"ನಿರ್ಮಾಪಕರು ನಾನೇ ಹೀರೊ ಆಗ್ತೀನಿ ಅಂತಾರೆ.. ಡಬಲ್ ಮೀನಿಂಗ್ ಡೈಲಾಗ್ ಇದ್ಯಾ ಅಂತ ಕೇಳ್ತಾರೆ": ವಿಜಯ ಪ್ರಸಾದ್

'ಸಿದ್ಲಿಂಗು' ಹಾಗೂ 'ನೀರ್‌ದೋಸೆ' ಸಿನಿಮಾಗಳ ಮೂಲಕ ನಿರ್ದೇಶಕ ವಿಜಯ ಪ್ರಸಾದ್ ಗಮನ ಸೆಳೆದಿದ್ದರು. ಅಂತದ್ದೇ ಮತ್ತಷ್ಟು ಮನರಂಜನೆಯ ಸಿನಿಮಾಗಳು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ 'ಪೆಟ್ರೊಮ್ಯಾಕ್ಸ್' ಮತ್ತು 'ತೋತಾಪುರಿ' ಸಿನಿಮಾಗಳು ನಿರೀಕ್ಷೆ ಹುಸಿ ಮಾಡಿದ್ದವು. ಮುಂದೇನು ಎನ್ನುವ ಪ್ರಶ್ನೆಗೆ ಈಗ ನಿರ್ದೇಶಕರು ಉತ್ತರ ಕೊಟ್ಟಿದ್ದಾರೆ. ಆ ಎರಡು ಸಿನಿಮಾಗಳ ಸೋಲಿನ ಹೊಣೆಯನ್ನು ನಿರ್ದೇಶಕರೇ ಹೊತ್ತಿದ್ದರು.

ಇತ್ತೀಚೆಗೆ 'ಡೇರ್‌ ಡೆವಿಲ್ ಮುಸ್ತಾಫಾ' ಸಿನಿಮಾ ನೋಡಿ ವಿಜಯ ಪ್ರಸಾದ್ ಮೆಚ್ಚಿಕೊಂಡಿದ್ದರು. ಅಂತದ್ದೇ ಕಂಟೆಂಟ್ ಇರುವ ಸಿನಿಮಾಗಳತ್ತ ಅವರು ಒಲವು ಮೂಡಿದೆ. ಒಂದೊಳ್ಳೆ ಸ್ಕ್ರಿಪ್ಟ್ ಸಿದ್ಧಪಡಿಸಿ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ. ಮುಂದೆ ಯಾವ ರೀತಿಯ ಸಿನಿಮಾ ಮಾಡುತ್ತೇನೆ ಎನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪರೋಕ್ಷವಾಗಿ ಇನ್ನು ಡಬಲ್ ಮೀನಿಂಗ್ ಡೈಲಾಗ್ಸ್ ಇರುವ ಸಿನಿಮಾ ಮಾಡಲ್ಲ ಎಂದು ಕೂಡ ಹೇಳಿದ್ದಾರೆ.

Neer Dose director Vijaya Prasads next is a women-oriented film

ಮುಂದಿನ ಸಿನಿಮಾ ಬಗ್ಗೆ ವಿಜಯ ಪ್ರಸಾದ್ ಟ್ವೀಟ್ ಮಾಡಿ "ಮೂರು ಚಿತ್ರ ನಿರ್ಮಾಣ ಸಂಸ್ಥೆಗಳೊಂದಿಗೆ ಮಾತುಕತೆ ಮುಗಿಸಿದೆ ( ಹೆಸರು ಬೇಡ ) ಯಾರೊಬ್ಬರೂ ಕಥೆ ಕೇಳಲಿಲ್ಲ...! ಕೇಳಿದ್ದು ಎರಡೇ, ಒಂದು ಡಬ್ಬಲ್ ಮೀನಿಂಗ್ ಡೈಲಾಗ್, ಇನ್ನೊಂದು ಅವರೇ ನಾಯಕ ಆಗಬಹುದೇ ಎಂದು...! ಆದರೆ ಈ ಬಾರಿ ' ನನ್ನ ಪ್ರಯಾಣವೇ ಬೇರೆ ' ...! ಕಾರಣ ನಾಯಕಿಯೇ ಚಿತ್ರದ ಜೀವಾಳ. ಹಿಂದಿನ ನಿರಾಸೆಗೆ ಕ್ಷಮೆ ಇರಲಿ" ಎಂದು ಬರೆದುಕೊಂಡಿದ್ದಾರೆ.

