ನನ್ನ ಮೊದಲ ಸಿನಿಮಾ : ನಟನೆ ಬರಲ್ಲ ಎಂದುಕೊಂಡೆ ಇಂಡಸ್ಟ್ರಿಗೆ ಬಂದಿದ್ದರು ಆಶಿಕಾ

By Naveen

Recommended Video

ನಂಗೂ ನಟನೆಗೂ ಆಗಲ್ಲ ಅಂದ ನಟಿ ಈಗ ಏನ್ ಹೇಳ್ತಾರೆ..? | Filmibeat Kannada

''ನನಗೆ ನಟನೆ ಬರಲ್ಲ... ನನಗೂ ಆಕ್ಟಿಂಗ್ ಗೂ ಆಗಿ ಬರಲ್ಲ'' ಹೀಗೆ ಹೇಳಿದ್ದ ಒಬ್ಬ ಹುಡುಗಿ ಇಂದು ಸಿನಿಮಾಗಳ ಮೇಲೆ ಸಿನಿಮಾ ಮಾಡಿ ಗೆಲ್ಲುತ್ತಿದ್ದಾರೆ. ಕನ್ನಡದಲ್ಲಿ ಸ್ಟಾರ್ ನಟಿ ಆಗುವ ಭರವಸೆ ಮೂಡಿಸಿದ್ದಾರೆ. ಅವರೇ ನಟಿ ಆಶಿಕಾ ರಂಗನಾಥ್.

ಮುಖದಲ್ಲಿ ಯಾವಾಗಲೂ ಮುಗುಳುನಗೆ ಬೀರುವ ಆಶಿಕಾ ರಂಗನಾಥ್ ತಮ್ಮ ಕೆರಿಯರ್ ಶುರು ಮಾಡಿದ್ದು 'ಕ್ರೇಜಿ ಬಾಯ್' ಚಿತ್ರದ ಮೂಲಕ. ಜ್ಯೋತಿ ನಿವಾಸ್ ಕಾಲೇಜ್ ನಲ್ಲಿ ಓದುತ್ತಿದ್ದ ಆಶಿಕಾ ರಂಗನಾಥ್ ಗೆ ಇದ್ದಕ್ಕಿದ್ದ ಹಾಗೆ ಸಿನಿಮಾ ಆಫರ್ ಬರುತ್ತದೆ. ಯಾವುದೇ ಪ್ಲಾನ್ ಇಲ್ಲದೆ ಸಿನಿಮಾರಂಗಕ್ಕೆ ಆಶಿಕಾ ಬರುತ್ತಾರೆ. ಹೀಗೆ ಚಿತ್ರರಂಗಕ್ಕೆ ಬಂದ ಆಶಿಕಾ ಇಂದು ಒಳ್ಳೆಯ ಹೆಸರು ಮಾಡಿದ್ದಾರೆ.

ಅಂದಹಾಗೆ, ನಟಿ ಆಶಿಕಾ ರಂಗನಾಥ್ ತಮ್ಮ ಮೊದಲ ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಅವರ ಮಾತುಗಳು ಮುಂದಿದೆ ಓದಿ...

ಜ್ಯೋತಿ ನಿವಾಸ್ ಕಾಲೇಜ್ ನಲ್ಲಿ ಓದುತ್ತಿದೆ

ಜ್ಯೋತಿ ನಿವಾಸ್ ಕಾಲೇಜ್ ನಲ್ಲಿ ಓದುತ್ತಿದೆ

''ನಾನು ಜ್ಯೋತಿ ನಿವಾಸ್ ಕಾಲೇಜ್ ನಲ್ಲಿ ಓದುತ್ತಿದೆ. ಕಾಲೇಜ್ ನಲ್ಲಿ ಇರುವಾಗ ಅನೇಕ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡುತ್ತಿದೆ. ನಾನು ಒಳ್ಳೆಯ ಡ್ಯಾನ್ಸರ್ ಅಂತ ಅಲ್ಲಿ ಇರುವವರು ಕೂಡ ಸಪೋರ್ಟ್ ಮಾಡುತ್ತಿದ್ದರು. ಬೆಂಗಳೂರು ಟೈಮ್ಸ್ ಅವರು ಫ್ರೆಶ್ ಫೇಸ್ ಅಂತ ಪ್ರತಿ ವರ್ಷ ಕಾಲೇಜು ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಾರೆ. ಒಮ್ಮೆ ಅದರಲ್ಲಿ ನೀನು ಟ್ರೈ ಮಾಡು ಅಂತ ಕಾಲೇಜ್ ನಲ್ಲಿ ಹೇಳಿದರು. ನಾನು ಟ್ರೈ ಮಾಡಿ ಕಾಲೇಜ್ ಲೆವೆಲ್ ನಲ್ಲಿ ಗೆದ್ದೆ.''

