ಅಪ್ಪು ಲೈಫ್ ನಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದು

Recommended Video

Nata Sarvabhouma Movie:ನಟಸಾರ್ವಭೌಮ ಪ್ರೆಸ್ ಮೀಟ್ ನಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ್ದು ಹೀಗೆ

'ಲೈಫ್ ಅಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದು...' ಎಂದು ಹೇಳಿ ಗಹಗಹಿಸೋ ನಗಿವಿನ ಮೂಲಕ ಟ್ರೇಲರ್ ಕೊನೆಯಾಗುತ್ತದೆ. ಅದು 'ನಟ ಸಾರ್ವಭೌಮ' ಸಿನಿಮಾ ಟ್ರೇಲರ್.

ಈ ಟ್ರೇಲರ್ ನಲ್ಲಿ ಇರುವ ಹಾಗೆ, ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಹಾರರ್ ಟಚ್ ಇರುವ ಸಿನಿಮಾ ಮಾಡುತ್ತಿದ್ದಾರೆ. ರಾಜ್ ಕುಮಾರ್ ಅವರ ಬಿರುದನ್ನೇ ಹೆಸರು ಮಾಡಿಕೊಂಡಿರುವ 'ನಟ ಸಾರ್ವಭೌಮ' ಸಿನಿಮಾ ಇದೇ ಗುರುವಾರ ಬಿಡುಗಡೆಯಾಗುತ್ತಿದೆ.

ಈ ಸಿನಿಮಾ ಪುನೀತ್ ಅವರ 28ನೇ ಚಿತ್ರವಾಗಿದೆ. ಮೊದಲ ಬಾರಿಗೆ ಪುನೀತ್ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದಾರೆ. ರಚಿತಾ ರಾಮ್ ಹಾಗೂ ಅಪ್ಪು ಕಾಂಬಿನೇಶನ್ ಮತ್ತೆ ಒಂದಾಗಿದೆ. 'ರಣ ವಿಕ್ರಮ' ಬಳಿಕ ಮತ್ತೆ ಪವನ್ ಒಡೆಯರ್ ಪುನೀತ್ ಗೆ ಡೈರೆಕ್ಷನ್ ಮಾಡುತ್ತಿದ್ದಾರೆ.

ಈಗಾಗಲೇ ಈ ಸಿನಿಮಾದ ಕ್ರೇಜ್ ಜೋರಾಗಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಮಾತ್ರ ಇದ್ದು ಸಿನಿಮಾದ ಬಗ್ಗೆ ಅನೇಕ ವಿಚಾರಗಳನ್ನು ಪುನೀತ್ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಅಪ್ಪು ಮಾತುಗಳು ಮುಂದಿವೆ ಓದಿ...

ಸಿನಿಮಾ ಪಾಸ್ ಆಗೋದು ಬಾಕಿ ಇದೆ

ಸಿನಿಮಾ ಪಾಸ್ ಆಗೋದು ಬಾಕಿ ಇದೆ

''ನನ್ನ 28ನೇ ಸಿನಿಮಾ ಇದು. ಸಿನಿಮಾ ರಿಲೀಸ್ ಹತ್ತಿರ ಬರುತ್ತಿದ್ದ ಹಾಗೆ ಎಲ್ಲರಿಗೂ ಸ್ವಲ್ಪ ಟೆನ್ಷನ್ ಇರುತ್ತದೆ. ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಇದೆ. ಟೀಸರ್, ಟ್ರೇಲರ್ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಅವು ಮಾತ್ರವಲ್ಲ ಈಗ ಸಿನಿಮಾ ಕೂಡ ಪಾಸ್ ಆಗಬೇಕಿದೆ.'' - ಪುನೀತ್ ರಾಜ್ ಕುಮಾರ್‌, ನಟ

