twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಸಿನಿಮಾ : ಸುಮ್ಮನೆ ಮಲಗಿದ್ದ ನಂದ ಕಿಶೋರ್ ಬಳಿಗೆ ಬಂದಿತ್ತು 'ವಿಕ್ಟರಿ' ಆಫರ್

    By Naveen
    |

    ಒಂದು ಮಾತಿದೆ. ಪ್ರತಿಯೊಬ್ಬರಿಗೆ ಒಂದು ಅದೃಷ್ಟದ ದಿನ ಬರುತ್ತದೆ. ಆದರೆ ಅದು ಬರುವಾಗ ನಾವು ಪ್ರತಿಭೆ ಜೊತೆಗೆ ರೆಡಿ ಇರಬೇಕು ಎಂದು. ಕೆಲವರಿಗೆ ಗೆಲುವು ಪರಿಶ್ರಮದಿಂದ ಬರುತ್ತದೆ. ಇನ್ನೂ ಕೆಲವರಿಗೆ ಅದು ಅದೃಷ್ಟದಿಂದ ಸಿಗಬಹುದು. ಆದರೆ ಕೆಲವೇ ಕೆಲವರ ಗೆಲುವಿನ ಕಾರಣ ಪರಿಶ್ರಮ ಮತ್ತು ಅದೃಷ್ಟ ಎರಡು ಆಗಿರುತ್ತದೆ. ಈ ಎರಡು ಇದ್ದ ವ್ಯಕ್ತಿ ನಿರ್ದೇಶಕ ನಂದಕಿಶೋರ್.

    ಒಬ್ಬ ಜನಪ್ರಿಯ ಖಳ ನಟ ಸುಧೀರ್ ಅವರ ಮಗ ಆಗಿದ್ದರು ನಂದ ಮೊದಲು ಸಣ್ಣ ಪುಟ್ಟ ಪಾತ್ರಗಳಿಗೂ ಕಷ್ಟ ಪಟ್ಟಿದ್ದರು. ಅವಮಾನ, ನೋವು ಅನುಭವಿಸಿ ಅದನ್ನು ಯಾರಿಗೂ ಗೊತ್ತಾಗದ ರೀತಿ ಇದ್ದವರು ಸುಧೀರ್ ಪುತ್ರರು. ಇಂದು ನಂದಕಿಶೋರ್ ಕನ್ನಡದ ಸ್ಟಾರ್ ಡೈರೆಕ್ಟರ್ 'ಅಧ್ಯಕ್ಷ', ರನ್ನ', 'ಮುಕುಂದ ಮುರಾರಿ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ಈಗ ನಂದ ಖಾತೆಯಲ್ಲಿ ಇದೆ. ಆದರೆ ನಂದಕಿಶೋರ್ ಎಂಬ ಒಬ್ಬ ನಿರ್ದೇಶಕ ಹುಟ್ಟಿದ್ದು 'ವಿಕ್ಟರಿ' ಸಿನಿಮಾದಿಂದ.

    ನಂದಕಿಶೋರ್ ಸುಮ್ಮನೆ ಒಂದು ದಿನ ಮಲಗಿರುತ್ತಾರೆ ಅಲ್ಲಿಗೆ ಶರಣ್ ಬಂದು ಸಿನಿಮಾ ಡೈರೆಕ್ಷನ್ ಮಾಡುತ್ತೀಯ ಅಂತ್ತಾರೆ. ಹೀಗೆ ನಂದ ಒಬ್ಬ ನಿರ್ದೇಶಕನಾಗಿ ಸಿನಿಮಾ ಪಯಣ ಶುರು ಮಾಡುತ್ತಾರೆ...

    ಸಂದರ್ಶನ : ನವೀನ.ಎಂ.ಎಸ್ (ನವಿಕನಸು)

    ನೀನು ಉದ್ದಾರ ಆಗಲ್ಲ ಅಂತ ಬೈದರು ಸುದೀಪ್ ಸರ್..

