದರು. ಅದನ್ನು ನೋಡಿದ ಮೇಲೆಯೇ ನಮ್ಮ ಮನೆಯವರಿಗೆ, ಗೆಳೆಯರಿಗೆ ನಾನು ಏನು ಕೆಲಸ ಮಾಡುತ್ತಿದ್ದೇನೆ ಅಂತ ಗೊತ್ತಾಗಿದ್ದು. ಆರು ವರ್ಷದಿಂದ ಯಾರಿಗೂ ಏನು ಹೇಳಿರಲಿಲ್ಲ. ನಾನು ಏನಾದರೂ ಸಾಧಿಸುವವರೆಗೆ ನಾನು ಏನ್ ಮಾಡುತ್ತಿದ್ದೇನೆ ಅಂತ ಯಾರಿಗೂ ಹೇಳುವುದು ಬೇಡ ಅಂತ ಹೇಳಿರಲಿಲ್ಲ.''

ರಿಲೀಸ್ ಹಿಂದಿನ ದಿನ ವಜ್ರೇಶ್ವರಿ ಆಫೀಸ್ ಮೇಲೆ ಮಲಗಿದ್ದೆ

ರಿಲೀಸ್ ಹಿಂದಿನ ದಿನ ವಜ್ರೇಶ್ವರಿ ಆಫೀಸ್ ಮೇಲೆ ಮಲಗಿದ್ದೆ

''ರಿಲೀಸ್ ಹಿಂದಿನ ದಿನ ಗಾಂಧಿನಗರದಲ್ಲಿ ಇದ್ದ ವಜ್ರೇಶ್ವರಿ ಕಂಬೈನ್ಸ್ ಆಫೀಸ್ ಮೇಲೆ ಮಲಗಿದ್ದೆ. ಅಲ್ಲೇ ನಮ್ಮ ಸಿನಿಮಾದ ಎಡಿಟಿಂಗ್ ನಡೆಯುತ್ತಿತ್ತು. ಅಲ್ಲಿಂದ ಬೆಳ್ಳಗೆ ಎದ್ದು ಬೈಕ್ ನಲ್ಲಿ ಮೂವಿ ಲ್ಯಾಂಡ್ ಚಿತ್ರಮಂದಿರದ ಮುಂದೆ ಹೋಗುತ್ತಿದೆ. ನೋಡಿದರೆ ನನ್ನ ಕಟ್ ಔಟ್ ಅಲ್ಲಿ ಕಾಣುತ್ತಿತ್ತು. ಅದನ್ನು ನೋಡಿ ಇದು ನಾನೇನಾ ಅನಿಸಿಬಿಡ್ತು. ಅಲ್ಲಿಂದ ಮನೆಗೆ ಹೋಗಿ ವಾಪಸ್ ಚಿತ್ರಮಂದಿರಕ್ಕೆ ಬಂದೆ. ಜನ ನೋಡಿ ತುಂಬ ಖುಷಿ ಆಯ್ತು.''

ನನ್ನ ಬದುಕಿಗೆ ಆ ಸಿನಿಮಾ ಜನುಮದ ಜೋಡಿ

ನನ್ನ ಬದುಕಿಗೆ ಆ ಸಿನಿಮಾ ಜನುಮದ ಜೋಡಿ

''ಆ ಸಿನಿಮಾದ ಸ್ವೀಡ್, ಸ್ಕ್ರೀನ್ ಪ್ಲೇ, ಎಡಿಟಿಂಗ್ ಬೇರೆ ಲೆವೆಲ್ ನಲ್ಲಿ ಇದೆ. ಇವತ್ತು ಸಹ ಅನೇಕ ಜನರು ಸಿಕ್ಕಾಗ ಆ ಸಿನಿಮಾ ಮಾತನಾಡುತ್ತಾರೆ. ಕೆಲವು 40, 50 ಬಾರಿ ಸಿನಿಮಾ ನೋಡಿದ್ದೇವೆ ಅಂತ ಮೊಬೈಲ್ ತೆಗೆದು ತೋರಿಸುತ್ತಾರೆ. ನನ್ನ ಬದುಕಿಗೆ ಆ ಸಿನಿಮಾ ಜನುಮದ ಜೋಡಿ ಇದ್ದ ಹಾಗೆ. ಅದೊಂದು ಮರೆಯಲಾಗದ ಸಿನಿಮಾ.''

More from Filmibeat

English summary
Nanna Modala Cinema Series: kannada actor vikky varun spoke about his kendasampige movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X