ನಾನು ಸ್ವಲ್ಪ ಸ್ಕಿನ್ ಶೋ ಮಾಡಿದ್ರೂ ಜನ ಒಪ್ಪಲ್ಲ: ಇಲ್ಲಿ ಸೆಕ್ಸ್ ವರ್ಕರ್ ಹಾಟ್ & ಬೋಲ್ಡ್ ಅಲ್ಲ, ಬ್ಯೂಟಿಫುಲ್!

ಇದೇ ಶುಕ್ರವಾರ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ನಟನೆಯ 'ಮಾನ್ಸೂನ್ ರಾಗ' ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರೀ ರಿಲೀಸ್ ಈವೆಂಟ್ ಮಾಡಿ ದೊಡ್ಡ ಮಟ್ಟದಲ್ಲಿ ಚಿತ್ರತಂಡ ಸದ್ದು ಮಾಡಿದೆ. 'ಪುಷ್ಪಕ ವಿಮಾನ' ಚಿತ್ರ ಕಟ್ಟಿಕೊಟ್ಟಿದ್ದ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಸೆಕ್ಸ್ ವರ್ಕರ್ ಪಾತ್ರ ಮಾಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

'ಪುಷ್ಪಕ ವಿಮಾನ' ಸಿನಿಮಾ ನಿರ್ದೇಶಿಸಿ ಗೆದ್ದಿದ್ದ ನಿರ್ದೇಶಕ ಎಸ್‌. ರವೀಂದ್ರನಾಥ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಅಚ್ಯುತ್‌ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್ ತಾರಾಗಣದಲ್ಲಿದ್ದಾರೆ. 70-80ರ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಕಥೆ ಬಹಳ ಕುತೂಹಲ ಕೆರಳಿಸಿದೆ. ಚಿತ್ರದ ಕಲರ್‌ಫುಲ್ ಟೀಸರ್‌, ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಸ್ಯಾಂಪಲ್ಸ್ ನೋಡುತ್ತಿದ್ದರೆ ಒಂದು ಫೀಲ್ ಗುಡ್ ಸಿನಿಮಾ ಅನ್ನುವುದು ಗೊತ್ತಾಗುತ್ತಿದೆ. ಡಾಲಿ ಧನಂಜಯ ಬಹಳ ವಿಭಿನ್ನವಾದ ಪಾತ್ರವನ್ನು ಮಾಡಿದ್ದಾರೆ.

ನಟಿ ರಚಿತಾ ರಾಮ್ ಈ ಹಿಂದೆ ಬೋಲ್ಡ್ ಆಗಿ ನಟಿಸುವುದಿಲ್ಲ ಎನ್ನುವ ಸ್ಟೇಟ್‌ಮೆಂಟ್ ಕೊಟ್ಟಿದ್ದರು. 'ಮಾನ್ಸೂನ್ ರಾಗ' ಚಿತ್ರದಲ್ಲಿ ಸೆಕ್ಸ್ ವರ್ಕರ್ ಪಾತ್ರ ಮಾಡ್ತೀದ್ದಾರೆ ಅಂದಾಗಲೇ ಕೆಲವರು ಹುಬ್ಬೇರಿಸಿದ್ದರು. ತಮ್ಮ ಪಾತ್ರದ ಬಗ್ಗೆ ರಚಿತಾ ವಿವರವಾಗಿ ಮಾತನಾಡಿದ್ದಾರೆ. ಮುಂದೆ ಓದಿ.

ಸಿನಿಮಾ ರಿಲೀಸ್ ಆಗ್ತಿದೆ ಎಷ್ಟು ಎಕ್ಸೈಟ್ ಆಗಿದ್ದೀರಾ?

ಸಿನಿಮಾ ರಿಲೀಸ್ ಆಗ್ತಿದೆ ಎಷ್ಟು ಎಕ್ಸೈಟ್ ಆಗಿದ್ದೀರಾ?