    ನೀನು ಉದ್ದಾರ ಆಗಲ್ಲ ಅಂತ ಬೈದರು ಸುದೀಪ್ ಸರ್..

    ''ಸುಮಾರು 45 ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೇ. ಆಗ ಶರಣ್, ಕೋಮಲ್, ಬುಲೇಟ್ ಪ್ರಕಾಶ್ ಅವರು ತುಂಬ ಪೀಕ್ ನಲ್ಲಿ ಇದ್ದರು. ಅವರು ಮಾಡದೆ ಬಿಟ್ಟ ಪಾತ್ರಗಳು ನನಗೆ ಬರುತ್ತಿದ್ದವು. ಈ ರೀತಿ ಹೋರಾಟ ಮಾಡುತ್ತಿರುವಾಗ ಸುದೀಪ್ ಸರ್ ಒಮ್ಮೆ 'ನೀನು ಇದೇ ರೀತಿ ಮಾಡುತ್ತಿದ್ದರೆ ನೀನು ಉದ್ದಾರ ಆಗಲ್ಲ. ಆಕ್ಟಿಂಗ್ ಬಿಟ್ಟು ಟೆಕ್ನಿಕಲ್ ಫಿಲ್ಡ್ ಗೆ ಬಾ ಡೈರೆಕ್ಷನ್ ಕಡೆ ಬಾ' ಅಂತ ಹೇಳಿದರು. 'ನೀನೇನು ದೊಡ್ಡ ಆಕ್ಟರ್ ಆಗ್ತೀನಿ ಅಂತ ತಿಳ್ಕೊಂಡಿದೀಯಾ' ಅಂತ ಬೈದರು. ಆಗ ಸುದೀಪ್ ಸರ್ ಅವರ ಜೊತೆಗೆ 'ಕೆಂಪೇಗೌಡ' ಸಿನಿಮಾಗೆ ಕೆಲಸ ಮಾಡಿದೆ. ನಂತರ ಎಂ.ಎಸ್.ರಮೇಶ್ ಸರ್ ಸಿನಿಮಾಗೆ ವರ್ಕ್ ಮಾಡಿದೆ. ಹೀಗೆ ನನ್ನ ನಿರ್ದೇಶಕ ಶುರು ಆಯ್ತು.''

    ಒಂದು ಮಧ್ಯಾಹ್ನ ಮನೆಯಲ್ಲಿ ಸುಮ್ಮನೆ ಮಲಗಿದೆ..

    ಒಂದು ಮಧ್ಯಾಹ್ನ ಮನೆಯಲ್ಲಿ ಸುಮ್ಮನೆ ಮಲಗಿದೆ..

    ''ನಾನೇ ಒಂದು ಸಿನಿಮಾವನ್ನು ನಿರ್ದೇಶನ ಮಾಡಬೇಕು ಅಂತ ಓಡಾಡುತ್ತಿದೆ. ತುಂಬ ಬೇಸರ, ತುಂಬ ಅವಮಾನಗಳು ಆಯ್ತು. ಜೀವನದಲ್ಲಿ ಇನ್ನೇನ್ನೂ ಇಲ್ಲ ಅಂದುಕೊಂಡಿದೆ. ಒಂದು ಮಧ್ಯಾಹ್ನ ಮನೆಯಲ್ಲಿ ಸುಮ್ಮನೆ ಮಲಗಿದೆ. ಶರಣ್ ಬಂದು 'ಒಂದು ಸಿನಿಮಾ ಮಾಡುತ್ತೀಯೇನೋ' ಅಂತ ಕೇಳಿದ. ಸುಮ್ಮನೆ ಇರಪ್ಪಾ ತಮಾಷೆ ಮಾಡಬೇಡ ಅಂತ ಅವನಿಗೆ ಬೈದೆ. 'ಸೀರಿಯಸ್ ಆಗಿ ಹೇಳ್ತಿದ್ದೀನಿ ಒಂದು ಸಿನಿಮಾ ಕೊಟ್ಟರೆ ಮಾಡುತ್ತೀಯಾ?' ಅಂತ ಕೇಳಿದ. ಹೂ'.. ಕೊಡು ತಾಯಾಣೆ ಮಾಡ್ತೀನಿ ಅಂತ ಹೇಳಿ ಒಪ್ಪಿದೆ. ಆಮೇಲೆ ನಿರ್ಮಾಪಕರ ಬೇಟಿ ಆಯ್ತು. ಒಂದು ಕಥೆ ತುಂಬ ಚೆನ್ನಾಗಿ ಇತ್ತು. ಸ್ವಲ್ಪ ಅದನ್ನು ಬದಲಾವಣೆ ಮಾಡಿದೆ. 35 ದಿನ ಶೂಟಿಂಗ್ ಶಡ್ಯೂಲ್ ಹಾಕಿದೆ. ಆಗ ನಿರ್ಮಾಪಕರು 'ನಾವು ಸಣ್ಣ ಸಿನಿಮಾ ಮಾಡಬೇಕು ಅಂತ ಇದ್ದೀವಿ, ಅಷ್ಟು ದಿನ ಆಗಲ್ಲ' ಅಂದರು. ಕೊನೆಗೆ ಹೇಗೋ ಒಪ್ಪಿದರು.''

