twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಸಿನಿಮಾ : ಗಣೇಶ್ ಈ ಸಿನಿಮಾಗಾಗಿ ಬೆವರಲ್ಲ, ರಕ್ತ ಸುರಿಸಿದ್ದರು!

    By Naveen
    |

    Recommended Video

    ಸಿನಿಮಾಗಾಗಿ ರಕ್ತ ಸುರಿಸಿದ್ದ ಗಣೇಶ್ | ganesh sheds blood for his movie | Filmibeat Kannada

    ಪ್ರತಿ ನಿರ್ದೇಶಕನಿಗೆ ತಾನು ಚಿತ್ರ ಜೀವನ ಶುರು ಮಾಡಿದ ಚಿತ್ರ ಮೊದಲ ಸಿನಿಮಾ ಆಗುತ್ತದೆ. ಆದರೆ ಆಶ್ಚರ್ಯ ಎಂಬಂತೆ ನಿರ್ದೇಶಕ ಬಿ.ಸುರೇಶ್ ಪಾಲಿಗೆ ಎರಡು ಸಿನಿಮಾಗಳು ಅವರ ಮೊದಲ ಸಿನಿಮಾ ಆಗಿದೆ.

    ''ನಾನು ಮೊದಲು ನಿರ್ದೇಶನ ಶುರು ಮಾಡಿದ ಸಿನಿಮಾ 'ಅರ್ಧ', ಆದರೆ ರಿಲೀಸ್ ಆಗಿದ್ದು 'ಠಪೋರಿ' ಸಿನಿಮಾ. ಸೋ, ನಾನೀಗ 'ಠಪೋರಿ' ಸಿನಿಮಾದ ಬಗ್ಗೆ ಮಾತನಾಡುತ್ತೇನೆ'' ಎಂದು ಬಿ.ಸುರೇಶ್ ತಮ್ಮ ಮೊದಲ ಸಿನಿಮಾ ಬಗ್ಗೆ ಮಾತು ಶುರು ಮಾಡಿದರು. ತಮ್ಮ ಎಂದಿನ ಜೋಶ್ ನಲ್ಲಿ ಮೊದಲ ಸಿನಿಮಾ ಹುಟ್ಟಿದ ಕಥೆಯನ್ನು ಹೇಳಿಕೊಂಡರು.

    ನನ್ನ ಮೊದಲ ಸಿನಿಮಾ : ದೊಡ್ಮನೆಯವರ ನಂಬಿಕೆಯನ್ನು ಉಳಿಸಿದ್ದ 'ಆಕಾಶ್' ಸಿನಿಮಾ ನನ್ನ ಮೊದಲ ಸಿನಿಮಾ : ದೊಡ್ಮನೆಯವರ ನಂಬಿಕೆಯನ್ನು ಉಳಿಸಿದ್ದ 'ಆಕಾಶ್' ಸಿನಿಮಾ

    'ಠಪೋರಿ' ಸಿನಿಮಾ ಹಂಸಲೇಖ ಮಗ ಅಲಂಕಾರ್ ನಾಯಕನಾಗಿ ನಟಿಸಿದ ಸಿನಿಮಾ. ಈ ಚಿತ್ರದಲ್ಲಿ ಗಣೇಶ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆಗ ದುನಿಯಾ ಸೂರಿ ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರು. ನಿರ್ದೇಶಕ ಶಶಾಂಕ್ ಚಿತ್ರದಲ್ಲಿ ಕೆಲಸ ಮಾಡಿದ್ದರು. ಇವರೆಲ್ಲರನ್ನು ಈ ಸಿನಿಮಾ ಹುಟ್ಟಿಸಿತ್ತು. ಮುಂದೆ ಓದಿ...