"ಮಾನ್ಸೂನ್ ರಾಗ ಸಿನಿಮಾ ರಿಲೀಸ್ ಆಗ್ತಿದೆ ಅನ್ನುವ ಎಕ್ಸೈಟ್‌ಮೆಂಟ್‌ಗಿಂತ ಖುಷಿ ಜಾಸ್ತಿ ಇದೆ. ಒಂದು ಬ್ಯೂಟಿಫುಲ್ ಸಿನಿಮಾ. ಟೀಸರ್, ಟ್ರೈಲರ್, ಸಾಂಗ್ಸ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಮೇಲೆ ನಮ್ಮ ತಂಡಕ್ಕೆ ಬಹಳ ಹೋಪ್ಸ್ ಇದೆ. ಜನ ಮೆಚ್ಚಿಕೊಳ್ತಾರೆ ಅಂತ. ಸಿನಿಮಾ ಈ ವಾರ ರಿಲೀಸ್ ಆಗ್ತಿರೋದಕ್ಕೆ ಬಹಳ ಖುಷಿ ಇದೆ."

ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

"ಬಹಳ ವಿಭಿನ್ನವಾದ ಪಾತ್ರ. ನಾನು ಮೊದಲ ಬಾರಿಗೆ ಈ ತರಹದ ಪಾತ್ರವನ್ನು ಮಾಡಿರೋದು. ಸೆಕ್ಸ್ ವರ್ಕರ್ ಅಂದಾಕ್ಷಣ ತೆರೆಮೇಲೆ ಹೇಗೆ ಬೇಕಾದರೂ ಪ್ರಸೆಂಟ್ ಮಾಡಬಹುದು. ಒಬ್ಬ ನಿರ್ದೇಶಕ ಆತನಿಗೆ ಹೇಗೆ ಬೇಕೋ ಹಾಗೆ ತೋರಿಸಬಹುದು. ಆ ಪಾತ್ರಕ್ಕೆ ಹೀಗೆ ಇರಬೇಕು, ಹಾಗೆ ಇರಬೇಕು ಅಂತೇನಿಲ್ಲ. ಹೇಗೆ ಬೇಕಾದರೂ ಅದನ್ನು ಚಿತ್ರಿಸಬಹುದು. ಆದರೆ ಸೆಕ್ಸ್ ವರ್ಕರ್‌ನ ಹಾಟ್ ಅಂಡ್ ಬೋಲ್ಡ್ ಅಲ್ಲ. ಈ ಸಿನಿಮಾದಲ್ಲಿ ಆ ಪಾತ್ರ ಬಹಳ ಸುಂದರ ಹಾಗೂ ಗಂಭೀರ. ತುಂಬಾ ಸುಂದರವಾಗಿ ನನ್ನ ಪಾತ್ರವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೊದಲು ಕೇಳಿದಾಗ ಅವಕ್ಕಾದೆ. ಏನು ಪಾತ್ರ ಹೇಳಿ ಅಂತ. ಆದರೆ ನಿರ್ದೇಶಕ ರವೀಂದ್ರನಾಥ್ ಮೇಲೆ ನಂಬಿಕೆ ಇತ್ತು."