ಫೋಟೋ ನೋಡಿ ಮಹೇಶ್ ಬಾಬು ಸರ್ ಸಂಪರ್ಕ ಮಾಡಿದರು

ಫೋಟೋ ನೋಡಿ ಮಹೇಶ್ ಬಾಬು ಸರ್ ಸಂಪರ್ಕ ಮಾಡಿದರು

''ಇದು ಅಲ್ಲಿಗೆ ಮುಗಿಯಿತು ಎಂದುಕೊಂಡಿದೆ. ಆದರೆ ಪ್ರತಿ ಕಾಲೇಜಿನಲ್ಲಿ ಗೆದ್ದವರ ನಡುವೆ ಬೆಂಗಳೂರು ಲೆವೆಲ್ ನಲ್ಲಿ ಅದೇ ಕಾಂಪಿಟೇಷನ್ ಮಾಡಿದರು. ಅಲ್ಲಿ ನಾನು ಫಸ್ಟ್ ರನ್ನರ್ ಅಪ್ ಆದೆ. ರಶ್ಮಿಕಾ ಮಂದಣ್ಣಗೆ ಫಸ್ಟ್ ಪ್ಲೇಸ್ ಬಂದಿತ್ತು. ಆಗಲೇ ನಾನು ಮೊದಲ ಬಾರಿಗೆ Ramp Walk ಮಾಡಿದ್ದು. ಅಲ್ಲಿನ ಫೋಟೋ ಬೆಂಗಳೂರು ಟೈಮ್ಸ್ ಪೇಪರ್ ಫ್ರಂಟ್ ಪೇಜ್ ನಲ್ಲಿ ಬಂದಿತ್ತು. ಆ ಫೋಟೋಗಳನ್ನು ಮಹೇಶ್ ಬಾಬು ಸರ್ ನೋಡಿ ನಮ್ಮ ತಾಯಿಯನ್ನು ಸಂಪರ್ಕ ಮಾಡಿದರು.''

ನಾನು ನಟಿಸುವುದಕ್ಕೆ ಆಗಲ್ಲ ಎಂದುಕೊಂಡಿದ್ದೆ

ನಾನು ನಟಿಸುವುದಕ್ಕೆ ಆಗಲ್ಲ ಎಂದುಕೊಂಡಿದ್ದೆ

''ಮಹೇಶ್ ಬಾಬು ಸರ್ ಫೋನ್ ಮಾಡಿ ನಿಮ್ಮ ಫೋಟೋ ನೋಡಿದೆ, ಒಂದು ಸಿನಿಮಾ ಮಾಡುತ್ತಿದ್ದೇವೆ ನಟಿಸೋದಕ್ಕೆ ಆಸಕ್ತಿ ಇದೆಯಾ ಅಂತ ಕೇಳಿದರು. ನನಗೆ ಆಕ್ಟಿಂಗ್ ಅಷ್ಟೊಂದು ಇಷ್ಟ ಇರಲಿಲ್ಲ. ನಾನು ನಟಿಸುವುದಕ್ಕೆ ಆಗಲ್ಲ, ಅದಕ್ಕೂ ನನಗೂ ಸರಿ ಹೋಗಲ್ಲ ಅಂತ ಅಂದುಕೊಂಡಿದೆ. ಆದರೆ ನಾನು ಚಿತ್ರರಂಗಕ್ಕೆ ಬರಲು ಅಪ್ಪ ಅಮ್ಮನೇ ಕಾರಣ. ಈ ರೀತಿಯ ದೊಡ್ಡ ಅವಕಾಶ ಎಲ್ಲರಿಗೂ ಬರುವುದಿಲ್ಲ ಒಮ್ಮೆ ಹೋಗಿ ಮಾತನಾಡಿಕೊಂಡು ಬರೋಣ ಎಂದರು. ನಾನು ಓಕೆ ಎಂದೆ''