    ಸುಮ್ಮನೆ ಇಟ್ಟ ಟೈಟಲ್ ಅದು..

    ಸುಮ್ಮನೆ ಇಟ್ಟ ಟೈಟಲ್ ಅದು..

    ''ಓನ್' ಅಂತ ಒಂದು ಸಿನಿಮಾದ ಜಾಹಿರಾತು ಪೇಪರ್ ನಲ್ಲಿ ಬಂದಿತ್ತು. ಅದನ್ನು ನೋಡಿ ಏನೇನೂ ಟೈಟಲ್ ಬರುತ್ತೆ ಅಂತ ತಮಾಷೆ ಮಾಡುತ್ತಿದ್ವಿ. ಆ ಟೈಟಲ್ ನೋಡಿ ಸಿಕ್ಕಾಪಟ್ಟೆ ಕಾಮಿಡಿ ಮಾಡಿದ್ವಿ. ಆಗ ತರುಣ 'ಬೇರೆಯವರ ಟೈಟಲ್ ನೋಡಿ ಕಾಮಿಡಿ ಮಾಡುವುದು ಬಿಡು ನಮ್ಮ ಸಿನಿಮಾಗೆ ಏನು ಟೈಟಲ್ ಇಡೋದು?' ಅಂತ ಕೇಳಿದ. ಅಲ್ಲಿ 'ಓನ್' ಅಂತ ಇದೇ ನಾವು 'ಟೂ' ಅಂತ ಇಡೋಣ ಎಂದು ಸುಮ್ನೆ ಹೇಳಿದೆ. ಅವನು 'ಹೂ ಕಣೋ ಚೆನ್ನಾಗಿದೆ' ಅಂದ. 'ಓನ್' ಅಂತ ಇರೋದನ್ನು ನೋಡಿ ನಾನೇ ಇಷ್ಟು ಲೇವಡಿ ಮಾಡುತ್ತೀದ್ದೇನೆ ಇನ್ನು 'ಟೂ' ಅಂತ ಇಟ್ಟರೆ ಎಲ್ಲರೂ ಎಷ್ಟು ಲೇವಡಿ ಮಾಡಬಹುದು ಅಂದೆ. ಆಮೇಲೆ 'ಟೂ' ಇರಲಿ ಎಂದದು ಫಿಕ್ಸ್ ದ್ವಿ. ಅಂದರೆ ಏನಾದರೂ ಸಿಂಪಲ್ ಇಡೋಣ ಅಂತ 'ವಿಕ್ಟರಿ' ಸಿಂಪಲ್ ಇಟ್ಟಿದ್ದು. ಅದು ವರ್ಕ್ ಆಯ್ತ. ಸಿನಿಮಾದಲ್ಲಿ ಎರಡು ಪಾತ್ರಗಳು ಇದೇ ಎನ್ನುವುದಕ್ಕೆ ಸಹ ಅದು ಸೂಟ್ ಆಯ್ತು.''