    ಮೊದಲು ಶುರು ಆಗಿದ್ದು 'ಅರ್ಥ', ರಿಲೀಸ್ ಆಗಿದ್ದು 'ಠಪೋರಿ'

    ಮೊದಲು ಶುರು ಆಗಿದ್ದು 'ಅರ್ಥ', ರಿಲೀಸ್ ಆಗಿದ್ದು 'ಠಪೋರಿ'

    ''ನಾನು ಮಾಡಿದ ಮೊದಲ ಸಿನಿಮಾ 'ಅರ್ಥ'. ಆದರೆ ಬಿಡುಗಡೆಯ ದೃಷ್ಟಿಯಿಂದ 'ಠಪೋರಿ' ಸಿನಿಮಾ. ಆ ವೇಳೆ ಸಾಧನೆ ಎನ್ನುವ ಯಶಸ್ವಿ ಧಾರಾವಾಹಿ ಮಾಡಿದ್ದೆ. ಮೂರ್ನಾಲ್ಕು ನಿರ್ಮಾಪಕರು ಸಿನಿಮಾ ಮಾಡಿ ಎಂದು ಬಂದಿದ್ದರು. 1997 ರಲ್ಲಿ ನಾನು ನನ್ನ ಮೊದಲ ಸಿನಿಮಾ 'ಕುಹು ಕುಹು' ಚಿತ್ರ ಅರ್ಧಕ್ಕೆ ನಿಂತಿತ್ತು. ಅದಕ್ಕೆ ನನಗೆ ಗೊಂದಲ ಇತ್ತು. ಆಗ ಹಂಸಲೇಖ ಕೂಡ ಕರೆಸಿಕೊಂಡರು. ಅವರ ಮಗ ಅಲಂಕಾರ್ ರಿಗೆ ಒಂದು ಸಿನಿಮಾ ಮಾಡಬೇಕಿತ್ತು. ರಾಜೀವ ಎನ್ನುವ ಒಬ್ಬ ಹುಡುಗನ ಕಥೆಯನ್ನು ಇಟ್ಟು ಕೊಂಡು ಸಿನಿಮಾ ಶುರು ಮಾಡಿದ್ವಿ.''

    ಇದು ನನ್ನ ಕಮರ್ಶಿಯಲ್ ಸಿನಿಮಾ ಆಗಿತ್ತು

    ಇದು ನನ್ನ ಕಮರ್ಶಿಯಲ್ ಸಿನಿಮಾ ಆಗಿತ್ತು

    ''ಹಂಸಲೇಖ ಅವರ ಮಗನಿಗೆ ಟ್ರೈನಿಂಗ್ ಕೊಟ್ಟು, ಕಡಿಮೆ ದುಡ್ಡಿನಲ್ಲಿ ತಯಾರಿ ಮಾಡಿಕೊಂಡು ಈ ಸಿನಿಮಾ ಮಾಡಿದ್ದು. ಪ್ರೇಮಾ ಅವರನ್ನು ನಾಯಕಿಯಾಗಿ ಕರೆಸಿದೆವು. ತುಂಬ ಪ್ಲಾನ್ ಆಗಿ ಸಿನಿಮಾ ಮಾಡಿದ್ವಿ. ಸಿನಿಮಾ ಯಾವಾಗ ಶುರು, ಎಷ್ಟು ದಿನ ಶೂಟಿಂಗ್ ಅಂತ ಸರಿಯಾಗಿ ಪ್ಲಾನ್ ಮಾಡಿದ್ವಿ ಅಷ್ಟೇ ದಿನದಲ್ಲಿ ಚಿತ್ರೀಕರಣ ಮುಗಿತು. ನಾನು ಮಾಡುವ ಸಿನಿಮಾಗಿಂತ ವಿಭಿನ್ನವಾಗಿ ಇದು ಕಮರ್ಶಿಯಲ್ ಸಿನಿಮಾ ಆಗಿತ್ತು. ನಾಯಕನ ವೈಭವೀಕರಣ ಇತ್ತು. ಆ ನಟನಿಗೆ ಸ್ವಲ್ಪ ಮಿತಿ ಇತ್ತು. ಅವುಗಳನ್ನು ಮೀರಿ ಸಿನಿಮಾ ಕಟ್ಟಬೇಕಿತ್ತು.''

