Don't Miss!
- News
Breaking; ಬೆಂಗಳೂರು ಮಳೆ, ಸಮಸ್ಯೆ ಎದುರಿಸಲು ಸಚಿವರ ತಂಡ ರಚನೆ
- Sports
SRH vs PBKS: ಪಂದ್ಯ ಯಾರು ಗೆಲ್ಲಬಹುದು? ಡ್ರೀಮ್ ಟೀಂ ರಚಿಸಲು ಟಿಪ್ಸ್, ಸಂಭಾವ್ಯ ಪ್ಲೇಯಿಂಗ್ 11
- Education
IGNOU Re-registration 2022 For July Session : ಜುಲೈ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಆರಂಭ
- Automobiles
Mercedes "ವಿಷನ್ AMG" ಕಾನ್ಸೆಪ್ಟ್ ಇವಿ ಸ್ಪೋರ್ಟ್ಸ್ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳು
- Finance
ಕೇರಳದಲ್ಲಿ ಸೆಸ್, ತೆರಿಗೆ ಇಳಿಕೆ ಬಳಿಕ ಇಂಧನ ದರ ಎಷ್ಟಾಗಿದೆ?
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅರಸು' ಸಿನಿಮಾ ಬಿಡುಗಡೆಯಾಗಿ 15 ವರ್ಷ: ಅಣ್ಣಾವ್ರು, ವರದಣ್ಣ, ಅಪ್ಪು ಮೂವರೂ ನಮ್ಮೊಂದಿಗಿಲ್ಲ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಮೋಹಕ ತಾರೆ ರಮ್ಯಾ, ಮಲಯಾಳಂ ನಟಿ ಮೀರಾ ಜಾಸ್ಮೀನ್ ಈ ಮೂವರು ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಅರಸು'. ಅಪ್ಪು ವ್ಯಕ್ತಿತ್ವವನ್ನು ನೋಡಿಯೇ ಕಥೆ ಹೆಣೆದಿದ್ದಾರೋ ಎನ್ನುವಂತಹ ಕಥೆ. ಜನಾರ್ಧನ್ ಮಹರ್ಷಿ ಅವರ ಕಥೆ. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಪಕಿ. ಮಹೇಶ್ ಬಾಬು ಈ ಸಿನಿಮಾದ ನಿರ್ದೇಶಕ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿದ್ದ ಸಿನಿಮಾ ಜನವರಿ 25, 2007 ರಂದು ರಿಲೀಸ್ ಆಗಿತ್ತು. ಇಂದಿಗೆ 'ಅರಸು' ಚಿತ್ರ 15 ವರ್ಷಗಳನ್ನು ಪೂರೈಸಿದೆ. ಆದರೆ, ಈ ಸಿನಿಮಾಗೆ ಕಾರಣರಾದ ನಾಲ್ವರು ದಿಗ್ಗಜರು ಈ ಸಂದರ್ಭದಲ್ಲಿ ನಮ್ಮೊಂದಿಗಿಲ್ಲ.
ಸ್ನೇಹ ಮತ್ತು ಪ್ರೀತಿ ಈ ಎರಡು ಅಂಶಗಳನ್ನು ಇಟ್ಟಿಕೊಂಡು ಹೆಣೆದ ಕಥೆ. ಇದು ಪುನೀತ್ ರಾಜ್‌ಕುಮಾರ್ ಕರಿಯರ್‌ನ ಅತ್ಯುತ್ತಮ ಸಿನಿಮಾಗಳಲ್ಲೊಂದು. ಈ ಸಿನಿಮಾ ಇಂದಿಗೆ (ಜನವರಿ 25) 15 ವರ್ಷಗಳನ್ನು ಪೂರೈಸಿದೆ. ಅಂದು 100 ದಿನಗಳನ್ನು ಪೂರೈಸಿದ 'ಅರಸು' ಇಂದಿಗೂ ಅಪ್ಪು ಅಭಿಮಾನಿಗಳ ಫೇವರಿಟ್ ಸಿನಿಮಾ. ಆದರೆ, ಈ ಸಂಭ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗಿಲ್ಲ. 'ಅರಸು' ಸಿನಿಮಾ ಹುಟ್ಟಿದ್ದು ಹೇಗೆ? ಈ ಚಿತ್ರದ ರೂವಾರಿಗಳು ಯಾರು? ಇಂತಹ ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿರ್ದೇಶಕ ಮಹೇಶ್ ಬಾಬು ಫಿಲ್ಮಿಬೀಟ್ ಜೊತೆಗೆಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಅರಸು' ಸಿನಿಮಾ ಸಿಕ್ಕಿದ್ದು ಹೇಗೆ?
