Interview: 'ನಟಸಾರ್ವಭೌಮ'ನ ರಹಸ್ಯ ಬಿಚ್ಚಿಟ್ಟ ರಚಿತಾ ರಾಮ್
Recommended Video

ಡಿಂಪಲ್ ಕ್ವೀನ್ ರಚಿತಾ ರಾಮ್ ಈ ವರ್ಷ ಸಿಕ್ಕಾಪಟ್ಟೆ ಬ್ಯುಸಿ. 'ಸೀತಾರಾಮ ಕಲ್ಯಾಣ'ದ ಯಶಸ್ಸಿನ ನಂತರ ಈಗ 'ನಟಸಾರ್ವಭೌಮ'ನ ಜೊತೆ ಮತ್ತೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ. 'ಚಕ್ರವ್ಯೂಹ' ಸಿನಿಮಾದ ಬಳಿಕ ಅಪ್ಪುಗೆ ನಾಯಕಿಯಾಗಿರುವ ರಚಿತಾ ಈ ಬಾರಿ ಹಾರರ್ ಥ್ರಿಲ್ಲರ್ ಮೂಲಕ ಎಂಟ್ರಿಕೊಟ್ಟಿದ್ದಾರೆ.
ಪುನೀತ್ ಜೊತೆ ಎರಡನೇ ಸಿನಿಮಾ ಹಾಗೂ ಮೊದಲ ಸಲ ಹಾರರ್ ಸಿನಿಮಾ ಮಾಡಿರುವ ರಚಿತಾ ಅವರನ್ನ ಮಾತಾನಾಡಿಸೋಣ ಅಂತ ಫೋನ್ ಮಾಡಿದ್ವಿ. ಆ ಕಡೆಯಿಂದ ಫೋನ್ ರಿಸೀವ್ ಮಾಡಿದ ರಚಿತಾ 'ಹಾಯ್ ಭರತ್ ಹೇಗಿದ್ದೀಯಾ....' ಅಂತ ನಗುನಗುತ್ತಾ ಮಾತು ಆರಂಭಿಸಿದರು.
ಆದ್ರೆ, ಅವರ ಮಾತಿನಲ್ಲಿ ಸ್ವಲ್ಪ ಆಯಾಸ ಕಂಡಿತ್ತು. ಯಾಕಂದ್ರೆ, ನಿನ್ನೆಯಷ್ಟೇ ದಾವಣಗೆರೆಯಲ್ಲಿ 'ಐ ಲವ್ ಯೂ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಗಿಸಿ ವಾಪಸ್ ಆಗಿದ್ದರು. ಈ ಕಡೆ ನಟಸಾರ್ವಭೌಮ ಟಿವಿ ಸಂದರ್ಶನದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ. ಸತತ ಜರ್ನಿ, ಶೂಟಿಂಗ್ ಅಂತ ಸ್ವಲ್ಪ ಬಳಲಿದ್ದರು. ಈಗ ಉಪ್ಪಿ ಐ ಲವ್ ಯೂ ಚಿತ್ರದ ಕೊನೆಯ ಸಾಂಗ್ ಚಿತ್ರೀಕರಣಕ್ಕಾಗಿ ಮಲೇಷಿಯಾಗೆ ಹೋಗ್ತಿದ್ದಾರೆ. ಈ ಗ್ಯಾಪ್ ನಲ್ಲಿ 'ನಟಸಾರ್ವಭೌಮ' ಚಿತ್ರದ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷ್ಯಗಳನ್ನ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡರು. ಪೂರ್ತಿ ಸಂದರ್ಶನ ಮುಂದೆ ಓದಿ...
ಸಂದರ್ಶನ: ಭರತ್ ಕುಮಾರ್ ಕೆ