ಹೊಸ ಪ್ರಯಾಣ ಆರಂಭ

ಫಿಲ್ಮಿಬೀಟ್ ಜೊತೆ ಮಾತನಾಡಿರುವ ನಿರ್ದೇಶಕ ವಿಜಯ ಪ್ರಸಾದ್ "ಮಹಿಳಾ ಪ್ರಧಾನ ಚಿತ್ರಕ್ಕೆ ಮುಂದಾಗಿದ್ದೇನೆ. ಸ್ಕ್ರಿಪ್ಟ್ ವರ್ಕ್ ಮುಗಿದಿದೆ. ನಿರ್ಮಾಪಕರ ಜೊತೆ ಚರ್ಚೆ ನಡೀತಿದೆ. ಆಗಸ್ಟ್ ವೇಳೆಗೆ ಸಿನಿಮಾ ಅಂತಿಮವಾಗುತ್ತದೆ, ನಂತರ ಎಲ್ಲವನ್ನು ಹೇಳುತ್ತೇನೆ. ಒಂದು ಹೊಸ ಪಯಣ ಆರಂಭಿಸಿದ್ದೇನೆ. ಕಂಟೆಂಟ್ ಇರುವ ಸಿನಿಮಾಗಳನ್ನು ಜನ ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ 'ಡೇರ್‌ ಡೆವಿಲ್ ಮುಸ್ತಾಫಾ' ಉತ್ತಮ ಉದಾಹರಣೆ. ಸಂಪೂರ್ಣ ಹೊಸಬರ ತಂಡ ಮಾಡಿದ ಸಿನಿಮಾ ಎಷ್ಟರಮಟ್ಟಿಗೆ ಗೆದ್ದಿದೆ ಅನ್ನೋದು ಗೊತ್ತಾಗ್ತಿದೆ. ಹಾಗಾಗಿ ಕಂಟೆಂಟ್‌ಗೆ ಮಹತ್ವ ಇರುವ ಚಿತ್ರಕ್ಕೆ ಕೈ ಹಾಕಿದ್ದೇನೆ"

Neer Dose director Vijaya Prasads next is a women-oriented film

ನಾಯಕಿ ಯಾರಾಗುತ್ತಾರೆ?

"ಮಹಿಳಾ ಪ್ರಧಾನ ಸಿನಿಮಾ ಇದು. ಕಲಾವಿದರ ಆಯ್ಕೆ ಆಗಿಲ್ಲ. ನಿರ್ಮಾಪಕರ ಜೊತೆ ಚರ್ಚಿಸಿ ಅದನ್ನು ತೀರ್ಮಾನಿಸಬೇಕು. ನನ್ನ ಕಥೆಗೆ ರಮ್ಯಾ, ರಾಧಿಕಾ ಕುಮಾರಸ್ವಾಮಿ, ರಚಿತಾ ರಾಮ್, ನಿತ್ಯಾ ಮೆನನ್ ಎಲ್ಲರೂ ಸೂಟ್ ಆಗುತ್ತಾರೆ. ನಿರ್ಮಾಪಕರು ಹೊಸ ನಟಿಯರು ಓಕೆ ಅಂದರೂ ಸಿನಿಮಾ ಮಾಡಲು ಸಿದ್ಧ. ಇದೇ ಕಥೆಯನ್ನು ಹೇಳಲು ಹೋದಾಗ ಕೆಲ ಚಿತ್ರನಿರ್ಮಾಣ ಸಂಸ್ಥೆಗಳು ಡಬ್ಬಲ್ ಮೀನಿಂಗ್ ಡೈಲಾಗ್ ಇದ್ಯಾ? ನಾವೇ ಹೀರೋ ಆಗಬಹುದಾ? ಎಂದು ಕೇಳಿದರು. ಆದರೆ ನನ್ನ ಕಥೆ ಅದಲ್ಲ. ಹಾಗಾಗಿ ಬೇರೆ ನಿರ್ಮಾಪಕರ ಜೊತೆ ಚರ್ಚೆ ನಡೀಯಿದೆ"

'ತೋತಾಪುರಿ'- 2 ಕಥೆ ಏನಾಯ್ತು?