ನಿರ್ದೇಶಕರು ಮೊದಲೇ ಮಾತು ಕೊಟ್ಟಿದ್ದರು

ನಿರ್ದೇಶಕರು ಮೊದಲೇ ಮಾತು ಕೊಟ್ಟಿದ್ದರು

"ಯಾಕೆಂದರೆ ಅವರ ಜೊತೆ ನಾನು ಈಗಾಗಲೇ 'ಪುಷ್ಪಕ ವಿಮಾನ' ಚಿತ್ರದಲ್ಲಿ ಕೆಲಸ ಮಾಡಿದ್ದೆ. ಅವರ ಮೇಲಿನ ನಂಬಿಕೆಯಿಂದ ಸಿನಿಮಾ ಹೇಗೆ ಮೂಡಿ ಬರಬಹುದು ಎಂದು ಊಹಿಸಿದ್ದೆ. ಅವರು ಮೊದಲೇ ಮಾತು ಕೊಟ್ಟಿದ್ದರು. ಶೂಟಿಂಗ್ ವೇಳೆ ನಿಮಗೆ ಕಸಿವಿಸಿ ಅನ್ನಿಸಿದರೆ ಆ ಶಾಟ್ ತಗೊಳ್ಳೋದೆ ಇಲ್ಲ ಎಂದಿದ್ದರು. ಹೇಳಿದಂತೆ ನಡೆದುಕೊಂಡರು. ಕೆಲವೊಮ್ಮೆ ಹೇಳುವುದು ಒಂದು ಮಾಡುವುದು ಒಂದು ಎನ್ನುವಂತಾಗುತ್ತೆ. ಆದರೆ ಅವರು ಹೇಳಿದಂತೆ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅವರ ಬಗ್ಗೆ ಬಹಳ ಖುಷಿ, ಗೌರವ ಇದೆ. ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಮೆಚ್ಯೂರ್ಡ್ ಆಗಿ ಮಾತನಾಡುವ ಪಾತ್ರ. ತುಂಬಾ ಸೆನ್ಸಿಟಿವ್, ಎಮೋಷನಲ್ ಹುಡುಗಿ ಆಕೆ."

ಹಾಟ್ & ಬೋಲ್ಡ್ ಅಲ್ಲ, ತುಂಬಾ ಬ್ಯೂಟಿಫುಲ್

ಹಾಟ್ & ಬೋಲ್ಡ್ ಅಲ್ಲ, ತುಂಬಾ ಬ್ಯೂಟಿಫುಲ್

"ಸೆಕ್ಸ್ ವರ್ಕರ್ ಅಂದಾಕ್ಷಣ ಸಖತ್ ಬೋಲ್ಡ್, ಅವಳು ಮಾತಲ್ಲಿ ಬೋಲ್ಡ್ ಆಗಿ ಇರುತ್ತಾಳೆ. ತುಂಬಾ ಬೋಲ್ಡ್ ಆಗಿ ನಡೆದುಕೊಳ್ಳುತ್ತಾಳೆ ಅನ್ನುವಂತೆ ಇಲ್ಲ. ಅವಳು ತುಂಬಾ ಎಮೋಷನಲ್ ಹುಡುಗಿ. ಮೆಚ್ಯೂರ್ಡ್ ಆಗಿ ಪ್ರತಿ ವಿಚಾರವನ್ನು ಹ್ಯಾಂಡಲ್ ಮಾಡುವ ಹುಡುಗಿ. ಅವಳು ಹಾಟ್ ಅಲ್ಲ, ಬೋಲ್ಡ್ ಅಲ್ಲ, ತುಂಬಾ ಬ್ಯೂಟಿಫುಲ್. ಮೊದಲ ಬಾರಿಗೆ ರೆಟ್ರೋ ಸ್ಟೈಲ್‌ ಚಿತ್ರದಲ್ಲಿ ನಾನು ನಟಿಸಿರೋದು. ಪಫ್ ಸ್ಲೀವ್, ಫ್ಲೋರಲ್ ಪ್ರಿಂಟೆಡ್ ಸೀರೆ. ಉದ್ದ ಜಡೆ. ಆ ತರಹದ ಲುಕ್ ಹಿಂದೆ ನಾನು ಟ್ರೈ ಮಾಡಿರಲಿಲ್ಲ. ಫಸ್ಟ್ ಟೈಮ್ ಆ ತರ ಲುಕ್‌ನಲ್ಲಿ ಕಾಣಿಸಿಕೊಂಡಿರೋದು. ಖುಷಿ ಇದೆ. ಅದನ್ನು ಡಿಸೈನ್ ಮಾಡುವಾಗಲೇ ಬಹಳ ಖುಷಿ ಇತ್ತು. ಆ ಲುಕ್ ಟ್ರೆಂಡ್ ಆಗ್ತಿದೆ. ಉದ್ದ ಜಡೆ ಹಾಕೋದು. ಪಫ್ ಸ್ಲೀವ್ ಯಾವಾಗಲೂ ಟ್ರೆಂಡ್ ಆಗಿರುತ್ತೆ. ನಾನು, ನಮ್ಮ ತಂಡ ತುಂಬಾ ಚೆನ್ನಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೀವಿ."