ಪ್ಲಾನ್ ಮಾಡ‍ದೆ ಎಲ್ಲ ಆಯ್ತು

ಪ್ಲಾನ್ ಮಾಡ‍ದೆ ಎಲ್ಲ ಆಯ್ತು

''ಸ್ಕೀನ್ ಟೆಸ್ಟ್ ಮಾಡಿ, ಫೋಟೋ ಶೂಟ್ ಮಾಡಿ ಸೆಲೆಕ್ಟ್ ಆಗಿದ್ದೀಯ ಎಂದರು. ಇದೆಲ್ಲ ಆಗುವಾಗಲೂ ನನಗೆ ನಂಬಿಕೆ ಇರಲಿಲ್ಲ. ಗೊತ್ತಿಲ್ಲದೆ ಎಲ್ಲ ಆಯ್ತು. ಪ್ಲಾನ್ ಮಾಡದೆ ಎಲ್ಲ ಕೂಡಿ ಬಂತು. ಹತ್ತು ದಿನ ವರ್ಕ್ ಶಾಪ್ ಮಾಡಿದರು. ಆಮೇಲೆ ಸಿನಿಮಾ ಶೂಟಿಂಗ್ ಶುರು ಆಯ್ತು. ಇದೇ ಸಿನಿಮಾ, ಇದೇ ಡೈರೆಕ್ಟರ್ ಜೊತೆಗೆ ನಾನು ಮೊದಲ ಸಿನಿಮಾ ಮಾಡಬೇಕು ಎಂದು ಅಂದುಕೊಂಡಿರಲಿಲ್ಲ. ಹಣೆಬರಹದಲ್ಲಿ ಇರುವ ಹಾಗೆ ಆಯ್ತು. ನಿಜಕ್ಕೂ ಈ ಬಗ್ಗೆ ತುಂಬ ಖುಷಿ ಇದೆ.''

ಮೊದಲ ಶಾಟ್ ನನಗೆ ತುಂಬ ಸ್ಪೆಷಲ್

ಮೊದಲ ಶಾಟ್ ನನಗೆ ತುಂಬ ಸ್ಪೆಷಲ್

''ಫಸ್ಟ್ ಶಾಟ್ ತೆಗೆಯುವಾಗ ತುಂಬ ಭಯ ಇತ್ತು. ಕ್ಯಾಮರಾ ಮುಂದೆ ಮೊದಲ ಸಲ ನಿಂತಿದೆ. ಆಚಾರ್ಯ ಕಾಲೇಜ್ ನಲ್ಲಿ ಮೊದಲು ಶೂಟಿಂಗ್ ಮಾಡಿದ್ದು, ಚಿತ್ರದಲ್ಲಿ 'ತಿರುಗಿ ನೋಡಲೇ..' ಎಂಬ ಹಾಡಿಗು ಮುಂಚೆ ಬರುವ ದೃಶ್ಯ ಇದಾಗಿತ್ತು. ನಾನು ಕೋಪ ಮಾಡಿಕೊಂಡು ಹೋಗಬೇಕಿತ್ತು. ಆಕ್ಟಿಂಗ್ ಮಾಡುವಾಗ ಮೊದಲು ಸಖತ್ ಭಯ ಇತ್ತು. ಅಲ್ಲಿ ಹೋದ ಮೇಲೆ ಎಲ್ಲರಿಗೂ ನಾನು ಸೆಟ್ ಆದೆ. ಈಗಲೂ ಆ ಮೊದಲ ಶಾಟ್ ನನಗೆ ತುಂಬ ಸ್ಪೆಷಲ್. ಆ ನೆನಪು ತುಂಬ ಚೆನ್ನಾಗಿದೆ.''

ಅಕ್ಕನನ್ನು ನಾನು ಫಾಲೋ ಮಾಡಿದಂತೆ ಆಯ್ತು

ಅಕ್ಕನನ್ನು ನಾನು ಫಾಲೋ ಮಾಡಿದಂತೆ ಆಯ್ತು

''ಅದೇ ಟೈಂ ನಲ್ಲಿ ಅಕ್ಕ ಕೂಡ ಸಿನಿಮಾ ಹಾಗೂ ಧಾರಾವಾಹಿ ಎರಡನ್ನು ಮಾಡುತ್ತಿದ್ದಳು. ಪ್ರಾರಂಭದಲ್ಲಿ ಆಕೆ ಡ್ಯಾನ್ಸ್ ಕಲಿತಳು ಅಂತ ನಾನು ಕಲಿತೆ. ಅವಳು ಆಕ್ಟಿಂಗ್ ಶುರು ಮಾಡಿದಳು ನಾನು ಹಾಗೆ ಮಾಡಿದೆ. ಒಂದು ರೀತಿಯಲ್ಲಿ ಅವಳನ್ನು ನಾನು ಫಾಲೋ ಮಾಡಿದಂತೆ ಆಯ್ತು. ಅವಳು ನನಗೆ ಸ್ಫೂರ್ತಿ ಕೂಡ ಹೌದು. ಅವಳು ಯಾವುದೇ ಕೆಲಸ ಆದರು ತುಂಬ ಶ್ರದ್ಧೆಯಿಂದ ಮಾಡುತ್ತಾಳೆ. ಅವಳಿಗೆ ಹೊಸ ಚಿತ್ರತಂಡ ಕಷ್ಟ ಗೊತ್ತಿತ್ತು. ಒಳ್ಳೆಯ ಅವಕಾಶ ಸಿಕ್ಕಾಗ ಸಿನಿಮಾ ಮಾಡು ಅಂತ ಹೇಳಿದಳು. ಮೊದಲ ಸಿನಿಮಾದಿಂದ ನನಗೆ ಗೈಡ್ ಆಗಿದ್ದಾಳೆ.''