'ನಟ ಸಾರ್ವಭೌಮ ಎಲ್ಲರೂ ಇಷ್ಟ ಪಟ್ಟ ಟೈಟಲ್

'ನಟ ಸಾರ್ವಭೌಮ ಎಲ್ಲರೂ ಇಷ್ಟ ಪಟ್ಟ ಟೈಟಲ್

''ನಟ ಸಾರ್ವಭೌಮ' ಎಂದು ಹೇಳಿದ ತಕ್ಷಣ ಕಣ್ಣು ಮುಂದೆ ಬರುವುದು ನಮ್ಮ ತಂದೆಯವರು. ಮೊದಲು ಈ ಟೈಟಲ್ ಕೇಳಿದಾಗ ಸ್ವಲ್ಪ ಭಯ ಆಗಿತ್ತು. 'ರಾಜಕುಮಾರ' ಟೈಟಲ್ ಹೇಳಿದಾಗಲೂ ಸ್ವಲ್ಪ ಟೆನ್ಷನ್ ಇತ್ತು. ಈ ಸಿನಿಮಾಗೆ ಈ ಟೈಟಲ್ ಸೂಕ್ತ ಎಂದು ರಾಕ್ ಲೈನ್ ಸರ್ ಹಾಗೂ ಪವನ್ ಪಡೆಯರ್ ಹೇಳಿದರು. ಬಳಿಕ ರಾಘಣ್ಣನಿಗೆ ಹೇಳಿದ್ವಿ ಎಲ್ಲರೂ ಇಷ್ಟಪಟ್ಟು ಒಪ್ಪಿಕೊಂಡು ಸಿನಿಮಾಗೆ ಈ ಹೆಸರು ಇಟ್ಟೆವು.'' - ಪುನೀತ್ ರಾಜ್ ಕುಮಾರ್‌, ನಟ

ನನಗೆ ಇದು ಹೊಸತು

ನನಗೆ ಇದು ಹೊಸತು

''ಈ ಸಿನಿಮಾ ಸಸ್ಪೆನ್ಸ್ ಎನ್ನುವುದಕ್ಕಿಂತ ಡಿಫರೆಂಟ್ ಥ್ರಿಲ್ಲರ್ ಸಿನಿಮಾ. ನನಗೆ ಇದು ಹೊಸತು. ಜನ ಕೂಡ ಇದನ್ನು ಇಷ್ಟ ಪಡುತ್ತಾರೆ ಎನ್ನುವ ನಂಬಿಕೆ ಇದೆ. ಫಸ್ಟ್ ಟೈಮ್ ಈ ರೀತಿಯ ಸಿನಿಮಾ ಮಾಡುತ್ತಿದ್ದೇನೆ. ಜೊತೆಗೆ ನನಗೆ ಫೋಟೋಗ್ರಾಫಿ ಅಂದರೆ ಇಷ್ಟ. ಈ ಸಿನಿಮಾದಲ್ಲಿ ಕ್ಯಾಮರಾ ಹಿಡಿದಿದ್ದು ಖುಷಿ ಆಗಿದೆ.'' - ಪುನೀತ್ ರಾಜ್ ಕುಮಾರ್‌, ನಟ

ಪ್ರತಿ ಸಿನಿಮಾಗೆ ಹೊಸ ಪ್ರಯತ್ನ ಮಾಡಬೇಕು

ಪ್ರತಿ ಸಿನಿಮಾಗೆ ಹೊಸ ಪ್ರಯತ್ನ ಮಾಡಬೇಕು

''ಪ್ರತಿ ಸಿನಿಮಾಗಳಿಗೆ ಏನಾದರೂ ಹೊಸ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ಆಸೆ. ಫೈಟ್, ಡ್ಯಾನ್ಸ್ ಚೆನ್ನಾಗಿ ಮಾಡಿದರೆ, ನನಗೆಯೇ ನೋಡಲು ಖುಷಿ ಆಗುತ್ತದೆ. ವಯಸ್ಸು ಆಗುತ್ತಿದ್ದರೂ, ಫಿಟ್ ಆಗಿ ಇರಬೇಕು. ಇಲ್ಲಿ ಡ್ಯಾನ್ಸ್ ಹಾಗೂ ಫೈಟ್ ನಲ್ಲಿ ಹೊಸದನ್ನು ಪ್ರಯತ್ನ ಮಾಡಿದ್ದಾರೆ. ಆಕ್ಷನ್ ಹಾಗೂ ಡ್ಯಾನ್ಸ್ ಕೋರಿಯಾಗ್ರಾಫರ್ ಅವರಿಗೆ ಧನ್ಯವಾದ ಹೇಳುತ್ತೇನೆ.'' - ಪುನೀತ್ ರಾಜ್ ಕುಮಾರ್‌, ನಟ