ವರ್ಷದ ಎರಡನೇ ಸಿನಿಮಾ ಹೇಗೆ ಅನಿಸ್ತಿದೆ
''ವರ್ಷದ ಮೊದಲ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ. ಅಷ್ಟರಲ್ಲೇ ನಟಸಾರ್ವಭೌಮ ಬರ್ತಿರುವುದು ತುಂಬಾ ಖುಷಿ ಆಗ್ತಿದೆ. ಈ ಚಿತ್ರದ ಬಗ್ಗೆ ಇಷ್ಟು ದೊಡ್ಡ ಹೈಪ್ ಹುಟ್ಟುಹಾಕಿರುವ ಅಭಿಮಾನಿಗಳಿಗೆ ನಿಜಕ್ಕೂ ಥ್ಯಾಂಕ್ಸ್. ಸಿನಿಮಾದಲ್ಲಿ ಇಬ್ಬರು ಹೀರೋಯಿನ್. ಇಬ್ಬರಿಗೂ ಸಮಾನವಾದ ಪಾತ್ರವಿದೆ. ಒಂದೊಳ್ಳೆ ಕಂಟೆಂಟ್ ಸಿನಿಮಾದಲ್ಲಿ ನಾನೂ ಇದ್ದೀನಿ ಎಂಬ ಖುಷಿ ಹೆಚ್ಚಿದೆ. ಒಳ್ಳೆ ಸಿನಿಮಾ ಇದು. ಅಭಿಮಾನಿಗಳು ನೋಡಿ ನಿರ್ಧರಿಸಬೇಕು ಅಷ್ಟೇ''

ಅಪ್ಪು ಜೊತೆ ಸೆಕೆಂಡ್ ಸಿನಿಮಾ, ಏನ್ ಸ್ಪೆಷಲ್
''ಅಪ್ಪು ಸರ್ ಜೊತೆ ಎರಡನೇ ಸಿನಿಮಾ ಹೆಚ್ಚು ಖುಷಿ ಕೊಟ್ಟಿದೆ. ಆದ್ರೆ ಒಂದು ಬೇಜಾರಿದೆ. ಅವರ ಜೊತೆ ಡ್ಯಾನ್ಸ್ ಮಾಡ್ಬೇಕು ಎಂಬ ಆಸೆ. ಈ ಸಿನಿಮಾದಲ್ಲಿ ಆ ಅವಕಾಶ ಸಿಕ್ಕಿಲ್ಲ. ಒಂದು ಹಾಡಿದೆ. ಆದ್ರೆ, ಅದು ರೋಮ್ಯಾಂಟಿಕ್ ಹಾಡು. ಮುಂದಿನ ಸಿನಿಮಾದಲ್ಲಿ ಅಪ್ಪು ಜೊತೆ ಸಿನಿಮಾ ಸಿಕ್ಕರೇ, ಡ್ಯಾನ್ಸ್ ನಂಬರ್ ಬೇಕೇ ಬೇಕು ಅಂತ ಬೇಡಿಕೆ ಇಡ್ತೀನಿ. ಅವರ ಜೊತೆ ಸಿನಿಮಾದಲ್ಲಿ ಡ್ಯಾನ್ಸ್ ಮಾಡ್ಬೇಕು ಅನ್ನೋದು ನನ್ನ ಕನಸು''

ರಚಿತಾಗೂ ಹಾರರ್ ಸಿನಿಮಾ ಮೊದಲ ಅನುಭವ?
''ಅದೇನೋ ಒಂಥರಾ ಖುಷಿ. ಬಟ್, ಈ ಬಗ್ಗೆ ಜಾಸ್ತಿ ಮಾತಾಡಲ್ಲ. ಥಿಯೇಟರ್ ನಲ್ಲಿ ನೋಡಿದ್ರೆ ಮಜಾ. ನಾನು ಏನೂ ಹೇಳಲ್ಲ'' ಎಂದು ಚಿತ್ರದ ಬಗ್ಗೆ ಕುತೂಹಲವನ್ನ ಕಾಪಾಡಿಕೊಂಡರು.