'ಮೇಘರಾಜನ ರಾಗ' ಕೇಳಿದ್ರೆ, ಅಳು ಬರುತ್ತೆ

'ಮೇಘರಾಜನ ರಾಗ' ಕೇಳಿದ್ರೆ, ಅಳು ಬರುತ್ತೆ

"ಇಡೀ ಸಿನಿಮಾ ಆಗಸ್ಟ್, ಸೆಪ್ಟೆಂಬರ್ ಮಾನ್ಸೂನ್‌ನಲ್ಲೇ ಶೂಟ್ ಮಾಡಿರೋದು. ತುಂತುರು ಹನಿಗಳ ಮಧ್ಯೆ ಶೂಟ್ ಮಾಡಿರೋದು. ವಿಷ್ಯುವಲಿ ಇದು ಕಣ್ಣಿಗೆ ಹಬ್ಬ. ಅನೂಪ್ ಸಿಳೀನ್ ಮ್ಯೂಸಿಕ್ ಸೂಪರ್. ನಾನು ಮ್ಯೂಸಿಕ್ ಲವರ್. ಈ ಚಿತ್ರದಲ್ಲಿ ಮ್ಯೂಸಿಕ್ ಅದ್ಭುತ. ಈ ಚಿತ್ರದಲ್ಲಿ ಅವರು ಮ್ಯಾಜಿಕ್ ಮಾಡಿದ್ದಾರೆ. ಕೆಲ ಟ್ಯೂನ್ ಖುಷಿ ಕೊಡುತ್ತೆ, ಕೆಲ ಟ್ಯೂನ್ ಕಣ್ಣೀರು ತರುತ್ತೆ. 'ಮೇಘರಾಜನ ರಾಗ' ಟ್ಯೂನ್ ಕೇಳಿದ್ರೆ, ಅಳು ಬರುತ್ತೆ, ಯಾಕೆ ಅನ್ನೋದು ಗೊತ್ತಿಲ್ಲ. ಕೆ. ಕಲ್ಯಾಣ್ ಸರ್ ಟ್ಯೂನ್ ಸೂಪರ್."

ನಮ್ಮ ನಮ್ಮ ಪಾತ್ರಗಳಲ್ಲಿ ಜೀವಿಸಿದ್ದೀವಿ

ನಮ್ಮ ನಮ್ಮ ಪಾತ್ರಗಳಲ್ಲಿ ಜೀವಿಸಿದ್ದೀವಿ

"ಅಚ್ಯುತ್‌ ಕುಮಾರ್‌ ಸರ್‌ಗೆ ಒಂದು ಸಾಂಗ್ ಇದೆ. ಅದರ ಪಿಕ್ಚರೈಜೇಷನ್ ಸೊಗಸಾಗಿದೆ. ಅವರಿಬ್ಬರ ನಗು ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ಯಾರು ಆಕ್ಟ್ ಮಾಡಿಲ್ಲ. ಬಹಳ ನ್ಯಾಚುರಲ್ ಆಗಿ ಶೂಟ್ ಮಾಡಿದ್ದಾರೆ. ಪಾತ್ರಗಳನ್ನು ಹೇಳಿ, ಡೈಲಾಗ್ಸ್ ಕೊಟ್ಟು ನೀವು ಹೇಗೆ ಮಾಡ್ತಿರೋ ಮಾಡಿ ಎಂದು ಹೇಳಿ ಮಾಡಿಸಿದ್ದಾರೆ. ಧನಂಜಯ ನನಗೆ ಕೊಟ್ಟ ಸಪೋರ್ಟ್ ಮರೆಯೋಕ್ಕಾಗಿಲ್ಲ. ಧನಂಜಯ ಹಾಗೂ ನಾನು ಆಯಾ ಪಾತ್ರಗಳೇ ಆಗಿ ಹೋಗಿದ್ದೆವು. ಆ ಮೊಮೆಂಟ್‌ನಲ್ಲಿ ನಮಗೆ ಹೇಗೆ ಅನ್ನಿಸುತ್ತೋ ಹಾಗೆ ಮಾಡಿದ್ದೇವೆ. ಕ್ಯಾಂಡಿಡ್ ಆಗಿ ಬಂದಿರೋ ಸಿನಿಮಾ."