ವಿಜಯ ಪ್ರಸಾದ್ಈ ಹಿಂದೆ 'ಪರಿಮಳ ಲಾಡ್ಜ್' ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಒಂದು ಡೈಲಾಗ್ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಯೋಗಿ, ನೀನಾಸಂ ಸತೀಶ್, ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ಆ ಸಿನಿಮಾದಲ್ಲಿ ನಟಿಸಬೇಕಿತ್ತು. "ಸದ್ಯ ಕೈಗೆತ್ತಿಕೊಂಡಿರುವ ಸಿನಿಮಾ ಮುಗಿದ ಬಳಿಕ 'ಪರಿಮಳ ಲಾಡ್ಜ್' ಶುರು ಮಾಡುತ್ತೇನೆ" ಎಂದು ನಿರ್ದೇಶಕರು ಹೇಳಿದ್ದಾರೆ. ಇನ್ನು ಜಗ್ಗೇಶ್, ಧನಂಜಯ್ ನಟನೆಯ 'ತೋತಾಪುರಿ'- 2 ಸಿನಿಮಾ ಮುಗಿಸಿ ನಿರ್ಮಾಪಕರಿಗೆ ಕೊಟ್ಟುಬಿಟ್ಟಿದ್ದೇನೆ. ಅವರು ಸಿನಿಮಾ ರಿಲೀಸ್ ಮಾಡುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.

'ಪೆಟ್ರೊಮ್ಯಾಕ್ಸ್'ಸೋಲಿಗೆ ಕ್ಷಮೆ

ಕಳೆದ ವರ್ಷ ವಿಜಯ ಪ್ರಸಾದ್ ನಿರ್ದೇಶನದ 'ಪೆಟ್ರೊಮ್ಯಾಕ್ಸ್'ಸಿನಿಮಾ ರಿಲೀಸ್ ಆಗಿತ್ತು. ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯಾ ರಾಮ್, ನಾಗಭೂಷಣ್, ವಿಜಯ ಲಕ್ಷ್ಮಿ ಸಿಂಗ್ ಚಿತ್ರದ ತಾರಾಗಣದಲ್ಲಿದ್ದರು. ಪೋಲಿತನ, ಚೇಷ್ಟೆ, ಕುಚೇಷ್ಟೆಗಳನ್ನು ಸೇರಿಸಿ ಮಾಡಿದ್ದ ಸಿನಿಮಾ ಪಡ್ಡೆ ಹುಡುಗರಿಗೆ ಇಷ್ಟವಾದರೂ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಹಾಗಾಗಿ 2 ವಾರಕ್ಕೆ ಚಿತ್ರವನ್ನು ಥಿಯೇಟರ್‌ನಿಂದ ತೆಗೆದು ಹಾಕಲಾಗಿತ್ತು. ಆದ ಟ್ವೀಟ್ ಮಾಡಿದ್ದ ನಿರ್ದೇಶಕರು "ಪೆಟ್ರೋಮ್ಯಾಕ್ಸ್' ಸಿನಿಮಾ ಸೋಲಿಗೆ ಪ್ರೇಕ್ಷಕರನ್ನಾಗಲಿ, ಚಿತ್ರತಂಡವನ್ನಾಗಲಿ ವಿಜಯ ಪ್ರಸಾದ್ ದೂಷಿಸಿಲ್ಲ. ಬದಲಿಗೆ ನಾನೊಬ್ಬನೇ ಕಾರಣ.. ಕ್ಷಮೆ ಇರಲಿ" ಎಂದಿದ್ದರು.

More from Filmibeat

English summary
Neer Dose director Vijaya Prasad's next is a women-oriented film. The director had earlier said that I was the reason for the failure of the Petromax movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X