    ಮುಹೂರ್ತ, ಪೂಜೆಯಲ್ಲಿ ನಂಬಿಕೆ ಇಲ್ಲ

    ಮುಹೂರ್ತ, ಪೂಜೆಯಲ್ಲಿ ನಂಬಿಕೆ ಇಲ್ಲ

    ''ನನಗೆ ಮುಹೂರ್ತ, ಪೂಜೆ ಇತ್ಯಾದಿಗಳಲ್ಲಿ ನಂಬಿಕೆ ಇಲ್ಲ. ನಾನು ಯಾವ ದೈವ ನಂಬಿಕೆ ಇಲ್ಲದವನು. ನನಗೆ ನಂಬಿಕೆ ಇರುವುದು ಕೇವಲ ಕೆಲಸದಲ್ಲಿ. ಕಾಯಕವೇ ಕೈಲಾಸ ಎನ್ನುವುದನ್ನು ನಂಬಿದವನು. ಸಿನಿಮಾ ಮುಹೂರ್ತ ಈ ರೀತಿಯ ಚಟುವಟಿಕೆಗಳನ್ನು ಬೃಹತ್ ಆಗಿ ಮಾಡಲು ಒಪ್ಪುವುದಿಲ್ಲ. ಆದರೆ ನಿರ್ಮಾಪಕರಿಗೆ ಕೆಲವು ನಂಬಿಕೆ ಇತ್ತು. ಅದಕ್ಕೆ ಅವರು ಸಣ್ಣ ಪೂಜೆ ಮಾಡಿದರು. ಅದು ಕಾಟಾಚಾರದ ಮುಹೂರ್ತ ಆಗಿತ್ತು. ಆದರೆ ನಿಜವಾದ ಮುಹೂರ್ತ ಆಗಿದ್ದು, ನೇರವಾಗಿ ಕಲಾವಿದರನ್ನು ಸೆಟ್ ಗೆ ಕರೆದುಕೊಂಡು ಹೋಗಿ ಕೆಲಸ ಶುರು ಮಾಡಿದಾಗ. ಈ ಚಿತ್ರದ ಶೂಟಿಂಗ್ ಪ್ರೇಮಾ ಅವರ ಹಾಡಿನ ಚಿತ್ರೀಕರಣದೊಂದಿಗೆ ಶುರುವಾಯ್ತು.''

    ವಿಲನ್ ಆಗಿ ರಕ್ತ ಸುರಿಸಿದ್ದ ಗಣೇಶ್

    ವಿಲನ್ ಆಗಿ ರಕ್ತ ಸುರಿಸಿದ್ದ ಗಣೇಶ್

    ''ಈ ಸಿನಿಮಾದ ಒಂದು ಘಟನೆಯನ್ನು ಇಂದಿಗೂ ಮರೆಯುವುದಕ್ಕೆ ಆಗಲ್ಲ. ಇವತ್ತಿನ ಗೋಲ್ಡನ್ ಸ್ಟಾರ್ ಗಣೇಶ್ ಆ ಚಿತ್ರದಲ್ಲಿ ಒಬ್ಬ ವಿಲನ್ ಆಗಿದ್ದ. ಆತ ತನ್ನ ಜೀವನದಲ್ಲಿ ಮೊದಲ ಬಾರಿಗೆ ಸಿನಿಮಾ ಕ್ಯಾಮರಾ ಎದುರಿಸಿದ. ಅವನ ಮೊದಲ ದೃಶ್ಯದಲ್ಲಿ ಗಣೇಶ್ ಮುಖಕ್ಕೆ ನಾಯಕ ಪಂಚ್ ಮಾಡುವ ಸೀನ್ ಇತ್ತು. ಹಾಗೆ ಪಂಚ್ ಮಾಡುವಾಗ ಮಿಸ್ ಆಗಿ ಗಣೇಶ್ ಮೂಗಿಗೆ ಹೊಡೆತ ಬಿತ್ತು. ರಕ್ತ ಸುರಿದು ತಲೆ ಸುತ್ತು ಗಣೇಶ್ ಬಿದ್ದ. ಎಲ್ಲ ಹೋಗಿ ಸುಧಾರಿಸಿದರು. ಗಣೇಶ್ ಎದ್ದ ಮೇಲೆ ನಾನು 'ಲೋ ಗಣೇಶ ನೀನು ನಿನ್ನ ಮೊದಲ ಶಾಟ್ ಗೆ ರಕ್ತ ಸುರಿಸಿದಿಯಾ ಅಂದರೆ ನಿನ್ನ ಸಿನಿಮಾ ಜರ್ನಿ ಅದ್ಬುತ ಸಾಧನೆ ಆಗುತ್ತದೆ' ಎಂದು ಹೇಳಿದೆ. ಆ ಮಾತು ಕೇಳಿ ಅವನು ನೋವನ್ನು ಮರೆತು ತುಂಬ ಖುಷಿ ಆದ.''