"ನಾನು ನಿರ್ದೇಶಿಸಿದ ಮೊದಲ ಸಿನಿಮಾ ಆಕಾಶ್. ಅದಾದ ಬಳಿಕ ವಜ್ರೇಶ್ವರಿ ಕಂಬೈನ್ಸ್ ಮತ್ತೊಂದು ಸಿನಿಮಾ ಮಾಡುವುದಕ್ಕೆ ಹೇಳಿತ್ತು. ಅದು ಅರಸು. ಅದು ನನ್ನ ಎರಡನೇ ಸಿನಿಮಾ. ಮೊದಲ ಎರಡೂ ಸಿನಿಮಾವೂ ನಾನು ಅಪ್ಪು ಸರ್‌ಗೆ ಮಾಡಿದ್ದೆ. ಎರಡೂ ಸಿನಿಮಾನೂ ಸೂಪರ್ ಡೂಪರ್ ಹಿಟ್ ಆಯ್ತು. ಇಂದೂ ಕೂಡ ಟಿವಿಯಲ್ಲಿ ಅರಸು ಸಿನಿಮಾ ಬಂದರೆ, ನನಗೆ ಪೋನ್ ಮಾಡುತ್ತಾರೆ. ಆ ಸೀನ್ ಚೆನ್ನಾಗಿದೆ. ಈ ಸೀನ್ ಚೆನ್ನಾಗಿ ಅಂತಾರೆ. ಅದಕ್ಕೆ ಅರಸು ತುಂಬಾನೇ ಸ್ಪೆಷಲ್." ಅಂತಾರೆ ನಿರ್ದೇಶಕ ಮಹೇಶ್ ಬಾಬು.

ಅಣ್ಣಾವ್ರು, ವರದಣ್ಣ, ಅಪ್ಪು ಮೂವರು ಜೊತೆಗಿಲ್ಲ
"ಅರಸು ಸಿನಿಮಾ ಡಾ.ರಾಜ್‌ಕುಮಾರ್ ಹಾಗೂ ಅವರ ಸಹೋದರ ವರದಣ್ಣ ಅವರು ಕೊನೆಯದಾಗಿ ಚರ್ಚೆ ಮಾಡಿ, ಸಿನಿಮಾ ಫೈನಲ್ ಮಾಡಿದ ಸಿನಿಮಾವಿದು. ಕಥೆ ಓಕೆ ಮಾಡಿದ ಬಳಿಕ ವರದಣ್ಣ ಅವರು ತೀರಿಕೊಂಡರು. ಡಾ. ರಾಜ್‌ಕುಮಾರ್ ಅವರು ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿ ತೀರಿಕೊಂಡರು. ಈ ಸಿನಿಮಾ ಮಾಡುವಾಗ ಈ ಎರಡು ಸಂಗತಿಗಳು ನನಗೆ ತುಂಬಾ ನೋವು ಕೊಟ್ಟಿತ್ತು. ಈಗ 15 ವರ್ಷ ಆದ್ಮೇಲೆ ಸಂಭ್ರಮ ಮಾಡುವುದಕ್ಕೆ ಪುನೀತ್ ರಾಜ್‌ಕುಮಾರ್ ಅವರೇ ಇಲ್ಲ ಅನ್ನೋದು ದು:ಖ ಆಗುತ್ತೆ. ಯಾಕಂದರೆ, ಪುನೀತ್ ಸರ್ ನನಗೆ ನಿರ್ದೇಶಕನಾಗುವುದಕ್ಕೆ ಅವಕಾಶ ಕೊಟ್ಟಿದ್ದರು. ಅಂತಹವರು ಇಲ್ಲವಲ್ಲ ಅನ್ನುವುದು ನನ್ನ ನೋವು."