ರಚಿತಾ ಸ್ಕಿನ್ ಶೋ ಮಾಡಿದ್ರೂ ಜನ ಒಪ್ಪಲ್ಲ

ರಚಿತಾ ಸ್ಕಿನ್ ಶೋ ಮಾಡಿದ್ರೂ ಜನ ಒಪ್ಪಲ್ಲ

ನನಗೆ ಚಾಲೆಂಜಿಂಗ್ ಅನ್ನಿಸೋಕೆ ಇಡೀ ಸಿನಿಮಾ ಈ ಪಾತ್ರ ಹೀಗೆ ಇರೋದಿಲ್ಲ. 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದಲ್ಲಿ ಇಡೀ ಸಿನಿಮಾ ಆ ಪಾತ್ರವನ್ನು ಹಾಗೆ ತೋರಿಸಿದ್ದಾರೆ. ಆಕೆಯ ಜೀವನದಲ್ಲಿ ಏನೆಲ್ಲಾ ಆಗುತ್ತೆ ಅನ್ನುವುದನ್ನು ಹೇಳಿದ್ದರು. ರಚಿತಾ ಸ್ವಲ್ಪ ಸ್ಕಿನ್ ಶೋ ಮಾಡಿದರೂ ಜನ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಎಲ್ಲರೂ ನನ್ನನ್ನು ತಮ್ಮ ಮನೆಯ ಸದಸ್ಯೆ ರೀತಿ ನೋಡುತ್ತಾರೆ. ಬೇರೆ ನಟಿಯರು ಆ ರೀತಿ ಮಾಡಿದಾಗ ಒಪ್ಪಿಕೊಳ್ತಾರೆ. ನಾನು ಮಾಡಿದರೆ ಯಾಕೆ ಒಪ್ಪಿಕೊಳ್ಳಲ್ಲ ಅನ್ನಿಸುತ್ತೆ. ನಾನು ಸೆಕ್ಸ್ ವರ್ಕರ್ ಪಾತ್ರ ಮಾಡಿದರೂ ಸ್ಕಿನ್ ಶೋ ಮಾಡುವುದನ್ನು ಒಪ್ಪಲು ಸಿದ್ಧರಿಲ್ಲ. ನನಗೂ ಎಕ್ಸ್‌ಪೆರಿಮೆಂಟ್ ಮಾಡಬೇಕು ಎನ್ನಿಸುತ್ತೆ. ಜನಕ್ಕೂ ಹಾಗೆ ಅನ್ನಿಸುತ್ತೆ. ಪಾತ್ರ ಬೋಲ್ಡ್ ಆಗಿ ಇದ್ದರೂ, ನೀವು ಬೋಲ್ಡ್ ಆಗಿ ಪ್ರಸೆಂಟ್ ಆಗುವುದು ಬೇಡ, ಬ್ಯೂಟಿಫುಲ್ ಆಗಿ ಪ್ರಸೆಂಟ್ ಆಗಬೇಕು ಎನ್ನುತ್ತಾರೆ. ಈ ಸಿನಿಮಾದಲ್ಲಿ ಅದೇ ತರ ಇದೆ.

More from Filmibeat

English summary
Rachita Ram on her role in Monsoon Raaga Movie. Rachita has been busy promoting her upcoming movie Monsoon Raaga. The actress talks about her experience working for the movie with Dhananjaya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X