    ಹೀರೋ ಬಿದ್ದೆ ಹೋಗುತ್ತಾನೆ ಎನ್ನುವಾಗ..

    ಹೀರೋ ಬಿದ್ದೆ ಹೋಗುತ್ತಾನೆ ಎನ್ನುವಾಗ..

    ''ಯೂಟಿಲಿಟಿ ಬಿಲ್ಡಿಂಗ್ ಮೇಲೆ ಶೂಟಿಂಗ್ ಮಾಡುತಿದ್ವಿ ಆಗ ಬೆಂಗಳೂರಿಗೆ ಅದೇ ಅತಿ ಎತ್ತರದ ಕಟ್ಟಡ ಆಗಿತ್ತು. ಹಾಡನ್ನು ಚಿತ್ರೀಕರಣ ಮಾಡುವಾಗ ನಾಯಕನಿಗೆ ಎತ್ತರ ಆದರೆ ಭಯ (ವರ್ಟಿಕೋ) ಅಂತ ಗೊತ್ತಿರಲಿಲ್ಲ. ಆಗ ಹೀರೋ ಬಿದ್ದೆ ಹೋಗುತ್ತಾನೆ ಎನ್ನುವಾಗ ಪ್ರೇಮಾ ಹಿಡಿದುಕೊಂಡು ಆ ಶಾಟ್ ಮುಗಿಸಿದರು. ಒಬ್ಬ ಹೊಸಬನನ್ನು ಅನುಭವ ಇರುವವರಿರು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಅದರಲ್ಲಿ ಗೊತ್ತಾಗುತ್ತದೆ''

    ತಂಡದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬಂತು

    ತಂಡದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬಂತು

    ''ಸಿನಿಮಾ ನೋಡಿ ಬಂದ ಅನೇಕರು ನನ್ನ ಕೈ ಕುಲುಕಿದರು. ಕೆಲವರು ವಿಮರ್ಶೆ ಮಾಡಿದರು. ಕೆಲವರು ಕಟ್ಟ ಸಿನಿಮಾ ಮಾಡಿದ್ದೀಯಾ ಅಂದರು. ಎಲ್ಲವನ್ನು ಪ್ರೀತಿಯಿಂದ ಸ್ವೀಕರಿಸಿದೆ. ಸೆನ್ಸಾರ್ ಅಧಿಕಾರಿಗಳಿಗೆ ಸಿನಿಮಾ ತೋರಿಸಿದಾಗ ತುಂಬ ಒಳ್ಳೆಯ ಮಾತನಾಡಿದ್ದರು. ಆದರೆ ಸಿನಿಮಾ ಮೊದಲ ಕಟ್ ಅಂತ ಮಾಡಿದಾಗ ತಂಡದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬಂತು. ಹಂಸಲೇಖ ಅವರು ಅದು ಬೇಕಿತ್ತು, ಇದು ಬೇಕಿತ್ತು ಅಂದರು. ನಾನು ಅವುಗಳನ್ನು ವಿರೋಧಿಸಲು ಹೋಗಲಿಲ್ಲ. ನನಗಿಂತ ಹಿರಿಯರ ಸಲಹೆಯನ್ನು ಸ್ವೀಕರಿಸಬೇಕು ಅಂತ ನಾಲ್ಕೈದು ದಿನ ಮರು ಚಿತ್ರೀಕರಣ ಮಾಡಿದೆ. ಸಿನಿಮಾದಲ್ಲಿ ಕನ್ನಡ ಮತ್ತು ತಮಿಳು ಮಾತನಾಡುವ ಪಾತ್ರ ಇತ್ತು. ಆಗ ಕಾವೇರಿ ಗಲಾಟೆ ಇತ್ತು. ಅದಕ್ಕೆ ತಮಿಳು ಬರದೆ ಇರುವ ರೀತಿ ಡಬ್ ಮಾಡಿದ್ವಿ.''