'ಅರಸು' ಅಂತಹ ಕಥೆ ತನ್ನಿ ಎಂದಿದ್ದ ಅಪ್ಪು
"ಅಪ್ಪು ಭೇಟಿ ಮಾಡಿದಾಗ, ಅರಸು ಬಗ್ಗೆ ತುಂಬಾ ಜನರು ಮಾತಾಡುತ್ತಾರೆ. ಏನಾದರೂ ಬೇರೆ ತರಹದ ಕಥೆ ಇದ್ದರೆ ಹೇಳಿ ಮಹೇಶ್ ಅಂದಿದ್ದರು. ಅದು ತುಂಬಾ ನೆನಪಿಗೆ ಬರುತ್ತಿದೆ. ಅವರು ಸಾಯುವುದಕ್ಕೆ 3 ತಿಂಗಳ ಬಗ್ಗೆ ನನ್ನ ಸಿನಿಮಾ ಅಪರೂಪ ಎಂಬುವ ಸಿನಿಮಾದಲ್ಲಿ ಒಂದು ಹಾಡು ಹಾಡಿದ್ದಾರೆ. ಆಗಲೂ ಅರಸು ಬಗ್ಗೆ ಹೇಳಿದ್ದರು." ಎನ್ನುತ್ತಾರೆ ಮಹೇಶ್ ಬಾಬು.

ಅಪ್ಪು ಸಿನಿಮಾದಲ್ಲಿ ದರ್ಶನ್ ಗೆಸ್ಟ್ ಆಗಿದ್ದೇಗೆ?
"ರೈಟರ್ ಕಥೆ ಹೇಳಿದಾಗ ನಮಗೆ ಕ್ಲೈಮ್ಯಾಕ್ಸ್ ಇಷ್ಟ ಆಯ್ತು. ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಒಂದಷ್ಟು ಹೀರೊಗಳನ್ನ ಪ್ಲ್ಯಾನ್ ಮಾಡಿಕೊಂಡಿದ್ವಿ. ಕೆಲವರು ಸಿಕ್ಕಿಲ್ಲ. ಮೊದಲ ದರ್ಶನ್ ಸರ್‌ಗೆ ಕೇಳಿದ್ವಿ. ಅವರು ಒಪ್ಪಿಕೊಂಡರು. ಇನ್ನೊಂದು ಪಾತ್ರಕ್ಕೆ ಹುಡುಕಾಟ ನಡೆಸಿದ್ವಿ. ಆಮೇಲೆ ಆದಿತ್ಯ ಅವರನ್ನು ಫೈನಲ್ ಮಾಡಿದ್ವಿ. ಅವರ ಸಮಾಗಮವೇ ಸಿನಿಮಾದ ಒಂದು ಹೈಲೈಟ್." ಎಂದು ಶೂಟಿಂಗ್ ಸಮಯವನ್ನು ನೆನಪಿಸಿಕೊಳ್ಳುತ್ತಾರೆ ಮಹೇಶ್ ಬಾಬು.

ಅಪ್ಪುಗಾಗಿ ಅಶ್ವಿನಿ ಬಳಿ ಕಥೆ ಹೇಳಿದ್ದ ಮಹೇಶ್ ಬಾಬು
"ಐದು ತಿಂಗಳ ಹಿಂದೆ ಅಶ್ವಿನಿ ಮೇಡಂಗೆ ಒಂದು ಲೈನ್ ಕಥೆ ಹೇಳಿದ್ದೆ. ಅವರು ಚೆನ್ನಾಗಿದೆ ಮಹೇಶ್, ನೀವು ಕಥೆ ರೆಡಿ ಮಾಡಿ ಅಂದಿದ್ದರು. ಆಗ ನಾನು ಅಪ್ಪು ಸರ್‌ಗೆ ಕಥೆ ಹೇಳಲು ಹೋಗಲಿಲ್ಲ. ಎಲ್ಲಾ ರೆಡಿಯಾದ ಮೇಲೆ ಕಥೆ ಹೇಳೋಣ ಅಂತಿದ್ದೆ. ಅಷ್ಟರಲ್ಲೇ ಹೀಗೆ ಆಗಿ ಹೋಯ್ತು." ಅಂತ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಸಿನಿಮಾ ನಿರ್ದೇಶಕನಾಗಿ ಏನಾದರೂ ಗುರುತಿಸಿಕೊಂಡಿದ್ದರೆ. ಅದು ಪುನೀತ್ ರಾಜ್‌ಕುಮಾರ್ ಹಾಗೂ ಅವರ ಕುಟುಂಬದಿಂದ ಅಂತಾರೆ ನಿರ್ದೇಶಕ ಮಹೇಶ್ ಬಾಬು.