    ಇದ್ದಕ್ಕಿದ್ದ ಹಾಗೆ ರವಿಶಂಕರ್ ಸರ್ ಗೆ ಕಾಮಿಡಿ ಪಾತ್ರ ನೀಡಿದ್ವಿ..

    ಇದ್ದಕ್ಕಿದ್ದ ಹಾಗೆ ರವಿಶಂಕರ್ ಸರ್ ಗೆ ಕಾಮಿಡಿ ಪಾತ್ರ ನೀಡಿದ್ವಿ..

    ''ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ತಮ್ಮ ತರುಣ್ ನನಗೆ ದೊಡ್ಡ ಸ್ಟ್ರೆಂತ್. ಜೊತೆಗೆ ಶರಣ್, ಕಿಟ್ಟಪ್ಪ, ಶೇಖರ್ ಚಂದ್ರ, ಸತ್ಯ ಹೆಗಡೆ, ಅರ್ಜುನ್ ಜನ್ಯ, ಮೋಹನ್ ಬಿ ಕೆರೆ, ಪ್ರಶಾಂತ್, ಸಾಧುಕೋಕಿಲ, ಚಿಕ್ಕಣ್ಣ, ತಬಲ ನಾಣಿ ತುಂಬ ಸಪೋರ್ಟ್ ಮಾಡಿದರು. ಚಿತ್ರದಲ್ಲಿ ರವಿಶಂಕರ್ ಸರ್ ಗೆ ಇದ್ದಕ್ಕಿದ್ದ ಹಾಗೆ ಕಾಮಿಡಿ ಪಾತ್ರ ನೀಡಿದ್ವಿ. ತಬಲ ನಾಣಿ ಅವರಿಗೆ ಬೇರೆ ರೀತಿಯ ರೋಲ್ ಕೊಟ್ವಿ. ಈ ರೀತಿ ಇದ್ದರು ಎಲ್ಲರು ನನ್ನನ್ನು ನಂಬಿದರು. ಇಡೀ ಟೀಂ ನನಗೆ ಪ್ರೋತ್ಸಾಹ ನೀಡಿತು. ಇವರಿಂದ ನಾನು ಕೂಡ ಸಕ್ಸಸ್ ಕಂಡೆ.''

    ಮೊದಲ ಶಾಟ್ ಓಪನ್ ಆಗಿದ್ದು..

    ಮೊದಲ ಶಾಟ್ ಓಪನ್ ಆಗಿದ್ದು..

    ''ವಿಕ್ಟರಿ ಮುಹೂರ್ತ ಮೋದಿ ಹಾಸ್ಟಿಟಲ್ ಬಳಿಯ ಗಣೇಶನ ದೇವಸ್ಥಾನದಲ್ಲಿ ಆಯ್ತು. ಇದುವರೆಗೆ ನನ್ನ ಎಲ್ಲ ಸಿನಿಮಾಗಳು ಸಹ ಅಲ್ಲಿಯೇ ಮುಹೂರ್ತ ಆಗಿದೆ. ಮೊದಲ ಶಾಟ್ ಅವಿನಾಶ್ ಮತ್ತು ಕೀರ್ತಿ ರಾಜ್ ಅವರ ದೃಶ್ಯವಾಗಿತ್ತು. ಅವರ ಮೂಲಕ ಸಿನಿಮಾ ಓಪನ್ ಆಯ್ತು.''

    'ಖಾಲಿ ಕ್ವಾಟ್ರು..; ಹಾಡು ಬೇಡ ಅಂದಿದ್ರು..

    'ಖಾಲಿ ಕ್ವಾಟ್ರು..; ಹಾಡು ಬೇಡ ಅಂದಿದ್ರು..