    ದುನಿಯಾ ಸೂರಿ ಈ ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರು

    ದುನಿಯಾ ಸೂರಿ ಈ ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರು

    ''ಟಪೋರಿ' ನನಗೆ ಮರೆಯಲಾಗದ ಸಿನಿಮಾ. ಹೊಸ ನುಡಿಗಟ್ಟು ಬಳಸಿದ್ವಿ. ಈ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಸೂರಿ ಮುಂದೆ ದುನಿಯಾ ಸೂರಿ ಆದರು. ಈ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ್ದ ಮಹೇಶ ಇತ್ತು ಖ್ಯಾತ ನಿರ್ದೇಶಕ ಶಶಾಂಕ್ ಆಗಿದ್ದಾರೆ. ಆ ಸಿನಿಮಾದ ಅನೇಕ ಸಿಹಿ ನೆನಪುಗಳು ಇದೆ''.

    ನಾವು ಮಾಡಿದ ಸಿನಿಮಾ ಬಗ್ಗೆ ನಮಗೆ ತೃಪ್ತಿ ಇರುವುದಿಲ್ಲ.

    ನಾವು ಮಾಡಿದ ಸಿನಿಮಾ ಬಗ್ಗೆ ನಮಗೆ ತೃಪ್ತಿ ಇರುವುದಿಲ್ಲ.

    ''ಎಲ್ಲ ನಿರ್ದೇಶಕರಿಗೆ ಇರುವ ಸಮಸ್ಯೆ ಅಂದರೆ ನಾವು ಮಾಡಿದ ಸಿನಿಮಾ ಬಗ್ಗೆ ನಮಗೆ ತೃಪ್ತಿ ಇರುವುದಿಲ್ಲ. ಪ್ರತಿ ಸಲ ಸಿನಿಮಾ ನೋಡಿದಾಗ ಇನ್ನು ಚೆನ್ನಾಗಿ ಮಾಡಬಹುದು ಅನಿಸುತ್ತದೆ. ಇದೇ ಪೂರ್ಣ ಪ್ರಮಾಣದ ಕಲಾಕೃತಿ ಅಂತ ಹೇಳಿದ ತಕ್ಷಣ ಆ ಕಲಾವಿದ ಸತ್ತೋಗಿದ್ದಾನೆ ಅಂತ ಅರ್ಧ.. ಇದೇ ಸರಿ ಎನ್ನುವುದು ಇಲ್ವೇ ಇಲ್ಲ. ಅವತ್ತಿಗೆ ಏನು ಸರಿ ಅನಿಸುತ್ತದೆ ಅದನ್ನು ಮಾಡಿರುತ್ತೇವೆ. ಮೊದಲ ಸಿನಿಮಾ ಗೆದ್ದರೆ ಆ ನಿರ್ದೇಶಕ ಅದೇ ಫಾರ್ಮೂಲ ದಲ್ಲಿ ಮುಂದುವರೆಯಬೇಕಾಗುತ್ತದೆ. ಸೋತರೇ ಅವನಿಗೆ ಮುಂದೆ ಕೆಲಸ ಸಿಗುವುದಿಲ್ಲ. ಈ ಎರಡು ಕೂಡ ಅಪಾಯವೇ''

    ನನ್ನ ಮೊದಲ ಸಿನಿಮಾ : ಮೊದಲ ಶಾಟ್ ಡೈರೆಕ್ಟ್ ಮಾಡಿದ್ದ ಉತ್ಸಾಹಕ್ಕೆ ಪಿ.ಹೆಚ್.ವಿಶ್ವನಾಥ್ ಮೈ ಒದ್ದೆ ಆಗಿತ್ತು ನನ್ನ ಮೊದಲ ಸಿನಿಮಾ : ಮೊದಲ ಶಾಟ್ ಡೈರೆಕ್ಟ್ ಮಾಡಿದ್ದ ಉತ್ಸಾಹಕ್ಕೆ ಪಿ.ಹೆಚ್.ವಿಶ್ವನಾಥ್ ಮೈ ಒದ್ದೆ ಆಗಿತ್ತು

    English summary
    Nanna Modala Cinema Series: Kannada director B Suresh spoke about his first movie 'Tapori' in an exclusive interview with FilmiBeat Kannada.
    Sunday, April 15, 2018, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X