ಒಮ್ಮೆ ಬಿಸಿಲಿಗೆ ತಲೆ ತಿರುಗಿ ಬಿದಿದ್ದೆ

ಒಮ್ಮೆ ಬಿಸಿಲಿಗೆ ತಲೆ ತಿರುಗಿ ಬಿದಿದ್ದೆ

''ಸಿನಿಮಾ ನೋಡುವಾಗ ಹಾಡು ಎಂದರೆ ಒಳ್ಳೆಯ ಲೋಕೇಷನ್, ಒಳ್ಳೆಯ ಡ್ರೆಸ್, ಡ್ಯಾನ್ಸ್ ಚೆನ್ನಾಗಿರುತ್ತದೆ ಎಂದುಕೊಂಡಿದೆ. ನಮ್ಮ ಹಾಡಿನ್ನು ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಿದ್ವಿ. ಅಲ್ಲಿ ಹೋದಾಗ ಶೂಟಿಂಗ್ ಎಷ್ಟು ಕಷ್ಟ ಅಂತ ಗೊತಾಯ್ತು. ದಿನ ಬೆಳ್ಳಗೆ 4 ಗಂಟೆಗೆ ಏಳುತ್ತಿದೆ. ಒಮ್ಮೆ ಬಿಸಿಲಿಗೆ ತಲೆ ತಿರುಗಿ ಬಿದಿದ್ದೆ. ಸಿನಿಮಾದವರ ಕಷ್ಟ ನನಗೆ ಗೊತ್ತಾಗಿದ್ದು ಅಲ್ಲೇ. ಅಲ್ಲಿ ಎಲ್ಲದಕ್ಕೂ ಲಿಮಿಟೆಡ್ ಇರುತ್ತದೆ ಅದರಲ್ಲಿ ಎಷ್ಟು ಚೆನ್ನಾಗಿ ಮಾಡುತ್ತೇವೆ ಎನ್ನುವುದು ಮುಖ್ಯ. ಆ ಒಂದು ಸಾಂಗ್ ಯಾವಾಗಲೂ ನೆನಪಾಗುತ್ತದೆ. ಯಾವುದೇ ಸಿನಿಮಾ ಆಗಲಿ ಶ್ರಮಕ್ಕೆ ಬೆಲೆ ಕೊಡಬೇಕು ಎಂದು ಇದರಿಂದ ತಿಳಿದೆ.''

ರಿಲೀಸ್ ಹಿಂದಿನ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ

ರಿಲೀಸ್ ಹಿಂದಿನ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ

''ನನ್ನ ಮೊದಲನೇ ಸಿನಿಮಾವನ್ನು ನಾಲ್ಕು ಬಾರಿ ನೋಡಿದ್ದೇನೆ. ರಿಲೀಸ್ ಹಿಂದಿನ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ನನ್ನನ್ನು ನಾನು ತೆರೆ ಮೇಲೆ ನೋಡಿಕೊಳ್ಳುವುದೆ ನನಗೆ ಸಂಭ್ರಮ ಆಗಿತ್ತು. ಚೆನ್ನಾಗಿ ಮಾಡಿದೆನೋ, ಇಲ್ವೋ ಎಂಬ ಡೌಟ್ ಇತ್ತು. ಆದರೆ, ಮೊದಲ ಸಿನಿಮಾನೇ ಕಪಾಲಿ ಚಿತ್ರಮಂದಿರದಲ್ಲಿ ಹಬ್ಬದ ರೀತಿ ಇತ್ತು. ಶೂಟಿಂಗ್ ಟೈಂ ನಲ್ಲಿಯೇ ಮಹೇಶ್ ಬಾಬು ಸರ್ ಗೆ ಹೇಳಿದ್ದೆ, ನೀವು ಹಾಗೂ ಹೀರೋ ಫಸ್ಟ್ ಡೇ ಫಸ್ಟ್ ಶೋ ನೋಡುವಾಗ ನನ್ನ ಪಕ್ಕದಲ್ಲಿ ಕೂರಬೇಕು ಅಂತ. ಅದೇ ರೀತಿ ಅವರ ಪಕ್ಕದಲ್ಲಿ ಸಿನಿಮಾ ನೋಡಿದೆ.''