    ''ಖಾಲಿ ಕ್ವಾಟ್ರು...' ಹಾಡು ಮೊದಲು ನಿರ್ಮಾಪಕ ಆನಂದ್ ಅವರು ಬೇಡ ಅಂತ ಇದ್ದರು. 'ಖಾಲಿ ಕ್ವಾಟ್ರು..' ಅಂತ ಏನಿದು ಚೆನ್ನಾಗಿಲ್ಲ ಅಂತ ಹೇಳಿದರು. ಆದರೆ ತರುಣ ಈ ಹಾಡು ವರ್ಕ್ ಆಗುತ್ತೆ ಅಂತ ಇದ್ದ. ನಾನು ಮೊದಲ ಸಿನಿಮಾಗೆ ಈ ಚಾನ್ಸ್ ತೆಗೆದುಕೊಳ್ಳಬೇಕೋ.. ಇಲ್ವೋ.. ಅಂತ ಸುಮನಿದ್ದೆ. ಬೇರೆ ಬೇರೆ ವರ್ಷನ್ ನಲ್ಲಿ ಈ ಹಾಡು ಮಾಡಿಸಿದ್ವಿ. ಏನ್ ಮಾಡಬೇಕು ಗೊತ್ತಾಗಲಿಲ್ಲ. ಒಂದು ದಿನ ತರುಣ 'ಈ ಹಾಡು ದೊಡ್ಡ ಹಿಟ್ ಆಗುತ್ತದೆ. ಹೋಗಿ ಶೂಟ್ ಮಾಡಿಕೊಂಡು ಬಾ.' ಅಂತ ಹೇಳಿದ. ಆದಾದ ನಂತರ ಆ ಹಾಡು ಒಂದು ಹಿಸ್ಟರಿ ಸೃಷ್ಟಿ ಮಾಡಿತು. ಇವತ್ತಿಗೂ ಕುಡುಕರ ಹಾಡು ಅಂದರೆ ಮೊದಲು ನೆನಪಾಗುವುದು ಇದೇ ಹಾಡು.

    ಎಲ್ಲರೂ ಬಿದ್ದು ಬಿದ್ದು ನಗ್ತಿದ್ದಾರೆ, ಆದರೆ ನನಗೆ ನಗುನೇ ಬರಲಿಲ್ಲ..

    ಎಲ್ಲರೂ ಬಿದ್ದು ಬಿದ್ದು ನಗ್ತಿದ್ದಾರೆ, ಆದರೆ ನನಗೆ ನಗುನೇ ಬರಲಿಲ್ಲ..