ಹಾರರ್ ಸಿನಿಮಾ ಅಂದಾಕ್ಷಣ ನಿಮಗೆ ಯಾವ ಚಿತ್ರ ನೆನಪಾಗುತ್ತೆ?
''ಇಂಗ್ಲೀಷ್ ಸಿನಿಮಾ conjuring, evil dead ಸಿನಿಮಾಗಳನ್ನ ನೋಡಿದಾಗ ಭಯಂಕರ ಭಯ ಆಗ್ತಿತ್ತು. ಕನ್ನಡದಲ್ಲಿ ಆಪ್ತಮಿತ್ರ ಸಿನಿಮಾ ನೋಡಿ ತುಂಬಾ ಭಯ ಪಟ್ಟಿದ್ದೆ. ಆಗ ನಾನಿನ್ನು ಚಿಕ್ಕ ಹುಡುಗಿ, ನಾಗವಲ್ಲಿ ಬಂದಾಗ ಕಣ್ಣು-ಕಿವಿ ಮುಚ್ಕೊಂಡು ಬಿಡ್ತಿದ್ದೆ. ಒಂದೂವರೆ ತಿಂಗಳು ನಿದ್ದೆಯಲ್ಲೂ ಕಾಡಿತ್ತು''

ರಚಿತಾ ಅವರೇ ದೆವ್ವ ಇರಬೇಕು ಅಂತಿದ್ದಾರೆ, ಹೌದಾ?
''ಅಯ್ಯೋ.....ಅದೇನೋ ನನಗೂ ಗೊತ್ತಿಲ್ಲ. ಸಿನಿಮಾ ನೋಡಿ ಗೊತ್ತಾಗುತ್ತೆ'' ಎಂದಷ್ಟೇ ಹೇಳಿದ ರಚಿತಾ, ನಾನೇನೂ ಹೇಳಲ್ಲ ಎಂದುಬಿಟ್ಟರು.

ಈ ವರ್ಷ ಎಷ್ಟು ಸಿನಿಮಾ ರಿಲೀಸ್ ಆಗುತ್ತೆ?
''ಮೊದಲನೇ ತಿಂಗಳು ಸೀತಾರಾಮ ಕಲ್ಯಾಣ, ಎರಡನೆ ತಿಂಗಳು ನಟಸಾರ್ವಭೌಮ ಮುಂದಿನ ತಿಂಗಳು 'ಐ ಲವ್ ಯೂ' ಬರಬಹುದು. ಅದಾದ ಬಳಿಕ ರುಸ್ತುಂ, ಆನಂದ್ ಚಿತ್ರಗಳು ಆಗಸ್ಟ್ ಒಳಗೆ ಬರಬಹುದು. ನಂತರ ಗೊತ್ತಿಲ್ಲ ಯಾವ ಸಿನಿಮಾ ಬರುತ್ತೆ ಅಂತ'' ಹೇಳಿ 'ಸಿನಿಮಾ ನೋಡಿ ಹೇಗಿದೆ ಅಂತ ಹೇಳಪ್ಪಾ, ಟೇಕ್ ಕೇರ್' ಎಂದರು.

ರಚಿತಾಗೆ 'ನಟಸಾರ್ವಭೌಮ' ಖುಷಿ ಮತ್ತು ಬೇಸರ
ಖುಷಿ ಯಾಕಂದ್ರೆ, ಇದು ಹಾರರ್ ಸಿನಿಮಾ. ಅಪ್ಪು ಜೊತೆ ಎರಡನೇ ಸಿನಿಮಾ. ಇಷ್ಟು ದೊಡ್ಡ ಮಟ್ಟದ ನಿರೀಕ್ಷೆ, ಹೈಪ್ ಹುಟ್ಟಿಸಿದೆ. ವರ್ಷದಲ್ಲಿ ಎರಡನೇ ಸಿನಿಮಾ. ಬೇಸರ ಯಾಕೆ ಅಂತ ನೋಡೋದಾದರೇ, ಪುನೀತ್ ಜೊತೆ ಡ್ಯಾನ್ಸ್ ಮಾಡೋ ಅವಕಾಶ ಸಿಕ್ಕಿಲ್ಲ. ರಿಲೀಸ್ ವೇಳೆಯಲ್ಲಿ ರಚಿತಾ ಭಾರತದಲ್ಲಿ ಇರಲ್ಲ. ಸೋ, ಹೀಗಾಗಿ ನಟಸಾರ್ವಭೌಮ ರಚಿತಾ ಪಾಲಿಗೆ ಖುಷಿ ಮತ್ತು ಬೇಸರ ಎರಡನ್ನು ಹೊಂದಿದೆ.


Click it and Unblock the Notifications