ಜನ ಚಪ್ಪಾಳೆ, ವಿಜಲ್ ಹೊಡೆದ ವಿಡಿಯೋ ಈಗಲೂ ನೋಡುತಿರುತ್ತೇನೆ.

ಜನ ಚಪ್ಪಾಳೆ, ವಿಜಲ್ ಹೊಡೆದ ವಿಡಿಯೋ ಈಗಲೂ ನೋಡುತಿರುತ್ತೇನೆ.

''ಫಸ್ಟ್ ಶೋ ನೋಡುವಾಗ ನನ್ನ ಎಂಟ್ರಿಗೆ ಜನ ಚಪ್ಪಾಳೆ, ವಿಜಲ್ ಹೊಡೆಯುತ್ತಿದ್ದರು. ತುಂಬ ಖುಷಿ ಆಯ್ತು. ಜನ ನಾನು ಬಂದಾಗ ಚಪ್ಪಾಳೆ ಹೊಡೆದಿದ್ದನ್ನು ವಿಡಿಯೋ ಮಾಡಿಕೊಂಡಿದ್ದೆ. ಈಗಲೂ ಅದು ನನ್ನ ಬಳಿ ಇದೆ. ಆಗಾಗ ಅದನ್ನು ನೋಡಿತ್ತೇನೆ. ಅದನ್ನು ನೋಡಿದರೆ ನನ್ನ ಆತ್ಮ ವಿಶ್ವಾಸ ಹೆಚ್ಚುತ್ತೆ''.

ನಟಿಯರಿಗೆ ಮಹೇಶ್ ಬಾಬು ಸರ್ ಲಕ್ಕಿ

ನಟಿಯರಿಗೆ ಮಹೇಶ್ ಬಾಬು ಸರ್ ಲಕ್ಕಿ

''ಮಹೇಶ್ ಬಾಬು ಸರ್ ಪರಿಚಯ ಮಾಡಿದ್ದ ನಟಿಯರು ಫೇಮಸ್ ಆಗುತ್ತಾರೆ ಎನ್ನುವ ಮಾತಿತ್ತು. ಆದರೆ ಆಗ ನನಗೆ ಅದು ಆ ಹೀರೋಯಿನ್ ಗಳ ಶ್ರಮ ಮತ್ತು ಟ್ಯಾಲೆಂಟ್ ಮೇಲೆ ನಿರ್ಧಾರ ಎಂದು ನಂಬಿದೆ. ಅದರ ಜೊತೆಗೆ ಕೃತಿ ಕರಬಂಧ, ಅಂದ್ರಿತಾ ರೇ, ನಿಕ್ಕಿ ಗರ್ಲಾನಿ ರನ್ನು ನೋಡಿದರೆ ನಟಿಯರಿಗೆ ಮಹೇಶ್ ಬಾಬು ಸರ್ ಲಕ್ಕಿ ಅನಿಸುತ್ತದೆ. ಮೊದಲ ಸಿನಿಮಾ ಮಾಡುವವರಿಗೆ ಅವರು ಒಳ್ಳೆಯ ಗೈಡ್.''

ಹೀರೋಯಿನ್ ಆಗದೆ ಇದ್ದರೆ ಬಿಜಿನೆಸ್ ಮಾಡುತ್ತಿದೆ

ಹೀರೋಯಿನ್ ಆಗದೆ ಇದ್ದರೆ ಬಿಜಿನೆಸ್ ಮಾಡುತ್ತಿದೆ

''ನಾನು ಹೀರೋಯಿನ್ ಆಗದೆ ಇಲ್ಲದೆ ನನ್ನದೆ ಬಿಜಿನೆಸ್ ಮಾಡಬೇಕು ಅಂತ ಇತ್ತು. ಡ್ಯಾನ್ಸ್ ಅನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಈಗಲೂ ಕೂಡ ಎಂಬಿಎ ಮಾಡಿ ಕ್ರಿಯೆಟಿವ್ ಆಗಿ ಬಿಜಿನೆಸ್ ಮಾಡಬೇಕು ಎಂಬ ಪ್ಲಾನ್ ಇದೆ.''

More from Filmibeat

English summary
Nanna Modala Cinema Series: Kannada actress Ashika Ranganath spoke about her first movie 'Crezy Boy' in an Exclusive interview with FilmiBeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X