    ''ಸಿನಿಮಾ ರಿಲೀಸ್ ಹಿಂದಿನ ದಿನ ಸಿಕ್ಕಾಪಟ್ಟೆ ನನಗೆ ಭಯ ಇತ್ತು. ರಾತ್ರಿ ಸಿನಿಮಾ ನೋಡಿದಾಗ ನನಗೆ ಅಷ್ಟೊಂದು ಇಷ್ಟ ಆಗಿರಲಿಲ್ಲ. ಎಲ್ಲರೂ ಒಳ್ಳೆದಾಗುತ್ತೆ ಸಿನಿಮಾ ಚೆನ್ನಾಗಿದೆ ದೇವರಿದ್ದಾನೆ ಅಂದರು. ಇಡೀ ರಾತ್ರಿ ಸುಮ್ಮನೆ ಕೂತಿದ್ದೆ. ಬೆಳ್ಳಗೆ ತ್ರಿಭುವನ್ ನಲ್ಲಿ ಸಿನಿಮಾ ರಿಲೀಸ್ ಆಯ್ತು. ಕೆಲವರು 'ತ್ರಿಭುವನ್ ಗೆ ಮೈನ್ ಥಿಯೇಟರ್ ಹಾಕಿದ್ದೀರ ಅಲ್ಲಿಗೆ ನಾಲ್ಕು ಮಹದಿ ಹತ್ತಿ ಸಿನಿಮಾ ನೋಡೋಕೆ ಯಾರು ಬರುತ್ತಾರೆ' ಅಂತ ಹೆದರಿಸಿದ್ದರು. ಮೊದಲ ಶೋ ಹೌಸ್ ಫುಲ್ ಆಯ್ತು. ಹೋಗಿ ನೋಡಿದರೆ ಜನ ಎಲ್ಲರೂ ಬಿದ್ದು ಬಿದ್ದು ನಗ್ತಿದ್ದಾರೆ. ನಾನು 'ಬಡ್ಡಿ ಮಗಂದು ಇವರೇಲ್ಲ ನಾಗ್ತಿದ್ದಾರೆ ನನಗೆ ಯಾಕೆ ನಗು ಬರ್ತಿಲ್ಲ' ಅಂದುಕೊಂಡೆ. ಸಿನಿಮಾ ನೋಡಿದಾಗ ನನಗೆ ಅದರಲ್ಲಿನ ತಪ್ಪುಗಳು ಕಾಣಿಸುತ್ತಿತ್ತು. ನಂತರ ಮಧ್ಯಾಹ್ನ ಶೋಗೆ ಸಹ ಒಳ್ಳೆಯ ರೆಸ್ಪಾನ್ಸ್ ಬಂತು. ಎಲ್ಲರೂ ಇದು ಹಿಟ್ ಸಿನಿಮಾ ಸೂಪರ್ ಕಾಮಿಡಿ ಅಂತ ಹೇಳಿದರು. ಮಧ್ಯಾಹ್ನ ಶೋ ನಲ್ಲಿಯೂ ಜನ ಎದ್ದು ಬಿದ್ದು ನಗ್ತೀದ್ದಾರೆ. ಅದರು ನನಗೆ ನಂಬಿಕೆ ಬರಲಿಲ್ಲ. ಬಳಿಕ ಬೇರೆ ಬೇರೆ ಥಿಯೇಟರ್ ಹೋಗಿ ನೋಡಿದೆ ಎಲ್ಲ ಕಡೆ ಒಳ್ಳೆ ರೆಸ್ಪಾನ್ಸ್ ಇತ್ತು. ತುಂಬ ದೊಡ್ಡ ಖುಷಿ ಅದು.''