ಅಭಿಮಾನಿಗಳ ಪ್ರೀತಿಯನ್ನು ಮಾತುಗಳಲ್ಲಿ ಹೇಳಲು ಆಗುವುದಿಲ್ಲ

ಅಭಿಮಾನಿಗಳ ಪ್ರೀತಿಯನ್ನು ಮಾತುಗಳಲ್ಲಿ ಹೇಳಲು ಆಗುವುದಿಲ್ಲ

''ಕೆಲವು ಅಭಿಮಾನಿಗಳು ನಮ್ಮಿಂದ ಒಂದು ಫೋಟೋ ಕೂಡ ನಿರೀಕ್ಷೆ ಮಾಡುವುದಿಲ್ಲ. ಟಿಕೆಟ್ ತೆಗೆದುಕೊಂಡವರಿಗೆ, ಚಿತ್ರಮಂದಿರ ಸಿಂಗಾರ ಮಾಡುವವರಿಗೆ ಇಂತಹ ಅಭಿಮಾನಿಗಳ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ನಮ್ಮ ಕುಟುಂಬದ ಮೇಲೆ ಅವರು ಇಟ್ಟಿರುವ ಪ್ರೀತಿ ದೊಡ್ಡದು. ಅದನ್ನು ಮಾತುಗಳನ್ನು ಹೇಳಲು ಆಗುವುದಿಲ್ಲ.'' - ಪುನೀತ್ ರಾಜ್ ಕುಮಾರ್‌, ನಟ

ಡ್ಯಾನ್ಸ್ ವಿತ್ ಅಪ್ಪು

ಡ್ಯಾನ್ಸ್ ವಿತ್ ಅಪ್ಪು

''ನಾನು ಇದುವರೆಗೆ ನನ್ನ ಯಾವ ಸಿನಿಮಾವನ್ನು ಚಿತ್ರಮಂದಿರದಲ್ಲಿ ಸ್ವಲ್ಪ ಸ್ವಲ್ಪ ನೋಡಿದ್ದೇನೆ ಹೊರತು, ಪೂರ್ತಿ ನೋಡಿಲ್ಲ. ಸಿನಿಮಾ ನೋಡಿಕೊಂಡು ಬಂದವರ ಅಭಿಪ್ರಾಯ ಕೇಳುತ್ತಾನೆ. ಸೋಷಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಬಂತು. ಅಭಿಮಾನಿಗಳು ಕೂಡ ಡ್ಯಾನ್ಸ್ ಮಾಡಿದರು. ಆಡಿಯೋ ಲಾಂಚ್ ನಲ್ಲಿ ಇಬ್ಬರು ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡಿದರು.'' - ಪುನೀತ್ ರಾಜ್ ಕುಮಾರ್‌, ನಟ

ಸಿನಿಮಾ ನೋಡಿ ಖುಷಿಯಾಗಿ ಹೋಗುತ್ತೀರಾ

''ಯೂ ಟ್ಯೂಬ್ ನಲ್ಲಿ ಹಾಡುಗಳು ಓಡುತ್ತಿದೆ. ಈಗ ಸಿನಿಮಾ ಕೂಡ ಓಡಬೇಕು. ಹಾಡಿಗೆ ಕೋರಿಯಗ್ರಾಫ್ ಮಾಡಿದ ಭೂಷಣ್ ಹಾಗೂ ಜಾನಿ ಮಾಸ್ಟರ್ ಇಬ್ಬರು ನನಗೆ ತುಂಬ ಇಷ್ಟ. ಅಭಿಮಾನಿಗಳಿಗೆ ಹೇಳುವುದು ಇಷ್ಟೇ, ನೀವು ನಿರೀಕ್ಷೆ ಇಟ್ಟುಕೊಂಡು ಬಂದು ಖುಷಿಯಾಗಿ ಹೋಗುತ್ತೀರಾ. ನಾವು ಹಾಕಿರುವ ಶ್ರಮಕ್ಕೆ ನಿಮ್ಮ ಪ್ರೋತ್ಸಾಹ ಬೇಕು.'' - ಪುನೀತ್ ರಾಜ್ ಕುಮಾರ್‌, ನಟ

More from Filmibeat

English summary
Kannada actor Puneeth Rajkumar interview about 'Nata Sarvabhouma' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X