    ಆ ಸಿನಿಮಾದಿಂದ ಮತ್ತೆ ನಾನು ಹುಟ್ಟಿದ್ದೆ

    ಆ ಸಿನಿಮಾದಿಂದ ಮತ್ತೆ ನಾನು ಹುಟ್ಟಿದ್ದೆ

    ''ಆ ಸಿನಿಮಾದಿಂದ ಮತ್ತೆ ನಾನು ಹುಟ್ಟಿದ್ದೆ. ನಾನು ಇವತ್ತು ಡೈರೆಕ್ಟರ್ ಆಗಿ ಅನ್ನ ತಿನ್ನುತಿದ್ದೇನೆ ಅಂದರೆ ಅದು 'ವಿಕ್ಟರಿ' ಸಿನಿಮಾ ಮತ್ತು ಆನಂದ್ ಪ್ರೋಡಕ್ಷನ್ ನಿಂದ. ಸುದೀಪ್ ಸರ್ ಮತ್ತು ಎಂ.ಎಸ್.ರಮೇಶ್ ಸರ್ ನನಗೆ ಎಲ್ಲದನ್ನು ಕಲಿಸಿ ಕೊಟ್ಟವರು. ಅಯೋ.. ನಾನು ಇಲ್ಲಿ ಇನ್ನೋಬ್ಬನ ಹೆಸರನ್ನು ಹೇಳುವುದನ್ನು ಮರೆತೆ. ಅದು ಅರುಣ್ ಸಾಗರ್. 'ವಿಕ್ಟರಿ' ಮಾಡುವ ಟೈಂ ನಲ್ಲಿ ಆಗ ನಾನು ಸಿಸಿಎಲ್ ಮ್ಯಾಚ್ ನಲ್ಲಿ ಇದ್ದೆ. ತರುಣ್ ಮತ್ತೆ ಎಲ್ಲರೂ ನನಗೆ ಸಿನಿಮಾ ಮಾಡು ಅಂತ ಹೇಳುತ್ತಿದ್ದರು. ನಾನು ಸಿಸಿಎಲ್ ನಲ್ಲಿ ಇದ್ದರೆ ಸ್ವಲ್ಪ ದುಡ್ಡಾದರು ಬರುತ್ತದೆ ಅಂತ ಇದ್ದೆ. ಒಮ್ಮೆ ಅರುಣ್ ಸಾಗರ್ ನನ್ನನ್ನು ಕರೆದು ಸಿಕ್ಕಾಪಟ್ಟೆ ಬೈದ, 'ಸಿನಿಮಾ ಮಾಡುವುದು ಬಿಟ್ಟು ಇಲ್ಲಿ ಇದನ್ನು ಮಾಡುತ್ತಿದ್ದೀಯ, ಮೊದಲು ಸಿನಿಮಾ ಮಾಡು' ಅಂತ ಸಂಸ್ಕೃತ ಪದಗಳನೆಲ್ಲ ಬಳಸಿ ಬೈದ. ಅಲ್ಲಿಂದಲೇ ನಾನು ಡೈರೆಕ್ಷನ್ ಶುರು ಮಾಡಿದ್ದು. ಈ ರೀತಿ ನನ್ನ ಜೀವನದಲ್ಲಿ ತುಂಬ ಜನರನ್ನು ದೇವರೇ ಕಳುಹಿಸಿದ್ದಾನೆ ಅನಿಸುತ್ತದೆ.

    ಸಿನಿಮಾ ರಂಗ ಕ್ರಿಕೆಟ್ ಇದ್ದ ಹಾಗೆ

    ಸಿನಿಮಾ ರಂಗ ಕ್ರಿಕೆಟ್ ಇದ್ದ ಹಾಗೆ

    ''ನಾನು ಇವತ್ತಿಗೂ ಆ ಸಿನಿಮಾ ನೋಡುತ್ತೇನೆ. ನೋಡಿದಾಗ ಇನ್ನೂ ಚೆನ್ನಾಗಿ ಮಾಡಬೇಕಿತ್ತು ಅಂತ ಅನಿಸುತ್ತದೆ. ನಮ್ಮ ಸಿನಿಮಾದಲ್ಲಿ ನಮಗೆ ಬರೀ ತಪ್ಪುಗಳೆ ಕಾಣಿಸುತ್ತಿರುತ್ತದೆ. ಬೇರೆಯವರ ದೃಷ್ಟಿಯಿಂದ ನೋಡಿದಾಗ ಅದು ಚೆನ್ನಾಗಿ ಇರುತ್ತದೆ. ಆ ಸಿನಿಮಾ ನನಗೆ ಒಂದು ಜೀವನ ಕೊಟ್ಟಿತು. ಇವತ್ತು ಎಲ್ಲರೂ ಬುದ್ದಿವಂತರು. ಇವತ್ತು ಸಿನಿಮಾದ ಬಗ್ಗೆ ಎಲ್ಲರಿಗೂ ಗೊತ್ತು. ಸಿನಿಮಾ ರಂಗ ಕ್ರಿಕೆಟ್ ಇದ್ದ ಹಾಗೆ. ಸ್ಕ್ರೋರ್ ಮಾಡಿದರೆ ಮಾತ್ರ ತಂಡದಲ್ಲಿ ಇರುವುದಕ್ಕೆ ಆಗುವುದು. ಹಾಗಾಗಿ ನನಗೆ ನನ್ನ ಎಲ್ಲ ಸಿನಿಮಾನು ಮೊದಲ ಸಿನಿಮಾ.''

    English summary
    Nanna Modala Cinema Series: Kannada director Nanda Kishore spoke about his first movie 'Victory' in an exclusive interview with FilmiBeat Kannada.
    Tuesday, March 13, 2018, 10:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X